ಬಿಗ್ ಬಾಸ್ ಮನೇಲಿ ಪಾತ್ರೆ ತೊಳೆದು ಸ್ಟ್ರಾಂಗ್ ಆದೆ ಎಂದ ಅನುಷಾ ರೈ ಟ್ರೋಲ್!

By Suvarna News  |  First Published Oct 2, 2024, 2:29 PM IST

ಬಿಗ್​ಬಾಸ್​ 11 ರ ಸ್ಪರ್ಧಿ ಅನುಷಾ ರೈ, ಪಾತ್ರೆ ತೊಳೆದಿದ್ದಕ್ಕೆ ಕಣ್ಣೀರಿಟ್ಟು 'ಬಿಗ್​ಬಾಸ್​ ನೀವು ನನ್ನ ಸ್ಟ್ರಾಂಗ್​ ಮಾಡ್ತಿದ್ದೀರೆಂದು' ಹೇಳಿಕೊಂಡಿದ್ದಾರೆ. ಈ ಸನ್ನಿವೇಶಕ್ಕೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.


- ವಿನುತಾ ಪರಮೇಶ್, ಏಷ್ಯಾನೆಟ್ ಸುವರ್ಣ ನ್ಯೂಸ್

ಪ್ರತಿ ಭಾರಿ ಬಿಗ್​ಬಾಸ್​ ಶುರುವಾದಾಗ್ಲೂ ಆ ಸೀಸನ್​ನಲ್ಲಿ ಚಿತ್ರ ವಿಚಿತ್ರ ಅನ್ನೋ ವ್ಯಕ್ತಿತ್ವಗಳಿಗೇನೂ ಕೊರತೆ ಇರೋಲ್ಲ. ಈ ಬಾರಿಯ ಬಿಗ್​ಬಾಸ್​​ 11 ರಲ್ಲೂ ಅಷ್ಟೇ, ಸಾಫ್ಟ್​ ಆಗಿ ಮಾತಾಡ್ತೀನಿ ಅಂದ ಮಾತ್ರಕ್ಕೆ ನಾನು ವೀಕ್​ ಅಲ್ಲ, ಲೈಫಲ್ಲಿ ತುಂಬಾ ಕಷ್ಟ ಪಟ್ಟಿದ್ದೀನಿ, ಸ್ಟ್ರಾಂಗ್​ ಎಂದಿದ್ದ ಈಕೆ ಈಗ ಪಾತ್ರ ತೊಳೆದಿದ್ದಕ್ಕೆ ಬಿಗ್​ಬಾಸ್​ಗೆ ನೀವು ನನ್ನ ಸ್ಟ್ರಾಂಗ್​ ಮಾಡ್ತಿದ್ದೀರೆಂದು ಕಣ್ಣೀರಿಟ್ಟಿದ್ದಾರೆ.

Tap to resize

Latest Videos

undefined

ಅಂದ್ಹಾಗೆ ನಾವ್​ ಹೇಳ್ತಿರೋದು ಬೇರೆ ಯಾರ್​ ಬಗ್ಗೆಯೂ ಅಲ್ಲ. ನಿನ್ನೆ ಎಪಿಸೋಡಿ​ನಲ್ಲಿ ಕಣ್ಣೀರಿಟ್ಟು, ತಿನ್ನೋ ಅನ್ನವನ್ನು ಡಸ್ಟ್​​ಬಿನ್​ಗೆ ಎಸೆದು ಸೀನ್​ ಕ್ರಿಯೇಟ್​ ಮಾಡಿದ್ದ ದರ್ಶನ್​​ ಫ್ಯಾನ್, ಅನುಷಾ ರೈ. ಬಿಗ್​ಬಾಸ್​ ನರಕಕ್ಕೆ ಹೋದ ಮೊದಲ ಸ್ಪರ್ಧಿ ಅನುಷಾ. ಅಲ್ಲಿರೋದಕ್ಕೆ ಒದ್ದಾಡುತ್ತಿದ್ದಾರೆ. ಕಳೆದ ಎಪಿಸೋಡಿ​ನಲ್ಲಿ ನೋಡಿದ ಹಾಗೆ, ಕಾಫಿ ಇಲ್ಲ, ಸರಿಯಾದ ಊಟವೂ ಇಲ್ಲವೆಂದು ಗಳಗಳ ಕಣ್ಣೀರಿಟ್ಟಿದ್ರು, ಕೊಟ್ಟ ಮೊಸರನ್ನ, ಗಂಜಿ ತಿನ್ನೋಕ್​ ಆಗ್ದೇ ಒದ್ದಾಡಿದ್ರು, ಕೊನೆಗೆ ಮನೆಯವರೆಲ್ಲ ಸೇರಿ ಅನುಷಾಗಾಗಿ ಒಂದು ಡಿಶ್​ ಮಾಡಿ ಕೊಟ್ಟರು. ಅದನ್ನೂ ಅನುಷಾ ಡಸ್ಟ್​​​ಬೀನ್​​ಗೆ ಬಿಸಾಡಿದ್ರು.

