ವಿನ್ನರ್ ಪಟ್ಟ ಜಸ್ಟ್ ಮಿಸ್, ರನ್ನರ್-ಅಪ್ ಗಿಲ್ಲಿ? ಕೊನೆ ಹಂತದಲ್ಲಿ ಡಲ್ ಆಗಿದ್ಯಾಕೆ ಗಿಲ್ಲಿ ನಟ?

Published : Jan 14, 2026, 12:44 PM IST
Gilli Nata

ಸಾರಾಂಶ

ಬಿಗ್ ಬಾಸ್ ಕನ್ನಡ ಸೀಸನ್-12 ಅಂತಿಮ ಹಂತ ತಲುಪಿದ್ದು, ಗೆಲ್ಲುವ ಸ್ಪರ್ಧಿ ಎಂದು ಬಿಂಬಿತವಾಗಿದ್ದ ಗಿಲ್ಲಿಗೆ ವಿನ್ನರ್ ಪಟ್ಟ ಕೈತಪ್ಪುವ ಸಾಧ್ಯತೆ ಇದೆ. ಕೊನೆಯ ವಾರಗಳಲ್ಲಿ ಗಿಲ್ಲಿಯ ಆಟ ಡಲ್ ಆಗಿದ್ದು, ಹಿಂದಿನ ಸೀಸನ್‌ಗಳಂತೆ ಈ ಬಾರಿಯೂ ಅನಿರೀಕ್ಷಿತ ಫಲಿತಾಂಶ ಬಂದು ಗಿಲ್ಲಿ ರನ್ನರ್ ಅಪ್ ಆಗಬಹುದು.

ಬಿಗ್ ಬಾಸ್ ಕನ್ನಡ ಸೀಸನ್-12 ಮುಕ್ತಾಯಕ್ಕೆ ಇನ್ನೂ ನಾಲ್ಕೇ ನಾಲ್ಕು ದಿನಗಳು ಬಾಕಿ ಇವೆ. ಉಳಿದ ಆರು ಜನರಲ್ಲಿ ವಿನ್ನರ್ ಯಾರು ಅನ್ನೋ ಚರ್ಚೆ ಶುರುವಾಗಿದೆ. ಇಷ್ಟು ದಿನ ಗಿಲ್ಲಿನೇ ವಿನ್ನರ್ ಅಂತಿದ್ದವರು. ಈಗ ಗಿಲ್ಲಿ ಬಹುಶಃ ರನ್ನರ್ ಅಪ್ ಆಗಬಹುದು ಅಂತಿದ್ದಾರೆ. ಮೊದಲ ಸ್ಥಾನದಿಂದ ಗಿಲ್ಲಿ 2ನೇ ಸ್ಥಾನಕ್ಕೆ ಇಳಿದುಬಿಟ್ಟಿದ್ದಾನೆ.

ಉಳಿದ ಆರು ಸ್ಪರ್ಧಿಗಳಲ್ಲಿ ವಿನ್ನರ್ ಯಾರು?

ಯೆಸ್, ಬಿಗ್ ಬಾಸ್ ಕನ್ನಡ ಸೀಸನ್-12 ಮುಕ್ತಾಯಕ್ಕೆ ಇನ್ನುಳಿದಿರೋದು ನಾಲ್ಕೇ ದಿನ. ದೊಡ್ಮನೆಯಲ್ಲಿ 6 ಸ್ಪರ್ಧಿಗಳು ಉಳಿದುಕೊಂಡಿದ್ದು, ಅವರ ಪೈಕಿ ಒಬ್ಬರು ಬಿಗ್ ಬಾಸ್ ಟ್ರೋಫಿ ಎತ್ತಿ ಹಿಡಿಯಲಿದ್ದಾರೆ. ಅಸಲಿಗೆ ಈ ಸೀಸನ್ ಆರಂಭದಿಂದಲೂ ದೊಡ್ಮನೆಯಲ್ಲಿ ತನ್ನದೇ ಹವಾ ಕ್ರಿಯೇಟ್ ಮಾಡಿಕೊಂಡು ಬಂದಿದ್ದು ಗಿಲ್ಲಿ ನಟ. ಗಿಲ್ಲಿ ಆಟದ ವೈಖರಿ ನೋಡಿದವರು ಈ ಸೀಸನ್​ನ ವಿನ್ನರ್ ಗಿಲ್ಲಿನೇ ಆಗ್ತಾನೇ ಅಂತ ಇಲ್ಲಿತನಕ ಅಂದುಕೊಂಡಿದ್ರು. ಆದ್ರೆ ಕೊನೆ ಕೊನೆಗೆ ಟ್ರೆಂಡ್ ಕೊಂಚ ಬದಲಾದಂತಿದೆ.

