ಬಹಿರಂಗವಾಯ್ತು ಬಿಗ್ ಬಾಸ್ ಮನೆ ಸದಸ್ಯರ ಅಂತರಂಗ; ಗೆಲ್ಲೋರು ಯಾರು ಎಂದು ಹೇಳೋರು ಯಾರು?

Published : Dec 11, 2023, 04:20 PM ISTUpdated : Dec 11, 2023, 04:24 PM IST
ಬಹಿರಂಗವಾಯ್ತು ಬಿಗ್ ಬಾಸ್ ಮನೆ ಸದಸ್ಯರ ಅಂತರಂಗ; ಗೆಲ್ಲೋರು ಯಾರು ಎಂದು ಹೇಳೋರು ಯಾರು?

ಸಾರಾಂಶ

ಡ್ರೋನ್ ಪ್ರತಾಪ್, ವಿನಯ್, ಸಿರಿ, ತನಿಷಾ, ಕಾರ್ತಿಕ್, ಸಂಗೀತಾ, ಮೈಕೇಲ್, ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ಅವರಲ್ಲಿ ಗೆಲ್ಲಬಲ್ಲ ಸ್ಪರ್ಧಿ ಯಾರು ಎಂಬುದು ಹೊರಜಗತ್ತಿನಲ್ಲಿ ತೀವ್ರ ಚರ್ಚೆಯಾಗುತ್ತಿರುವ ಸಂಗತಿ.

ಬಿಗ್ ಬಾಸ್ ಕನ್ನಡ ಸೀಸನ್ 10ರ ಮನೆಯಲ್ಲಿ ಈಗ ಹೊಸ ಹೊಸ ಸಂಚಲನಗಳು ಸೃಷ್ಟಿಯಾಗುತ್ತಿವೆ. ನಿನ್ನೆ, 10 ಡಿಸೆಂಬರ್ 2023ರಂದು 10ನೇ ವಾರದಲ್ಲಿ ಸ್ನೇಹಿತ್ ಗೌಡ ಅವರು ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಂದ ಹೊರಬಂದಿದ್ದಾರೆ. ಈಗ ಉಳಿದಿರುವ ಸ್ಪರ್ಧಿಗಳಲ್ಲಿ ಯಾರು ಯಾರನ್ನು ಏನೆಂದುಕೊಂಡಿದ್ದಾರೆ ಎಂಬುದನ್ನು ಬಿಗ್ ಬಾಸ್ ಮಾತುಕತೆ ನೆಪದಲ್ಲಿ ಹೊರತಂದಿದ್ದಾರೆ. ಇಂದು ಬಿಡುಗಡೆಯಾಗಿರುವ ಪ್ರೊಮೋದಲ್ಲಿ ಪ್ರತಿಯೊಬ್ಬರೂ ಕೆಲವರು ಕೆಲವರ ಬಗ್ಗೆ ಏನೆಂದು ಹೇಳಿದ್ದಾರೆ ಎಂಬುದನ್ನು ತಿಳಿಯಬಹುದು. 

ಇಂದಿನ ಸಂಚಿಕೆ ನೋಡಿದರೆ ಎಲ್ಲರೂ ಬೇರೆಯವರ ಬಗ್ಗೆ ಏನೆಂದು ಹೇಳಿದ್ದಾರೆ ಎಂಬುದನ್ನು ತಿಳಿಯಬಹುದು. ತನಿಷಾ ಬಗ್ಗೆ ವರ್ತೂರು ಸಂತೋಷ್, ಸಂಗೀತಾ ಬಗ್ಗೆ ತುಕಾಲಿ ಸಂತೋಷ್ ಹೀಗೆ ಎಲ್ಲರೂ ತಮಗಾಗಿಬರದ ಇನ್ನೊಬ್ಬರ ಬಗ್ಗೆ ಆಕ್ಷೇಪದ ಸ್ವರ ಎತ್ತಿದ್ದಾರೆ. ಅಂದರೆ, ಬಿಗ್ ಬಾಸ್ ಮನೆಯಲ್ಲಿ ಯಾರ ಬಗ್ಗೆ ಯಾರು ಯಾವ ಅಭಿಪ್ರಾಯ ಹೊಂದಿದ್ದಾರೆ ಎಂಬುದು ಅವರವರ ಮಾತಿನಲ್ಲಿ ವ್ಯಕ್ತವಾಗಿದೆ. ಸಂಗೀತಾ ತಮ್ಮ ವಿರುದ್ಧದ ಆಕ್ಷೇಪಕ್ಕೆ ಸಖತ್ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಬೇರೆಯವರು ಹೇಗೆ ರಿಯಾಕ್ಟ್ ಮಾಡಿದ್ದಾರೆ ಎಂಬುದನ್ನು ತಿಳಿಯಲು ಸಂಚಿಕೆ ನೋಡಬೇಕು. 

