ಫ್ಯಾನ್ಸ್ ಮನಸ್ಸು ಗೆದ್ದ ತ್ರಿವಿಕ್ರಮ್ ಗೆ ಬರ್ತಿದೆ ಆಫರ್, ಸಿಸಿಎಲ್ ರೂಲ್ಸ್ ಬಿಚ್ಚಿಟ್ಟ ಆಕ್ಟರ್

Published : Feb 12, 2025, 11:13 AM ISTUpdated : Feb 12, 2025, 11:28 AM IST
ಫ್ಯಾನ್ಸ್ ಮನಸ್ಸು ಗೆದ್ದ ತ್ರಿವಿಕ್ರಮ್ ಗೆ ಬರ್ತಿದೆ ಆಫರ್, ಸಿಸಿಎಲ್ ರೂಲ್ಸ್ ಬಿಚ್ಚಿಟ್ಟ ಆಕ್ಟರ್

ಸಾರಾಂಶ

ಬಿಗ್‌ಬಾಸ್ 11ರ ರನ್ನರ್‌ಅಪ್ ತ್ರಿವಿಕ್ರಮ್, ಬಹುಮುಖ ಪ್ರತಿಭೆ. ಎಂಬಿಎ ಪದವೀಧರ, ನಟ, ಕ್ರಿಕೆಟಿಗ, ಜಿಮ್ ಟ್ರೈನರ್ ಆಗಿರುವ ಇವರು ವಿಆರ್‌ಎಲ್‌ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿಸಿಎಲ್‌ನಲ್ಲಿ ಸುದೀಪ್ ಗಮನ ಸೆಳೆದ ತ್ರಿವಿಕ್ರಮ್, ಬಿಗ್‌ಬಾಸ್ ಮೂಲಕ ಜನಮನ್ನಣೆ ಗಳಿಸಿದ್ದಾರೆ. ಸದ್ಯ ಸಿಂಗಲ್ ಆಗಿರುವ ಇವರು ಉತ್ತಮ ಚಿತ್ರಗಳಿಗಾಗಿ ಕಾಯುತ್ತಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 11ರ ರನ್ನರ್ ಅಪ್ ತ್ರಿವಿಕ್ರಮ್ (Bigg Boss Kannada season 11 runner up Trivikram) ಆಲ್ ರೌಂಡರ್.  ಬಿಗ್ ಬಾಸ್ ನಿಂದ ಏನು ಬಯಸಿದ್ರೋ ಅದೆಲ್ಲ ಅವರಿಗೆ ಸಿಕ್ಕಿದೆ. ತ್ರಿವಿಕ್ರಮ್ ಪ್ರತಿಯೊಂದು ವಿಷ್ಯವನ್ನು ನೂರಾರು ಆಂಗಲ್ ನಲ್ಲಿ ಆಲೋಚನೆ ಮಾಡಿ ನಿರ್ಧಾರ ತೆಗೆದುಕೊಳ್ತಾರೆ. ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಮ್ ಈ ಸ್ವಭಾವ ನೋಡಿ ಜನರು, ನಾಟಕ ಮಾಡ್ತಿದ್ದಾರೆ ಅಂದ್ಕೊಂಡಿದ್ರು. ಆದ್ರೆ ತ್ರಿವಿಕ್ರಮ್ ಸ್ವಭಾವವೇ ಅದು ಎಂಬುದು ಮತ್ತೆ ಸಾಭೀತಾಗಿದೆ.  ರ್ಯಾಪಿಡ್ ರಶ್ಮಿ (Rapid Rashmi) ಜೊತೆ ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡ ತ್ರಿವಿಕ್ರಮ್, ಕಪ್ ಗೆದ್ದಿಲ್ಲ, ಆದ್ರೆ ಜನರ ಮನಸ್ಸನ್ನು ಗೆದ್ದಿದ್ದೇನೆ ಎಂದಿದ್ದಾರೆ.

