Bigg Boss Kannada - 11 ಧನರಾಜ್ ವಿನಯ್ ಆಗಿ ಬದಲಾಗ್ತಾ ಇದ್ದಾರ? ಹಾಗಿದ್ರೆ ಈ ಬಾರಿ ಎಲಿಮಿನೇಶನ್ ಆಗ್ತಿರೋರು ಇವ್ರೇನಾ?

Published : Oct 02, 2024, 12:35 PM ISTUpdated : Oct 02, 2024, 01:13 PM IST
Bigg Boss Kannada - 11 ಧನರಾಜ್ ವಿನಯ್ ಆಗಿ ಬದಲಾಗ್ತಾ ಇದ್ದಾರ? ಹಾಗಿದ್ರೆ ಈ ಬಾರಿ ಎಲಿಮಿನೇಶನ್ ಆಗ್ತಿರೋರು ಇವ್ರೇನಾ?

ಸಾರಾಂಶ

 ಧನರಾಜ್‌ಗೆ ಬಿಗ್‌ಬಾಸ್ ವಾರ್ನ್ ಮಾಡಿದ್ದೇ ಮಾಡಿದ್ದು ಸೈಲೆಂಟಾಗಿದ್ದ ವ್ಯಕ್ತಿ ವೈಲೆಂಟಾಗಿ ಬದಲಾಗ್ತಿದ್ದಾರೆ. ಕಳೆದ ಸಲದ ಬಿಗ್‌ಬಾಸ್ ಕಂಟೆಸ್ಟೆಂಟ್ ವಿನಯ್ ಥರ ಬದಲಾಗ್ತಿದ್ದಾರೆ ಅಂತಿದ್ದಾರೆ ನೆಟ್ಟಿಗರು.

ಬಿಗ್‌ಬಾಸ್‌ ಈ ಬಾರಿಯ ಶೋನಲ್ಲಿ ಥರಾವರಿ ಫೇಸ್‌ಗಳು ಕಾಣಸಿಕ್ಕಿ ಸಖತ್ ಎಂಟರ್‌ಟೇನ್‌ಮೆಂಟ್ ನೀಡುತ್ತಿದ್ದಾರೆ. 17 ಸ್ಪರ್ಧಿಗಳ ದೊಡ್ಡ ಆಟ ಇದೀಗ ಶುರುವಾಗಿದೆ. ಸೋಲು-ಗೆಲುವಿನ ಕಾದಾಟ, ಟಾಸ್ಕ್ ಕಿತ್ತಾಟಗಳು, ಸ್ನೇಹ-ದ್ವೇಷದ ಮನಸ್ತಾಪಗಳು ಬಿಗ್ ಬಾಸ್ ಮನೆಯಲ್ಲಿ ಕಾಮನ್ ಆಗಿದೆ.17 ಮಂದಿ ಸ್ಪರ್ಧಿಗಳಲ್ಲಿ 9 ಜನರು ಸ್ವರ್ಗದಲ್ಲಿ ವಾಸವಾಗಿದ್ರೆ 7 ಮಂದಿ ನರಕದಲ್ಲಿದ್ದಾರೆ. ಇದೀಗ ಒಬ್ಬರಿಗೊಬ್ಬರು ಪರಿಚಯ ಮಾಡಿಕೊಂಡು ಗೆಳೆತನ ಬೆಳೆಸುತ್ತಿದ್ದಾರೆ. ಈ ನಡುವೆ ಬಿಗ್ ಬಾಸ್ ಮನೆಯಲ್ಲಿ ಸ್ನೇಹ-ದ್ವೇಷದ ಕಿಚ್ಚು ಸದ್ಯದಲ್ಲೇ ಜೋರಾಗುವ ಎಲ್ಲ ಸೂಚನೆ ಸಿಗುತ್ತಿದೆ. ಇದಕ್ಕೆ ಕಾರಣ ಎಲಿಮಿನೇಶನ್ ಅಗ್ನಿಪರೀಕ್ಷೆ. ಈ ಬಾರಿ ದೊಡ್ಡಮನೆಯಿಂದ ಯಾರು ಆಚೆ ಹೋಗ್ತಾರೆ ಅನ್ನೋದು ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ ಆಗಿದೆ.

