ಸೀತಾರಾಮ ಶೂಟಿಂಗ್​ ಸೆಟ್​ನಲ್ಲಿ ಬೇಲ್​ಪುರಿ ಮಜಾ: ಯಮ್ಮಿ ಯಮ್ಮಿ ಅಂತನೇ ಎಲ್ಲಾ ಖಾಲಿ ಮಾಡಿದ ತಾರೆಯರು

Published : Feb 11, 2025, 08:48 PM ISTUpdated : Feb 12, 2025, 10:08 AM IST
ಸೀತಾರಾಮ ಶೂಟಿಂಗ್​ ಸೆಟ್​ನಲ್ಲಿ ಬೇಲ್​ಪುರಿ ಮಜಾ: ಯಮ್ಮಿ ಯಮ್ಮಿ ಅಂತನೇ ಎಲ್ಲಾ ಖಾಲಿ ಮಾಡಿದ ತಾರೆಯರು

ಸಾರಾಂಶ

ಚಿತ್ರೀಕರಣದ ಸೆಟ್​ಗಳು ನಟ-ನಟಿಯರಿಗೆ ಎರಡನೇ ಮನೆಯಂತೆ. ಸೀತಾರಾಮ ಧಾರಾವಾಹಿ ತಂಡವು ಸೆಟ್​ನಲ್ಲಿ ಬೇಲ್​ಪುರಿ ಮಾಡಿ ಸಂಭ್ರಮಿಸಿದೆ. ವಿಶಾಲವಾದ ಸೆಟ್​ನಲ್ಲಿ ಮನೆ, ಕೆಲಸದ ಸ್ಥಳಗಳನ್ನು ನಿರ್ಮಿಸಲಾಗಿದೆ. ವರ್ಷಗಟ್ಟಲೆ ಚಿತ್ರೀಕರಣ ನಡೆಯುವುದರಿಂದ ಸೆಟ್​ಗಳು ಮುಖ್ಯ ಪಾತ್ರ ವಹಿಸುತ್ತವೆ. ಕೆಲವು ಶಾಶ್ವತ, ಕೆಲವು ತಾತ್ಕಾಲಿಕ. ಬೆಂಗಳೂರಿನಲ್ಲಿ ಶೂಟಿಂಗ್ ಮನೆಗಳನ್ನು ಬಾಡಿಗೆಗೆ ನೀಡಲಾಗುತ್ತದೆ.

ಶೂಟಿಂಗ್​ ಸೆಟ್​ನಲ್ಲಿಯೇ ನಟ-ನಟಿಯರು ಹೆಚ್ಚು ಕಾಲ ಕಳೆಯುವ ಕಾರಣದಿಂದ ಒದೊಂದು ರೀತಿಯಲ್ಲಿ ಅವರಿಗೆ ಮತ್ತೊಂದು ಮನೆ ಇದ್ದಂತೆಯೇ ಎನ್ನಿಸಿಬಿಡುತ್ತದೆ. ಸಿನಿಮಾಗಳಲ್ಲಾದರೆ ಬೇರೆ ಬೇರೆ ಕಡೆ ಶೂಟಿಂಗ್​ ಮಾಡುತ್ತಾರೆ. ಆದರೆ ಸೀರಿಯಲ್​ಗಳಲ್ಲಿ ಹೆಚ್ಚಾಗಿ ಒಂದೇ ಮನೆಯಲ್ಲಿಯೇ ನಾಲ್ಕೈದು ವರ್ಷ ಕಳೆಯುವುದು ಇದೆ. ಶೂಟಿಂಗ್​ ಮಾಡುವುದಕ್ಕಾಗಿಯೇ ಶೂಟಿಂಗ್​ ಮನೆಗಳು ಕೂಡ ಸಾಕಷ್ಟು ಇವೆ. ಇಂಥ ಶೂಟಿಂಗ್​ ಸೆಟ್​ನಲ್ಲಿ ನಟ-ನಟಿಯರು ಶೂಟಿಂಗ್​ ಇಲ್ಲದ ಸಮಯದಲ್ಲಿ ಸಾಕಷ್ಟು ಎಂಜಾಯ್​ ಮಾಡುತ್ತಾರೆ.

