
ಬಿಗ್ ಬಾಸ್ (Bigg Boss Kannada) ಮನೆಗೆ ಬಂದಿರುವ ಹಳ್ಳಿ ಹುಡುಗಿ ಕುಮಾರಿ (Halli Hudugi Kumari) ಅವರನ್ನು ನೆಟ್ಟಿಗರು ನೆಗೆಟಿವ್ ರೀತಿಯಲ್ಲಿ ಭಾರೀ ಟ್ರೋಲ್ ಮಾಡುತ್ತಿದ್ದಾರೆ. ಕುಮಾರಿ ಅವರು ಅಗ್ನಿ ಪರೀಕ್ಷೆ ಆಡಿಷನ್‌ಗೆ ಬಂದಾಗ, ಅಗ್ನಿ ಪರೀಕ್ಷೆ ಎಪಿಸೋಡ್‌ಗಳಲ್ಲಿ ಹಾಗೂ ಬಿಗ್ ಬಾಸ್ ಮನೆಗೆ ಬಂದಾಗಲೂ ಒಂದೇ ಡ್ರೆಸ್ ಹಾಕಿದ್ದಾಳೆ. ಈ ಮೂಲಕ ರಾಜ್ಯದ ಜನರ ಸಿಂಪತಿ ಹಾಗೂ ಸೆಂಟಿಮೆಂಟ್ ಗಿಟ್ಟಿಸಿಕೊಳ್ಳುತ್ತಿದ್ದಾಳೆ ಎಂದು ಭಾರೀ ನೆಗೆಟಿವ್ ಟ್ರೋಲ್ ಆಗುತ್ತಿದೆ. ಇದಕ್ಕೆ ಆಕೆಯ ಸ್ನೇಹಿತ ಜಯಪ್ರಕಾಶ್ ಗೌಡ ಅವರು ಆಕೆಗೆ 5 ಲಕ್ಷ ರೂ. ಹಣ ಬಂದಿಲ್ಲ, ಈಗಲೂ ಕಾಲೇಜು ಇಲ್ಲದ ವೇಳೆ ಕೆಲಸಕ್ಕೆ ಹೋಗುತ್ತಾಳೆ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.
ನಾನು ಆಡಿಷನ್‌ಗೆ ಹೋದಾಗ ಇದೇ ಕೇಸರಿ ಶಾಲು, ಇದೇ ಕೇಸರಿ ಪಂಚೆಯ ಧರಿಸಿ ಕರಾವಳಿ ಡ್ರೆಸ್ ಕೋಡ್ ಹಾಕಿಕೊಂಡು ಹೋಗಿದ್ದೆ. ಆಗ ಅಲ್ಲಿನ ಸಿಬ್ಬಂದಿ ಇದನ್ನು ತೆಗೆಸಿ, ಪ್ಯಾಂಟ್-ಶರ್ಟ್ ಹಾಕಿಕೊಂಡು ಆಡಿಷನ್ ಕೊಡುವುದಕ್ಕೆ ಹೇಳಿದ್ದರು. ₹100 ಕೋಟಿ ಬಜೆಟ್ ಹಾಕಿ ಒಂದು ರಿಯಾಲಿಟಿ ಶೋ ನಡೆಸುತ್ತಾರೆಂದರೆ ಅದರದ್ದೇ ಆದ ರೂಲ್ಸ್ ಮತ್ತು ರೆಗ್ಯೂಲೇಷನ್ಸ್‌ಗಳು ಇರುತ್ತವೆ. ಅದೇ ರೀತಿ ಕಂಟೆಸ್ಟೆಂಟ್‌ಗಳು ಕೂಡ ನಡೆದುಕೊಳ್ಳಬೇಕು.
ಜನ ಸಾಮಾನ್ಯರಿಗೆ ಬಿಗ್ ಬಾಸ್ ಆಡಿಷನ್‌ಗೆ ಕುಮಾರಿ ಕಳಿಸಿದ್ದ ವಿಡಿಯೋ ಸೆಲೆಕ್ಟ್ ಆಗಿತ್ತು. ಇದಾದ ನಂತರ ಕುಮಾರಿ ಅವರು ಗ್ರೂಪ್ ಡಿಸ್ಕಶನ್‌ಗೆ ಹೋಗಿದ್ದಾಗ ಇದೇ ರೀತಿಯ ಡ್ರೆಸ್ ಹಾಕಿಕೊಂಡು ಹೋಗಿದ್ದರು. ನಂತರ, ಅಗ್ನಿ ಪರೀಕ್ಷೆ ಹಾಗೂ ಬಿಗ್ ಬಾಸ್ ಸಿಬ್ಬಂದಿ ಇದೇ ರೀತಿಯ ಡ್ರೆಸ್ ಅನ್ನು ಹಾಕಿಕೊಂಡು ಬರುವುದಕ್ಕೆ ಹೇಳಿದ್ದರಿಂದಲೇ ಕುಮಾರಿ ಅವರು ಆ ಬಟ್ಟೆಯನ್ನು ಹಾಕಿಕೊಂಡು ಬಂದಿದ್ದಾರೆ.
