ಬಿಗ್ ಬಾಸ್ ಮಾಡಿದ್ದು ಸರಿನಾ? ಹೊಂದಾಣಿಕೆ ಇಲ್ಲದವರನ್ನು ಜೋಡಿ ಮಾಡಿ ವೀಕ್ಷಕರ ದಿಕ್ಕು ತಪ್ಪಿಸಿದ್ಯಾಕೆ?

Published : Nov 11, 2024, 08:21 PM ISTUpdated : Nov 12, 2024, 12:31 PM IST
ಬಿಗ್ ಬಾಸ್ ಮಾಡಿದ್ದು ಸರಿನಾ? ಹೊಂದಾಣಿಕೆ ಇಲ್ಲದವರನ್ನು ಜೋಡಿ ಮಾಡಿ ವೀಕ್ಷಕರ ದಿಕ್ಕು ತಪ್ಪಿಸಿದ್ಯಾಕೆ?

ಸಾರಾಂಶ

ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಕೆಲವು ಸ್ಪರ್ಧಿಗಳು ಜೋಡಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಧರ್ಮ-ಅನುಷಾ, ಶಿಶಿರ್-ಐಶ್ವರ್ಯಾ, ತ್ರಿವಿಕ್ರಮ್-ಭವ್ಯಾ ಜೋಡಿಗಳನ್ನು ದೂರ ಮಾಡಿ ಬಿಗ್ ಬಾಸ್ ವೀಕ್ಷಕರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಬೆಂಗಳೂರು (ನ.11): ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಕೆಲವರು ಜೋಡಿಗಳಾಗಿ ಪ್ರಣಯ ಪಕ್ಷಿಗಳಂತೆ ನಲಿದಾಡುತ್ತಿದ್ದಾರೆ. ಆದರೆ, ಬಿಗ್ ಬಾಸ್ ಮಾತ್ರ ಜನರ ಬಾಯಿಂದ ಬರುತ್ತಿರುವ ಪ್ರಣಯ ಪಕ್ಷಿಗಳ ಹೆಸರನ್ನು ಮರೆಮಾಚಲು ತಾವೇ ವೀಕ್ಷಕರ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಪರಸ್ಪರ ಅಂಟಿಕೊಂಡು, ಪ್ರಣಯ ಪಕ್ಷಿಗಳಂತೆ ಇರುತ್ತಿದ್ದ ಜೋಡಿಗಳನ್ನು ಬಿಟ್ಟು, ಹೊಂದಾಣಿಕೆಯೇ ವ್ಯಕ್ತಿಗಳನ್ನು ಜೋಡಿಗಳನ್ನಾಗಿ ಮಾಡಿ ಟಾಸ್ಕ್ ನೀಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಜೋಡಿ ಹಕ್ಕಿಗಳು ಯಾರೆಂಬುದು ಎಲ್ಲ ಕರ್ನಾಟಕದ ವೀಕ್ಷಕರಿಗೂ ಗೊತ್ತಿದೆ. ಧರ್ಮ ಕೀರ್ತಿರಾಜ್ - ಅನುಷಾ ರೈ, ಶಿಶಿರ್ - ಐಶ್ವರ್ಯಾ ಸಿಂಧೋಗಿ, ತ್ರಿವಿಕ್ರಮ್ - ಭವ್ಯಾ ಗೌಡ ಎಂದು ಯಾರು ಬೇಕಾದರೂ ಹೇಳುತ್ತಾರೆ. ಆದರೆ, ಇದೀಗ ಕಲರ್ಸ್ ಕನ್ನಡ ವಾಹಿನಿಯಿಂದ ವೀಕ್ಷಕರ ದಿಕ್ಕು ತಪ್ಪಿಸಲು ಬೇರೆ ಬೇರೆ ಜೋಡಿಗಳ ಫೋಟೋಗಳನ್ನು ಮುಂದಿಟ್ಟು, ನಿಮ್ಮ ನೆಚ್ಚಿನ ಜೋಡಿಯನ್ನು ಆಯ್ಕೆ ಮಾಡಿ ಎಂದು ಪ್ರಶ್ನೆ ಮಾಡಿದ್ದಾರೆ. ಅದರಲ್ಲಿ ಗಾಯಕ ಹನುಮಂತ - ನಟಿ ಗೌತಮಿ ಜಾಧವ್, ಉಗ್ರಂ ಮಂಜು - ಭವ್ಯಾ ಗೌಡ, ಶಿಶಿರ್ - ಚೈತ್ರಾ ಕುಂದಾಪುರ, ಧರ್ಮ ಕೀರ್ತಿರಾಜ್ - ಐಶ್ವರ್ಯಾ ಸಿಂಧೋಗಿ, ಅನುಷಾ ರೈ - ಗೋಲ್ಡ್ ಸುರೇಶ್ ಹಾಗೂ ಧನರಾಜ್ - ಮೋಕ್ಷಿತಾ ಪೈ ಅವರನ್ನು ಜೋಡಿಗಳನ್ನಾಗಿ ಮಾಡಿ ಈ ವಾರದ ಟಾಸ್ಕ್ ನೀಡಲಾಗುತ್ತಿದೆ. ಅದರಲ್ಲಿಯೂ ನಿಮ್ಮ ನೆಚ್ಚಿನ ಜೋಡಿ ಯಾರೆಂದು ಕೇಳಲಾಗಿದ್ದು, ನೈಜ ಜೋಡಿಗಳನ್ನು ದೂರ ಮಾಡಿದ್ದಕ್ಕೆ ವೀಕ್ಷಕರು ಗರಂ ಆಗಿದ್ದಾರೆ.

