
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿರುವ ಗಿಲ್ಲಿ ನಟ ಅವರು ( Bigg Boss Gilli Nata ) ಮಂಡ್ಯದ ಮಳವಳ್ಳಿಯಲ್ಲಿ ತೆರೆದ ವಾಹನ ಜಾಥಾದಲ್ಲಿ ಭಾಗಹಿಸಿದ್ದರು. ಅಲ್ಲಿ ಸೇರಿದ್ದ ಜನರನ್ನು ನಿಭಾಯಿಸಲು ಪೊಲೀಸರು ಹರಸಾಹಸ ಪಡಬೇಕಾಗಿ ಬಂತು, ಅಷ್ಟರಮಟ್ಟಿಗೆ ಗಿಲ್ಲಿ ನಟನ ಕ್ರೇಜ್ ಇತ್ತು. ಈಗ ಅವರು ವಿಡಿಯೋ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಇಷ್ಟು ದೂರ ಕರ್ಕೊಂಡು ಬಂದಿದ್ದೀರಾ .. ಮನಸ್ಸಲ್ಲಿ ಜಾಗ ಕೊಟ್ಟಿದ್ದೀರಾ.. ಕೈ ಮೇಲೆ ಹಚ್ಚೆ ಹಾಕಿಸ್ಕೊಂಡಿದ್ದೀರಾ.. ನಿರಂತರವಾಗಿ ಬೆಂಬಲಿಸಿದ್ದೀರಾ..ಇದುವರೆಗೂ ಬರಿ ರನ್ನರ್ ಅಪ್ ಆಗೇ ಉಳ್ಕೊತಿದ್ದ ಗಿಲ್ಲಿಗೆ ಗೆಲುವಿನ ಕಿರೀಟ ತೊಡಿಸಿದ್ದೀರಾ.. ಮೆರೆಸಿದ್ದೀರಾ..ಈ ಪ್ರೀತಿಗೆ ಏನು ಹೇಳಿದ್ರು, ಎಷ್ಟು ಹೇಳಿದ್ರು ಕಡಿಮೇನೆ!!
ಗಿಲ್ಲಿ ಗೆಲುವಿಗಾಗಿ ವೋಟ್ ಮಾಡಿದವರಿಗೆ, ಹರಕೆ ಹೊತ್ತೋರಿಗೆ, ಅಭಿಮಾನದಿಂದ ಜೊತೆ ನಿಂತೋರಿಗೆ “ರೆಲೆಂಟ್ ಕ್ರಿಯೇಷನ್ಸ್” ಕಡೆಯಿಂದ ದೊಡ್ಡ ನಮಸ್ಕಾರ ಹಾಗೂ ತುಂಬು ಹೃದಯದ ಧನ್ಯವಾದಗಳು !!
ಈ ಗೆಲುವಿನ ಬೆನ್ನಲ್ಲೇ ಹೊಸ ಹೆಜ್ಜೆ , ಹೊಸ ದಾರಿ ಕಡೆ ಮುಖ ಮಾಡೋ ಹೊತ್ತು!!
ನಮ್ಮ ಕನ್ನಡಿಗರಿಗೆ, ಕನ್ನಡ ಜನತೆಗೆ ಯಾವ ಥರ ಕೃತಜ್ಞತೆ ಹೇಳಬೇಕು ಎಂದು ಗೊತ್ತಾಗುತ್ತಿಲ್ಲ. ಬಿಗ್ ಬಾಸ್ ಮನೆಯಲ್ಲಿದ್ದಾಗ ನನಗೆ ಈ ರೀತಿ ಹೊರಗಡೆ ಪ್ರತಿಕ್ರಿಯೆ ಸಿಗ್ತಿದೆ ಎನ್ನೋದು ಗೊತ್ತಿರಲಿಲ್ಲ. ನನಗೆ ನಾನೇ ನಂಬೋಕೆ ಆಗ್ತಿಲ್ಲ. ನನ್ನನ್ನು ಜನರು ಈ ರೀತಿ ಪ್ರೀತಿ ಮಾಡ್ತಾರೆ ಎನ್ನೋದು ಗೊತ್ತಿರಲಿಲ್ಲ. ಯೋಧರು, ಬೇರೆ ರಾಜ್ಯದವರು, ಬೇರೆ ದೇಶದವರು ನನ್ನ ಬಗ್ಗೆ ವಿಡಿಯೋ ಮಾಡಿದ್ದಾರೆ. ರೈತರು ಸಂಕ್ರಾಂತಿ ಹಬ್ಬದ ವೇಳೆ ಕಿಚ್ಚು ಹಾಯಿಸುವಾಗ ಕೂಡ, ಎತ್ತಿನ ಮೇಲೆ ನನ್ನ ಫೋಟೋ ಹಾಕಿದ್ರು.
ಆಟೋ ಡ್ರೈವರ್ಸ್ ಕೂಡ ಆಟೋಗಳ ಮೇಲೆ ಸ್ಟಿಕ್ಕರ್ಸ್ ಹಾಕಿದ್ದರು. ನನ್ನ ಮುಖದ ಟ್ಯಾಟೂ ಹಾಕಿಸಿಕೊಂಡವರು ಯಾರು ಎನ್ನೋದು ಗೊತ್ತಿಲ್ಲ. ಮೀಡಿಯಾದವರು, ಸೋಶಿಯಲ್ ಮೀಡಿಯಾದವರು ಕೂಡ ನನ್ನನ್ನು ಬೆಂಬಲಿಸಿದ್ದು, ಸಿಕ್ಕಾಪಟ್ಟೆ ಆಶ್ಚರ್ಯ ತಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಒಂದೇ ಒಂದು ನೆಗೆಟಿವ್ ಟ್ರೋಲ್ಸ್, ಕಾಮೆಂಟ್ ನೋಡಿಲ್ಲ. ನಿಮ್ಮ ಪ್ರೀತಿ, ವಿಶ್ವಾಸವನ್ನು ನಾನು ಕೊನೆಯವರಿಗೂ ಉಳಿಸಿಕೊಳ್ತೀನಿ.
ಗಿಲ್ಲಿ ನಟನನ್ನು ಒಂದು ಕಾರ್ಯಕ್ರಮಕ್ಕೆ ಕರೆಸಬೇಕು ಎಂದು ಅಂದುಕೊಳ್ಳುವವರೇ ಜಾಸ್ತಿಯಿದ್ದಾರೆ. ಇನ್ನೊಂದು ಕಡೆ ಇವರಿಗೆ ಇನ್ನಷ್ಟು ಸಿನಿಮಾ, ಸೀರಿಯಲ್ ಆಫರ್‌ಗಳು ಹೆಚ್ಚಾಗಲಿವೆ. ಗಿಲ್ಲಿ ಯಾವ ಅವಕಾಶವನ್ನು ಆಯ್ಕೆ ಮಾಡಿಕೊಂಡು, ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.