Bigg Boss Kannada - 11 ಧನರಾಜ್ ವಿನಯ್ ಆಗಿ ಬದಲಾಗ್ತಾ ಇದ್ದಾರ? ಹಾಗಿದ್ರೆ ಈ ಬಾರಿ ಎಲಿಮಿನೇಶನ್ ಆಗ್ತಿರೋರು ಇವ್ರೇನಾ?

ಊಟದ ಮೇಲೆ ಅನುಷಾ ತೋರಿಸಿದ ದುರ್ವತನೆ ವಿರುದ್ಧ ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ನೆಗಿಟಿವ್​ ಕಾಮೆಂಟ್ಸ್​ ಬರ್ತಿದೆ. ಕಿಚ್ಚನ ಕ್ಲಾಸ್​ ಪಕ್ಕಾ ಅಂತಿದ್ದಾರೆ ವೀಕ್ಷಕರು. ಈಗಾಗ್ಲೇ ಗೊತ್ತಿರೋ ಹಾಗೆ ಮನೆಯ ಕೆಲಸವನ್ನು ನರಕವಾಸಿಗಳು ಮಾಡ್ಬೇಕು ಎನ್ನುವ ರೂಲ್ಸ್​ ಇದೆ.. ಈ ರೂಲಿನಂತೆ ನಿನ್ನೆ ನರಕದಲ್ಲಿದ ಅನುಷಾ, ಸ್ವರ್ಗವಾಸಿಗಳು ಬಳಸಿದ ಪಾತ್ರೆಯನ್ನ ತೊಳೆದಿದ್ರು, ಈ ವೇಳೆ ಅನುಷಾ ಇದೇ ಮೊದಲ ಬಾರಿಗೆ ಜೀವನದಲ್ಲಿ ಪಾತ್ರೆ ತೊಳಿತಿರೋದು ಅಂತ ಹೇಳಿದ್ದಾರೆ. ಜೊತೆಗಿದ್ದ ಸ್ವರ್ಗವಾಸಿಗಳು, ಅನುಷಾಗೆ ಹೇಗೆ ಪಾತ್ರೆ ತೊಳೆಯಬೇಕು ಅಂತ ಗೈಡ್​ ಮಾಡಿದ್ದಾರೆ.

ಕೊನೆಗೂ ಪಾತ್ರೆ ತೊಳೆದು ಕೆಲಸ ಕಂಪ್ಲೀಟ್​ ಮಾಡಿದ್ದ ಅನುಷಾ, ಕಣ್ಣೀರಿಡುತ್ತ, ಬಿಗ್​ಬಾಸ್​ YOU ARE MAKING ME STRONG, LOVE YOU BIGG BOSS ಎಂದಿದ್ದಾರೆ. ಈ ಸೀನ್​ ನೋಡಿದ ನೆಟ್ಟಿಗರು, ಪಾತ್ರೆ ತೊಳೆಯೋದ್ರಲ್ಲಿ ಏನಮ್ಮಾ ಸ್ಟ್ರಾಂಗ್​ ಇದೆ ಅಂತ ಕಾಲೆಳಿಯುತ್ತಿದ್ದಾರೆ.