ಇದನ್ನೂ ಓದಿ: ತುತ್ತು ಅನ್ನಕ್ಕಾಗಿ ಮಾತಿಗೆ ಮಾತು ಬೆಳೆಸಿದ ಐಶ್ವರ್ಯ - ಸುರೇಶ್… ಇಬ್ಬರಲ್ಲಿ ಸರಿ ಯಾರು? ತಪ್ಪು ಯಾರು?

ಬಿಗ್ ಬಾಸ್ ಮನೆಯಲ್ಲಿ ಇಬ್ಬರು ತುಂಬಾ ವರ್ಷಗಳಿಂದ ಒಟ್ಟಿಗೆ ಸಿನಿಮಾದಲ್ಲಿ ನಟಿಸಿದ ನಟ ಧರ್ಮ ಕೀರ್ತಿರಾಜ್ ಮತ್ತು ನಟಿ ಅನುಷಾ ರೈ ಅವರು ಒಟ್ಟಿಗೆ ಸ್ಪರ್ಧಿಗಳಾಗಿ ಆಗಮಿಸಿದ್ದಾರೆ. ಇವರನ್ನು ಪ್ರಣಯ ಪ್ರೇಮಿಗಳೆಂದೇ ಕರೆಯಲಾಗುತ್ತದೆ. ಆದರೆ, ಇಬ್ಬರ ಮನೆಯವರೂ ತುಂಬಾ ಸ್ಟ್ರಿಕ್ಟ್ ಇರುವ ಕಾರಣ ತಮ್ಮ ಎಲ್ಲೆಗಳನ್ನು ಮೀರದೇ, ರಾಜ್ಯದ 5 ಕೋಟಿ ವೀಕ್ಷಕರು ನೋಡುತ್ತಿರುತ್ತಾರೆ ಎಂಬ ಕಾರಣಕ್ಕೆ ತಮ್ಮ ಪ್ರಣಯವನ್ನು ಅದುಮಿಟ್ಟು ವರ್ತಿಸುತ್ತಿದ್ದಾರೆ. ಹೀಗಾಗಿ, ಇವರ ಪ್ರಣಯ ಮಾತಿಗೆ, ಕಣ್ಣೋಟಕ್ಕೆ ಸೀಮಿತವಾಗಿದೆಯೇ ವಿನಃ ಎಲ್ಲೆಯನ್ನು ಮೀರಿಲ್ಲ. ಈ ಬಗ್ಗೆ ಬಿಗ್ ಬಾಸ್ ಮನೆಯ ಇತರ ಸ್ಪರ್ಧಿಗಳು ಕೂಡ ಇವರಿಬ್ಬರೇ ಒಟ್ಟಾಗಿ ಇರುವುದನ್ನು ಕಂಡು ಎಚ್ಚರಿಕೆ ನೀಡಿದ್ದರೂ, ನಾವಿಬ್ಬರೂ ಗೆಳೆಯರು ಎಂದು ಹೇಳಿಕೊಳ್ಳುತ್ತಿದ್ದಾರೆ.

