
ಬಿಗ್‌ಬಾಸ್ ಸೀಸನ್ 8 ನ ಸೆಕೆಂಡ್ ಇನ್ನಿಂಗ್‌ಸ್ ಆರಂಭವಾಗಿ ಮುಂದಿನವಾರಕ್ಕೆ ಒಂದು ತಿಂಗಳಾಗುತ್ತೆ. ಕೋವಿಡ್ ಲಾಕ್‌ಡೌನ್ ಕಾರಣಕ್ಕೆ ಅರ್ಧಕ್ಕೆ ನಿಂತಿದ್ದ ಬಿಗ್‌ಬಾಸ್ ಸೀಸನ್ 8ಅನ್ನು ಸೆಕೆಂಡ್ ಇನ್ನಿಂಗ್‌ಸ್ನಲ್ಲಿ ಮರು ಆರಂಭಿಸುವಾಗಲೇ ಇನ್ನೊಂದು ತಿಂಗಳು ಈ ಶೋ ನಡೆಯಲಿದೆ ಎಂಬ ಮಾತು ಸುದೀಪ್ ಬಾಯಿಂದ ಬಂದಿತ್ತು. ಆ ಒಂದು ತಿಂಗಳಿಗೆ ಇನ್ನೊಂದೇ ವಾರ ಬಾಕಿ ಇದೆ. ಆದರೆ ಇನ್ನೂ ಆಟ ಮುಗಿಯುವ ಸೂಚನೆ ಸಿಕ್ಕಿಲ್ಲ. ಈ ವಾರ ಬಿಗ್ ಬಾಸ್ ಮನೆಯಿಂದ ಒಬ್ಬ ಸ್ಪರ್ಧಿ ಹೊರನಡೆದು 9 ಜನ ಉಳಿದುಕೊಂಡಿದ್ದಾರೆ.
ಹೀಗಾಗಿ ಬಿಗ್‌ಬಾಸ್ ಮುಕ್ತಾಯ ಮುಂದಕ್ಕೆ ಹೋಗೋದು ಖಚಿತ. ಅಂದರೆ ಮೊದಲು ಹೇಳಿದಂತೆ ಬಿಗ್‌ಬಾಸ್ ಈ ತಿಂಗಳೊಳಗೆ ಮುಗಿಯದೇ ಇನ್ನೂ ಕೆಲವು ವಾರಗಳ ಕಾಲ ನಡೆಯಬಹುದು. ಇಷ್ಟಾಗಿಯೂ ಮುಂದಿನವಾರ ಡಬಲ್ ಎಲಿಮಿಶೇನ್ ನಡೆಯಬಹುದು ಎಂಬ ಮಾತೂ ಕೇಳಿಬರುತ್ತಿದೆ.
ಲಾಕ್‌ಡೌನ್‌ಗೂ ಮೊದಲೇ ಈ ಬಿಗ್‌ಬಾಸ್ ಶೋ 72 ದಿನಗಳ ಕಾಲ ನಡೆದಿತ್ತು. ಸೆಕೆಂಡ್ ಇನ್ನಿಂಗ್‌ಸ್ 1 ತಿಂಗಳ ಕಾಲ ನಡೆಯಲಿದೆ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಕಲರ್ಸ್ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಅವರನ್ನು ಸಂಪರ್ಕಿಸಿದರೆ, ಈ ಬಗ್ಗೆ ಶೀಘ್ರದಲ್ಲೇ ವಿವರ ನೀಡಲಾಗುವುದು ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.