
ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಒಳ್ಳೆ ಹುಡ್ಗ ಪ್ರಥಮ್, ಅಶ್ವಿನಿ ಗೌಡ, ಜಾಹ್ನವಿ, ರಕ್ಷಿತಾ ಶೆಟ್ಟಿ ಕೂಡ ಭಾಗವಹಿಸಿದ್ದರು. ಆ ವೇಳೆ ಪ್ರಥಮ್ ಅವರು ರಕ್ಷಿತಾರ ಕಾಲೆಳೆದಿದ್ದಾರೆ.
ಗಿಲ್ಲಿ ನಟನ ತಂಗಿ, ಮಗಳು, ವಂಶದ ಕುಡಿ ರಕ್ಷಿತಾ ಶೆಟ್ಟಿ ಎಂದು ಪ್ರಥಮ್ ಹೇಳಿದ್ದಾರೆ. ಆಗ ರಕ್ಷಿತಾ ಮಾತ್ರ, ತಂಗಿ ಅಂತ ಹೇಳಬೇಡಿ, ವಂಶದ ಕುಡಿ ಎಂದು ಹೇಳಿ ಸಾಕು ಎಂದಿದ್ದಾರೆ. ಆದರೂ ಕೂಡ ಪ್ರಥಮ್ ಮಾತ್ರ ಗಿಲ್ಲಿ ನಟನ ತಂಗಿ ಎಂದಿದ್ದಾರೆ. ಅದು ರಕ್ಷಿತಾಗೆ ಇಷ್ಟ ಆಗಿಲ್ಲ.
ಅಂದಹಾಗೆ ರಕ್ಷಿತಾ ಶೆಟ್ಟಿ ಅವರು ತಮಗೆ ಬರುವ ಕನ್ನಡದಲ್ಲೇ ಮಾತನಾಡಿದ್ದಾರೆ. ಆ ವೇದಿಕೆ ಮೇಲೆ ಸ್ವಾಮೀಜಿಗಳು ಕೂಡ ಇದ್ದರು. ಆಗ ಅಶ್ವಿನಿ ಗೌಡ ಅವರು ರಕ್ಷಿತಾಗೆ, “ಪೂಜ್ಯ ಗುರುಗಳಿಗೆ ನಮಸ್ಕಾರ ಎಂದು ಹೇಳು” ಎಂದಿದ್ದಾರೆ. ಆಗ ರಕ್ಷಿತಾ ಅವರು ನಮಸ್ಕಾರ ಎಂದಿದ್ದಾರೆ, ಆ ಮಾತು ಕೇಳಿ ಸ್ವಾಮೀಜಿಗಳು ನಕ್ಕಿದ್ದಾರೆ.
ರಕ್ಷಿತಾ ಶೆಟ್ಟಿ ಅವರು ಕಾಲ್ಗೆಜ್ಜೆಯನ್ನು ತೋರಿಸಿ, ಅಶ್ವಿನಿ ಗೌಡ, ಜಾಹ್ನವಿಯನ್ನು ರೇಗಿಸಿದ್ದಾರೆ. ಅಂದು ಪರಿಸ್ಥಿತಿ ಬೇರೆ ಇತ್ತು, ಇಂದು ಪರಿಸ್ಥಿತಿ ಬೇರೆ ಇದೆ, ಅದೆಲ್ಲವನ್ನು ನಾನು ವಿವರಿಸೋಕೆ ಆಗೋದಿಲ್ಲ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ. ಆದರೆ ಈಗ ನಾವೆಲ್ಲರೂ ಚೆನ್ನಾಗಿದ್ದೇವೆ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಅವರು ರಾತ್ರಿ ನಿದ್ದೆ ಮಾಡಿದಾಗ ಸೌಂಡ್ ಮಾಡ್ತಾರೆ, ನಾಗವಲ್ಲಿ ಥರ ಡ್ಯಾನ್ಸ್ ಮಾಡ್ತಾರೆ ಎಂದು ಅಶ್ವಿನಿ ಗೌಡ, ಜಾಹ್ನವಿ ಅವರು ಹೇಳಿದ್ದರು. ಇದು ದೊಡ್ಡ ಮಟ್ಟದಲ್ಲಿ ಸೌಂಡ್ ಆಗಿತ್ತು, ಅಶ್ವಿನಿ, ಜಾಹ್ನವಿಗೆ ಕಿಚ್ಚ ಸುದೀಪ್ ಕ್ಲಾಸ್ ತಗೊಂಡಿದ್ದರು. ಇದೇ ವಿಷಯವನ್ನು ಇಟ್ಟುಕೊಂಡು, ರಕ್ಷಿತಾ ಶೆಟ್ಟಿ ಅವರು ರೇಗಿಸಿದ್ದಾರೆ.
ಪ್ರಥಮ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 4 ಶೋ ಗೆದ್ದಿದ್ದಾರೆ ಎಂದು ರಕ್ಷಿತಾ ಹೇಳಿದಾಗ, ಪ್ರಥಮ್ ಅವರು, “ನೀನು ಹೇಳಿದಮೇಲೆ ಜನರಿಗೆ ಈ ವಿಷಯ ಗೊತ್ತಾಗಿದೆ, ಅಲ್ಲಿಯವರೆಗೆ ಯಾರಿಗೂ ಗೊತ್ತಿರಲಿಲ್ಲ” ಎಂದು ಹೇಳಿದ್ದಾರೆ. ಆ ಮಾತು ಕೇಳಿ ಎಲ್ಲರೂ ನಕ್ಕಿದ್ದಾರೆ.
ಮಾಳು ನಿಪನಾಳ ಅವರನ್ನು ಮಾತನಾಡಿಸಿದರೆ, ಅಷ್ಟು ಬೇಗ ಅಲ್ಲಿಂದ ಹೊರಡೋಕೆ ಇಷ್ಟ ಆಗಲ್ಲ, ಹೀಗಾಗಿ ಬೆಳಗಾವಿಗೆ ಬಂದರೂ ಕೂಡ ಮಾಳು ಅಣ್ಣನನ್ನು ಮೀಟ್ ಮಾಡೋದಿಲ್ಲ, ಮುಂದೆ ಮೀಟ್ ಮಾಡ್ತೀನಿ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.