ಸರಿಯಾದ ಸಮಯಕ್ಕೆ ನಿನ್ನೊಳಗಿರುವ ಪ್ರಾಣಿಯನ್ನು ಹೊರಗೆ ತಂದಿದ್ದೀಯಾ; ವರ್ಮಾ ಟ್ವೀಟ್ ವೈರಲ್!

ನಿನ್ನೆ, 10ನೇ ವಾರದಲ್ಲಿ ಕಿರುತೆರೆ ನಟ ಸ್ನೇಹಿತ್ ಗೌಡ ಎಲಿಮಿನೇಟ್ ಆಗಿದ್ದಾರೆ. ಈಗ ಉಳದಿರುವ ಸ್ಪರ್ಧಿಗಳಲ್ಲಿ ಗೆಲ್ಲಲು ತೀವ್ರ ಪೈಪೋಟಿ ನಡೆದಿದೆ. ಡ್ರೋನ್ ಪ್ರತಾಪ್, ವಿನಯ್, ಸಿರಿ, ತನಿಷಾ, ಕಾರ್ತಿಕ್, ಸಂಗೀತಾ, ಮೈಕೇಲ್, ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ಅವರಲ್ಲಿ ಗೆಲ್ಲಬಲ್ಲ ಸ್ಪರ್ಧಿ ಯಾರು ಎಂಬುದು ಹೊರಜಗತ್ತಿನಲ್ಲಿ ತೀವ್ರ ಚರ್ಚೆಯಾಗುತ್ತಿರುವ ಸಂಗತಿ. ಈಗಿರುವ ಎಲ್ಲರೂ ವಿಭಿನ್ನ ರೀತಿಯಲ್ಲಿ ಸ್ಟ್ರಾಂಗ್ ಆಗಿ ಇದ್ದಾರೆ. ಈ ಹಂತದಲ್ಲಿ ಇವರೇ ಗೆಲ್ಲುತ್ತಾರೆ ಎಂದು ಸ್ಪಷ್ಟವಾಗಿ ಹೇಳುವುದು ಕಷ್ಟವೇ ಸರಿ. 

ನನ್ನ ತಂದೆ ಸಾಯುತ್ತಿದ್ದಂತೆ ನಾನು ಥಿಯೇಟರ್‌ನಿಂದ ಹೊರಗೆ ಓಡಿ ಬಂದೆ; ನಟ ಬಾಬ್ಬಿ ಡಿಯೋಲ್

ಮೊದಮೊದಲು ಡಲ್‌ ಆಗಿದ್ದ ಡ್ರೋನ್ ಪ್ರತಾಪ್ ಬರಬರುತ್ತಾ ಸ್ಟ್ರಾಂಗ್ ಆಗಿ ಈಗ ಮತ್ತೆ ಡಲ್ ಆಗಿದ್ದಾರೆ. ಸಂಗೀತಾ, ತನಿಷಾ, ಕಾರ್ತಿಕ್ ಮೊದಲ ವಾರದಿಂದ ಇಲ್ಲಿಯವರೆಗೂ ಸ್ಟ್ರಾಂಗ್‌ ಆಗಿಯೇ ಇದ್ದಾರೆ. ತುಕಾಲಿ ಸಂತೋಷ್, ವರ್ತೂರು ಅವರಿಬ್ಬರೂ ಆರಕ್ಕೇರದೇ ಮೂರಕ್ಕಿಳಿಯದೇ ಬ್ಯಾಲೆನ್ಸ್‌ ಮಾಡುತ್ತಲೇ ಇಲ್ಲಿಯವರೆಗೂ ಬಂದಿದ್ದಾರೆ. ಸಿರಿ, ಮೈಕೇಲ್ ಬಗ್ಗೆ ಏನನ್ನೂ ಸ್ಷಷ್ಟವಾಗಿ ಹೇಳುವುದು ಕಷ್ಟವೇ, ಅವರಿಬ್ಬರೂ ಅಲ್ಲಿದ್ದರೂ ಹೊರಗೆ ಹೋದರೂ ಯಾರೂ ತಲೆ ಕೆಡಿಸಿಕೊಳ್ಳುವುದು ಡೌಟ್. ಹಾಗಿದ್ದರೆ ಗೆಲ್ಲುವುದು ಯಾರು? ಗೊತ್ತಿಲ್ಲ, ಏಕೆಂದರೆ ಅಲ್ಲಿ ಒಂದೇ ದಿನದಲ್ಲಿ ಏನು ಬೇಕಾದರೂ ಆಗಬಹುದು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!
ಹೊರ ಹೋದ್ಮೇಲೆ ನೀನೇ ಟ್ರೇನ್ ಮಾಡ್ಬೇಕಲ್ವಾ ! ಮನಸ್ಸಿನ ಮಾತು ಹೊರ ಹಾಕಿದ ರಾಶಿಕಾ