ನಾನಲ್ಲವೇ ನನಗೆ ನೀನಲ್ಲವೇ ಹಾಡಿಗೆ ನಯನಾ-ರೆಮೋ ಸಕತ್​ ರೀಲ್ಸ್​: ನಿಮಗೆ ನೀವೇ ಸಾಟಿ ಎಂದ ಫ್ಯಾನ್ಸ್​

Published : Oct 12, 2023, 12:09 PM IST
ನಾನಲ್ಲವೇ ನನಗೆ ನೀನಲ್ಲವೇ ಹಾಡಿಗೆ ನಯನಾ-ರೆಮೋ ಸಕತ್​ ರೀಲ್ಸ್​: ನಿಮಗೆ ನೀವೇ ಸಾಟಿ ಎಂದ ಫ್ಯಾನ್ಸ್​

ಸಾರಾಂಶ

ರೀಲ್ಸ್​ ಜೋಡಿ ನಯನಾ ಶರತ್​ ಮತ್ತು ರೆಮೋ ಖ್ಯಾತಿಯ ರೇಖಾ ಮೋಹನ್​ ನಾನಲ್ಲವೇ ನಿನಗೆ ನೀನಲ್ಲವೆ ಹಾಡಿಗೆ ರೀಲ್ಸ್​ ಮಾಡಿದ್ದು, ಫ್ಯಾನ್ಸ್​ ಭೇಷ್​ ಭೇಷ್​ ಎನ್ನುತ್ತಿದ್ದಾರೆ.    

ಮಜಾ...ಮಜಾ! ಅಂತ ಹೇಳುತ್ತಾ ಮಜಾ ಟಾಕೀಸ್ ಕಾರ್ಯಕ್ರಮಕ್ಕೆ ಧ್ವನಿಯಾಗಿರುವ ರೇಖಾ ಮೋಹನ್ ಸಂದರ್ಭಕ್ಕೆ ತಕ್ಕಂತೆ ಹಾಡೇಳಿ ಅಭಿಮಾನಿಗಳೊಡನೆ ರೆಮೋ ಅಂತಲೇ ಖ್ಯಾತರಾಗಿದ್ದಾರೆ. ಇನ್ನು ಕಾಮಿಡಿ ಕಿಲಾಡಿ ಕಾರ್ಯಕ್ರಮದಲ್ಲಿ ಟೈಮಿಂಗ್ ಮೆಂಟೆನ್ ಮಾಡಿ ಪಂಚಿಂಗ್ ಡೈಲಾಗ್‌ ಕೊಡುವ ನಯನಾ ಶರತ್​ ಸಿಕ್ಕಾಪಟ್ಟೆ ಫೇಮಸ್. ಇವರಿಬ್ಬರೂ ಜೋಡಿಯಾಗಿ ಇದಾಗಲೇ ಹಲವಾರು ರೀಲ್ಸ್​ ಮಾಡಿದ್ದು, ಅವೆಲ್ಲಾ  ಸಾಮಾಜಿಕ ಜಾಲತಾಣದಲ್ಲಿ ಸಕತ್​ ವೈರಲ್ ಆಗಿವೆ.   ಸದಾ ನಕ್ಕು ನಗಿಸುತ್ತಲೇ ಇರುವ ನಯನಾ ಸದ್ಯ ತುಂಬು ಗರ್ಭಿಣಿ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ಅವರು,  ಸಿಹಿಕಹಿ ಚಂದ್ರು ಅವರಿಂದ ಸೀಮಂತ ಶಾಸ್ತ್ರವನ್ನೂ ನೆರವೇರಿಸಿಕೊಂಡು, ಬಸರಿ ಬಯಕೆ ಈಡೇರಿಸಿಕೊಂಡಿದ್ದಾರೆ.  ಕೆಲ ದಿನಗಳ ಹಿಂದೆ ಕಾಮಿಡಿ ಕಿಲಾಡಿ ತಂಡವೂ ನಯನಾ ಅವರಿಗೆ ಸೀಮಂತ ಶಾಸ್ತ್ರ ನೆರವೇರಿಸಿತ್ತು. ಪ್ರತಿಯೊಬ್ಬರೂ ನಯನಾ ಅವರಿಗೆ ಅವರಿಷ್ಟದ ವೆರೈಟಿ ಚಿಕನ್ ಮಟನ್ ಮೀನು ನೀರ್ ದೋಸೆ ಅಡುಗೆಗಳನ್ನು ಬಡಿಸಿದ್ದರು. ಅದಾದ ಮೇಲೆ ತುತ್ತು ಕೂಡ ಕೊಟಿದ್ದಾರೆ.

