ಬಿಗ್ ಬಾಸ್ ಕನ್ನಡ: 3 ಮಂದಿ ಸೇಫ್, ಮೊದಲ ವಾರ ಮನೆಯಿಂದ ಹೊರ ಹೋಗೋದ್ಯಾರು?

By Gowthami K  |  First Published Oct 5, 2024, 11:45 PM IST

ಬಿಗ್‌ಬಾಸ್ ಕನ್ನಡದ ಮೊದಲ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಮೂವರು ಸ್ಪರ್ಧಿಗಳು ಸೇಫ್ ಆಗಿದ್ದು, ಉಳಿದ ಸ್ಪರ್ಧಿಗಳ ಭವಿಷ್ಯ ಇನ್ನೂ ನಿರ್ಧಾರವಾಗಿಲ್ಲ.   ಮೊದಲ ವಾರ ಮನೆಯಿಂದ ಹೊರ ಹೋಗುವ ಸ್ಪರ್ಧಿ ಯಾರು ಎಂಬುದನ್ನು ಕಾದು ನೋಡಬೇಕಿದೆ.


ಬಿಗ್‌ಬಾಸ್ ಕನ್ನಡ ಸೀಸನ್‌ ಆರಂಭವಾಗಿ 1 ವಾರವಾಗಿದ್ದು,  ಶನಿವಾರ ನಡೆದ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ  ನಾಮಿನೇಟ್‌ ಆದ ಮೂವರು ಸ್ಪರ್ಧಿಗಳು ಸೇಫ್ ಆಗಿ ಎರಡನೇ ವಾರಕ್ಕೆ ಕಾಲಿಟ್ಟಿದ್ದಾರೆ. ಭವ್ಯಾ ಗೌಡ ಮೊದಲು ಸೇಫ್ ಆದ್ರೆ, ಎರಡನೇದಾಗಿ ಗೌತಮಿ ಜಾಧವ್ ಮತ್ತು ಮೂರನೇದಾಗಿ ನರಕದಲ್ಲಿರುವ ತುಕಾಲಿ ಮಾನಸ ಅವರು ಸೇಫ್ ಆದರು.

ಈಗ ಸ್ವರ್ಗದಲ್ಲಿರುವ ಯಮುನಾ ಶ್ರೀನಿಧಿ, ಲಾಯರ್ ಜಗದೀಶ್,   ಮತ್ತು ಹಂಸ ನಾಮಿನೇಷನ್‌ನಲ್ಲಿದ್ದರೆ, ನರಕದಲ್ಲಿರುವ ಚೈತ್ರಾ ಕುಂದಾಪುರ, ಶಿಶಿರ್‌ ಶಾಸ್ತ್ರಿ, ಮೋಕ್ಷಿತಾ ಪೈ  ನಾಮಿನೇಷನ್‌ ನಲ್ಲಿದ್ದಾರೆ. ನಾಳೆ ಸೂಪರ್‌ ಸಂಡೇ ವಿಥ್ ಸುದೀಪ್‌ ಕಾರ್ಯಕ್ರಮ ನಡೆಯಲಿದ್ದು, ಯಾರು ಮೊದಲ ವಾರ ಮನೆಯಿಂದ ಹೊರ ಹೋಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Tap to resize

Latest Videos

undefined

ಬಿಗ್‌ಬಾಸ್ ವೇದಿಕೆಯಲ್ಲಿ ಬರಿಗಾಲಲ್ಲಿ ಕಾಣಿಸಿದ ಕಿಚ್ಚ! ಕಾರಣವೂ ಇದೆ, ಅದೆಷ್ಟು ಸಲ ಮನಸ್ಸು ಗೆಲ್ತೀರಾ ಸುದೀಪ್

ಇನ್ನು ಇಂದಿನ ಕಾರ್ಯಕ್ರಮದಲ್ಲಿ ಮನೆಯವರ ಸರಿ ತಪ್ಪುಗಳನ್ನು ಸ್ಪರ್ಧಿಗಳಿಗೆ ಅರ್ಥ ಮಾಡಿಸಿದರು. ಜೊತೆಗೆ ಸಮಯದ ಮಹತ್ವವನ್ನು ಕೂಡ ತಿಳಿಸಿ ಹೇಳಿದರು. ಮನೆಯಲ್ಲಿ ಎಲ್ಲೂ ಕಾಣಿಸಿಕೊಳ್ಳದೆ ಸೈಲೆಂಟ್ ಆಗಿರುವ ಕಿಚ್ಚ ಸುದೀಪ್ ಅವರಿಗೆ ಆಕ್ಟೀವ್ ಆಗಿರಿ ಎಂದು ಕಿವಿ ಮಾತು ಹೇಳಿದರು.

ನಟರ ಸ್ವಂತ ಖ್ಯಾತಿ ಬಗ್ಗೆ ಅಪ್ಪು ನೆನೆದು ಆಸಕ್ತಿದಾಯಕ ಹೇಳಿಕೆ ನೀಡಿದ ತೆಲುಗಿನ ನಾಗಾರ್ಜುನ

ಇನ್ನು ಸ್ವರ್ಗ ನಿವಾಸಿಗಳು ಕುಳಿತು ಮೊದಲ ಪಂಚಾಯಿತಿಯಲ್ಲಿ ಸುದೀಪ್‌ ಮಾತುಗಳನ್ನು ಕೇಳಿಸಿಕೊಂಡರೆ. ನರಕ ನಿವಾಸಿಗಳು ನಿಂತುಕೊಂಡೇ ಕಿಚ್ಚನ ಪಂಚಾಯಿತಿಯಲ್ಲಿ ಭಾಗವಹಿಸಿದರು. ಕಿಚ್ಚ ಈ ಬಾರಿ ನವರಾತ್ರಿ ಹಿನ್ನೆಲೆ ಬರಿಗಾಲಿನಲ್ಲೇ ಗಂಟೆಗಟ್ಟಲೆ ನಿಂತು ಶೋ ನಡೆಸಿಕೊಟ್ಟು ಅಭಿಮಾನಿಗಳ ಹೃದಯ ಗೆದ್ದರು. ಮನೆಯಲ್ಲಿ ಯಾರು ಹೋಗಬಹುದೆಂದು ಸುದೀಪ್ ಕೇಳಿದ್ದಕ್ಕೆ   ಯಮುನಾ ಮತ್ತು ಜಗದೀಶ್ ಗೆ ಹೆಚ್ಚಿನ ಮಂದಿ ವೋಟು ಮಾಡಿದರು.

click me!