ಈ ನಡುವೆ ಧನರಾಜ್ ಮತ್ತು ಲಾಯರ್ ಜಗದೀಶ್ ನಡುವೆ ಆಟ ಹಲವರಿಗೆ ಮಜಾ ಕೊಡ್ತಿದೆ. ಲಾಯರ್ ಜಗದೀಶ್ ಮೋಸದ ಆಟ ಹಲವರಿಗೆ ಸಿಟ್ಟು ತರಿಸಿದರೆ, ಇದಕ್ಕೆ ಧನರಾಜ್ ರಿಯಾಕ್ಷನ್‌ ಸಖತ್ ಫನ್ನಿ ಅನಿಸಿದೆ. ಈ ನಡೆಯನ್ನು ಸೋಷಲ್ ಮೀಡಿಯಾದಲ್ಲಿ ಹಲವರು ಹೊಗಳಿದ್ದಾರೆ. ಇದನ್ನು ನೋಡಿದರೆ ಧನರಾಜ್‌ಗೆ ಸಪೋರ್ಟ್ ಬಟನ್ ಹೆಚ್ಚಾಗ್ತ ಇರೋದು ಸುಳ್ಳಲ್ಲ. ಇದು ಓಟಿಂಗ್ ಆಗಿ ಕನ್ವರ್ಟ್ ಆಗೋದ್ರಲ್ಲೂ ಯಾವುದೇ ಅನುಮಾನ ಇಲ್ಲ.

ಬಿಗ್​ಬಾಸ್​ಗೆ ಸೆಡ್ಡು ಹೊಡೆಯಲು ಅತಿದೊಡ್ಡ ರಿಯಾಲಿಟಿ ಷೋ ಸಜ್ಜು? ಫ್ಯಾನ್ಸ್​ ತಲೆಗೆ ಹುಳುಬಿಟ್ಟ ಪ್ರೊಮೋ

ಇನ್ನು ಧನರಾಜ್​ ಬಿಗ್ ಬಾಸ್​ ಮನೆಗೆ ಬರ್ತಿದ್ದಂತೆ ಸೈಲೆಂಟ್ ಆಗಿಬಿಟ್ಟರು. ಇನ್ನೊಂದು ಕಡೆ ದೊಡ್ಮನೆಗೆ ಬಂದ ಮೊದಲ ದಿನವೇ ಧನರಾಜ್ ಬಿಗ್ ಬಾಸ್​ಗೆ ಟಾಂಗ್ ಕೊಟ್ಟಿದ್ದಾರೆ. ಕನ್ಸೆಷನ್ ರೂಮ್ ನಲ್ಲಿ ಬಿಗ್ ಬಾಸ್ ನನಗೆ ನಿಮ್ಮ ಧ್ವನಿ ಸರಿಯಾಗಿ ಕೇಳ್ತಿಲ್ಲ ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ಬಿಗ್ ಬಾಸ್, ಬಿಗ್ ಬಾಸ್ ಗೆ ಸರಿಯಾಗಿ ಮೈಕ್ ಹಾಕಿಕೊಳ್ಳಿ ಎಂದೆ ಮೊದಲಿಗರು ನೀವೇ ಎಂದಿದ್ದಾರೆ. ಬಿಗ್ ಬಾಸ್ ಮಾತಿಗೆ ಧನರಾಜ್ ಶಾಕ್ ಆಗಿದ್ದಾರೆ. ಆ ಟೈಮಲ್ಲೇ ಧನರಾಜ್ ಅವರಿಗೆ ಬಿಗ್ ಬಾಸ್ ಸ್ವೀಟ್ ಶಿಕ್ಷೆ ನೀಡಿದ್ದಾರೆ. ಸುದೀಪ್ ವೇದಿಕೆ ಮೇಲೆ ನೀವು ಬಿಗ್ ಬಾಸ್ ಜಿಂಕೆ ಎಂದಿದ್ರು. ಇದನ್ನು ನೆನಪು ಮಾಡಿದ ಬಿಗ್ ಬಾಸ್, ನನ್ನ ಪ್ರಶ್ನೆಗಳಿಗೆ ಜಿಂಕೆಯಂತೆ ಉತ್ತರಿಸಿದ ಎಂದಿದ್ದಾರೆ. ಬಳಿಕ ಜಿಂಕೆಯಂತೆ ಒಳಗೆ ಓಡಿಕೊಂಡು ಹೋಗಿ ಈ ಪತ್ರವನ್ನು ಎಲ್ಲರ ಮುಂದೆ ಓದುವಂತೆ ಬಿಗ್ ಬಾಸ್ ಧನರಾಜ್​ಗೆ ಸೂಚಿಸಿದ್ದಾರೆ.