ಇನ್ನು ರೆಮೋ ಅಂದರೆ ತಕ್ಷಣ ನೆನಪಾಗೋದು ಮಜಾ ಟಾಕೀಸ್‌. ಸ್ಟೇಜ್‌ ಮೇಲೆ ಸೃಜನ್‌ ಲೋಕೇಶ್ ಒಂದಾದ ಮೇಲೊಂದರಂತೆ ನಗೆ ಬಾಂಬ್ ಸಿಡಿಸುತ್ತಿದ್ದರೆ ಈ ಹೆಣ್ಣುಮಗಳು ಹಿಂದಿನಿಂದಲೇ ಸೈಲೆಂಟಾಗಿ ಬಾಂಬ್ ಹಾಕಿ ನಗಿಸ್ತಾರೆ. ಸೃಜನ್ ಇವರ ಕಾಲೆಳೆಯೋದು, ಈಕೆ ಟಕ್ಕಂತ ಉತ್ತರ ಕೊಡೋದು, ಆ ಟೈಮಿಂಗ್ ಎಲ್ಲ ನೋಡೋದಕ್ಕೆ ಸಖತ್ ಮಜಾ. ಇದಕ್ಕೂ ಮೊದಲು ಸಾಕಷ್ಟು ಕಾರ್ಯಕ್ರಮಗಳಲ್ಲಿ ಆರ್ಕೆಸ್ಟ್ರಾಗಳಲ್ಲಿ ಹಾಡಿದ್ದರೂ ಅವರ ಪ್ರತಿಭೆ ಮುನ್ನೆಲೆಗೆ ಬಂದಿದ್ದು ಮಜಾ ಟಾಕೀಸ್ ಮೂಲಕ. ಈ ಗಾಯಕಿ ಇದೀಗ ಜೀ ಕನ್ನಡದಲ್ಲಿ ಪ್ರಸಾರವಾಗುವ 'ಸೂಪರ್ ಕ್ವೀನ್' ಅನ್ನೋ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದಾರೆ. ಬಹಳ ಕಷ್ಟದಿಂದ ಮೇಲೆ ಬಂದು ಬದುಕು ಕಟ್ಟಿಕೊಂಡವರ ರಿಯಾಲಿಟಿ ಶೋ ಈ 'ಸೂಪರ್ ಕ್ವೀನ್'.   

ನಿಮ್ಮ ತೆವಲಿಗೋಸ್ಕರ ನ್ಯೂಸ್ ಹಾಕ್ಬೇಡಿ; ಆ ಸುದ್ದಿ ಓದಿ ಕಾಮಿಡಿ ಕಿಲಾಡಿಗಳು ನಯನಾ ಗರಂ!

