
ಬಿಗ್ ಬಾಸ್ ಮನೆಯಲ್ಲಿ ಮತ್ತೆ ಎರಡು ಲವ್ ಸ್ಟೋರಿಗಳು ಹುಟ್ಟಿಕೊಂಡಿವೆ. ಚೈತ್ರಾ ಕೊಟ್ಟೂರು ಮನೆಗೆ ವಾಪಸ್ ಬಂದ ಮೇಲೆ ಪರಿಸ್ಥಿತಿಗಳೆ ಬದಲಾಗಿದೆ. ಎಲ್ಲವೂ ದೈವಿಚ್ಛೆ ಎಂಬ ಡೈಲಾಗ್ ನಿಂದಲೇ ಫೇಮಸ್ ಆಗಿರುವ ಚೈತ್ರಾ ಹೊಸ ಆಟ ಶುರುಮಾಡಿದ್ದಾರೆ.
ಬಿಗ್ ಬಾಸ್ ಸಿಕ್ರೇಟ್ ಟಾಸ್ಕ್ ನೀಡಿದ್ದ ಕಾರಣಕ್ಕೆ ದೀಪಿಕಾ ದಾಸ್ ಅಂತೂ ಇಂತೂ ಬಿಗ್ ಬಾಸ್ ಮನೆಯಲ್ಲಿ 45 ದಿನಗಳಿಂದ, ಏಳು ತಿಂಗಳಿನಿಂದ ಕಾಪಾಡಿಕೊಂಡು ಬಂದಿದ್ದ ಗಡ್ಡವನ್ನು ತೆಗೆದಿದ್ದಾರೆ. ಮನೆಗೆ ಏನೋ ಒಂದಿಷ್ಟು ಅಂಕಗಳು ಬಂದಿವೆ. ಆದರೆ ಹೊಸ ಹೊಸ ಪ್ರೇಮ ಕತೆಗಳು ಹುಟ್ಟಿಕೊಂಡಿವೆ.
ಬೇಕಾದರೆ ದೀಪಿಕಾ ಟೀ ಶರ್ಟ್ ಒಳಗೂ ಕೈಹಾಲು ಸಿದ್ಧ
ಶೈನ್ ಶೆಟ್ಟಿ ಎಲ್ಲ ಟಾಸ್ಕ್ ಗಳಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತ ಬಂದಿದ್ದಾರೆ. ಕಿಚ್ಚ ಸುದೀಪ್ ಸಹ ಎರಡು ವಾರದ ಚಪ್ಪಾಳೆಯನ್ನು ನೀಡಿದ್ದಾರೆ. ಈ ನಡುವೆ ಗಡ್ಡ ತೆಗೆದ ಕತೆ ದೀಪಿಕಾ ಮತ್ತು ಶೈನ್ ನಡುವೆ ಕುಚ್ ಕುಚ್ ಹೋತಾ ಹೈ ಎಂಬ ಸ್ಥಿತಿಯನ್ನು ತಂದಿದೆ.
ಮನೆಯಲ್ಲಿ ಲಕ್ಷುರಿ ಟಾಸ್ಕ್ ಗಾಗಿ ಎರಡು ತಂಡಗಳನ್ನು ಮಾಡಿದ್ದು ಶೈನ್ ಮತ್ತು ದೀಪಿಕಾ ಒಂದೇ ತಂಡದಲ್ಲಿ ಇದ್ದಾರೆ. ಒಗ್ಗಟ್ಟಿನ ಬಾಕ್ಸ್ ಟಾಸ್ಕ್ ನಲ್ಲಿ ಕೊನೆಯವರೆಗೂ ಪೆಟ್ಟಿಗೆಗಳನ್ನು ಹಿಡಿದೇ ನಿಂತಿದ್ದರು.
ಗುಪ್ತಾಂಗ ಎಲ್ಲ ಮುಟ್ಟಂಗಿಲ್ಲ: ನಾಗಿಣಿ ಗರಂ
ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯುವಾಗ ಒಂದೇ ಕಡೆ ನಿಂತಿದ್ದ ಶೈನ್, ದೀಪಿಕಾ ಮತ್ತು ವಾಸುಕಿ ವೈಭವ್ ಮಾತನಾಡುತ್ತಿದ್ದ ರೀತಿ ನೋಡಿ ಇತ್ತ ದೂರಲ್ಲಿ ಕುಳಿತಿದ್ದ ಚೈತ್ರಾ ಅದು ಹೇಗೆ ಜೊಲ್ಲು ಸುರಿಸುತ್ತಾರೆ ನೋಡಿ, ಏನೂ ವರ್ಕ್ ಔಟ್ ಆಗಲ್ಲ ಎಂದು ರಾಜು ತಾಳಿಕೋಟೆ ಬಳಿಒ ಹೇಳಿಕೊಂಡರು.
ಒಟ್ಟಿನಲ್ಲಿ ಗೊತ್ತೋ ಗೊತ್ತಿಲ್ಲದೇ ಶೈನ್ ಮತ್ತು ದೀಪಿಕಾ ನಡುವೆ ಒಂದು ಕೆಮೆಸ್ಟ್ರಿ ಶುರುವಾಗಿದೆ. ಇಷ್ಟು ದಿನ ಎಲ್ಲರನ್ನು ತನ್ನ ಕೋಟೆಯಿಂದ ಹೊರಗೆ ಇಟ್ಟುಕೊಂಡಿದ್ದ ದೀಪಿಕಾ ದಾಸ್ ಶೈನ್ ಅವರ ಜತೆ ಕ್ಲೋಸಾಗಿ ಮೂವ್ ಮಾಡುತ್ತಿರುವುದಕ್ಕೆ ಸೋಶಿಯಲ್ ಮೀಡಿಯಾ ಸಹ ಭಿನ್ನ ಪ್ರತಿಕ್ರಿಯೆ ವ್ಯಕ್ತಪಡಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.