
ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋನಲ್ಲಿ ಈ ಬಾರಿ ಯಾರು ಯಾರು ಸ್ಪರ್ಧಿಗಳಾಗಿ ಬರ್ತಾರೆ? ಯಾರು ನಿರೂಪಕರು? ಯಾವಾಗ ಶುರುವಾಗತ್ತೆ? ಹೀಗೆ ನಾನಾ ಪ್ರಶ್ನೆಗಳು ಆಗಾಗ ಏಳುತ್ತಿರುತ್ತವೆ. ಸದ್ಯ ʼಬಿಗ್ ಬಾಸ್ ಕನ್ನಡ ಸೀಸನ್ 12ʼ ಶುರುವಾಗುವ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯು ಯಾವುದೇ ಸುಳಿವು ಕೊಟ್ಟಿಲ್ಲ. ಇದರ ಜೊತೆಗೆ ವಾಹಿನಿಯಿಂದ ಯಾವುದೇ ಪ್ರೋಮೋ ಕೂಡ ರಿಲೀಸ್ ಆಗಿಲ್ಲ. ಇನ್ನು ಕಿಚ್ಚ ಸುದೀಪ್ ಅಥವಾ ಹೊಸ ನಿರೂಪಕರ ಜೊತೆ ಹೊಸ ಪ್ರೋಮೋ ಶೂಟ್ ಆಗಿದೆ ಎಂಬ ಗಾಳಿ ಸುದ್ದಿ ಕೂಡ ಇಲ್ಲ. ಹೀಗಿರುವಾಗ ಕಲರ್ಸ್ ವಾಹಿನಿಯು ದಿಢೀರನೇ ಬಿಗ್ ಬಾಸ್ ಪತ್ರಿಕಾಗೋಷ್ಠಿ ಕರೆದಿದ್ದು ಯಾಕೆ ಎನ್ನುವ ಪ್ರಶ್ನೆ ಮೂಡಿದೆ.
ಸ್ಪಷ್ಟನೆ ನೀಡಲು ಸುದ್ದಿಗೋಷ್ಠಿ ಮಾಡಿದ್ರಾ?
ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗುವ ಮುಂಚೆ ಏನಾದರೂ ಒಟಿಟಿ ಸೀಸನ್ ಬರಲಿದೆಯಾ? ಅಥವಾ ಬಿಗ್ ಬಾಸ್ ಶೋ ಬಗ್ಗೆ ಸಾಕಷ್ಟು ಗಾಳಿಸುದ್ದಿಗಳು ಹರಡುತ್ತಿರುತ್ತದೆ, ಹೀಗಾಗಿ ಇವುಗಳಿಗೆ ಸ್ಪಷ್ಟನೆ ನೀಡಲು ಏನಾದರೂ ಪತ್ರಿಕಾಗೋಷ್ಠಿ ಆರಂಭಿಸಿದ್ದಾರಾ ಎಂದು ಕಾದು ನೋಡಬೇಕಿದೆ.
ಒಟಿಟಿ ಶುರು ಆಗಲಿದೆಯಾ?
ಅಂದಹಾಗೆ ಈಗಾಗಲೇ ಒಂದು ಸೀಸನ್ ಒಟಿಟಿ ಶುರುವಾಗಿತ್ತು. ಒಟಿಟಿಯ ಫಿನಾಲೆಯಲ್ಲಿದ್ದ ನಾಲ್ವರು ಬಿಗ್ ಬಾಸ್ ಕನ್ನಡ ಸೀಸನ್ 12 ಕ್ಕೆ ನೇರ ಎಂಟ್ರಿ ಪಡೆದಿದ್ದರು. ಸಾಮಾನ್ಯವಾಗಿ ಸೆಪ್ಟೆಂಬರ್ ಅಂತ್ಯದಲ್ಲಿ ಬಿಗ್ ಬಾಸ್ ಶುರುವಾಗಿ ಜನವರಿ, ಫೆಬ್ರವರಿ ಒಳಗಡೆ ಬಿಗ್ ಬಾಸ್ ಅಂತ್ಯ ಆಗಿರುತ್ತದೆ. ಒಟಿಟಿ ಸೀಸನ್ ಈಗ ಶುರುವಾದರೆ, ಸೆಪ್ಟೆಂಬರ್‌ನಲ್ಲಿ ಟಿವಿ ಸೀಸನ್ ಕೂಡ ಆರಂಭ ಆಗಬಹುದು.
ಕಿಚ್ಚ ಸುದೀಪ್ ಏನು ಹೇಳಿದ್ರು?
