
ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭವಾಗಿ ಇದೀಗ 2ನೇ ವಾರದಲ್ಲಿ ಸರ್ಕಾರ ಬಿಗ್ ಬಾಸ್ ಮನೆಗೆ ಬೀಗ ಜಡಿದು ಹೊರಗೆ ಕಳುಹಿಸಿದೆ. ಆದರೆ, ಸರ್ಕಾರದ ಅಧಿಕಾರಿಗಳು ಬೀಗ ಹಾಕುವ ಮುನ್ನ ನಡೆದ ಘಟನೆ ಮಾತ್ರ ತುಂಬಾ ಹಾಸ್ಯವಾಗಿದೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರಪ್ರಭಗೆ ಜೋಡಿಯಾಗಿರುವ ಡಾಗ್ ಸತೀಶ್ ಆವರು ತಮ್ಮನ್ನು ತಾವು ಬೆಂಗಳೂರಿನ ಸಂತೂರ್ ಡ್ಯಾಡಿ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಚಂದ್ರಪ್ರಭ ಅವರು ಹಾಗಾದ್ರೆ, ನೀನು ಸಂತೂರ್ ಮಮ್ಮಿಯ ಗಂಡ ಅಂತಾ ಹೇಳ್ತಿದಿಯಾ ಎಂದು ಕೇಳಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಬಿಗ್ ಬಾಸ್ ಮನೆಗೆ ಬೀಗ ಹಾಕಿ ಎಲ್ಲ ಸ್ಪರ್ಧಿಗಳನ್ನು ಹೊರಗೆ ಹಾಕಲಾಗಿದೆ.
ಸರ್ಕಾರದಿಂದ ಬಿಗ್ ಬಾಸ್ ಮನೆಗೆ ಬೀಗ ಹಾಕುವ ಮುನ್ನ ನಡೆದ ಕೆಲವೊಂದು ದೃಶ್ಯಗಳನ್ನು ಕಲರ್ಸ್ ಕನ್ನಡ ವಾಹಿನಿ ಪ್ರೋಮೋದಲ್ಲಿ ಬಿಡುಗಡೆ ಮಾಡಿಕೊಂಡಿದೆ. ಈ ಮೂಲಕ ಬಿಗ್ ಬಾಸ್ ಶೋ ಮುಕ್ತಾಯವಾಗಿಲ್ಲ ಎಂಬ ಸೂಚನೆಯನ್ನು ವೀಕ್ಷಕರಿಗೆ ನೀಡುತ್ತಿದೆ. ಈ ಒಂದು ದೃಶ್ಯವು ಬಿಗ್ ಬಾಸ್ ಬಾತ್‌ರೂಮಿನ ಸ್ಪರ್ಧಿಗಳಾದ ಚಂದ್ರಪ್ರಭ ಮತ್ತು ಡಾಗ್ ಸತೀಶ್ ಅವರ ನಡುವೆ ನಡೆದ ಮಾತುಕತೆಯಾಗಿದೆ. ಬಾತ್ ರೂಮಿನಲ್ಲಿ ಕುಳಿತುಕೊಂಡ ಡಾಗ್ ಸತೀಶ್ ಅವರು ಜಂಟಿಗಳಿಗೆ ಇಂದೂ ಕೂಡ ರಾಕ್ಷಸರ ರೀತಿ ಮೇಕಪ್ ಹಾಕುತ್ತಾರಾ? ನಮ್ಮನ್ನ ಗಬ್ ಎಬ್ಬಿಸಿಬಿಡ್ತಾರೆ ಎಂದು ಅಳಲು ತೋಡಿಕೊಳ್ಳುತ್ತಾರೆ. ಇವತ್ತು ಕೂದಲು ಮುಟ್ಟುವಂತಿಲ್ಲ, ಮುಖಕ್ಕೆ ಮಾತ್ರ ಸ್ವಲ್ಪ ಮೇಕಪ್ ಮಾಡಿಸಿಕೊಳ್ತೇನೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಚಂದ್ರಪ್ರಭ ಅವರು, ಹೌದಣ್ಣಾ..., ನೀನು ಕೂದಲು ನೋಡಲ್ಲಿ ವಸೀ ಉದುರಿ ಬಿದ್ದಿದ್ದಾವಾ... ಎನ್ನುತ್ತಾರೆ. ಇದಕ್ಕೆ ಬುಂಡೆ ಎಲ್ಲ ಕಾಣಿಸುತ್ತಾ ಎಂದು ಡಾಗ್ ಸತೀಶ್ ಗಾಬರಿಯಿಂದ ಕೇಳುತ್ತಾರೆ. ಸಂತೂರ್‌ನಲ್ಲಿ ಮಾಯಿಶ್ಚರೈಸರ್ ಎಲ್ಲಾ ಇದೆ ಅದನ್ನು ಬಳಸಬೇಕು ಎನ್ನುತ್ತಾರೆ. ಇದೇ ಮಾತನ್ನು ಮುಂದುವರೆಸಿ ನನಗೆ ಬೆಂಗಳೂರಿನಲ್ಲಿ 'ಸಂತೂರ್ ಡ್ಯಾಡಿ' ಎಂದು ಹೆಸರಿಟ್ಟಿದ್ದಾರೆ. ಇದಕ್ಕೆ ಶಾಕ್ ಆದ ಚಂದ್ರಪ್ರಭ ಸಂತೂರ್ ಮಮ್ಮಿಯ ಯಜಮಾನ್ರು ನೀನು ಎಂದು ಕೇಳುತ್ತಾರೆ.
