
ಬೆಂಗಳೂರು(ಮಾ. 14) ಬಿಗ್ ಬಾಸ್ ಮನೆಯಿಂದ ಎರಡನೇ ವಾರದ ಎಲಿಮಿನೇಶನ್ ಆಗಿದೆ. ಕಿಚ್ಚ ಸುದೀಪ್ ಸಂಡೇ ಎಪಿಸೋಡ್ ನಲ್ಲಿ ಸಖತ್ ಆಗಿರುವ ಒಂದು ಟಾಸ್ಕ್ ನೀಡಿದರು. ಯಾರು ಪೇಕ್.. ಯಾರು ರಿಯಲ್ ಎಂಬ ಆಟ ಮುಂದಿಟ್ಟರು. ಮನೆ ಅರವಿಂದ್ ರಿಯಲ್ ಎಂದು ಬಹುತೇಕರು ಹೇಳಿದರೆ ನಿರ್ಮಲಾ ಪೇಕ್ ಎಂದು ಬಹುತೇಕರ ಮತ ಬಂತು. ಈ ನಡುವೆ ಶಂಕರ್ ಅಶ್ವಥ್ ಮನೆಯಲ್ಲಿರುವ ಎಲ್ಲರೂ ಪೇಕ್ ಎಂದು ದೊಡ್ಡ ಶಾಕ್ ಕೊಟ್ಟರು.
ತಬ್ಬಿಕೊಳ್ಳುವ ಸಂಬರಗಿಗೆ ಎಚ್ಚರಿಕೆ ಕೊಟ್ಟ ಬಿಗ್ ಬಾಸ್
ಕಿಚ್ಚನಮೆಚ್ಚುಗೆ ಚಪ್ಪಾಳೆ ಈ ಬಾರಿ ಶುಭಾ ಪೂಂಜಾ ಅವರಿಗೆ ಸಿಕ್ಕಿತು. ಪ್ರಶಾಂತ್ ಸಂಬರಗಿ ಸೇಫ್ ಆದಾಗ ಹರ್ಷದಿಂದ ಕಿರುಚಿದರು. ನನ್ನ ಧ್ವನಿ ಹೋದ ಕಾರಣ ಸಮಸ್ಯೆಯಾಗುತ್ತಿದೆ ಎಲ್ಲವನ್ನು ಸರಿ ಮಾಡಿಕೊಳ್ಳುತ್ತೇನೆ ಎಂದರು. ಗೀತಾ ಭಟ್ ಸಹ ಸೇಫ್ ಆದರು. ಗೀತಾ ನಿಮಗೆ ಇದು ಕೊನೆ ಎಚ್ಚರಿಕೆ ಎಂಬ ಮಾತನನ್ಉ ಕಿಚ್ಚ ಹೇಳಲು ಮರೆಯಲಿಲ್ಲ.
ಬೆಡ್ ರೂಂ ನಲ್ಲಿ ಯಾರಾದರೂ ಮೆಡಿಸಿನ್ ಇಟ್ಟಿದ್ದರೆ ಯಾರಾದರೂ ಅದನ್ನು ತೆಗೆದುಕೊಂಡು ಬನ್ನಿ ಎಂದು ಕಿಚ್ಚ ತಿಳಿಸಿದರು. ಇದಾದ ಮೇಲೆ ಬೆಡ್ ರೂಂ ಲಾಕ್ ಮಾಡಲಾಯಿತು. ಬ್ರೋ ಗೌಡ ಅವರನ್ನು ಉಳಿಸಲು ಮನೆಯವರು ಬೆಡ್ ರೂಂ ಬಿಟ್ಟುಕೊಟ್ಟಿದ್ದು ಒಂದು ವಾರ ಮನೆಯವರು ಹೊರಗೆ ನಿದ್ರಿಸಬೇಕಾಗಿದೆ.
ಗಾಯಕ ವಿಶ್ವ ಸಹ ಸೇಫ್ ಆದರು. ಎರಡು ವಾರ ಜನ ಕೈಹಿಡಿದಿದ್ದು ಅವಕಾಶ ಬಳಸಿಕೊಳ್ಳಿ ಎಂದು ತಿಳಿಸಿದರು. ಚಂದ್ರಕಲಾ ಮತ್ತು ನಿರ್ಮಲಾ ಕೊನೆ ಸುತ್ತಿನಲ್ಲಿ ಉಳಿದುಕೊಂಡರು. ಎರಡನೇ ವಾರ ಮನೆಯಿಂದ ನಿರ್ಮಲಾ ಔಟ್ ಆದರು .
ಕೊನೆಯಲ್ಲಿ ಈ ವಾರಕ್ಕೆ ನೇರ ನಾಮಿನೇಶನ್ ಮಾಡಿ ಎಂದು ಬಿಗ್ ಬಾಸ್ ನಿರ್ಮಲಾ ಅವರಿಗೆ ಆದೇಶ ಕೊಟ್ಟರು. ನಿರ್ಮಲಾ ಉಳಿಸಿಕೊಡುವುದಾದರೆ ಒಕೆ, ನಾಮಿನೇಶನ್ ಆದರೆ ಬೇಡ ಎಂದು ಪಟ್ಟು ಹಿಡಿದರು. ಇದಾದ ಮೇಲೆ ಬಿಗ್ ಬಾಸ್ ಈ ವಾರ ನೀವು ಪೇಕ್ ಎಂದು ಹೇಳಿರುವ ಪ್ರಶಾಂತ್ ಅವರನ್ನೇ ನಾಮಿನೇಟ್ ಮಾಡಬೇಕಾಗುತ್ತದೆ ಎಂದರು. ಈ ಕಾರಣಕ್ಕೆ ಪ್ರಶಾಂತ್ ನೇರ ನಾಮಿನೇಟ್ ಆದರು .
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.