ದರ್ಶನ್​ ಆರೋಪಿ ಮಾತ್ರ!
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್​ ಬಗ್ಗೆ ಇದೇ ಅನುಷಾ, ದರ್ಶನ್​ ಆರೋಪಿ ಮಾತ್ರ, ಅವರೇ ತಪ್ಪಿತಸ್ಥರು ಎಂದು ಕೋರ್ಟ್‌ ಹೇಳಿಲ್ಲ ಎಂದು ತಮ್ಮ ನೆಚ್ಚಿನ ನಟನನ್ನು ಬೆಂಬಲಿಸಿದ್ದರು.  'ನಾನು ಬಾಲ್ಯದಿಂದಲೂ ದರ್ಶನ್‌ ಅವರ ಅಭಿಮಾನಿ. ಸಾಕಷ್ಟು ಬಾರಿ ಅವರನ್ನು ಭೇಟಿಯಾಗಿದ್ದೇನೆ. ಅವರದ್ದು ತುಂಬಾ ಸಿಹಿಯಾದ ವ್ಯಕ್ತಿತ್ವ ಹಾಗೂ ಕರುಣಾಮಯಿ. ನಾನು ನನ್ನ ಜನ್ಮದಿನದಂದು ಮಾತ್ರವೇ ಅಭಿಮಾನಿಗಳಿಗೆ ಊಟ ಹಾಕುತ್ತೇನೆ. ಆದರೆ, ನನ್ನ ಅಭಿಮಾನಿಗಳು ನನಗೆ ವರ್ಷದ 365 ದಿನವೂ ಊಟ ಹಾಕುತ್ತಾರೆ ಎಂದಿದ್ದರು. ಅಭಿಮಾನಿಗಳಿಂದಲೇ ನಾನಿಂದು ಉತ್ತಮ ಜೀವನ ನಡೆಸುತ್ತಿದ್ದೇನೆ ಎಂದಿದ್ದರು. ಪ್ರತಿ ಬಾರಿ ಅವರ ಹಚ್ಚೆ ಹಾಕಿಕೊಂಡು ಬರುವ ಅಭಿಮಾನಿಗೆ, ತಮ್ಮ ಹಚ್ಚೆಯನ್ನು ಹಾಕಬೇಡಿ ಎನ್ನುತ್ತಿದ್ದರು, ತಂದೆ-ತಾಯಿಗಳ ಟ್ಯಾಟು ಹಾಕಿಸಿಕೊಳ್ಳಿ ಎನ್ನುತ್ತಿದ್ದರು. ದರ್ಶನ್‌ ತಮ್ಮ ಎದೆಯ ಮೇಲೆ ನನ್ನ ಸೆಲೆಬ್ರಿಟೀಸ್‌ ಎನ್ನುವ ಟ್ಯಾಟು ಹಾಕಿಸಿಕೊಂಡಿದ್ದಾರೆ. ಅದಲ್ಲದೆ, ರಸ್ತೆಯಲ್ಲಿ ಕಾರು ಹೋಗುವಾಗ ಯಾರೂ ಕೂಡ ಫಾಲೋ ಮಾಡಬೇಡಿ ಎನ್ನುತ್ತಾರೆ. ವೇಗವಾಗಿ ಹೋಗುವ ನನ್ನ ಕಾರ್ನ್ನು ಫಾಲೋ ಮಾಡುವ ಭರದಲ್ಲಿ ಆ್ಯಕ್ಸಿಡೆಂಟ್‌ ಆಗಬಹುದು ಎನ್ನುವ ಎಚ್ಚರಿಕೆಯನ್ನೂ ನೀಡುತ್ತಾರೆ. ಇಷ್ಟು ಕೇರಿಂಗ್‌ ಆಗಿರುವ ವ್ಯಕ್ತಿಯೊಬ್ಬರು ಕೊಲೆ ಮಾಡಿದ್ದಾರೆಂದರೆ ನಂಬಲೂ ಆಗುತ್ತಿಲ್ಲ. ಈಗಲೂ ಅವರನ್ನು ಕ್ರಿಮಿನಲ್‌ ಎಂದು ಹೇಳಿಲ್ಲ. ಕಾನೂನು ಏನು ಹೇಳುತ್ತೋ ಅಲ್ಲಿಯವರೆಗೂ ಕಾಯೋಣ ಎಂದಿದ್ದರು.

