ಬಿಗ್‌ಬಾಸ್‌ ಸೀಸನ್ 10 ಟಾಪ್ ಸಿಕ್ಸ್ ತುಕಾಲಿ, ಫೈವ್ ವಿನಯ್‌ಗೌಡ, ಟಾಪ್ ಫೋರ್‌ಗೆ ವರ್ತೂರು ಸಂತೋಷ್!

By Sathish Kumar KH  |  First Published Jan 27, 2024, 7:39 PM IST

ಬಿಗ್‌ಬಾಸ್‌ ಕನ್ನಡ ಸೀಸನ್ 10ರ ಫೈನಲಿಸ್ಟ್‌ 6 ಜನರ ಪೈಕಿ ಮೂವರು ಎಲಿಮಿನೇಟ್ ಆಗಿ ಮನೆಯಿಂದ ಹೊರ ಬಂದಿದ್ದಾರೆ. ಟಾಪ್ 6 ತುಕಾಲಿ ಸಂತೋಷ್, ಟಾಪ್ 5 ವಿನಯ್‌ಗೌಡ, ಟಾಪ್‌ 4 ವರ್ತೂರು ಸಂತೋಷ್‌ ಗಿಟ್ಟಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.


ಬೆಂಗಳೂರು (ಜ.27): ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಕನ್ನಡ ಸೀಸನ್ 10ರ ಫೈನಲ್‌ ರೆಕಾರ್ಡಂಗ್ ಶೋ ನಡೆಯುತ್ತಿದೆ. ಇದರಲ್ಲಿ ಟಾಪ್‌ ಸಿಕ್ಸ್‌ಗೆ ಬಂದವರ ಪೈಕಿ ಮೂವರು ಕಂಟೆಸ್ಟೆಂಟ್‌ಗಳು ಈಗ ಮನೆಯಿಂದ ಹೊರಗೆ ಬಂದಿದ್ದಾರೆ. ಈ ಮೂಲಕ ಟಾಪ್‌ ಸಿಕ್ಸ್‌ ಸ್ಥಾನವನ್ನು ತುಕಾಲಿ ಸಂತೋಷ್, ಟಾಪ್‌ ಫೈವ್ ಸ್ಥಾನವನ್ನು ವಿನಯ್‌ಗೌಡ ಹಾಗೂ ಟಾಪ್‌ ಫೋರ್‌ ಸ್ಥಾನವನ್ನು ವರ್ತೂರು ಸಂತೋಷ್ ಗಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಕನ್ನಡ ಬಿಗ್‌ಬಾಸ್‌ ಮನೆಯ 10 ಸೀಸನ್‌ಗಳಲ್ಲಿ ಅತ್ಯಂತ ಹೆಚ್ಚಿ ಟಿಆರ್‌ಪಿ ಪಡೆದ ಸೀಸನ್‌ ಇದಾಗಿದೆ. ಈ ಸೀಸನ್‌ನ ಕಂಟೆಸ್ಟೆಂಟ್‌ಗಳು ಮಾಡಿದ್ದೆಲ್ಲವೂ ಜನರಿಗೆ ಹಿಂಸೆಯಾದರೆ, ಕಲರ್ಸ್‌ ಕನ್ನಡ ವಾಹಿನಿಗೆ ಮಾತ್ರ ಕಂಟೆಸ್ಟೆಂಟ್ ಮಾಡಿದ್ದೆಲ್ಲವೂ ಚಿನ್ನವಾಗಿತ್ತು. ಇನ್ನು ಬಿಗ್‌ಬಾಸ್ ಸೀಸನ್ ಆರಂಭದಿಂದಲೇ ಕಂಟೆಸ್ಟೆಂಟ್ ಆಯ್ಕೆ ಮಾಡುವಾಗಲೇ ವಿಭಿನ್ನ ಮಾನದಂಡವನ್ನು ಅನುಸರಿಸಲಾಯಿತು. ಇಂತಿಷ್ಟು ಓಟ್‌ಗಳನ್ನು ಪಡೆದವರನ್ನಷ್ಟೇ ಮನೆಯೊಳಗೆ ಕಳಿಸಲಾಯಿತು. ಒಟ್ಟು 19 ಜನರು ಬಿಗ್‌ಬಾಸ್‌ ಮನೆಯನ್ನು ಸೇರಿದ್ದು, ಅಂತಿಮವಾಗಿ ಫೈನಲ್‌ನಲ್ಲಿ 6 ಜನ ಉಳಿದುಕೊಂಡಿದ್ದಾರೆ.

Tap to resize

Latest Videos

undefined

ಡ್ರೋನ್ ಪ್ರತಾಪ್ ಅಭಿಮಾನಿಗಳಿಗೆ ಕ್ಯಾಕರಿಸಿ ಉಗಿದ ಬಿಗ್‌ಬಾಸ್ ಮಾಜಿ ವಿನ್ನರ್ ಒಳ್ಳೆ ಹುಡುಗ ಪ್ರಥಮ್!

