
ಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭಕ್ಕೂ ಮುನ್ನ ಶುರುವಾದ ಅಗ್ನಿಪರೀಕ್ಷೆ ಸದ್ಯ ಟ್ರೋಲ್ ಆಗ್ತಿದೆ. ಕಲರ್ಸ್ ಕನ್ನಡ ಈ ಬಾರಿ ಜನಸಾಮಾನ್ಯರಿಗೆ ಅವಕಾಶ ನೀಡಿದೆ. ಆದ್ರೆ ಜನಸಾಮಾನ್ಯರು ಸೆಲೆಬ್ರಿಟಿಗಳಂತೆ ಬಿಗ್ ಬಾಸ್ ಮನೆಗೆ ಡಾನ್ಸ್ ಮಾಡ್ತಾ ಹೋಗ್ತಿಲ್ಲ. ಮೊದಲು ಅಗ್ನಿಪರೀಕ್ಷೆ ಎದುರಿಸ್ಬೇಕು. ಅಲ್ಲಿ ಗೆದ್ದವರು ಬಿಗ್ ಬಾಸ್ ಮನೆಗೆ ಎಂಟ್ರಿ ಪಡೀತಾರೆ.
ಬಿಗ್ ಬಾಸ್ ಅಗ್ನಿಪರೀಕ್ಷೆ ಆಗಸ್ಟ್ 16 ರಿಂದ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿದೆ. ಈಗಾಗಲೇ ಅನೇಕ ಪ್ರೋಮೋಗಳು ಬಿಡುಗಡೆಯಾಗಿ ಚರ್ಚೆಗೆ ಬಂದಿವೆ. ಪ್ರೋಮೋದಲ್ಲಿ ಜಡ್ಜ್ ಗಳ ಖಡಕ್ ನಿರ್ಧಾರ, ತಲೆ ಬೋಳಿಸಿಕೊಳ್ಳೋದು, ದಾಖಲೆ ಹರಿಯುವಂತ ದೃಶ್ಯಗಳು ಜನರ ನಿದ್ರೆಗೆಡಿಸಿವೆ. ಜಡ್ಜಸ್ ಮೇಲೆ ಜನರು ಆರೋಪ ಮಾಡ್ತಿದ್ದಾರೆ.
ಸಂಗೀತಾ ಶೃಂಗೇರಿ, ವಿನಯ್ ಗೌಡ, ಶ್ರುತಿ ಹಾಗೂ ಚಂದನ್ ಶೆಟ್ಟಿ ಜಡ್ಜ್ ಆಗಿದ್ದು, ಅವರು ನೀಡ್ತಿರುವ ಒಂದೊಂದು ಟಾಸ್ಕ್, ಮಾತು ಜನಸಾಮಾನ್ಯರ ಕೋಪಕ್ಕೆ ಕಾರಣವಾಗಿದೆ. ಸಂಗೀತಾ ಶೃಂಗೇರಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗ್ತಿದ್ದಾರೆ. ಅವ್ರ ನಿರ್ಧಾರ ಖಂಡಿಸಿ ಅನೇಕರು ಸಂಗೀತಾ ಅವರನ್ನು ಟ್ರೋಲ್ ಮಾಡ್ತಿದ್ದಾರೆ.
ವಿನಯ್ ಗೌಡ ಹಾಗೂ ಸಂಗೀತಾ ಅವರ ವಿಡಿಯೋ ಒಂದನ್ನು ಕಲರ್ಸ್ ಕನ್ನಡ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದೆ. ಈ ವಿಡಿಯೋದಲ್ಲಿ ಸಂಗೀತಾ, ಟ್ರೋಲರ್ಸ್ ಮೇಲೆ ಅಸಮಾಧಾನಗೊಂಡಿದ್ದಾರೆ. ಬಿಗ್ ಬಾಸ್ ಅಗ್ನಿಪರೀಕ್ಷೆಗೆ ಜಡ್ಜ್ ಆಗಿ ಬರಬಾರದಿತ್ತು. ಒಳ್ಳೆ ಸ್ಪರ್ಧಿ ಬಿಗ್ ಬಾಸ್ ಒಳಗೆ ಹೋಗ್ಬೇಕು ಎನ್ನುವ ಕಾರಣಕ್ಕೆ ಟಾಸ್ಕ್ ನೀಡೋದು ತಪ್ಪಾ ಅಂತ ಸಂಗೀತಾ ವಿನಯ್ ಅವ್ರ ಜೊತೆ ವಾದಕ್ಕೆ ಇಳಿದಿದ್ದಾರೆ.
ಟ್ರೋಲರ್ ಬಗ್ಗೆ ವಿನಯ್ ಗೌಡ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಟ್ರೋಲ್ ವಿಡಿಯೋ ನೋಡ್ತಾ ಅಸಮಾಧಾನಗೊಳ್ಳುವ ಬದಲು ಅದನ್ನು ಮನರಂಜನೆಯಾಗಿ ತೆಗೆದ್ಕೊಳ್ಳಿ. ನಾನು ಎಂಜಾಯ್ ಮಾಡ್ತಿದ್ದೇನೆ. ಜನರು ಪೂರ್ತಿ ಎಪಿಸೋಡ್ ನೋಡ್ದೆ ಟ್ರೋಲ್ ಮಾಡ್ತಿದ್ದಾರೆ. ಮೊದಲು ಎಪಿಸೋಡ್ ನೋಡ್ಲಿ ಅಂತ ವಿನಯ್ ಗೌಡ ಹೇಳಿದ್ದಾರೆ.
ಬಿಗ್ ಬಾಸ್ ಅಗ್ನಿ ಪರೀಕ್ಷೆ ಬಗ್ಗೆ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತಪಡಿಸಿದ್ದು, ಟ್ರೋಲ್ ಹೆಚ್ಚಾಗ್ತಿದ್ದಂತೆ ಕಲರ್ಸ್ ಕನ್ನಡ ಈ ವಿಡಿಯೋ ಮೂಲಕ ಟ್ರೋಲರ್ ಗೆ ಟಾಂಗ್ ಕೊಟ್ಟಂತಿದೆ. ಮೊದಲು ಎಪಿಸೋಡ್ ನೋಡಿ ನಂತ್ರ ರಿಯಾಕ್ಷನ್ ನೀಡಿ ಅಂತ ಪರೋಕ್ಷವಾಗಿ ತಿಳಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.