ಇದೀಗ ಸೀತಾರಾಮ ಸೀರಿಯಲ್​ ತಂಡ ಬೇಲ್​ಪುರಿ ಮಾಡುವ ಮೂಲಕ ಸಕತ್​ ಎಂಜಾಯ್​ ಮಾಡಿದೆ. ಇದರ ವಿಡಿಯೋ ಅನ್ನು ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಶೇರ್​ ಮಾಡಿದ್ದಾರೆ. ಇದರಲ್ಲಿ ವೈಷ್ಣವಿ, ರಾಮ್​ ಪಾತ್ರಧಾರಿ ಗಗನ್​, ಅಶೋಕ್​  ಪಾತ್ರಧಾರಿ ಅಶೋಕ್​  ಸೇರಿದಂತೆ ಹಲವು ಕಲಾವಿದರನ್ನು ನೋಡಬಹುದಾಗಿದೆ. ಒಬ್ಬೊಬ್ಬರು ಒಂದೊಂದು ಪದಾರ್ಥ ತಂದು ಬೇಲ್​ಪುರಿ ರೆಡಿ ಮಾಡಿದ್ದಾರೆ. ಸಾಮಾನ್ಯವಾಗಿ ಹೊರಗಡೆಯ ತಿಂಡಿ ಸೇರುವುದಿಲ್ಲ. ಆ ಸಮಯದಲ್ಲಿ ಹೀಗೆ ಬೇಲ್​ಪುರಿ ಮಾಡಿ ತಿನ್ನುವುದಾಗಿ ವೈಷ್ಣವಿ ಗೌಡ ಹೇಳಿದ್ದಾರೆ. ಈ ಸಮಯದಲ್ಲಿ ಎಲ್ಲರೂ ಸಕತ್​ ಎಂಜಾಯ್​ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು.

ಪ್ರೇಮಿಗಳ ದಿನಕ್ಕಾಗಿ ವೈಷ್ಣವಿಗೆ ವಜ್ರಾಭರಣ ಗಿಫ್ಟ್! ಮದ್ವೆಗೆ ಸಜ್ಜಾಗ್ತಿದ್ಯಾ ಸೀತಾ-ರಾಮ ಜೋಡಿ? ಇಲ್ಲಿದೆ ಡಿಟೇಲ್ಸ್​

ಇನ್ನು ಸೀತಾರಾಮ ಸೀರಿಯಲ್​ ಶೂಟಿಂಗ್​ ಸೆಟ್​ ಕುರಿತು ಹೇಳುವುದಾದರೆ, ಈ ಬಗ್ಗೆ ವೈಷ್ಣವಿ ಗೌಡ ಅವರೇ ವಿವರಿಸಿದ್ದಾರೆ.  ಸೀತಾ ರಾಮ ಶೂಟಿಂಗ್ ಸೆಟ್ ಹೆಚ್ಚು ವಿಸ್ತಾರವಾಗಿದೆ. ಕೆಲವು ಸೆಟ್​ಗಳು ಶಾಶ್ವತವಾಗಿ ಸೀರಿಯಲ್​ ಮುಗಿಯುವವರೆಗೆ ಇದ್ದರೆ, ಕೆಲವೊಂದನ್ನು ತಾತ್ಕಾಲಿಕವಾಗಿ ನಿರ್ಮಿಸಲಾಗಿದೆ. ಆದರೆ ಪ್ರತಿಯೊಂದಕ್ಕೂ ಕಥೆಯ ಜೊತೆ ಲಿಂಕ್​ ಇರುತ್ತದೆ.  ನಾಯಕ-ನಾಯಕಿಯ ಮನೆಗಳು, ಕೆಲಸದ ಸ್ಥಳ ಮತ್ತು ಸಾಮುದಾಯಿಕ ಪ್ರದೇಶ.. ಹೀಗೆ ಎಲ್ಲವನ್ನೂ ಇಲ್ಲಿ ಚಿತ್ರೀಕರಿಸಲಾಗುತ್ತದೆ.  ವೇಷಭೂಷಣ ಚೇಂಜ್​ ಮಾಡಲು,  ಮೇಕ್ಅಪ್ ಮತ್ತು ಹೇರ್ ಸ್ಟೈಲಿಂಗ್​ಗೆ ಅದರದ್ದೇ ಆದ ಸ್ಥಳಗಳಿವೆ.  ಈ ಶೂಟಿಂಗ್​ ಸ್ಪಾಟ್​ನಲ್ಲಿಯೇ ನಟ-ನಟಿಯರು  ಪೂರ್ವಾಭ್ಯಾಸ ಮಾಡುವುದರಿಂದ ಹಿಡಿದು, ತೆರೆ ಹಿಂದಿನ ಸಿಬ್ಬಂದಿ,  ನಿರ್ದೇಶಕರು ನಿರ್ಮಾಣದ ಮೇಲ್ವಿಚಾರಣೆ ನೋಡಿಕೊಳ್ಳುವವರು ಪ್ರತಿಯೊಬ್ಬರಿಗೂ ಇದೊಂದು ರೀತಿಯಲ್ಲಿ ಎರಡನೆಯ ಮನೆಯೇ ಆಗಿರುತ್ತದೆ ಎಂದು ವೈಷ್ಣವಿ ಹೇಳಿದ್ದಾರೆ.

