Bigg Boss Kannada: ಈ ವಾರ ಬಿಗ್ ಬಾಸ್ ಮನೆಯಿಂದ ಸಿರಿ ಔಟ್?

Published : Dec 10, 2023, 04:00 PM ISTUpdated : Dec 10, 2023, 04:07 PM IST
Bigg Boss Kannada:  ಈ ವಾರ ಬಿಗ್ ಬಾಸ್ ಮನೆಯಿಂದ ಸಿರಿ ಔಟ್?

ಸಾರಾಂಶ

ಕನ್ನಡ ಬಿಗ್ ಬಾಸ್ 10ನೇ ವಾರ ಮನೆಯಿಂದ ಹೊರ ಬಂದ್ರ ಸಿರಿ ? ನಿಜವಾಗ್ಲೂ ಸಿರಿ ಎಲಿಮಿನೇಟ್ ಆದ್ರ ತಿಳಿಯೋಣ ಬನ್ನಿ

ಕನ್ನಡ ಬಿಗ್ ಬಾಸ್ 10 (Bigg Boss Kannada) ರ ಸೀಜನ್ ಅನೇಕ ದೂರು ವಿವಾದಗಳ ನಡುವೆಯು ಉತ್ತಮ ಟಿಆರ್ ಪಿ ಗಳಿಸುತ್ತಿದೆ. ಜನರು ಪ್ರತಿದಿನ ಬಿಗ್ ಬಾಸ್ ಯಾವ ಹೈಡ್ರಾಮಕ್ಕೆ ಸಾಕ್ಷಿಯಾಗುತ್ತೆ ಎಂದು ವೀಕ್ಷಿಸುತ್ತಿದ್ದಾರೆ. ನಿನ್ನೆ ನಡೆದ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಈ ವಾರದ ತಪ್ಪು- ಒಪ್ಪುಗಳ ಬಗ್ಗೆ ಕಿಚ್ಚ (Kiccha Sudeep) ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವಾರ ಒಟ್ಟು 9 ಸ್ಪರ್ಧಿಗಳು  ನಾಮಿನೇಟ್‌ ಆಗಿದ್ದು,  ಅದರಲ್ಲಿ ಸಿರಿ ಅವರು ಮನೆಯಿಂದ ಹೊರ ಬಂದಿದ್ದಾರೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ವಾರ ಮನೆಯ ಸದಸ್ಯರನ್ನು ರಾಕ್ಷಸರು ಮತ್ತು ಗಂಧರ್ವರು ಎಂಬ ಎರಡು ತಂಡಗಳಾಗಿ ಮಾಡಿ ಆಟವನ್ನು ಆಡಿಸಲಾಗಿತ್ತು. ಹಿಂದಿನ ವಾರಗಳಂತೆ ಈ ವಾರವು ಜಗಳ ಹೆಚ್ಚಾಗಿಯೇ ಇದ್ದು, ಆಟದ ತೀವ್ರತೆಯು ಹೆಚ್ಚಾಗಿ ಪ್ರತಾಪ್ (Drone Prthap) ಮತ್ತು ಸಂಗೀತಾ ಶೃಂಗೇರಿ (Sangeetha Sringeri) ಕಣ್ಣಿಗೆ ತೊಂದರೆಯಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆಯ ಎಪಿಸೋಡ್ ನಲ್ಲಿ ಕೂಲಿಂಗ್ ಗ್ಲಾಸ್ ನೊಂದಿಗೆ ಇಬ್ಬರು ಮನೆಗೆ ಎಂಟ್ರಿ ಕೊಟ್ರು.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಮತ್ತೆ ಅರಳಿತಾ ಸ್ನೇಹದ ಹೂ; ವಿನಯ್ ಕಾರ್ತಿಕ್ ಒಂದಾಗಿದ್ದು ನೋಡಿ ನಕ್ಕ ಸಂಗೀತಾ ಶೃಂಗೇರಿ

ಕಳೆದ ವಾರ ಕಿಚ್ಚ ವಿಶೇಷ ಅಧಿಕಾರ ಬಳಸಿ ಎಲಿಮಿನೇಶನ್ ರದ್ದುಗೊಳಿಸಿದರು. ಈ ವಾರ ಕಾರ್ತಿಕ್, ಪ್ರತಾಪ್, ತನಿಶಾ, ಸ್ನೇಹಿತ್, ಅವಿನಾಶ್, ಪವಿ, ಮೈಕೆಲ್, ಸಿರಿ ಮತ್ತು ಸಂಗೀತ ನಾಮಿನೇಶನ್ ಹಾಟ್ ಸೀಟ್ ಅಲ್ಲಿ ಕೂತಿದ್ದರು.  ನಿನ್ನೆಯ ಸಂಚಿಕೆಯಲ್ಲಿ ಸುದೀಪ್ ಪ್ರತಾಪ್ ಮತ್ತು ಸಂಗೀತಾರನ್ನು ಸೇವ್ ಮಾಡಿದ್ದು, ಉಳಿದ 7 ಸ್ಪರ್ಧಿಗಳ ಮೇಲೆ ತೂಗುಗತ್ತಿ ತೂಗುತ್ತಿದ್ದು, ಇದರ ಮಧ್ಯೆ  ಇನ್ಸ್ಟಾಗ್ರಾಮಲ್ಲಿ ಸಿರಿ ಔಟ್ ಎಂಬ ಸುದ್ದಿ ಹರಿದಾಡುತ್ತಿದೆ. ಇನ್ನು ಕೆಲ ಪೇಜ್ ಗಳಲ್ಲಿ ಸ್ನೇಹಿತ್ ಔಟ್ ಎಂಬ  ಪೋಸ್ಟಗಳು ಹರಿದಾಡುತ್ತಿವೆ.

