
ಬಿಗ್ ಬಾಸ್ ಮನೆಯಲ್ಲಿ ನೀತು ವನಜಾಕ್ಷಿ ತಮ್ಮ ಕಥೆ ಹೇಳಿಕೊಂಡು ಅತ್ತಿದ್ದಾರೆ. ಅವರನ್ನು ಸಂತೈಸಲು ಅಲ್ಲಿದ್ದ ಕೆಲವರು ಪ್ರಯತ್ನಿಸಿದ್ದಾರೆ. ಭಾಗ್ಯಲಕ್ಷ್ಮೀ ಮತ್ತು ಸಿರಿಜಾ ಬಳಿ ತಮ್ಮ ಗೋಳು ತೋಡಿಕೊಂಡಿರುವ ನೀತು ವನಜಾಕ್ಷಿ, 'ತಮಗೆ ಗಂಡಾಗಿ ಜೀವನ ಮಾಡುವುದು ಸಾಧ್ಯವೇ ಇರಲಿಲ್ಲ' ಎಂದಿದ್ದಾರೆ. 'ಪ್ಯಾಂಟ್ ಶರ್ಟ್ ಹಾಕಿಕೊಂಡ ತಕ್ಷಣ ನನಗೆ ಅಳುವೇ ಬಂದು ಬಿಡ್ತಾ ಇತ್ತು, ಒಬ್ಬನೇ ಮೂರ್ನಾಲ್ಕು ದಿನಗಳು ಅತ್ತಿದ್ದೀನಿ. ಯಾರೂ ಇಲ್ಲದಾಗ ಅಕ್ಕನ ಡ್ರೆಸ್ ಹಾಕಿಕೊಂಡು ಹಾಗೂ ಕಾಜಲ್ ಹಚ್ಚಿಕೊಂಡು ಕೂಷಿ ಅನುಭವಿಸುತ್ತಿದ್ದೆ.
ನನಗೆ ಚಿಕ್ಕಂದಿನಿಂದಲೂ ಹುಡುಗನಾಗಿ ಇರುವುದಕ್ಕೆ ಇಷ್ಟವೇ ಇರಲಿಲ್ಲ. ಆದರೆ, ಅದನ್ನು ಹೊರಗೆ ತೋರಿಸಿಕೊಳ್ಳಲೂ ಸಹ ಆಗುತ್ತಿರಲಿಲ್ಲ. ಒಬ್ಬಳೇ ಕುಳಿತು ಅದೆಷ್ಟು ಅತ್ತೀದ್ದೀನಿ ಎಂದರೆ, ನನಗೆ ಹುಡಗನಾಗಿ ಬದುಕಲು ಸಾಧ್ಯವೇ ಇಲ್ಲ ಎಂದು ನಿರ್ಧಾರ ಮಾಡುವಷ್ಟು ಅತ್ತಿದ್ದೀನಿ. ಕೊನೆಗೆ, ಎಲ್ಲಾ ಭಯಗಳನ್ನು ಬಿಟ್ಟು ಹುಡುಗಿಯಾಗಿ ಬದಲಾಗಿ ನನ್ನಿಷ್ಟದ ಜೀವನ ನಡೆಸುತ್ತಿದ್ದೇನೆ. ಈಗ ನಿಜವಾಗಿ ನಾನು ಹ್ಯಾಪಿ' ಎಂದಿದ್ದಾರೆ ನೀತು.
ಸೋಲಿನ ಸರಪಳಿ ಹರಿದು ಗೆಲುವಿನ ಮಾಲೆ ಧರಿಸಿ ಮೆರೆಯುತ್ತಿರುವ ಸ್ನೇಹಿತ್ ಗೌಡ!
ಬಿಗ್ ಬಾಸ್ ಮನೆಯಲ್ಲಿ 'ಟ್ರಾನ್ಸ್‌ಜೆಂಡರ್ ಸ್ಪರ್ಧಿ'ಯಾಗಿರುವ ನೀತು ವನಜಾಕ್ಷಿ, ತಮ್ಮ ಸ್ಟೋರಿಯನ್ನು ಮೊದಲ ಬಾರಿಗೆ ಬಿಗ್ ಬಾಸ್ ಮನೆಯಲ್ಲಿ ಶೇರ್ ಮಾಡಿಕೊಂಡು ಅತ್ತಿದ್ದಾರೆ. ಸಿರಿ ಹಾಗೂ ಭಾಗ್ಯಲಕ್ಷ್ಮೀ ಮುಂದೆ ಹೇಳಿಕೊಂಡು ಕಣ್ಣೀರು ಹಾಕಿರುವ ನೀತುಗೆ ಅವರಿಬ್ಬರೂ ಸಮಾಧಾನ ಮಾಡುವ ಮೂಲಕ ತಮ್ಮ ಹಿರಿಮೆ ಮರೆದಿದ್ದಾರೆ ಎನ್ನಬಹುದು. ಆ ಮೂಲಕ ಕರುಣೆ, ಅನುಕಂಪದ ಕಂಪು ಬಿಗ್ ಬಾಸ್ ಮನೆಯಲ್ಲಿ ಪಸರಿಸಿದೆ ಎನ್ನಬಹುದು. ಒಟ್ಟಿನಲ್ಲಿ ಸ್ಪರ್ಧಿಗಳ ಇನ್ನೂ ಏನೇನು ಕಥೆಗಳು ಬಿಗ್ ಬಾಸ್ ಮನೆಯಲ್ಲಿ ತೆರೆದುಕೊಳ್ಳಲಿವೆಯೋ ಏನೋ!
ನಾನಲ್ಲವೇ ನನಗೆ ನೀನಲ್ಲವೇ ಹಾಡಿಗೆ ನಯನಾ-ರೆಮೋ ಸಕತ್ ರೀಲ್ಸ್: ನಿಮಗೆ ನೀವೇ ಸಾಟಿ ಎಂದ ಫ್ಯಾನ್ಸ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.