ನಾಮಿನೇಶನ್ ಬಲೆಗೆ ಬಿದ್ದವರು ಯಾರು? ಕಳಪೆ ಹೆಕ್ಕಿ ತೆಗೆದ ಪ್ರಶಾಂತ್!

Published : Jul 20, 2021, 12:06 AM IST
ನಾಮಿನೇಶನ್ ಬಲೆಗೆ ಬಿದ್ದವರು ಯಾರು? ಕಳಪೆ ಹೆಕ್ಕಿ ತೆಗೆದ ಪ್ರಶಾಂತ್!

ಸಾರಾಂಶ

* ಬಿಗ್ ಬಾಸ್ ಮನೆಯಲ್ಲಿ ನಾಮಿನೇಶನ್ ದಿನ * ಮಂಜು ಅವರನ್ನು ಸೇವ್ ಮಾಡಿದ ದಿವ್ಯಾ ಸುರೇಶ್ * ಶುಭಾ ಅತ್ಯಂತ ಕಳಪೆ ಸ್ಪರ್ಧಿ ಎಂದ ಪ್ರಶಾಂತ್ * ವೈಯಕ್ತಿಕ ಟಾಸ್ಕ್ ನೀಡಿ ಕೊನೆಯಲ್ಲಿ ಉಳಿಯುವವರು ನೇರ  ನಾಮಿನೇಟ್

ಬೆಂಗಳೂರು(ಜು. 19)  ಸೋಶಿಯಲ್ ಮೀಡಿಯಾದಲ್ಲಿ ಚಕ್ರವರ್ತಿ ವರ್ತನೆ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಬಿಗ್ ಬಾಸ್ ಮನೆ  99 ದಿನಗಳನ್ನು ಪೂರೈಸಿದೆ. ಸೋಮವಾರ ನಾಮಿನೇಶನ್ ದಿನ.  

ಒಂದು ರೀತಿಯಯಲ್ಲಿ ಓಪನ್ ನಾಮಿನೇಶನ್ ಮಾಡಲಾಯಿತು.  ಹೊರಗೆ ತೆರಳಿ ಪತ್ರದಲ್ಲಿ ಹೆಸರು ಸೂಚಿಸಲು ಕೇಳಿಕೊಳ್ಳಲಾಯಿತು. ನಾಮಿನೇಶನ್ ಪ್ರಕಾರ  ಮಂಜು, ಪ್ರಶಾಂತ್, ಶಮಂತ್, ದಿವ್ಯಾ ಯು, ಶುಭಾ ಪೂಂಜಾ  ಬಲೆಗೆ ಬಿದ್ದರು. ಇನ್ನೊಂದು ಕಡೆ  ಪ್ರಿಯಾಂಕಾರಿಂದ ನೇರವಾಗಿ ನಾಮಿನೇಟ್ ಮಾಡಿದ ಚಕ್ರವರ್ತಿ ಇದ್ದರು.

ನಾಮಿನೇಟ್ ಮಾಡಿದ ಪ್ರಿಯಾಂಕಾಗೆ ಮಿಡಲ್ ಫಿಂಗರ್ ತೋರಿಸಿದ ಚಕ್ರವರ್ತಿ

ಈ ನಡುವೆ ಬಿಗ್ ಬಾಸ್ ನಾಯಕಿ ದಿವ್ಯಾ ಸುರೇಶ್ ಗೆ  ನಾಮಿನೇಶನ್ ಆದವರಲ್ಲಿ ಒಬ್ಬರನ್ನು ಸೇವ್ ಮಾಡಬಹುದು ಎಂದು ಕೇಳಿಕೊಂಡಾಗ ಮಂಜು ಪಾವಗಡ ಅವರನ್ನು ಸೇವ್ ಮಾಡಿದರು. ಮಂಜು ಅವರು ಮೊದಲಿನಿಂದಲೂ ಚೆನ್ನಾಗಿ ಆಡಿಕೊಂಡು ಬಂದಿದ್ದು ಮನೆಯಲ್ಲಿ ಅವರು ಇರಬೇಕು ಎಂದರು.

ಈ ನಡುವೆ ಬಿಗ್ ಬಾಸ್ ವೈಯಕ್ತಿಕ ಟಾಸ್ಕ್ ನೀಡಿದ್ದು  ಕೈ ಕೆಸರಾದರೆ ಬಾಯಿ ಮೊಸರು ಎಂದು ಕೆಸರಿನಲ್ಲಿ ಮುತ್ತು ಹುಡುಕಲು ಹೇಳಿದ್ದಾರೆ. ನಾಮಿನೇಶನ್ ಮಾಡುವ ವೇಳೆ ಪ್ರಶಾಂತ್ ಶುಭಾ ಹೆಸರನ್ನು ಸೂಚಿಸಿದ್ದು ಬಿಗ್ ಬಾಸ್ 8 ರ ಅತ್ಯಂತ ಕಳಪೆ ಸ್ಪರ್ಧಿ ಎಂದು ಉಲ್ಲೇಖಿಸಿದರು.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!