ಬಿಗ್ ಬಾಸ್ ಮನೆಯಲ್ಲಿ ಪ್ರಸಾರ ಮಾಡಲಾಗದ ಮಾತುಗಳು ಬರ್ತಿವೆ; ಕಿಚ್ಚ ಸುದೀಪ್ ಎಚ್ಚರಿಕೆ ಕೊಟ್ಟಿದ್ಯಾರಿಗೆ?

Published : Oct 31, 2026, 11:24 PM IST
Bigg Boss Kannada Sudeep Warning to Yashash

ಸಾರಾಂಶ

ಬಿಗ್ ಬಾಸ್ ಮನೆಯಲ್ಲಿ ಜಗಳದ ವೇಳೆ ಸಮುದಾಯವೊಂದನ್ನು ಹೀಯಾಳಿಸುವಂತಹ ಪದ ಬಳಸಿದ್ದಕ್ಕೆ ಕಿಚ್ಚ ಸುದೀಪ್, ಸ್ಪರ್ಧಿಗಳಾದ ಯಶಸ್ ಹಾಗೂ ಗಗನ್‌ಗೆ 'ಕೈ ಮೀರಿದರೆ ಸಮಸ್ಯೆ ಎದುರಿಸಬೇಕಾಗುತ್ತದೆ' ಎಂದು ಗಂಭೀರ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ, ಟಿವಿಯಲ್ಲಿ ಪ್ರಸಾರ ಮಾಡಲಾಗದ ಪದಗಳನ್ನು ಬಳಸಲಾಗುತ್ತಿದೆ ಎಂದು ವಾರ್ನಿಂಗ್‌ ನೀಡಿದ್ದಾರೆ. ಆದರೆ, ಏನು ಆ ಪದಗಳು ಇಲ್ಲಿದೆ ವಿವರ..

ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಈಗಾಗಲೇ 55 ದಿನಗಳು ಮುಕ್ತಾಯವಾಗಿದ್ದು, 8ನೇ ವಾರದ ಕಿಚ್ಚನ ಪಂಚಾಯಿತಿ ನಡೆಯುತ್ತಿದೆ. ಇದೀಗ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಮನೆಯಲ್ಲಿ ಜನರಿಗೆ ತೋರಿಸಲು ಸಾಧ್ಯವಾಗದ ಹಾಗೂ ಪ್ರಸಾರ ಮಾಡಲಾಗದ ಮಾತುಗಳು ಬರುತ್ತಿವೆ. ಅವುಗಳನ್ನು ಪುನರುಚ್ಛಾರ ಮಾಡಂದತೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಯಶಸ್ ಅವರು ಗಗನ್ ಅವರು ಜಗಳ ಮಾಡುವಾಗ 9 ಎನ್ನುವ ಪದವನ್ನು ಬಳಕೆ ಮಾಡುತ್ತಾರೆ. ಆದರೆ, ಸಮಾಜದಲ್ಲಿ ಈ 9 ಎನ್ನುವ ಪದವನ್ನು ಎಲ್‌ಜಿಬಿಟಿಕ್ಯೂ ಸಮುದಾಯಕ್ಕೆ ಸೇರಿದವರನ್ನು ಟೀಸ್ ಮಾಡುವುದಕ್ಕೆ ಒಂಭತ್ತು ಎಂದು ಹೀಯಾಳಿಸುತ್ತಾರೆ. ಅದೇ ಪದವನ್ನು ಯಶಸ್ ಅವರಿಗೆ ಗಗನ್ ಅವರಿಗೆ ಬಳಕೆ ಮಾಡುತ್ತಾರೆ. ಇದರಿಂದ ಸಿಟ್ಟಿಗೆದ್ದ ಗಗನ್ ಅವರು ಜಗಳ ಆರಂಭಿಸುತ್ತಾರೆ. ಇದು ತಪ್ಪು ಎಂಬುದನ್ನು ತೋರಿಸುವುದು ಅಗತ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ಅವರು, ಬಿಗ್ ಬಾಸ್ ಮನೆಯಲ್ಲಿ ಜಗಳ ಮಾಡುವುದಕ್ಕೆ ಒಂದು ಸಮುದಾಯದ ಬಗ್ಗೆ ಹೀಯಾಳಿಸಿ ಮಾತನಾಡಿದ್ದ ವಿಡಿಯೋವನ್ನು ತೋರಿಸುತ್ತಾರೆ. ನಂತರ ಇಬ್ಬರಿಗೂ ಇಂತಹ ಪದಗಳನ್ನು ಬಳಕೆ ಮಾಡದಂತೆ ಖಡಕ್ ವಾರ್ನಿಂಗ್ ನೀಡುತ್ತಾರೆ.

ಯಾವ ಸಮುದಾಯಕ್ಕೂ ಈ ಮಾತನ್ನ ಹೇಳಿಲ್ಲ

ಈ ವೇಳೆ ಯಶಸ್ ಅವರು ನಾನು ಮಾತನಾಡಿದ್ದು, ಯಾವುದೇ ಒಂದು ಸಮುದಾಯ ಅಥವಾ ಸಮಾಜ ಅಥವಾ ಇನ್ನಾರನ್ನೋ ನೋವು ಮಾಡುವುದಕ್ಕೆ ಮಾತನಾಡಿಲ್ಲ. ನಾನು ನೇರವಾಗಿ ಗಗನ್ ಅವರಿಗೆ ಮಾತ್ರ ನೋವು ಮಾಡಬೇಕು ಎಂದು ಈ ಪದವನ್ನು ಬಳಕೆ ಮಾಡಿದ್ದೇನೆ. ಯಾರೂ ತಪ್ಪಾಗಿ ತಿಳಿಯಬೇಡಿ ಎಂದು ಹೇಳುತ್ತಾರೆ. ಇದಾದ ನಂತರ ಸುದೀಪ್ ಅವರು, ಇಂತಹ ಪದಗಳನ್ನು ಬಿಗ್ ಬಾಸ್ ಮನೆಯಲ್ಲಿ ಮಾತನಾಡಬೇಡಿ, ನೀವಿಬ್ಬರೂ ಜಗಳ ಮಾಡುವಾಗ ನಿಮ್ಮ ಬಗ್ಗೆ ಮಾತನಾಡಿಕೊಳ್ಳಿ, ಇನ್ನಬ್ಬರಿಗೆ ಹೋಲಿಕೆ ಮಾಡಿ ಮಾತನಾಡಬೇಡಿ ಎನ್ನುತ್ತಾರೆ.