ವಿನ್ನರ್ ಪಟ್ಟ ಜಸ್ಟ್ ಮಿಸ್, ರನ್ನರ್ ಅಪ್ ಗಿಲ್ಲಿ?

ಹೌದು ಇದೂವರೆಗೂ ಗಿಲ್ಲಿನೇ ವಿನ್ನರ್ ಅಂತಿದ್ದವರು, ಈಗ ಗಿಲ್ಲಿಗೆ ವಿನ್ನರ್ ಪಟ್ಟ ಜಸ್ಟ್ ಮಿಸ್ ಆದ್ರೂ ಅಚ್ಚರಿಯಿಲ್ಲ ಅಂತಿದ್ದಾರೆ. ಸೀಸನ್ -1 ನಿಂದಲೂ ಬಹಳಷ್ಟು ಬಾರಿ ವಿನ್ನರ್ ಆಗಬೇಕಿದ್ದವರು ರನ್ನರ್ ಅಪ್ ಆಗಿದ್ದನ್ನ ನೋಡಿದವರಿಗೆ , ಈ ಸಾರಿನೂ ಅಂಥದ್ದೇ ರಿಸಲ್ಟ್ ಬರುತ್ತೆ ಅನ್ನೋ ಡೌಟ್ ಶುರುವಾಗಿದೆ.

ಮೊದಲ ಸೀಸನ್​ನಲ್ಲಿ ಮಸ್ತ್ ಆಗಿ ಆಟವಾಡಿಕೊಂಡು ಬಂದಿದ್ದ ಅರುಣ್​ ಸಾಗರ್ ಕೊನೆಗೆ ವಿಜಯ್ ರಾಘವೇಂದ್ರ ಎದುರು ಸೋತಿದ್ರು. ಸೀಸನ್-2 ಗೆಲ್ಲಬೇಕಿದ್ದ ಸೃಜನ್ ಲೊಕೇಶ್ , ಅಕುಲ್ ಎದುರು ಸೋತು ರನ್ನರ್ ಅಪ್ ಆಗಿದ್ರು. ಸೀಸನ್ 7 ವಿನ್ನರ್ ಆಗೇಬಿಡ್ತಾರೆ ಅಂದುಕೊಂಡಿದ್ದ ಕುರಿ ಪ್ರತಾಪ್ , ಶೈನ್ ಶೆಟ್ಟಿ ಎದುರು ಸೋತು ಹೋಗಿದ್ರು.

ಈ ಬಾರಿಯೂ ಬರುತ್ತಾ ಅನಿರೀಕ್ಷಿತ ಫಲಿತಾಂಶ..?

ಹೌದು ಸದ್ಯದ ಟ್ರೆಂಡ್ ನೋಡ್ತಾ ಇದ್ರೆ ಈ ಸೀಸನ್​ ಆರಂಭದಿಂದಲೂ ಗೆದ್ದೇ ಗೆಲ್ತಾನೆ ಅನ್ನೋ ಭರವಸೆ ಮೂಡಿಸಿದ್ದ ಗಿಲ್ಲಿ, ಕೊನೆ ಕೊನೆ ಎರಡನೇ ಸ್ಥಾನಕ್ಕೆ ಬರಬಹುದು ಎನ್ನಲಾಗ್ತಾ ಇದೆ. ಅಸಲಿಗೆ ಆರಂಭದಿಂದಲೂ ಸಖತ್ ಆಗಿ ಆಟವಾಡಿಕೊಂಡಿದ್ದ ಬಂದಿದ್ದ ಗಿಲ್ಲಿ ಕೊನೆ ಕೊನೆಗೆ ಡಲ್ ಆಗಿದ್ದಾನೆ.