ಲಾರಿ ಡ್ರೈವರ್ ಮಗ ತ್ರಿವಿಕ್ರಮ್ ಎಂಬಿಎ ಮುಗಿಸಿದ್ದಾರೆ. ವಿಆರ್ ಎಲ್ (VRL) ನಂತ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡಿರುವ ತ್ರಿವಿಕ್ರಮ್ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ನೋಡಿದ್ದಾರೆ. ಆಕ್ಟಿಂಗ್ ವೃತ್ತಿಗೆ ಎಂಟ್ರಿಯಾಗೋದು ಅವ್ರಿಗೆ ಸುಲಭವಾಗಿರಲಿಲ್ಲ. ಕಲಾವಿದರ ಹಿನ್ನೆಲೆಯಿಲ್ಲ, ಯಾವುದೇ ಸ್ಕೂಲ್ ನಲ್ಲಿ ಆಕ್ಟಿಂಗ್ ಕಲಿತಿಲ್ಲ. ಆದ್ರೆ ಆತ್ಮವಿಶ್ವಾಸದ ಜೊತೆ ಮುನ್ನುಗ್ಗಿದ ತ್ರಿವಿಕ್ರಮ್ ವೃತ್ತಿಯಲ್ಲಿ ಒಂದೊಂದೇ ಮೆಟ್ಟಿಲು ಏರ್ತಿದ್ದಾರೆ. ತ್ರಿವಿಕ್ರಮ್ ಬರೀ ನಟರಲ್ಲ. ಒಳ್ಳೆಯ ಕ್ರಿಕೆಟಿಗ. ಹಾಗೆಯೇ ಉತ್ತಮ ಮಾರ್ಕ್ಸ್ ಜೊತೆ ಎಂಬಿಎ ಮುಗಿಸಿದ್ದಾರೆ. ಜಿಮ್ ಟ್ರೈನರ್ ಕೋರ್ಸ್ ಮುಗಿಸಿರುವ ಅವರಿಗೆ ನಟನೆ ಪ್ರೀತಿಯ ಕ್ಷೇತ. ಅವಕಾಶಗಳು ಸಿಗದಾಗ ಕುಗ್ಗದೆ, ಬಂದ ಅವಕಾಶಕ್ಕೆ ಹಿಗ್ಗದೆ, ಎಲ್ಲವನ್ನೂ ಕ್ಯಾಲ್ಕ್ಯುಲೆಟ್ ಮಾಡಿ ಹೆಜ್ಜೆ ಇಡುವ ತ್ರಿವಿಕ್ರಮ್ ಮುಂದೆ ಅದೆಷ್ಟೋ ನಿರ್ಮಾಪಕರು, ನಿಮ್ಮ ಆಕ್ಟಿಂಗ್ ಚೆನ್ನಾಗಿದೆ ಆದ್ರೆ ಸಿನಿಮಾ ಓಡುತ್ತಾ ಎನ್ನುವ ಪ್ರಶ್ನೆ ಇಟ್ಟಿದ್ದರು.

ಗಯ್ಯಾಳಿ ಹೆಂಗಸಾಗಿ ಕಾಣಿಸೋ ಅನುಪಲ್ಲವಿ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದು ಹೀಗೆ!

ಸೀರಿಯಲ್ ನಲ್ಲಿ ನನ್ನನ್ನು ಮೆಚ್ಚಿಕೊಂಡವರು ಥಿಯೇಟರ್ ಗೆ ಬರ್ತಾರಾ ಎನ್ನುವ ಭಯ ಕೂಡ ತ್ರಿವಿಕ್ರಮ್ ಗೆ ಇತ್ತು. ಈ ಮಧ್ಯೆಯೂ ನಾಲ್ಕೈದು ಸಿನಿಮಾ ಮಾಡಿದ್ದ ತ್ರಿವಿಕ್ರಮ್, ಜನರನ್ನು ಸಂಪಾದಿಸೋಕೆ ಆಯ್ಕೆ ಮಾಡಿಕೊಂಡಿದ್ದು ಬಿಗ್ ಬಾಸ್ ಮನೆಯನ್ನು. ಬಿಗ್ ಬಾಸ್ ಮನೆಯಲ್ಲಿ ತಮ್ಮ ನಟನೆ, ತಮ್ಮ ಕನಸುಗಳ ಬಗ್ಗೆಯೇ ಮಾತನಾಡಿದ್ದ ತ್ರಿವಿಕ್ರಮ್, ಕೋಪವನ್ನು ಕಂಟ್ರೋಲ್ ಮಾಡುವ ಚಾಲೆಂಜ್ ನಲ್ಲಿ ಗೆದ್ದಿದ್ದಾರೆ. ಮಾತು ಮಾತಿಗೂ ಕೋಪ ಮಾಡ್ಕೊಂಡು ಕೈ ಮುಂದೆ ಮಾಡ್ತಿದ್ದ ತ್ರಿವಿಕ್ರಮ್, ಬಿಗ್ ಬಾಸ್ ಮನೆಗೆ ಹೋದ್ಮೇಲೆ ತಮ್ಮ ಭಾವನೆಗಳನ್ನು ನಿಯಂತ್ರಣ ಮಾಡ್ಕೊಂಡಿದ್ದಾರೆ. ಬಿಗ್ ಬಾಸ್ ಕಪ್ ನಿಮ್ಮದಾಗ್ಬೇಕಿತ್ತು ಎನ್ನುತ್ತ ಹತ್ತಿರ ಬರುವ ಫ್ಯಾನ್ಸ್ ಮನಸ್ಸಿಗೆ ಹತ್ತಿರವಾಗೋದೇ ತ್ರಿವಿಕ್ರಮ್ ಮುಂದಿನ ಗುರಿ. ಒಂದಿಷ್ಟು ಒಳ್ಳೊಳ್ಳೆ ಪ್ರಾಜೆಕ್ಟ್ ತ್ರಿವಿಕ್ರಮ್ ಗೆ ಬರ್ತಿದೆ. 