ಈ ನಡುವೆ ಬಿಗ್‌ಬಾಸ್ ಮನೆಯಲ್ಲಿ ಕಂಟೆಸ್ಟೆಂಟ್ ಎಲ್ಲ ಧನರಾಜ್ ಹೊಸ ರೂಪಾಂತರ ನೋಡಿ ಥ್ರಿಲ್ ಆಗಿದ್ದಾರೆ. ಈ ಕಡೆ ಸೋಷಿಯಲ್ ಮೀಡಿಯಾದಲ್ಲೂ ಅವರ ಬಗ್ಗೆ ಸಖತ್ ಪಾಸಿಟಿವ್ ವೈಬ್ ಕ್ರಿಯೇಟ್‌ ಆಗಿದೆ. ಅದಕ್ಕೆ ಸರಿಯಾಗಿ ಲಾಯರ್ ಜಗದೀಶ್ ದೊಡ್ಮನೆಯಲ್ಲೂ ಕ್ರಿಮಿನಲ್ ಆಟ ಆಡೋದಕ್ಕೆ ಹೋಗಿ ರೆಡ್‌ಹ್ಯಾಂಡಾಗಿ ಧನರಾಜ್ ಕೈಯಲ್ಲಿ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಲಾಯರ್ ಆಟವನ್ನು ಖಂಡಿಸಿದ ಧನರಾಜ್ ಅವರನ್ನು ಜಗದೀಶ್ ಹೆದರಿಸಲು ನೋಡಿದ್ದಾರೆ. ಆದರೆ ಧನರಾಜ್ ಅದನ್ನು ಕಾಮಿಡಿಯಾಗಿ ಕನ್ವರ್ಟ್ ಮಾಡಿ ಎಲ್ಲರನ್ನೂ ನಗಿಸಿದ್ದಾರೆ. ಧನರಾಜ್ ಈ ಚಮಕ್ ಮನೆಯಲ್ಲಿರುವವರಿಗೂ ಹೊರಗಿನವರಿಗೂ ಎಂಟರ್‌ಟೇನ್‌ಮೆಂಟ್ ನೀಡಿದೆ. ಇದನ್ನು ನೋಡಿ ಹಲವರು ಧನರಾಜ್ ವಿನಯ್ ಆಗಿ ಪರಿವರ್ತನೆ ಆಗ್ತಿದ್ದಾರೆ ಅಂತಿದ್ದಾರೆ.

ಬಿಗ್​ಬಾಸ್​ಗೆ ಸೆಡ್ಡು ಹೊಡೆಯಲು ಅತಿದೊಡ್ಡ ರಿಯಾಲಿಟಿ ಷೋ ಸಜ್ಜು? ಫ್ಯಾನ್ಸ್​ ತಲೆಗೆ ಹುಳುಬಿಟ್ಟ ಪ್ರೊಮೋ

ಈ ನಡುವೆ ಎಲಿಮಿನೇಶನ್‌ಗೆ ಕ್ಷಣಗಣನೆ ಶುರುವಾಗಿದೆ. ಸ್ವರ್ಗನಿವಾಸಿಗಳಾದ ಯಮುನಾ ಶ್ರೀನಿಧಿ, ಲಾಯರ್ ಜಗದೀಶ್, ಉಗ್ರಂ ಮಂಜು, ಗೌತಮಿ ಜಾಧವ್, ಭವ್ಯಾ ಗೌಡ ಮತ್ತು ಹಂಸ ನಾಮಿನೇಷನ್ ಬೆಂಕಿಯಲ್ಲಿದ್ದಾರೆ. ಇನ್ನೂ ನರಕನಿವಾಸಿಗಳಾದ ಚೈತ್ರಾ ಕುಂದಾಪುರ, ಶಿಶಿರ್ ಶಾಸ್ತ್ರಿ, ಮೋಕ್ಷಿತಾ ಪೈ ಹಾಗೂ ಮಾನಸಾ ನಾಮಿನೇಟ್ ಆಗಿದ್ದಾರೆ. ಈ 10 ಮಂದಿ ಪೈಕಿ ಯಾರು ಔಟ್ ಆಗಬಹುದು ಅನ್ನೋ ಪ್ರಶ್ನೆ ಎಲ್ಲರ ಮುಂದಿದೆ. ಸದ್ಯದ ಲೆಕ್ಕಾಚಾರ ಪ್ರಕಾರ ಮಾನಸ ಅಥವಾ ಶಿಶಿರ್ ಮನೆಯಿಂದ ಆಚೆ ಬರುವ ಸಾಧ್ಯತೆ ಇದೆ ಅಂತ ಒಂದಿಷ್ಟು ಜನ ಮಾತಾಡ್ತಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?