
ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾದಾಗಿಂದಲೂ ವೀಕ್ಷಕರಿಗೆ ಸಖತ್ ಮನರಂಜನೆ ಕೊಟ್ಟುಕೊಂಡು ಬಂದಿದ್ದು ಕಾಮಿಡಿ ಕಿಲಾಡಿ ಗಿಲ್ಲಿ. ಈ ಸೀಸನ್ನ ವಿನ್ನರ್ ಗಿಲ್ಲಿನೇ ಆಗ್ತಾನೇ ಅಂತ ಎಲ್ಲರೂ ಅಂದುಕೊಂಡಿದ್ರು. ಆದ್ರೆ ಅದ್ಯಾಕೊ ಕೊನೆ ಕೊನೆಗೆ ಬರ್ತಾ ಗಿಲ್ಲಿ ಕೊಂಚ ಡಲ್ ಆಗಿದ್ದಾನೆ. ಅಷ್ಟೇ ಅಲ್ಲ ಖುದ್ದು ಕಿಚ್ಚನೆದ್ರು ಗಿಲ್ಲಿ ಸೋಲೊಪ್ಪಿಕೊಂಡುಬಿಟ್ನಾ? ಹೀಗೊಂದು ಅನುಮಾನ ಪ್ರೇಕ್ಷಕರನ್ನು ಕಾಡಲಾರಂಭಿಸಿದೆ ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.
ಯೆಸ್ ಈ ಸಾರಿ ಬಿಗ್ ಬಾಸ್ ಕನ್ನಡದಲ್ಲಿ ಆರಂಭದಿಂದಲೂ ಎಲ್ಲರ ಗಮನ ಸೆಳೆದವನು, ಹಳ್ಳಿಹೈದ ಕಾಮಿಡಿ ಕಿಲಾಡಿ ಗಿಲ್ಲಿ ನಟ. ತನ್ನ ಚಿನಕುರಳಿ ಮಾತಿನಿಂದ, ನಗೆಚಟಾಕಿಯಿಂದ, ಲವ್ ಟ್ರ್ಯಾಕ್ನಿಂದ , ಕಿತಾಪತಿಗಳಿಂದ ಸಖತ್ ಕಂಟೆಂಟ್ ಕೊಟ್ಟುಕೊಂಡು ಬಂದಿದ್ದ ಗಿಲ್ಲಿ. ಗಿಲ್ಲಿಯ ಆಟ ನೋಡಿದವರು ಈತನೇ ಈ ಸೀಸನ್ ವಿನ್ನರ್ ಅಂತ ತೀರ್ಮಾನ ಮಾಡಿಬಿಟ್ಟಿದ್ರು. ಆದ್ರೆ ಕೊನೆ ಕೊನೆಯ ವಾರಗಳಲ್ಲಿ ಅದ್ಯಾಕೋ ಗಿಲ್ಲಿ ಡಲ್ ಆಗಿದ್ದು ಸುಳ್ಳಲ್ಲ. ಕಳೆದ ವಾರವಂತೂ ಮನೆಮಂದಿ ಗಿಲ್ಲಿಯನ್ನ ಮೂಲೆಯಲ್ಲಿ ಕೂರುವಂತೆ ಮಾಡಿಬಿಟ್ಟಿದ್ರು.
ಯೆಸ್ ಕಳೆದ ವಾರದ ವೀಕೆಂಡ್ ಪಂಚಾಯತಿಯಲ್ಲಿ ಸುದೀಪ್ ಗಿಲ್ಲಿ ಡಲ್ ಆಗಿದ್ದನ್ನ ಗಮನಿಸಿದ್ರು. ಗಿಲ್ಲಿ ಎನರ್ಜಿ ಎಲ್ಲಿ ಹೋಯ್ತು ಅಂತ ಪ್ರಶ್ನೆ ಮಾಡಿದ್ರು. ಜೊತೆಗೆ ಯಾರ್ಯಾರು ಎವಿಕ್ಟ್ ಆದ್ರೆ ವೇದಿಕೆ ಮೇಲೆ ಏನ್ ಹೇಳ್ತಿರಿ ಅಂತ ಕೇಳಿದ್ರು. ತನ್ನ ಸರದಿ ಬಂದಾಗ ಗಿಲ್ಲಿ ಮೊದಲೇ ಕಂಠಪಾಠ ಮಾಡಿದಂತೆ ವಿದಾಯ ಭಾಷಣ ಮಾಡಿದ್ದಾನೆ.