ಇದನ್ನೂ ಓದಿ: ಕನ್ನಡ ಬಿಗ್ ಬಾಸ್ ವಿರುದ್ಧ ಪೊಲೀಸ್‌ ದೂರು ದಾಖಲು, ಶೋನಿಂದ ಹೊರಬರುವಂತೆ ಕಿಚ್ಚನಿಗೆ ಮನವಿ

ಸಿರಿ ಚಲನಚಿತ್ರಗಳಲ್ಲಿ ನಟಿಸಿದರು ಅವರಿಗೆ ಖ್ಯಾತಿ ತಂದು ಕೊಟ್ಟಿದ್ದು ಸ್ಮಾಲ್ ಸ್ಕ್ರೀನ್. 20 ವರ್ಷಗಳ ಕಾಲ ಕನ್ನಡ ಕಿರುತೆರೆಯಲ್ಲಿ ಮಿಂಚಿದ್ದ ಸಿರಿ  'ರಂಗೋಲಿ', 'ಮನೆಯೊಂದು ಮೂರು ಬಾಗಿಲು', 'ಬದುಕು', 'ಬಂದೇ ಬರುತಾವ ಕಾಲ', 'ಅಂಬಿಕಾ' ಸೇರಿದಂತೆ 30ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟನೆ ಮಾಡಿದ್ದು, ಆ ಸೀರಿಯಲ್ ಎಲ್ಲವೂ  ಮೆಗಾ ಸೀರಿಯಲ್‌ಗಳಾಗಿರುವುದು ವಿಶೇಷ. ಅವರು ಮಾಡಿರುವ ಪ್ರತಿಯೊಂದು ಧಾರಾವಾಹಿ 1000 ಎಪಿಸೋಡ್ ದಾಟಿತ್ತು ಎನ್ನುವುದು ನಿಜಕ್ಕೂ ಅಚ್ಚರಿಯ ವಿಷಯ. 

ಇನ್ನೊಂದು ಕಡೆ ಈ ವಾರ ಸ್ನೇಹಿತ್ ಮನೆಯಿಂದ ಹೊರಬಂದ್ರು ಎಂಬ ಪೋಸ್ಟ್ ಗಳು ಬರುತ್ತಿದ್ದು, ಮನೆಗೆ ಬಂದ ನಂತರ ಸೋಷಿಯಲ್ ಮೀಡಿಯಾದ ಕಡೆ ಸ್ವಲ್ಪ ದಿನ ಬರಬೇಡಾ ಎಂಬ ಕಮೆಂಟ್ ಗಳು ಹರಿದಾಡುತ್ತಿವೆ. ಸಿರಿ ಮತ್ತು ಸ್ನೇಹಿತ್ ಔಟ್ ಎಂಬ ಪೋಸ್ಟ್ ಗಳು ಈ ವಾರ ಡಬಲ್ ಎಲಿಮಿನೇಷನ್ ಆಗುತ್ತಾ ಎಂಬ ಅನುಮಾನ ಸೃಷ್ಟಿಸಿದೆ. ಒಟ್ಟಿನಲ್ಲಿ ಈ ವಾರ ಯಾರು ಔಟ್ ಸಿರಿ ಅಥವಾ ಸ್ನೇಹಿತ್ ಎಂಬ ಗೊಂದಲಕ್ಕೆ ಇಂದಿನ ಸಂಚಿಕೆಯೆ ಉತ್ತರ ನೀಡಬೇಕಾಗಿದೆ.

ಸಿಂಧು ಕೆ ಟಿ 
ಕುವೆಂಪು ವಿಶ್ವವಿದ್ಯಾಲಯ 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಪ್ಲ್ಯಾನ್‌ ಬದಲಾಯಿಸಿದ ಜಯದೇವ್;‌ ಇನ್ನೊಂದು ಅವಾಂತರ ಆಗಲಿದೆಯಾ?
ಡೂಡಲ್ ಫೋಟೊ ಮೂಲಕ ಅವಿ ಬರ್ತ್ ಡೇಗೆ ವಿಶ್ ಮಾಡಿದ Divya Uruduga… ಫ್ಯಾನ್ಸ್’ಗೆ ಮದ್ವೆ ಚಿಂತೆ