ಅದು ಹಾಗಲ್ಲಾ.., ಸಂತೂರ್ ಮಮ್ಮಿ ಎಂದು ಏನಕ್ಕೆ ಕರೆಯುತ್ತಾರೆ ಹೇಳು? ಟಿವಿ ಜಾಹೀರಾತಿನಲ್ಲಿ ನೋಡ್ತೀರಲ್ವಾ, ಈಕೆ ಮಮ್ಮಿ ಆಗಿದ್ದರೂ ಕಾಲೇಜು ಸ್ಟೂಡೆಂಟ್ ಎಂದು ಮಾತನಾಡಿಸುತ್ತಾರೆ. ಆಗ ಅವರ ಮಗ ಬಂದು ಮಮ್ಮಿ ಎಂದು ಕರೆಯುತ್ತಾರೆ. ಅದಕ್ಕೆ ಓಹ್.., ಸಂತೂರ್ ಮಮ್ಮಿ ಅಂತಾರೆ. ಅದೇ ತರಹ ನನ್ನ ಹಾಗೂ ನನ್ನ ಮಗನನ್ನು ನೋಡಿ ನನಗೆ ಸಂತೂರ್ ಡ್ಯಾಡಿ ಎಂದು ಹೆಸರಿಟ್ಟಿದ್ದಾರೆ. ಇಷ್ಟು ಹೇಳಿದರೂ ಅರ್ಥ ಮಾಡಿಕೊಳ್ಳದವರಂತೆ ಚಂದ್ರ ಪ್ರಭ ಅವರು ರೇಗಿಸಲು ಗೊತ್ತಾಯ್ತು, ಗೊತ್ತಾಯ್ತು ಎನ್ನುತ್ತಾರೆ. ನೀವು ಅವರ ಗಂಡ ಅಂತಾ ನೀನೆ ಹೇಳಿಕೊಳ್ತಿದೀಯ ಎಂದು ಗೇಲಿ ಮಾಡುತ್ತಾರೆ.
ಬಿಡದಿಯ ಬಳಿ ಬಿಗ್ ಬಾಸ್ ಮನೆ ನಿರ್ಮಾಣಕ್ಕೆ ಸೆಟ್ ಹಾಕಿದ್ದ ಜಾಲಿವುಡ್ ಸ್ಟೂಡಿಯೋಸ್ ಸಂಸ್ಥೆಯು ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ನಿಯಮಗಳನ್ನು ಉಲ್ಲಂಘನೆ ಮಾಡಿದೆ ಎಂದು ನೋಟೀಸ್ ನೀಡಿದರೂ ಭಾರೀ ನಿರ್ಲಕ್ಷ್ಯ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ನೋಟೀಸ್ ಹಿಡಿದುಬಂದ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ತಹಶೀಲ್ದಾರ್ ನೇತೃತ್ವದ ತಂಡವು, ಜಾಲಿವುಡ್ ಸ್ಟೂಡಿಯೋಸ್ ಸೆಟ್‌ಗೆ ಬೀಗ ಹಾಕಿತು. ರಾತ್ರೋ ರಾತ್ರಿ ಎಲ್ಲ ಸ್ಪರ್ಧಿಗಳನ್ನು ಈಗಲ್‌ಟನ್ ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.