
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಮೊದಲ ಫಿನಾಲೆ ಮುಗಿದು, ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎಂಟ್ರಿ ಮೂಲಕ ಎರಡನೇ ಇನ್ನಿಂಗ್ಸ್ ಆರಂಭವಾಗಿದೆ. ಆದರೆ, ಈ ವಾರದ ಪಂಚಾಯ್ತಿಯಲ್ಲಿ ಕಿಚ್ಚ ಮಾತಾಡ್ಬೇಕಿರೋ ಗರ್ಮಾಗರಂ ವಿಷ್ಯಗಳು ಯಾವುದು? ಎಂದು ಕಲರ್ಸ್ ಕನ್ನಡ ವಾಹಿನಿಯಿಂದ ಕೇಳಲಾದ ಪ್ರಶ್ನೆಗಳಿಗೆ ಜನರೇ ಸಾಕಷ್ಟು ಪ್ರಶ್ನೆಗಳನ್ನು ಕೇಳಿ, ಕಾಕ್ರೋಚ್ ಸುಧಿ ಹಾಗೂ ಅಶ್ವಿನಿ ಗೌಡ ಅವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕಳೆದ ವಾರ ವೈಲ್ಡ್ ಕಾರ್ಡ್ ಸ್ಪರ್ಧಿ ರಘು ಮಾತಾಡುವ ಬರದಲ್ಲಿ ಸ್ವಲ್ಪ ಆಂಗ್ಲ ಭಾಷೆಯಲ್ಲಿ ಮಾತನಾಡಿದಕ್ಕೆ ಅಶ್ವಿನಿ ಮತ್ತು ಜಾನ್ವಿ ಇಬ್ಬರೂ ರಘು ಮೇಲೆ ಜೋರಾಗಿ ಮನಸೋ ಇಚ್ಛೆಯಂತೆ ಮಾತನಾಡಿದರು. ಈಗ ಕನ್ನಡ ಪರ ಹೋರಾಟಗಾರ್ತಿ ಅಶ್ವಿನಿ ಗೌಡ ಬೇರೆಯವರ ತಪ್ಪುಗಳನ್ನ ಮಾತ್ರ ಎತ್ತಿ ತೋರಿಸುತ್ತಾ ಎಲ್ಲರಗಿಂತಲೂ ಹೆಚ್ಚಾಗಿ ಆಂಗ್ಲ ಬಾಷೆಯನ್ನ ಉಪಯೋಗಿಸುತ್ತಾರೆ. ಬೇರೆಯವರ ಬಗ್ಗೆ ಮಾತನಾಡುವ ಮೊದಲು ನಾವು ಸರಿ ಇದ್ದೀರೆ ಎಂಬುದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂಬುದನ್ನು ಅಶ್ವಿನಿ ಹಾಗೂ ಜಾನ್ವಿ ರವರಿಗೆ ತಿಳಿಹೇಳಬೇಕು.
ಕೌಟುಂಬಿಕ ಕಾರ್ಯಕ್ರಮದ ಅರ್ಥವನ್ನ ಅರ್ಥ ಮಾಡಿಸಿ. S ಕ್ಯಾಟಗರಿ ಅಂದ್ರೇನು...? ಇವರ ಕನ್ನಡ ಪರ ಹೋರಾಟಗಳ ಅರ್ಥ ಏನು..? ಚಿಕ್ಕವಳು ಅಂದ್ರೆ ಮೂಲೆಗುಂಪು ಮಾಡಬಹುದೆ..? ನಾವೇ ಒಳ್ಳೆಯವರು ಅನ್ನುವವರ ಅಸಲಿ ಮುಖವಾಡಗಳು ಇನ್ನೂ ಕಳಚಬೇಕು. ಸೇಫ್ ಗೇಮ್ ಆಡುತ್ತಿರುವವರ ಬಗ್ಗೇನೂ ಪ್ರಸ್ತಾಪಿಸಿ ಎಂದು ಆಗ್ರಹಿಸಿದ್ದಾರೆ.
ಕಾಕ್ರೋಚ್ ಸುಧಿಗೆ ಸ್ವಲ್ಪ ಬಿಸಿ ಮುಟ್ಟಿಸಬೇಕು. ಸೆಡೆ ಅನ್ನೋ ಪದದ ಅರ್ಥ ತಿಳಿಸಬೇಕು ಅವನಿಗೆ. ಅವನ ವಾಯ್ಸ್ ಕೇಳಿದರೇನೇ ಸೆಡೆಯಿದ್ದಂಗೆ ಇದೆ. ಪಾಪ ಆ ಹುಡುಗಿಗೆ ಹಾಗೆ ಸೆಡೆ ಅಂತನಲ್ಲ. ಇನ್ನೂ ಅಶ್ವಿನಿ ವಿಚಾರಕ್ಕೆ ಬಂದರೆ ಅದೇನೋ ಪುಂಗಿದಾಳಲ್ಲ ಗಿಲ್ಲಿಗೆ, ಗಿಲ್ಲಿನ ಆಚೆ ಕಳಿಸಿನೇ ನಾನು ಆಚೆಗೆ ಹೋಗಬೇಕು ಅಂತ ಆ ಚಾಲೆಂಜ್‌ನ ಅವಳೇ ಸ್ವೀಕರಿಸಬೇಕು. ನಾವು ಇದ್ದೀವಿ, ನಾವು ಇದ್ದೀವಿ ನಮ್ಮ ಹಳ್ಳಿ ಹೈದ ಗಿಲ್ಲಿನ ಗೆಲ್ಲಿಸಿನೇ ಹೊರಗಡೆ ಕರ್ಕೊಂಡು ಬರೋದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.