ಸೋತಿರಬಹುದು ಆದ್ರೆ ಸತ್ತಿಲ್ಲ ಅನ್ನೋ ಕಿಚ್ಚನ ಮಾತನ್ನ ಗಿಲ್ಲಿ ಹೇಳಿ ಭಾಷಣ ಮುಗಿಸಿದ್ರು. ಅದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಕಿಚ್ಚ ನೀವು ಪ್ರಾರಂಭದಲ್ಲಿ ಬಂದಾಗ ಹೀಗೆ ಮಾತನಾಡ್ತಾ ಇರಲಿಲ್ಲವಲ್ಲ ಅಂದ್ರು.
ಹೌದು ಗಿಲ್ಲಿ ಮೊದಲಿದ್ದ ಜೋಶ್ನಲ್ಲಿ ಇಲ್ಲ ಅನ್ನೋದು ಗೊತ್ತೇ ಇದೆ. ಹಿಂದಿನ ಸೀಸನ್ಗಳನ್ನ ನೋಡಿಕೊಂಡು ಸಖತ್ ತಯಾರಿ ಮಾಡಿಕೊಂಡು ಬಂದಿದ್ದ ಗಿಲ್ಲಿ ಸಖತ್ ಆಗೇ ಆಟ ಶುರುಮಾಡಿದ್ದ. ಆದ್ರೆ ಕೊನೆ ಹಂತದಲ್ಲಿ ಗಿಲ್ಲಿ ಸುಸ್ತಾದವನಂತೆ ಕಾಣ್ತಾ ಇದ್ದಾನೆ. ಮನೆಮಂದಿ ಬೇರೆ ಗಿಲ್ಲಿಯನ್ನೇ ನೇರ ಟಾರ್ಗೆಟ್ ಮಾಡಿಕೊಂಡು ಹಣ್ಣುಗಾಯಿ ನೀರುಗಾಯಿ ಮಾಡಿದ್ದಾರೆ.
ಈ ವಾರಾಂತ್ಯ ಬಿಗ್ ಬಾಸ್ ಫಿನಾಲೆ ನಡೆಯಲಿದ್ದು, ಸದ್ಯ ಮನೆಯಲ್ಲಿ ಉಳಿದಿರೋ 7 ಜನರ ಪೈಕಿ ಒಬ್ರು ಮಿಡ್ ವೀಕ್ ಎಲಿಮಿನೇಟ್ ಆಗ್ತಾ ಇದ್ದಾರೆ. ಧನುಷ್ ಈಗಾಗ್ಲೇ ಟಾಪ್ 6ಗೆ ಏರಿದ್ದು, ಉಳಿದ 6 ಜನರ ನಡುವೆ ಒಬ್ರು ಬುಧವಾರ ಮನೆಯಿಂದ ಹೊರನಡೆಯಲಿದ್ದಾರೆ. ಕೊನೆಯ ಆರು ಜನರ ನಡುವೆ ವಿನ್ನರ್ ಯಾರು? ಅನ್ನೋದು ಇದೇ ವಾರಾಂತ್ಯ ಗೊತ್ತಾಗಲಿದೆ. ಆರಂಭದಿಂದಲೂ ಗಿಲ್ಲಿಯನ್ನ ಮೆಚ್ಚಿಕೊಂಡು ಬಂದವರು ಈತನೇ ವಿನ್ನರ್ ಆಗಬೇಕು ಅಂತ ಬಯಸ್ತಾ ಇದ್ದಾರೆ. ಆದ್ರೆ ಸೋತರೇನಂತೆ ಸಾಯಲ್ಲವಲ್ಲ ಅಂತ ಹೇಳ್ತಾ ಗಿಲ್ಲಿ ತನ್ನ ಫ್ಯಾನ್ಸ್ಗೆ ಒಂದು ಸೂಚನೆ ಕೊಟ್ಟಿದ್ದಾನೆ.
ಇಲ್ಲಿದೆ ವಿಡಿಯೋ:
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.