BBK 11: ಮೋಕ್ಷಿತಾ ಪೈಗೆ ಯಾಕೆ ಹತ್ತಿರವಾಗಲಿಲ್ಲ? ಅದಕ್ಕೆ ಈ ವ್ಯಕ್ತಿಯೇ ಕಾರಣವೆಂದ ತ್ರಿವಿಕ್ರಮ್

Published : Jan 24, 2025, 11:39 AM ISTUpdated : Jan 24, 2025, 11:54 AM IST
BBK 11: ಮೋಕ್ಷಿತಾ ಪೈಗೆ ಯಾಕೆ ಹತ್ತಿರವಾಗಲಿಲ್ಲ? ಅದಕ್ಕೆ ಈ ವ್ಯಕ್ತಿಯೇ ಕಾರಣವೆಂದ ತ್ರಿವಿಕ್ರಮ್

ಸಾರಾಂಶ

ಬಿಗ್‌ಬಾಸ್‌ನಲ್ಲಿ ತ್ರಿವಿಕ್ರಮ್‌ ಮತ್ತು ಮೋಕ್ಷಿತಾ ಪೈ ನಡುವಿನ ಜಗಳ ವೀಕ್ಷಕರ ಗಮನ ಸೆಳೆದಿತ್ತು. 'ಗೋಮುಖ ವ್ಯಾಘ್ರ' ಎಂಬ ಕರೆ, ನಾಮಿನೇಷನ್‌ ವಿಚಾರದಲ್ಲಿ ಭಿನ್ನಾಭಿಪ್ರಾಯ, ರಾಮ್-ಸೀತಾ ಎಂಬ ಹೋಲಿಕೆ ಚರ್ಚೆಗೆ ಗ್ರಾಸವಾಗಿತ್ತು. ಕಾಫಿ ಘಟನೆ ಮತ್ತು ರಜತ್‌ ಪಾತ್ರದ ಬಗ್ಗೆ ಮಾತನಾಡಿದರೂ, ಮನಸ್ತಾಪಕ್ಕೆ ನಿಖರ ಕಾರಣ ತಿಳಿದಿಲ್ಲ. ಇಬ್ಬರೂ ಫೈನಲ್‌ ಸ್ಪರ್ಧಿಗಳಾಗಿದ್ದಾರೆ.

ಈ ಬಾರಿ ಕನ್ನಡದ ʼಬಿಗ್‌ ಬಾಸ್ʼ‌ ಶೋನಲ್ಲಿ ತ್ರಿವಿಕ್ರಮ್‌ ಹಾಗೂ ಮೋಕ್ಷಿತಾ ಪೈ ನಡುವೆ ಸಾಕಷ್ಟು ಜಗಳ ಆಗಿದೆ. ಮೋಕ್ಷಿತಾ ಪೈ ಅವರು ಇನ್ನೇನು ಮನೆಯಿಂದ ಹೊರಗಡೆ ಹೋಗಬೇಕು ಎನ್ನುವಂತಹ ಪರಿಸ್ಥಿತಿ ಬಂದಿತ್ತು. ಆ ಟೈಮ್‌ನಲ್ಲಿ ಅವರು ತ್ರಿವಿಕ್ರಮ್‌ಗೆ ʼಗೋಮುಖ ವ್ಯಾಘ್ರʼ ಅಂತ ಕರೆದರು. ತ್ರಿವಿಕ್ರಮ್‌ ಹಾಗೂ ಮೋಕ್ಷಿತಾ ಪೈ ಜಗಳ ಆಡಬಹುದು ಆದರೆ ಹೊರಗಡೆ ಅವರ ಅಭಿಮಾನಿಗಳು ಈ ಜೋಡಿಯನ್ನು ಒಟ್ಟಿಗೆ ನೋಡಲು ಬಯಸುತ್ತದೆ. ಈಗ ಈ ಬಗ್ಗೆ ಇವರಿಬ್ಬರು ಮಾತನಾಡಿಕೊಂಡಿದ್ದು, ದೂರ ಆಗಲು ಕಾರಣ ಏನು ಎಂದು ಹೇಳಿದೆ.

