
ಬಿಗ್ ಬಾಸ್ ಸೀಸನ್ 17 ರಲ್ಲಿ ನಟಿ ಈಶಾ ಮಾಳವಿಯಾ ಮತ್ತು ಅಭಿಷೇಕ್ ಕುಮಾರ್ ಅವರ ರಿಲೇಶನ್‌ಶಿಪ್ ಭಾರೀ ಚರ್ಚೆಯಾಗಿತ್ತು. ಇವರಿಬ್ಬರು ದೊಡ್ಮನೆಗೆ ಹೋದ ಬಳಿಕ ಇವರ ಇನ್ನೊಬ್ಬ ಪ್ರೇಮಿ ಸಮರ್ಥ್ ಜುರೆಲ್ ಕೂಡ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟರು. ಅದಾದ ಬಳಿಕ ಪರಿಸ್ಥಿತಿ ಹದಗೆಟ್ಟಿತ್ತು.
'ಉಡಾರಿಯಾ' ಧಾರಾವಾಹಿಯಲ್ಲಿ ಈಶಾ, ಅಭಿಷೇಕ್ ನಟಿಸಿದ್ದರು. ಆಮೇಲೆ ಪ್ರೇಮಿಗಳಾಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟ ಕ್ಷಣದಿಂದಲೇ ದೊಡ್ಡ ಮಟ್ಟದಲ್ಲಿ ವೀಕ್ಷಕರ ಗಮನ ಸೆಳೆದರು. ಅಲ್ಲಿ ಅವರ ನಡುವೆ ಇದ್ದ ಸ್ನೇಹವು ಪ್ರೀತಿಗೆ ತಿರುಗಿತು. ಇಬ್ಬರೂ ಸುಮಾರು ಒಂದು ವರ್ಷದ ಕಾಲ ಡೇಟಿಂಗ್ ಮಾಡಿದ್ದು, ಆಮೇಲೆ ಭಿನ್ನಾಭಿಪ್ರಾಯಗಳು ಬಂದು, ಈ ಜೋಡಿ ದೂರ ಆಗಿತ್ತು.
ಬಿಗ್ ಬಾಸ್ 17 ಶೋ ಆರಂಭದ ದಿನವೇ ನಟ ಸಲ್ಮಾನ್ ಖಾನ್ ಎದುರು ಅವರಿಬ್ಬರೂ ತಮ್ಮ ಹಳೆಯ ಜಗಳವನ್ನು ಮತ್ತೆ ಶುರು ಮಾಡಿಕೊಂಡರು. ಈಶಾ ಅವರು ಹೇಳುವಂತೆ ಅಭಿಷೇಕ್ ತುಂಬಾ ಸಿಟ್ಟಿನ ಮನುಷ್ಯ, ಪೊಸೆಸ್ಸಿವ್ ಕೂಡ ಹೌದು, ಹಲ್ಲೆ ಕೂಡ ಮಾಡಿದ್ದರಂತೆ.
ಆದರೆ ಅಭಿಷೇಕ್ ಮಾತ್ರ ತಾನು ಈಶಾಳನ್ನು ಇನ್ನೂ ಪ್ರೀತಿ ಮಾಡುತ್ತಿರುವುದಾಗಿ ಹೇಳಿದರು. ಬಿಗ್ ಬಾಸ್ ಮನೆಯೊಳಗಡೆ ಇವರಿಬ್ಬರು ಸ್ನೇಹಿತರು ಇನ್ನೊಮ್ಮೆ ಶತ್ರುಗಳು ಎನ್ನೋ ಥರ ವರ್ತನೆ ಮಾಡಿದರು. ಆಮೇಲೆ ಈಶಾರ ಇನ್ನೋರ್ವ ಪ್ರೇಮಿ ಎಂಟ್ರಿ ಕೊಟ್ಟರು. ಸಮರ್ಥ್ ತನ್ನ ಗೆಳೆಯ ಎಂದು ಸುಳ್ಳು ಹೇಳಿದ್ದ ಈಶಾ ಆಮೇಲೆ ಬಾಯ್‌ಫ್ರೆಂಡ್ ಎಂದು ಒಪ್ಪಿಕೊಂಡರು. ತನ್ನ ಪ್ರೀತಿ ಇನ್ನೊಮ್ಮೆ ಹೋಯ್ತು, ನಂಬಿಕೆ ದ್ರೋಹ ಆಯ್ತು ಎಂದು ಅಭಿಷೇಕ್ ಕಣ್ಣೀರು ಹಾಕಿದ್ದರು.
ಈಶಾ ಮತ್ತು ಅಭಿಷೇಕ್ ತಮ್ಮ ನಡುವಿನ ಮನಸ್ತಾಪ ಮರೆತು ಮತ್ತೆ ಒಂದಾಗಬಹುದು ಎಂದು ವೀಕ್ಷಕರು ಅಂದುಕೊಳ್ಳುತ್ತಿದ್ದರು. ಸಮರ್ಥ್ ಎಂಟ್ರಿ ಕೊಟ್ಟ ಬಳಿಕ ಇದು ಇನ್ನೊಂದು ಸ್ವರೂಪ ಪಡೆಯಿತು. ಸಮರ್ಥ್ ಹಾಗೂ ಈಶಾ ಸೇರಿಕೊಂಡು ಅಭಿಷೇಕ್ ಅವರನ್ನು ಕೆಣಕಿದ್ದರು. ಹೀಗಾಗಿ ಅಭಿಷೇಕ್ ಕೂಡ ಸಮರ್ಥ್‌ಗೆ ಕಪಾಳಮೋಕ್ಷ ಮಾಡಿದರು. ಇದು ಬಿಗ್ ಬಾಸ್ ಮನೆಯಲ್ಲಿ ದೊಡ್ಡ ವಿವಾದವನ್ನು ಸೃಷ್ಟಿಸಿತು.
ಸಮರ್ಥ್ ಹಾಗೂ ಈಶಾ ಕೂಡ ಬ್ರೇಕಪ್ ಮಾಡಿಕೊಂಡರು. ಇದಾದ ಬಳಿಕ ಸಮರ್ಥ್, ಅಭಿಷೇಕ್, ಈಶಾ ಕೂಡ ಒಂದು ಕುಕ್ಕಿಂಗ್ ಶೋನಲ್ಲಿ ಭಾಗವಹಿಸಿದರು. ಮುಖ ನೋಡಲು ಯೋಚನೆ ಮಾಡುತ್ತಿದ್ದ ಅಭಿಷೇಕ್ ಈಗ ಈಶಾ ಜೊತೆ ಮ್ಯೂಸಿಕ್ ಆಲ್ಬಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬ್ರೇಕಪ್ ಆದರೆ ಅದರಲ್ಲಿಯೂ ಇನ್ನೊಂದು ಸಂಬಂಧ ಇಟ್ಟುಕೊಂಡಿದ್ದು ಗೊತ್ತಾದರೆ, ಜನುಮದಲ್ಲಿ ಆ ಹುಡುಗಿ ಅಥವಾ ಹುಡುಗನ ಮುಖ ನೋಡೋದಿಲ್ಲ ಎಂದು ಹೇಳೋದುಂಟು. ಆದರೆ ಇಲ್ಲಿ ಈ ಜೋಡಿ ಮತ್ತೆ ಮತ್ತೆ ಪ್ರಾಜೆಕ್ಟ್ ಮಾಡುತ್ತಿರೋದು ಆಶ್ಚರ್ಯ ಮೂಡಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.