ಇವರಿಬ್ಬರ ಜೋಡಿ ಸೂಪರೋ ಸೂಪರು. ಇದೀಗ ನನ್ನ ನಿನ್ನ ಕೇಳೋರ್ಯಾರು ಹಾಡಿಗೆ ಜೋಡಿ ರೀಲ್ಸ್​ ಮಾಡಿದ್ದು, ಫ್ಯಾನ್ಸ್​ ಫಿದಾ ಆಗಿದ್ದಾರೆ. ಕೆಲವರು ನಯನಾ ಅವರಿಗೆ ಹುಷಾರಮ್ಮಾ, ಗರ್ಭಿಣಿ ಹೆಚ್ಚಿಗೆ ಸ್ಟೆಪ್​ ಹಾಕಬೇಡಿ ಎಂದು ಕಾಳಜಿ ತೋರಿಸಿದ್ದಾರೆ. ಕೆಲ ದಿನಗಳಿಂದ ನಯನಾ ಅವರ ಕುರಿತು ಕೆಲವೊಂದು ಫೇಕ್​ ನ್ಯೂಸ್​ ಹರಿದಾಡುತ್ತಿದ್ದುದಕ್ಕೆ ನಯನಾ ಬೇಸರ ವ್ಯಕ್ತಪಡಿಸಿದ್ದರು. 'ನಿನ್ನೆಯಿಂದ ಒಂದು ಫೇಕ್ ನ್ಯೂಸ್ ಓಡಾಡುತ್ತಿದೆ. ಕೆಲವೊಂದು ಪೇಜ್‌ಗಳು ವೀಕ್ಷಣೆ ಬರಲಿ ಫಾಲೋವರ್ಸ್‌ ಹೆಚ್ಚಾಗಬೇಕು ಅನ್ನೋ ಕಾರಣಕ್ಕೆ ತುಂಬಾ ಕಚ್ಚಿಡವಾಗಿ ತುಂಬಾ ಹೊಲಸಾಗಿ ನ್ಯೂಸ್‌ಗಳನ್ನು ಪೋಸ್ಟ್ ಮಾಡುತ್ತಿರುವುದಾಗಿ ಗಮನಿಸುತ್ತಿರುವೆ. ನಯನಾ ಅವರ ಗಂಡನಿಂದ ಪ್ರೆಗ್ನೆಂಟ್ ಆಗಿದ್ದಾರೆ, ನಯನಾ ಅವರಿಗೆ ಡಿಲಿವರಿ ಆಗಿ ಅವರಿಗೆ ಗಂಡು ಮಗು ಆಗಿದೆ ಅಂತ ಕೆಲವರು ಹಾಕಿದ್ದಾರೆ ಇನ್ನೂ ಕೆಲವರು ಅವಳಿ-ಜವಳಿ ಮಕ್ಕಳಾಗಿದ್ದಾರೆ ಅಂತ ಹಾಕಿದ್ದಾರೆ. ದಯವಿಟ್ಟು ನಿಮ್ಮ ತೆವಲಿಗೋಸ್ಕರ ನಿಮಗೆ ವಿವ್ಯೂಸ್ ಮತ್ತು ಫಾಲೋವರ್ಸ್ ಬೇಕು ಅಂತ ಈ ರೀತಿ ಫೇಕ್ ನ್ಯೂಸ್ ಹಾಕಬೇಡಿ' ಎಂದು ನಯನಾ ವಿಡಿಯೋ ಅಪ್ಲೋಡ್ ಮಾಡಿದ್ದರು. 

ಅದೇ ಇನ್ನೊಂದೆಡೆ, ರೆಮೋ ಅವರ ಬಗ್ಗೆ ಹೇಳುವುದಾದರೆ, ಹಲವು ಕನಸುಗಳೊಂದಿಗೆ ವೈವಾಹಿಕ ಬದುಕಿಗೆ ಕಾಲಿಟ್ಟ ರೆಮೋಗೆ ಪತಿಯ ಮನೆ ಹೂವಿನ ಹಾಸಿಗೆ ಆಗಿರಲಿಲ್ಲ. ಅಂದುಕೊಂಡಂತೆ ಪ್ರೀತಿ(Love) ಸಿಗಲಿಲ್ಲ. ಅವರನ್ನು ಮನೆಯಲ್ಲಿ ಮೂಲೆ ಗುಂಪು ಮಾಡಿಬಿಟ್ಟಾಗ ಆದ ನೋವು(Pain) ದೊಡ್ಡದು. ಬಹಳ ಕಾಲ ವಿಧಿಯಿಲ್ಲದೇ ಅದೇ ಬದುಕನ್ನು ಬದುಕುತ್ತಿದ್ದವರಿಗೆ ಒಂದಿನ ಇದೆಲ್ಲ ಸಾಕು ಅನಿಸತೊಡಗಿತು. ಮೈ ಕೊಡವಿ ಎದ್ದರು. 5 ವರ್ಷದ ಮಗಳನ್ನು ಕರೆದುಕೊಂಡು ಮನೆ ಬಿಟ್ಟು ಬಂದು ಬದುಕಿ ಕಟ್ಟಿಕೊಂಡವರು. 

KBC ವೇದಿಕೆಯಲ್ಲಿಯೇ ಕಣ್ಣೀರು ಹಾಕಿದ ಅಮಿತಾಭ್​: ಅದೆಷ್ಟು ಅಂತ ನನ್ನ ಅಳಿಸುವಿರಿ ಎಂದ ಬಿಗ್​-ಬಿ
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಸಮಾನ್ಯಳಲ್ಲಿ ಅಸಮಾನ್ಯ ಈ ಪುಟಾಣಿ: Naa Ninna Bidalaare ಹಿತಾ ನಿಬ್ಬೆರಗಾಗುವ ಫೋಟೋಶೂಟ್​!
Bigg Boss ಅಭಿಷೇಕ್​ಗೆ ದೊಡ್ಮನೆಯಿಂದ ಸಿಕ್ಕಿರೋ ಸಂಭಾವನೆ ಎಷ್ಟು? ಫ್ಯಾನ್ಸ್​ ನಿರೀಕ್ಷೆ ಸುಳ್ಳಾಗೋಯ್ತು!