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗ ಅನುಷಾ ರೈ ಹಾಗೂ ಧರ್ಮ ಕೀರ್ತಿರಾಜ್ ನಡುವಿನ ಹಳೆಯ ಸ್ನೇಹದ ಬಗ್ಗೆ ಗೊತ್ತಿರದ ನಟಿ ಐಶ್ವರ್ಯಾ ಸಿಂಧೋಗಿ ನಟ ಧರ್ಮ ಕೀರ್ತಿರಾಜ್ ಜೊತೆಗೆ ಆತ್ಮೀಯತೆ ಹೊಂದಿದ್ದರು. ಆದರೆ, ಇವರಿಬ್ಬರ ಹಳೆಯ ಸ್ನೇಹವನ್ನು ಅರಿತ ನಂತರ ಅವರಿಂದ ದೂರವಾಗಿ, ನಟ ಶಿಶಿರ್ ಜೊತೆಗೆ ಹೆಚ್ಚಿನ ಆತ್ಮೀಯತೆಯಿಂದ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರೂ ಆಗಾಗ ಫ್ಲರ್ಟ್ ಮಾಡುವ ಅನೇಕ ದೃಶ್ಯಗಳು ಬಿಗ್ ಬಾಸ್ ಮನೆಯಲ್ಲಿ ನಡೆದಿವೆ. ಶಿಶಿರ್ ಏನಾದರೂ ಮಾತನಾಡಿದರೆ ಐಶ್ವರ್ಯಾ ಅವರು ಗಳಗಳನೇ ಕಣ್ಣೀರು ಹಾಕುತ್ತಾರೆ. ಆಗ ಶಿಶಿರ್ ಹೋಗಿ ತಬ್ಬಿಕೊಂಡು ಸಮಾಧಾನ ಮಾಡುತ್ತಾರೆ. ಹೀಗಾಗಿ, ಇವರನ್ನೂ ಕೂಡ ಜೋಡಿ ಹಕ್ಕಿಗಳೆಂದು ಹೇಳುವುದರಲ್ಲಿ ತಪ್ಪಿಲ್ಲ.

ಇದನ್ನೂ ಓದಿ: ಓಟಿಟಿ ಸಂಭಾವನೆ: ಭಾರತದಲ್ಲಿ ನಂ.1 ಸ್ಥಾನದಲ್ಲಿರುವ ನಟಿ ಸಮಂತಾ, ಎಷ್ಟು ಸಂಭಾವನೆ ತಗೋತಾರೆ?

ಮತ್ತೊಂದು ಜೋಡಿ ಎಂದರೆ ಅದು ತ್ರಿವಿಕ್ರಮ್ ಮತ್ತು ಭವ್ಯಾ ಗೌಡ ಜೋಡಿ. ಇವರು ಆರಂಭದಿಂದಲೂ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಆದರೆ, 3ಏ ಮತ್ತು 4ನೇ ವಾರಗಳಲ್ಲಿ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ನಟಿ ಭವ್ಯಾಗೌಡ ತ್ರಿವಿಕ್ರಮ್ ಒಡನಾಟದೊಂದಿಗೆ ಸೇಫ್ ಝೋನ್ ಕ್ರಿಯೇಟ್ ಮಾಡಿಕೊಂಡಿದ್ದರು. ಇವರ ಕಣ್ಸನ್ನೆ ಮತ್ತು ಪಿಸುಪಿಸು ಮಾತುಗಳು ಮಾತ್ರ ವೈರಲ್ ಆಗಿವೆ. ಬಿಗ್ ಬಾಸ್ ಮನೆಯಲ್ಲಿ ಕೈ-ಕೈ ಹಿಡಿದುಕೊಂಡು ಓಡಾಡಿದ್ದಾರೆ. ಆದರೆ, ಮೊನ್ನೆ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ತ್ರಿವಿಕ್ರಮ್ ಮೋಸ ಮಾಡಿ ಗೆದ್ದಿದ್ದಾರೆ ಎಂಬ ಕಾರಣಕ್ಕೆ ಭವ್ಯಾಗೌಡ ಕೊಂಚ ಕೋಪ ಮಾಡಿಕೊಂಡಿದ್ದಾರೆ. ಇಬ್ಬರ ನಡುವೆ ಸಮ್‌ಥಿಂಗ್ ನಡೆಯುತ್ತಿದೆ ಎಂಬ ಅನುಮಾನವಿದ್ದರೂ ಅದನ್ನು ಕೊನೇವರೆಗೆ ಕಾದು ನೋಡಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಿಲ್ಲಿ ನಟ ನಿನ್ನ*ನ್ ಅಂದಿದ್ದನ್ನ Bigg Boss ತೋರಿಸಿಲ್ಲ, ಅವನಂಥಾ ಗಲೀಜು ಲೈಫಲ್ಲೇ ನೋಡಿಲ್ಲ-ಡಾಗ್ ಸತೀಶ್!
ಗಿಲ್ಲಿಯ ಅದೊಂದು ವಿಡಿಯೋ ವೀಕೆಂಡ್‌ನಲ್ಲಿ ತೋರಿಸಿ, ಸುದೀಪ್‌ಗೆ ಅಭಿಮಾನಿಗಳ ಪಟ್ಟು!