BBK11: ಬೆಂಕಿಯಲ್ಲಿ ಬೆಂದ ಸ್ಪರ್ಧಿಗಳು, ವೀಕೆಂಡ್‌ನಲ್ಲಿ ಯಾರಿಗೆ ಸಿಗುತ್ತೆ ಬಿಗ್‌ ಬಾಸ್‌ ಗೇಟ್‌ಪಾಸ್‌!

ಸೆ.30ರಿಂದ ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಆರಂಭವಾಗಿದ್ದು, ಈ ಸಲ ಒಟ್ಟು 17 ಸ್ಪರ್ಧಿಗಳಿದ್ದಾರೆ. ಜೀ ಕನ್ನಡದ ಸತ್ಯ ಖ್ಯಾತಿಯ ಗೌತಮಿ ಜಾದವ್, ಹೈ ಪ್ರೊಫೈಲ್ ಲಾಯರ್ ಜಗದೀಶ್, ಉಗ್ರಂ ಮಂಜು, ಹಿಂದೂ ಫೈರ್ ಬ್ರ್ಯಾಂಡ್ ಖ್ಯಾತಿಯ ಚೈತ್ರಾ ಕುಂದಾಪುರ ,  ಸ್ಯಾಂಡಲ್‌ವುಡ್ ಹಾಗೂ ಕಿರುತೆರೆಯಲ್ಲಿ ನಟಿಸುವ ಯಮುನಾ ಶ್ರೀನಿಧಿ, ಶನಿ ಸೀರಿಯಲ್‌ನಲ್ಲಿ ಸೂರ್ಯ ದೇವನ ಪಾತ್ರ ಮಾಡಿ, ನಂತರ ವೇತನದ ವಿಷಯವಾಗಿ ಪಾತ್ರ ಬಿಟ್ಟ ರಂಜಿತ್, ಗೀತಾ ಫೇಮ್ ಭವ್ಯಾ ಗೌಡ, ಪದ್ಮಾವತಿ ಸೀರಿಯಲ್ ಖ್ಯಾತಿಯ ತ್ರಿವಿಕ್ರಮ್, ತುಕಾಲಿ ಸಂತೋಷ್ ಪತ್ನಿ ಮಾನಸ, ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ರಾಜಿಯಾಗಿದ್ದ ಹಂಸಾ ನಾರಾಯಣ ಸ್ವಾಮಿ, ಕುಲವಧು ಸೀರಿಯಲ್ ಮೂಲಕ ಮನೆ ಮಾತಾದ ಶಿಶಿರ್ ಶಾಸ್ತ್ರಿ, ನೆಗಟಿವ್ ಶೇಡಿನಲ್ಲಿ ಕಾಣಿಸಿಕೊಳ್ಳುವ ನಟ ಕೀರ್ತಿರಾಜ್ ಪುತ್ರ ಧರ್ಮ ಕೀರ್ತಿರಾಜ್, ಸೀರಿಯಲ್ ನಟಿ ಐಶ್ವರ್ಯಾ ಸಿಂಧೋಗಿ, ಮೈ ತುಂಬಾ ಕೋಟಿ ಬೆಲೆ ಬಾಳೋ ಚಿನ್ನ ಧರಿಸುವ ಗೋಲ್ಡ್ ಸುರೇಶ್, ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಪಾರು ಧಾರಾವಾಯಿಯಿಂದ ಖ್ಯಾತರಾದ ಮೋಕ್ಷಿತಾ ಪೈ, ಧನರಾಜ್ ಆಚಾರ್, ಅನುಷಾ ರೈ, ಪಾಲ್ಗೊಂಡಿದ್ದಾರೆ. 

click me!