ಫೈನಲ್‌ಗೆ 6 ಜನರನ್ನು ಉಳಿಸಿಕೊಂಡ ಸೀಸನ್: ಇನ್ನು ಬಿಗ್‌ಬಾಸ್‌ ಪ್ರತಿ ಸೀಸನ್‌ನಲ್ಲಿಯೂ ಫೈನಲ್‌ ದಿನಕ್ಕೆ ಕೇವಲ 5 ಜನರನ್ನು ಮಾತ್ರ ಉಳಿಸಿಕೊಳ್ಳಲಾಗುತ್ತಿತ್ತು. ಆದರೆ, ಈ ಸೀಸನ್‌ನಲ್ಲಿ ಮಾತ್ರ 6 ಜನರನ್ನು ಉಳಿಸಿಕೊಂಡು ಎಲ್ಲರನ್ನೂ ಫೈನಲ್‌ಗೆ ಆಡಿಸುತ್ತಿದ್ದಾರೆ. ಇಂದು ಫೈನಲ್ ರೆಕಾರ್ಡಿಂಗ್ ಶೂಟ್ ಆರಂಭವಾಗಿದ್ದು, ಯಾರು ಕಪ್‌ ಗೆಲ್ಲುತ್ತಾರೆ ಎಂಬುದರ ಮೇಲೆ 6 ಕೋಟಿ ಕನ್ನಡಿಗರ ಚಿತ್ತ ನೆಟ್ಟಿದೆ. ಆದರೆ, ಆರು ಜನರಲ್ಲಿ ಈಗಾಗಲೇ ಮೂವರನ್ನು ಬಿಗ್‌ಬಾಸ್‌ ಮನೆಯಿಂದ ಎಲಿಮಿನೇಟ್ ಮಾಡಿ ಹೊರಗೆ ಕಳುಹಿಸಲಾಗಿದೆಯಂತೆ.

ಬಿಗ್‌ಬಾಸ್ ಸೀಸನ್ 10ರ ಟಾಪ್‌-6 ಫೈನಲಿಸ್ಟ್‌ಗಳಲ್ಲಿ ಮೊದಲನೆಯದಾಗಿ ಕಾಮಿಡಿಯನ್‌ ತುಕಾಲಿ ಸಂತೋಷ್ ಅವರು ಹೊರಗೆ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಅವರ ಸ್ಥಾನ 6ನೇ ಸ್ಥಾನಕ್ಕೆ ಕುಸಿತವಾಗಲಿದೆ. ಇನ್ನು ಈ ಸೀಸನ್‌ನ ಗೆಲ್ಲುವ ಕುದುರೆ, ಬಿಗ್‌ಬಾಸ್‌ ಮನೆಯ ಆನೆ ಎಂದೇ ಖ್ಯಾತಿಯಾಗಿದ್ದ ವಿನಯ್‌ಗೌಡ ಅವರು ಎಲಿಮಿನೇಟ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಆದ್ದರಿಂದ ವಿನಯ್‌ ಸ್ಥಾನ 5ನೇ ಸ್ಥಾನಕ್ಕೆ ಕುಸಿದಿದೆ. ಜೊತೆಗೆ, ಬಿಗ್‌ಬಾಸ್‌ ಮನೆಯ ಅತಿಹೆಚ್ಚು ಓಟ್‌ಗಳನ್ನು ಪಡೆಯುತ್ತಿದ್ದ ವರ್ತೂರು ಸಂತೋಷ್‌ ಅವರಿಗೆ ಫೈನಲ್‌ನಲ್ಲಿ 1 ಕೋಟಿಗೂ ಅಧಿಕ ಓಟುಗಳು ಬಂದಿವೆ ಎಂದು ಹೇಳಲಾಗುತ್ತಿದ್ದರೂ, ಅವರು ಕೂಡ ಎಲಿಮಿನೇಟ್‌ ಆಗಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. ಅಂದರೆ, ವರ್ತೂರು ಸಂತೋಷ್ ಅವರಿಗೆ 4ನೇ ಸ್ಥಾನ ಸಿಕ್ಕಂತಾಗಲಿದೆ.

ಮುಚ್ಕೊಂಡು ನಿನ್ನ ಕೆಲಸ ನೋಡ್ಕೋ, ಕೇಸ್ ಹಾಕ್ತೀನಿ: ಯುಟ್ಯೂಬರ್‌ ವಿರುದ್ಧ ತಿರುಗಿ ಬಿದ್ದ ತನಿಷಾ

ಈ ಮೂಲಕ ಬಿಗ್‌ಬಾಸ್‌ ಮನೆಯಿಂದ ಶನಿವಾರವೇ ಮೂವರನ್ನು ಹೊರಗೆ ಕಳುಹಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಮನೆಯಲ್ಲಿ ಬಾಕಿ ಕಾರ್ತಿಕ್ ಮಹೇಶ್, ಸಂಗೀತಾ ಶೃಂಗೇರಿ ಹಾಗೂ ಡ್ರೋನ್ ಪ್ರತಾಪ್ ಉಳಿದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ಫೋಟೀಗಳು ಹರಿದಾಡುತ್ತಿವೆ. ಆದರೆ, ಇಂದು ರಾತ್ರಿ ಫಿನಾಲೆ ಪ್ರಸಾರದ ಬಳಿಕವೇ ಅಸಲಿ ಮಾಹಿತಿ ಹೊರಬೀಳಲಿದೆ.

click me!