
ರಂಗಭೂಮಿ ಕಲಾವಿದೆ, ನಟಿ ಹಾಗೂ ಸೋಷಿಯಲ್ ಮೀಡಿಯಾ ಜನಪ್ರಿಯತೆ ಹೊಂದಿರುವ ವ್ಯಕ್ತಿ ಅಕ್ಷತಾ ಪಾಂಡವಪುರ ತಮ್ಮ ಮಗಳಿಗೆ ನಾಮಕರಣ ಮಾಡಿದ್ದಾರೆ. ಸರಳವಾದ ನಾಮಕರಣದಲ್ಲಿ ಸ್ಪೆಷಲ್ ವ್ಯಕ್ತಿಗಳು ಪಾಲ್ಗೊಂಡು ವಿಭಿನ್ನವಾದ ಹೆಸರನ್ನು ಆಯ್ಕೆ ಮಾಡಿದ್ದಾರೆ.
''ಗಿಯ'ಗಾ ಗಾ 'ಗಿಯ'ಗಾ ಗಾ 'ಗಿಯ'ಗಾ 'ಗಿಯಾ' ಗಾ (ಕೆಲವರು ಗೀಯ ಸರಿ ಅಂದ್ರು ಮತ್ತೆ ಕೆಲವರು ಗಿಯ ಅಂದ್ರು) ಗಿಣಿಮಗಳ ಹೆಸರು 'ಗಿಯ' (Gia). ಸಂಚಾರಿ ವಿಜಯ್ ಹುಟ್ಟುಹಬ್ಬದ ಸ್ಮರಣಾರ್ಥ 'ಉಸಿರು' ತಂಡದ ಸದಸ್ಯರೆಲ್ಲಾ ಸೇರಿ ಮಗಳಿಗೊಂದು ಹೆಸರಿಟ್ಟರು. ತಂಡದ ಸಾರಥಿ, ಸಾಹಿತಿ ಕವಿರಾಜ್ ಸರ್ ಸ್ಲೇಟ್ ಮೇಲೆ ಹೆಸರು ಬರೆಯುವ ಮೂಲಕ ಮಗಳ ಹೆಸರು 'ಗಿಯ' ಎಂದು ಘೋಷಣೆ ಮಾಡಿದರು. ಕೆಎಂ ಚೈತನ್ಯಾ, ಸುಂದರ್ ಸರ್, ವೀಣಾ ಮೇಡಂ, ನೀತು ಶೆಟ್ಟಿ ಕಿರಣ್, ಶಕ್ತಿ ವೇಲ್ ಸರ್ ಜೊತೆ ವಿನಯ್ ಪಾಂಡವಪುರ, ಜ್ಞಾನ್ ಮಧು ಕಲ್ಲಹಳ್ಳಿ, ಪವನ್ ದರೆಗುಂಡಿ ,ಮಾದೇಶ್ ಗೌಡ್ರಯ, ಕನ್ನಡ ಮನಸ್ಸುಗಳು ಸೇರಿ ಮಗಳ ಹೆಸರು ಕೂಗಿದ್ದು ಅವಿಸ್ಮರಣೀಯ. ಹೀಗೆ ಉಸಿರು ತಂಡದ ಸದಸ್ಯರ ಗೆಟ್ ಟುಗೆದರ್ ಸಂಜೆಯಾಗಿತ್ತು. ಧನ್ಯವಾದಗಳು,' ಎಂದು ಅಕ್ಷತಾ ಬರೆದುಕೊಂಡಿದ್ದಾರೆ.
ಜನವರಿ 15, 2021ರಂದು ಅಕ್ಷತಾ ಪಾಂಡವಪುರ ಹೆಣ್ಣು ಮಗುವಿಗೆ ತಮ್ಮ ಊರಿನ ಸರಕಾರಿ ಆಸ್ಪತ್ರೆಯಲ್ಲಿಯೇ ಜನ್ಮ ನೀಡಿದ್ದರು. ಫೆಬ್ರವರಿ 7ರಂದು ಅಕ್ಷತಾ ನಿವಾಸಕ್ಕೆ ಸಂಚಾರಿ ವಿಜಯ್ ಭೇಟಿ ನೀಡಿದ್ದರು. 'ಇವರು ಯಾರು ಬಲ್ಲಿರೇನು? ನಿನ್ನೆ ಮನೆಗೆ ಬಂದಿದ್ದು ನನ್ನ ನೆಚ್ಚಿನ ವ್ಯಕ್ತಿ,' ಎಂದು ಬರೆದುಕೊಂಡು ವಿಜಯ್ ಮಗು ಜೊತೆ ಆಟ ಆಡುತ್ತಿರುವ ಫೋಟೋ ಹಂಚಿ ಕೊಂಡರು. ವಿಜಯ್‌ಗೆ ಆಪ್ತರಾಗಿದ್ದ ಅಕ್ಷತಾ ಗೆಳೆಯನ ಹುಟ್ಟುಹಬ್ಬ ಎಂದೂ ಮೆಮೋರೇಬಲ್ ಆಗಿರಬೇಕೆಂದು ಮಗಳ ನಾಮಕರಣ ಮಾಡುವ ಮೂಲಕ ಆಚರಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.