 

ಅಷ್ಟಕ್ಕೂ, ಪ್ರತಿಯೊಬ್ಬ ನಟ-ನಟಿಯರು ಅವರ ಮನೆಗಿಂತಲೂ ಹೆಚ್ಚಾಗಿ ಶೂಟಿಂಗ್​ ಸ್ಪಾಟ್​ನಲ್ಲಿಯೇ ಇರುತ್ತಾರೆ. ಸಿನಿಮಾಗಳಲ್ಲಿ ಈ ಸ್ಪಾಟ್​ ವಿಭಿನ್ನ ಪ್ರದೇಶಗಳಲ್ಲಿ ನಡೆದರೆ, ಸಾಮಾನ್ಯವಾಗಿ ಸೀರಿಯಲ್​ಗಳಲ್ಲಿ ಒಂದೇ ಕಡೆ ಸೆಟ್​ ಮಾಡಿ ಅಲ್ಲಿಯೇ ಸಂಪೂರ್ಣ ಚಿತ್ರೀಕರಣ ನಡೆಯುತ್ತದೆ. ಇದೇ ಕಾರಣಕ್ಕೆ ಸಂಪೂರ್ಣ ವಾತಾವರಣವನ್ನೇ ಬದಲಾಯಿಸಲಾಗುತ್ತದೆ. ಒಂದು ಸೀರಿಯಲ್​ ಐದಾರು ವರ್ಷಗಳು ನಡೆಯುವ ಕಾರಣ, ಇಲ್ಲಿ ಸೆಟ್​ ಅತ್ಯಂತ ಪ್ರಾಮುಖ್ಯತೆ ವಹಿಸುತ್ತದೆ. ಬೆಂಗಳೂರಿನಂಥ ನಗರಗಳಲ್ಲಿ  ಶೂಟಿಂಗ್​ ಮನೆಗಳನ್ನು ಕಟ್ಟಿ ಅದನ್ನು ಬಾಡಿಗೆಗೆ ಕೊಡುವುದು ಇದೆ. ಇನ್ನು ಕೆಲವು ಸೀರಿಯಲ್​ಗಳಲ್ಲಿ ತಮಗೆ ಬೇಕಾದಂತೆ ಹಳ್ಳಿಯ ವಾತಾವರಣ ನಿರ್ಮಾಣ ಮಾಡಿಕೊಂಡೋ ಅಥವಾ ಓಣಿ, ವಠಾರದ ರೀತಿಯಲ್ಲಿ ನೈಜ ಚಿತ್ರಣ ಬರುವಂತೆ ಶೂಟಿಂಗ್​  ಮನೆಗಳನ್ನು ನಿರ್ಮಿಸಿಕೊಂಡಿರುತ್ತಾರೆ ಎಂದಿದ್ದಾರೆ ನಟಿ. 

ನೀನೇನೆ ನನ್ನವನು ಎಂದು ಬಾಯ್ಬಿಟ್ಟ ವೈಷ್ಣವಿ, ಎದೆ ಮೇಲೆ ಕಾಲಿಟ್ಟಂಗಾಯ್ತು ಎಂದ ಗಗನ್​!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!