ಬಿಗ್ ಬಾಸ್ ಕನ್ನಡ ಶೋನ ಮುಂದಿನ ಸೀಸನ್‌ನನ್ನು ಯಾರು ನಿರೂಪಣೆ ಮಾಡ್ತಾರೆ ಎನ್ನೋದು ದೊಡ್ಡ ಪ್ರಶ್ನೆ ಆಗಿದೆ. ಇದರ ಜೊತೆಗೆ ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಿಚ್ಚ ಸುದೀಪ್ ಅವರು ಈ ಬಗ್ಗೆ ಮಾತನಾಡಿದ್ದು, “ನಾನು ಯಾವ ವೇದಿಕೆಯಲ್ಲಿ ಈ ಬಗ್ಗೆ ಮಾತನಾಡಬೇಕೋ, ಅಲ್ಲಿಯೇ ಮಾತನಾಡ್ತೀನಿ. ಆಗಲೇ ಬಿಗ್ ಬಾಸ್‌ಗೆ ಒಂದು ಮರ್ಯಾದೆ” ಎಂದು ಹೇಳಿದ್ದರು.
ಕಿಚ್ಚ ಸುದೀಪ್ ಸ್ಪಷ್ಟನೆ ನೀಡೋಕೆ ಈ ಸುದ್ದಿಗೋಷ್ಠಿಯೇ?
ಬಿಗ್ ಬಾಸ್ ನಿರೂಪಣೆ ಮಾಡುವ ಬಗ್ಗೆ ಸ್ಪಷ್ಟನೆ ನೀಡೋದಿಕ್ಕೆ ಈ ಪತ್ರಿಕಾಗೋಷ್ಠಿ ಕರೆಯಲಾಗಿದ್ಯಾ? ಈ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡುವ ಬಗ್ಗೆ ಮಾತನಾಡ್ತಾರಾ ಎಂದು ಕಾದು ನೋಡಬೇಕಿದೆ.
ಬಿಗ್ ಬಾಸ್ ನಿರೂಪಣೆ ಮಾಡಲ್ಲ ಎಂದಿದ್ರು!
ಕಿಚ್ಚ ಸುದೀಪ್ ಅವರು ಈ ಹಿಂದಿನ ಸೀಸನ್‌ನಲ್ಲಿ ಭಾಗಿಯಾದ ವೇಳೆಯೇ “ಮುಂದೆ ಬಿಗ್ ಬಾಸ್ ನಿರೂಪಣೆ ಮಾಡೋದಿಲ್ಲ” ಎಂದು ಟ್ವೀಟ್ ಮಾಡಿದ್ದರು. ಅಂದಹಾಗೆ ಈ ಬಾರಿ ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡೋದಿಕ್ಕೆ ಒಂದಷ್ಟು ರೂಲ್ಸ್ ಹಾಕಿದ್ದಾರೆ ಎಂಬ ಗಾಳಿಸುದ್ದಿ ಕೂಡ ಓಡ್ತಿದೆ. ಹಾಗಾಗಿ ಈ ಬಾರಿಯ ಪತ್ರಿಕಾಗೋಷ್ಠಿ ಸಾಕಷ್ಟು ಕುತೂಹಲ ಸೃಷ್ಟಿಸಿದೆ.
ಸ್ಪರ್ಧಿಗಳು
ಬಿಗ್ ಬಾಸ್ ಶೋನಲ್ಲಿ ರಾಜಕಾರಣಿ, ಜ್ಯೋತಿಷಿಗಳು, ನಟ, ನಟಿಯರು, ಕ್ರೀಡೆಯಲ್ಲಿದ್ದವರು ಹೀಗೆ ಫೇಮಸ್ ಆದವರಿಗೆ ಅವಕಾಶ ಇರುತ್ತದೆ. ಇದರ ಜೊತೆಗೆ ಒಂದೊಂದು ಸೀಸನ್‌ನಲ್ಲಿ ಸಾಮಾನ್ಯ ಜನರಿಗೂ ಕೂಡ ಅವಕಾಶ ಸಿಕ್ಕಿತ್ತು. ಹೀಗಾಗಿ ಈ ಬಾರಿ ಯಾರು? ಯಾರು? ಬಿಗ್ ಬಾಸ್ ಮನೆಯಲ್ಲಿ ಇರ್ತಾರೆ ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಒಟಿಟಿ ಬರಲಿದೆಯಾ? ಅಥವಾ ಸೀಸನ್ 12 ಬರುತ್ತಾ ಎಂಬ ಕುತೂಹಲ ಶುರುವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.