
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ವಿಲನ್ ಅಬ್ಬರ ಜೋರಾಗಿದೆ. ಸ್ಪರ್ಧಿಗಳಿಗೆ ಪ್ರತಿ ಹಂತದಲ್ಲಿಯೂ ಚಿಂತೆ ಕೊಟ್ಟು, ನೆಮ್ಮದಿ, ತಾಳ್ಮೆ ಪರೀಕ್ಷೆ ಮಾಡುತ್ತಿದ್ದಾರೆ. ಈಗ ಇನ್ನೊಂದು ಟಾಸ್ಕ್ ನೀಡಿದ್ದಾರೆ. ಇದೇ ವಿಚಾರಕ್ಕೆ ದೊಡ್ಮನೆಯಲ್ಲಿ ಜಗಳ ಶುರುವಾಗಿದೆ.
ವಿಲನ್ ಹೇಳಿದರು, ಕ್ಯಾಪ್ಟನ್ಸಿ ಟಾಸ್ಕ್ ಆಡೋಕೆ ಸಿಗತ್ತೆ ಎಂದು ಅಶ್ವಿನಿ ಗೌಡ, ಗಿಲ್ಲಿ ನಟ ಅವರು ಸೇರಿಕೊಂಡು ಅಡುಗೆ ಮಾಡಿದರು, ಕಾವ್ಯ ಶೈವ ಅವರನ್ನು ಅಳಿಸಿದರು, ಕಿಚ್ಚನ ಚಪ್ಪಾಳೆ ಫ್ರೇಮ್ ತೆಗೆದು ಸ್ಟೋರ್ ರೂಮ್‌ನಲ್ಲಿ ಇಟ್ಟರು. ಇದಕ್ಕಾಗಿ ಅವರಿಬ್ಬರು ಪಟ್ಟ ಕಷ್ಟ ಅಷ್ಟಿಷ್ಟಲ್ಲ.
ಹೌದು, ಈಗ ದೊಡ್ಮನೆಯಲ್ಲಿ ರಜತ್ ಹಾಗೂ ಅಶ್ವಿನಿ ಗೌಡ ನೇತೃತ್ವದಲ್ಲಿ ಎರಡು ಟೀಂ ರಚನೆ ಆಗಿದೆ. ವಿಲನ್ ಹೇಳಿದಂತೆ ಈ ಟೀಂ ಕೇಳಬೇಕು. ಯಾರು ಮಾತು ಕೇಳಿ ಟಾಸ್ಕ್ ಕಂಪ್ಲೀಟ್ ಮಾಡುತ್ತಾರೋ ಅವರಿಗೆ ಪಾಯಿಂಟ್ಸ್ ಸಿಗುವುದು. ಈಗ ಎರಡು ಟೀಂ ಭರ್ಜರಿಯಾಗಿ ಆಟ ಆಡಿದೆ.
ಈ ಹಿಂದಿನ ಸೀಸನ್‌ಗಳಲ್ಲಿ ತಲೆ ಕೂದಲು ತೆಗೆಸಿಕೊಳ್ಳುವ ಸಂದರ್ಭ ಬಂದಿತ್ತು. ಕಾರ್ತಿಕ್ ಮಹೇಶ್ ಅವರು ಗುಂಡು ಹೊಡೆಸಿಕೊಂಡಿದ್ದರು. ಈ ಬಾರಿ ಬೇರೆ ರೀತಿಯ ಟಾಸ್ಕ್‌ಗಳನ್ನು ನೀಡಲಾಗಿದೆ. ಪುರುಷ ಸ್ಪರ್ಧಿಗಳಲ್ಲಿ ಒಬ್ಬರು ಹಚ್ಚೆ ಹಾಕಿಸಿಕೊಳ್ಳಬೇಕು, ಮಹಿಳಾ ಸ್ಪರ್ಧಿಗಳಲ್ಲಿ ಒಬ್ಬರು ಕೂದಲಿಗೆ ಕಲರ್ ಹಾಕಿಸಿಕೊಳ್ಳಬೇಕು.
ಅಂದಹಾಗೆ ಒಬ್ಬರು ಹಚ್ಚೆ ಹಾಕಿಸಿಕೊಂಡಿದ್ದಾರೆ. ಮಹಿಳಾ ಸ್ಪರ್ಧಿಗಳಲ್ಲಿ ರಾಶಿಕಾ ಶೆಟ್ಟಿ ಅವರು ಕೂದಲಿಗೆ ಕಲರಿಂಗ್ ಮಾಡಿಸಿಕೊಳ್ಳಲು ನಿರಾಕರಣೆ ಮಾಡಿದ್ದಾರೆ. ಆದರೆ ಕಾವ್ಯ ಶೈವ ಅವರು ಕೂದಲಿಗೆ ಕಲರಿಂಗ್ ಮಾಡಿಸಿದ್ದಾರೆ. ಇದನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಇಷ್ಟವಿಲ್ಲದ ಕಲರ್ ಹಾಕಿಸಿಕೊಳ್ಳೋದು ಸುಲಭವದ ಮಾತಲ್ಲ. ನಿನ್ನೆ ಎಪಿಸೋಡ್‌ನಲ್ಲಿ ಕಾವ್ಯ ಶೈವ ಅವರಿಗೆ ಗಿಲ್ಲಿ, “ನೀನು ವೇಸ್ಟ್, ಪ್ರಿ ಪ್ರೊಡಕ್ಟ್, ಏನೂ ಮಾಡಿಲ್ಲ, ಲಕ್ಕಿ” ಎಂದೆಲ್ಲ ಹೇಳಿದ್ದರು. ಇದಕ್ಕೆ ಕಾವ್ಯ ಠಕ್ಕರ್ ಕೊಟ್ಟಿದ್ದಾರೆ.
ಸ್ಪಂದನಾ ಸೋಮಣ್ಣ ಅವರು ಕಾವ್ಯ ಶೈವಗೆ ಬಣ್ಣ ಹಚ್ಚಿದ್ದಾರೆ. ಆ ವೇಳೆ ರಜತ್ ಅವರು ಹಾಗೆ ಹಾಕಿ, ಹೀಗೆ ಹಾಕಿ ಎಂದಿದ್ದರು. ಆಮೇಲೆ ರಜತ್ ಅವರು, “ಹೇಳಿದ್ದು ಅರ್ಥ ಆಗಲ್ಲ, ಟಾಸ್ಕ್ ಮಾಡಲ್ಲ, ಸುಮ್ಮನೆ ಪುಕ್ಸಟ್ಟೆ ಮಾತುಗಳು” ಎಂದು ಹೇಳಿದ್ದಾರೆ. ಸ್ಪಂದನಾ ಸೋಮಣ್ಣ ಅವರು, “ನಿಮಗೆ ಕೊಟ್ಟಿದ್ದರೂ ಹೀಗೆ ಮಾಡ್ತಿದ್ರಿ” ಎಂದಿದ್ದಾರೆ. ಈ ವಿಚಾರವಾಗಿ ಒಂದಿಷ್ಟು ಜಗಳವೂ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.