ಕಳೆದ ವಾರದ ವೀಕೆಂಡ್​​ ಪಂಚಾಯತಿಯಲ್ಲಿ ಸುದೀಪ್ ಕೂಡ ಗಿಲ್ಲಿ ಡಲ್ ಆಗಿದ್ದನ್ನ ಗಮನಿಸಿದ್ರು. ಗಿಲ್ಲಿ ಎನರ್ಜಿ ಎಲ್ಲಿ ಹೋಯ್ತು ಅಂತ ಪ್ರಶ್ನೆ ಮಾಡಿದ್ರು. ಜೊತೆಗೆ ಯಾರ್ಯಾರು ಎವಿಕ್ಟ್ ಆದ್ರೆ ವೇದಿಕೆ ಮೇಲೆ ಏನ್ ಹೇಳ್ತಿರಿ ಅಂತ ಕೇಳಿದ್ರು. ತನ್ನ ಸರದಿ ಬಂದಾಗ ಗಿಲ್ಲಿ ಮೊದಲೇ ಕಂಠಪಾಠ ಮಾಡಿದಂತೆ ವಿದಾಯ ಭಾಷಣ ಮಾಡಿದ್ದ.

ಇದನ್ನ ನೋಡಿದ ಕಿಚ್ಚನಿಗೆ ಇದು ಗಿಲ್ಲಿನಾ ಅನ್ನೋ ಅನುಮಾನ ಮೂಡಿತ್ತು. ಮೊದಲಿಂದಲೂ ಜೋಶ್​ನಲ್ಲಿದ್ದ ಗಿಲ್ಲಿ ಕೊನೆ ಕೊನೆಗೆ ಇನ್ನೂ ಜಾಸ್ತಿ ಜೋಶ್​ನಲ್ಲಿರಬೇಕಿತ್ತು. ಆದ್ರೆ ಅದ್ಯಾಕೋ ಕ್ಲೈಮ್ಯಾಕ್ಸ್ ಹಂತದಲ್ಲಿ ಗಿಲ್ಲಿ ಡಲ್ ಆಗಿದ್ದಾನೆ. ಇದೂವರೆಗೂ 12 ಸೀಸನ್​ಗಳಲ್ಲಿ ಒಂದು ಬಾರಿ ಮಾತ್ರ ಮಹಿಳಾ ಸ್ಪರ್ಧಿ ಗೆದ್ದಿರೋದು. ಸೋ ಈ ಬಾರಿ ಬಿಗ್ ಬಾಸ್ ಪಟ್ಟ ಲೇಡಿ ಕಂಟೆಸ್ಟೆಂಟ್​ಗೆ ಸಿಕ್ರೂ ಅಚ್ಚರಿಯಿಲ್ಲ. ಗಿಲ್ಲಿ ಜೊತೆಗೆ ರೇಸ್​ನಲ್ಲಿ ರಕ್ಷಿತಾ ಶೆಟ್ಟಿ ಮತ್ತು ಅಶ್ವಿನಿ ಗೌಡ ಇದ್ದಾರೆ. ಧನುಷ್ ಕೂಡ ಸ್ಟ್ರಾಂಗ್ ಸ್ಪರ್ಧಿನೇ. ಒಟ್ನಲ್ಲಿ ಇವರೆಲ್ಲರ ನಡುವೆ ವಿನ್ನರ್ ಪಟ್ಟ ಯಾರಿಗಾದ್ರೂ ಸಿಗಬಹುದು. ಆದ್ರೆ ಗಿಲ್ಲಿ ಮಾತ್ರ ರನ್ನರ್ ಅಪ್ ಅಂತ ಫಿಕ್ಸ್ ಆಗಿದ್ದಾರೆ ಫ್ಯಾನ್ಸ್.

ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಫಿನಾಲೆ ಹೊತ್ತಲ್ಲೇ ಸುದೀಪ್ ಮನೆಗೆ ನಾರಾಯಣ ಗೌಡ ಹೋಗಿದ್ಯಾಕೆ? ಬಿಸಿ ಬಿಸಿ ಚರ್ಚೆ
ಶೋ ಆಗಿ ಉಳಿದುಕೊಳ್ಳದ Bigg Boss Kannada 12; ನೀವು ಮಾಡುವ ಹಾನಿ ಜೀವನಪೂರ್ತಿ ಉಳಿಯಬಹುದು: ಕಂಪೆನಿ HR