ರಣಜಿ ಕ್ರಿಕೆಟ್‌ ಆಟ ಆಡಬೇಕಿದ್ದ ಕನಸು ನುಚ್ಚು ನೂರಾಗಿತ್ತು; ಬಿಗ್‌ ಬಾಸ್‌ ತ್ರಿವಿಕ್ರಮ್‌ಗೆ ಮತ್ತೊಂದು ಸುವರ್ಣಾವಕಾಶ!

ಇನ್ನೂ ಸಿಂಗಲ್ ತ್ರಿವಿಕ್ರಮ್ : ರಶ್ಮಿ ಜೊತೆ ಮಾತನಾಡಿದ ತ್ರಿವಿಕ್ರಮ್ ತಮ್ಮ ಸ್ಟೇಟಸ್ ಬಗ್ಗೆ ಹೇಳಿಕೊಂಡಿದ್ದಾರೆ. ಭವ್ಯ ಹಾಗೂ ತ್ರಿವಿಕ್ರಮ್ ಮಧ್ಯೆ ಏನೋ ಇದೆ ಎನ್ನುವ ಮಾತು ಬಿಗ್ ಬಾಸ್ ಮನೆಯಲ್ಲಿ ಕೇಳಿ ಬಂದಿತ್ತು. ಭವ್ಯ ಗೌಡ ಅಕ್ಕ ಹಾಗೂ ತ್ರಿವಿಕ್ರಮ್ ಮದುವೆಯಾಗ್ತಾರೆ ಎನ್ನಲಾಗ್ತಾಯಿತ್ತು. ಸದ್ಯ ಯಾವುದೇ ಹುಡುಗಿ ಮನಸ್ಸಿನಲ್ಲಿ ಇಲ್ಲ ಎನ್ನುವ ಮೂಲಕ, ತ್ರಿವಿಕ್ರಮ್ ಗುಂಗಿನಲ್ಲಿರುವ ಹುಡುಗಿಯರನ್ನು ಖುಷಿಗೊಳಿಸಿದ್ದಾರೆ.

ಬ್ರೇಕ್ ನೀಡಿದ ಸಿಸಿಎಲ್ : ಸಿಸಿಎಲ್ ನಲ್ಲಿ ಆಡ್ಬೇಕು ಅನ್ನೋದು ಅನೇಕ ಕಲಾವಿದರ ಕನಸು. ಆಟ ಬಂದ್ರೆ ಸಿಸಿಎಲ್ ನಲ್ಲಿ ನಟರಿಗೆ ಜಾಗ ಸಿಗುತ್ತೆ ಅಂತ ಅನೇಕರು ಅಂದ್ಕೊಂಡಿದ್ದಾರೆ. ಆದ್ರೆ ಸಿಸಿಎಲ್ ನಲ್ಲಿ ಜಾಗ ಗಿಟ್ಟಿಸಿಕೊಳ್ಳೋಕೆ ಐದು ಸಿನಿಮಾ ಆಗಿರ್ಬೇಕು. ಐದು ಸಿನಿಮಾದಲ್ಲಿ ಲೀಡ್ ರೋಲ್ ಮಾಡಿದ್ರೆ ಆಟಗಾರ ಬಿ ಕೆಟಗರಿಗೆ ಬರ್ತಾರೆ, ಅದೇ ಆರು ಸಿನಿಮಾದಲ್ಲಿ ಲೀಡ್ ರೋಲ್ ಮಾಡಿದ್ರೆ  ಆತ ಎ ಕೆಟಗರಿಗೆ ಬರ್ತಾರೆ. ಕೊರೊನಾ ಸಮಯದಲ್ಲಿ ಯಾವ್ದೆ ಕೆಲಸ ಇಲ್ಲದೆ ಕೈ ಖಾಲಿ ಮಾಡ್ಕೊಂಡಿದ್ದ ತ್ರಿವಿಕ್ರಮ್ ಅವರಿಗೆ ಸಿಸಿಎಲ್ ಬ್ರೇಕ್ ನೀಡಿತ್ತು. ಕಿಚ್ಚ ಸುದೀಪ್ ಟೀಂ ವಿರುದ್ಧ ಉತ್ತಮ ಆಟ ಪ್ರದರ್ಶಿಸಿ, ಸುದೀಪ್ ಗಮನ ಸೆಳೆದಿದ್ದ ತ್ರಿವಿಕ್ರಮ್, ನಂತ್ರ ಸಿಸಿಎಲ್ನಲ್ಲಿ ಜಾಗ ಪಡೆದ್ರು.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!