ಟಿವಿಯಲ್ಲಿ ಪ್ರಸಾರ ಮಾಡದ ಮಾತುಗಳು

ಇದಾದ ನಂತರ ಸುದೀಪ್ ಅವರು, ಬಿಗ್ ಬಾಸ್ ಮನೆಯಲ್ಲಿ ಯಾವುದೇ ಒಂದು ಸಮುದಾಯ ಅಥವಾ ಸಮಾಜದ ಬಗ್ಗೆ ಮಾತನಾಡಿದರೆ ಅದು ತುಂಬಾ ದೊಡ್ಡ ಸಮಸ್ಯೆಯಾಗುತ್ತದೆ. ಒಂದು ಹಂತದವರೆಗೂ ಬಿಗ್ ಬಾಸ್ ತಂಡ ಅಥವಾ ಟಿವಿ ಚಾನೆಲ್‌ನಿಂದ ರಕ್ಷಣೆ ಮಾಡುವ ಕೆಲಸ ಮಾಡುತ್ತೇವೆ. ಕೈ ಮೀರಿದರೆ ತುಂಬಾ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ. ಮಾತಿನ ಬಗ್ಗೆ ಎಚ್ಚರಿಕೆ ಇರಲಿ. ಆಗಾಗ್ಗೆ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಹೊರಜನರಿಗೆ ತೋರಿಸಲಾಗದ ಮಾತುಗಳನ್ನಾಡುತ್ತಿದ್ದೀರಿ. ಇದನ್ನು ರಿಪೀಟ್ ಮಾಡಬಾರದು ಎಂದು ತಿಳಿಸುತ್ತಾರೆ.

ಕೆಟ್ಟ ಪದಗಳಿಂದ ಹೊರಗೆ ಹೋದ ಮಂಜ

ಇನ್ನು ಬಿಗ್ ಬಾಸ್ ಮನೆಗೆ ಬಂದಿದ್ದ ಕಾಮನ್ ಮ್ಯಾನ್ ಮಾಡ್ರನ್ ಮಹಾಕವಿ ಮಂಜ ಬಾಯಿಗೆ ಫೀಲ್ಟರ್ ಇಲ್ಲದೆ, ಹೊಲಸು ಪದಗಳನ್ನು ಬಳಸಿ ಮಾತನಾಡುತ್ತಿದ್ದನು. ಒಬ್ಬರ ವ್ಯಕ್ತಿತ್ವ, ನಡತೆ ಹಾಗೂ ಚಾರಿತ್ರ್ಯ ವಧೆ ಮಾಡುವ ಮಾತುಗಳನ್ನಾಡುವ ಮೂಲಕ ಹಾಗೂ ಮನೆಯವರ ಬಗ್ಗೆ ಮಾತನಾಡುವ ಮೂಲಕ ಬಿಗ್ ಬಾಸ್ ಮನೆಯ ನಿಯಮಗಳನ್ನು ಉಲ್ಲಂಘನೆ ಮಾಡಿದ್ದನು. ಈ ಹಿನ್ನೆಲೆಯಲ್ಲಿ ಮಂಜನನ್ನು ಬಿಗ್ ಬಾಸ್ ಮನೆಯಲ್ಲಿ ಅರ್ಧದಲ್ಲಿಯೇ ಹೊರಗೆ ಕಳುಹಿಸಲಾಯಿತು. ಇದೀಗ ಮತ್ತೆ ಅಂತಹದ್ದೇ ಮಾತುಗಳು ಬರುತ್ತಿವೆ ಎಂದು ಸುದೀಪ್ ಅವರು ಹೇಳುತ್ತಿದ್ದಾರೆ. ಒಟ್ಟಾರೆ ಸೀಸನ್ 13 ಮಾತ್ರ ಹೊಲಸು ಪದಗಳನ್ನು ಕೋಟಿ ಕೋಟಿ ಕನ್ನಡಿಗರಿಗೆ ಕಲಿಸಿದ ಸೀಸನ್ ಎಂಬ ಅಪಖ್ಯಾತಿಗೆ ಅಂತೂ ಒಳಗಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

50 ಪಟ್ಟು ಸಂಬಳ, ಸಾವಿನ ಕದ ತಟ್ಟೊ ಕೆಲಸ… 8 ಎಪಿಸೋಡ್‌ಗಳ ಮೈ ಜುಮ್ಮೆನಿಸುವ ಹಾರರ್ ಥ್ರಿಲ್ಲರ್ ಸೀರೀಸ್
ಮೈಸೂರಿನಲ್ಲಿ ಯೂಟ್ಯೂಬರ್ ಮಧು ಗೌಡ ಪತಿ ನಿಖಿಲ್ ರವೀಂದ್ರ ವಿರುದ್ಧ 'ಹಿಟ್ ಅಂಡ್ ರನ್' ಆರೋಪ: ದೂರು ದಾಖಲು, ವಿಡಿಯೋ ವೈರಲ್!