ಇನ್ನು ಕುಮಾರಿ ಅವರು ಬಿಗ್ ಬಾಸ್ ಅಗ್ನಿ ಪರೀಕ್ಷೆ ಕಾರ್ಯಕ್ರಮದ ವೇಳೆ ಅನಾರೋಗ್ಯದ ಕಾರಣ ಶೋನಲ್ಲಿ ಮುಂದುವರೆಯಲು ಆಗುವುದಿಲ್ಲ ಎಂಬ ಕಾರಣಕ್ಕೆ ಅರ್ಧಕ್ಕೆ ಹೊರಹೋಗಬೇಕಾಯಿತು. ಈ ವೇಳೆ ಅಪ್ಪನಿಲ್ಲದ ಕುಮಾರಿ ಅನಾರೋಗ್ಯ ಪೀಡಿತ ಅಮ್ಮನನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿತ್ತು. ಈ ವೇಳೆ ಬಿಗ್ ಬಾಸ್ ಕಾರ್ಯಕ್ರಮದ ಪ್ರಾಯೋಜಕ ಸಂಸ್ಥೆಯಾದ ಇಕೋ ಪ್ಲ್ಯಾನೆಟ್ ಎಲಿವೇಟರ್ ಸಂಸ್ಥೆಯ ಮಾಲೀಕರು ಕಹಳ್ಳಿ ಹುಡುಗಿ ಕುಮಾರಿ ಅವರಿಗೆ ಆ ವೇದಿಕೆಯಲ್ಲಿ 5 ಲಕ್ಷ ರೂ. ನಗದು ಸಹಾಯಧನ ಕೊಡುವುದಾಗಿ ಘೋಷಣೆ ಮಾಡುತ್ತಾರೆ. ಜೊತೆಗೆ, ಕುಮಾರಿಯ ಓದು ಮುಗಿದ ನಂತರ ಕರ್ನಾಟಕ ಶಾಖೆ ಅಥವಾ ದುಬೈ ಶಾಖೆಯಲ್ಲಿ ಕೆಲಸ ಕೊಡುತ್ತೇವೆ ಎಂದು ಭರವಸೆಯನ್ನೂ ನೀಡಿದ್ದರು. ಆದರೆ, ಈ 5 ಲಕ್ಷ ರೂ.ನಲ್ಲಿ ಒಂದೇ ಒಂದು ರೂ. ಆಕೆಯ ಖಾತೆಗೆ ಬಂದಿಲ್ಲ. ಆಕೆಯ ಬಟ್ಟೆಯ ಬಗ್ಗೆ ಮಾತನಾಡುವ ಯೋಗ್ಯತೆಯೂ ನಿಮಗಿಲ್ಲ.
ಕುಮಾರಿ ಅವರಿಗೆ ಇರುವ ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ಗೆ ಅನುಗುಣವಾಗಿ ಕೊಲ್ಯಾಬ್ರೇಷನ್ ಅಥವಾ ಪ್ರಮೋಷನ್ ವಿಡಿಯೋ ಮಾಡಿದರೂ ಹಣ ಬರುತ್ತದೆ. ಈವರೆಗೆ ಒಂದೇ ಒಂದು ಪ್ರಮೋಷನ್ ವಿಡಿಯೋ ಕೂಡ ಮಾಡಿಲ್ಲ. ಅವರ ಬಳಿ ಹಣವೇ ಇಲ್ಲದ ಕಾರಣ ಈಗಲೂ ಕಾಲೇಜು ಇಲ್ಲದ ವೀಕೆಂಡ್ ಸಮಯದಲ್ಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಅಗ್ನಿ ಪರೀಕ್ಷೆ ವೇದಿಕೆಗೆ ಬಂದಾಕ್ಷಣ ಆಕೆಯ ಜೀವನವೇನೂ ಬದಲಾವಣೆ ಆಗಿಲ್ಲ ಎಂದು ಕುಮಾರಿ ಅವರ ಸ್ನೇಹಿತ ಹೇಳಿದ್ದಾರೆ. ಇನ್ನು ಕುಮಾರಿ ಅವರ ಪರವಾಗಿ ಪಾಸಿಟಿವ್ ವಿಡಿಯೋ ಮಾಡುವುದಕ್ಕೆ ಅಥವಾ ಮಾಹಿತಿ ಕೊಡುವುದಕ್ಕೆ ಯಾವುದೇ ಪಿಆರ್ ಟೀಮ್ ಇಲ್ಲ. ಹೀಗಾಗಿ ನಾನು ಕುಮಾರಿ ಪರವಾಗಿ ಮಾತನಾಡುತ್ತಿದ್ದೇನೆ ಎಂದು ಕರಾವಳಿ ಮೂಲದ ಜಯಪ್ರಕಾಶ್ ಗೌಡ ಅವರು ಸ್ಪಷ್ಟನೆಯನ್ನು ನೀಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.