ತ್ರಿವಿಕ್ರಮ್-ಮೋಕ್ಷಿತಾ ಪೈ ನಡುವೆ ಶೀತಲ ಸಮರ!
ʼಬಿಗ್‌ ಬಾಸ್ʼ‌ ಮನೆಯಲ್ಲಿ ಅನೇಕ ಕಾರಣಕ್ಕೆ ತ್ರಿವಿಕ್ರಮ್‌ ಹಾಗೂ ಮೋಕ್ಷಿತಾ ಜಗಳ ಆಡಿಕೊಂಡಿದ್ದರು. ತ್ರಿವಿಕ್ರಮ್‌ ಅವರು ಪ್ಲ್ಯಾನ್ ಮಾಡಿ ನಾಮಿನೇಟ್‌ ಮಾಡ್ತಾರೆ, ನಾಟಕ ಮಾಡ್ತಾರೆ ಅಂತೆಲ್ಲ ಅವರ ಮೇಲೆ ಮೋಕ್ಷಿತಾ ಆರೋಪ ಮಾಡಿದ್ದರು. ಒಟ್ಟಿನಲ್ಲಿ ಇವರಿಬ್ಬರ ಮಧ್ಯೆ ಶೀತಲ ಸಮರ ನಡೆಯುತ್ತಿತ್ತು. ನಾಮಿನೇಶನ್‌ ವಿಚಾರ ಬಂದಾಗ, ಅಭಿಪ್ರಾಯಗಳನ್ನು ಹೊರಹಾಕುವ ಸಮಯ ಬಂದಾಗ ತ್ರಿವಿಕ್ರಮ್‌ ವಿರುದ್ಧ ಮೋಕ್ಷಿತಾ, ಮೋಕ್ಷಿತಾ ವಿರುದ್ಧ ತ್ರಿವಿಕ್ರಮ್‌ ಅವರು ಬೇಸರ ಹೊರಹಾಕಿದ್ದರು. 

BBK 11: ಭವ್ಯಾ ಗೌಡ ಪರ ಸಂಬಂಧಿಯೂ ಆಗಿರೋ ಸ್ಟಾರ್‌ ನಟಿ ದನಿಯೆತ್ತಿದ್ರೆ, ಕನ್ನಡ ಮಾತಾಡಿದ ತೆಲುಗು ನಟ! ಯಾರದು?

ಇವರಿಬ್ಬರು ರಾಮ್-ಸೀತಾ! 
ಭವ್ಯಾ ಗೌಡ ಹಾಗೂ ತ್ರಿವಿಕ್ರಮ್‌ ಮಧ್ಯೆ ಸ್ನೇಹ ಇದ್ದರೂ ಕೂಡ ಕೆಲ ವೀಕ್ಷಕರು ಮೋಕ್ಷಿತಾ, ತ್ರಿವಿಕ್ರಮ್‌ ಜೋಡಿಯನ್ನು ಇಷ್ಟಪಟ್ಟಿದ್ದಾರೆ. ಈ ವಿಷಯ ಇಷ್ಟುದಿನಗಳವರೆಗೆ ಇವರಿಬ್ಬರಿಗೂ ಗೊತ್ತಿರಲಿಲ್ಲ. ವೀಕ್ಷಕರು ಈ ಕಾಂಬಿನೇಶನ್‌ ಇಷ್ಟಪಟ್ಟಿರೋದು ಎಲಿಮಿನೇಟ್‌ ಆದ ಸ್ಪರ್ಧಿಗಳಿಗೆ ಗೊತ್ತಾದಾಗ ಅವರು ಕೂಡ ಆಶ್ಚರ್ಯಪಟ್ಟಿದ್ದರು. ಇನ್ನೊಂದು ಕಡೆ Trivikram ಶಬ್ದಲ್ಲಿ ರಾಮ್‌, Mokshitha ಶಬ್ದದಲ್ಲಿ ಸೀತಾ ಪದ ಇದೆ, ಇವರಿಬ್ಬರು ರಾಮ್-ಸೀತಾ ಇದ್ದಹಾಗೆ ಎಂದು ಭಾರೀ ಟ್ರೋಲ್‌ ಆಗಿತ್ತು. 

ಕರ್ನಾಟಕದಲ್ಲಿದ್ರೂ ನಾಡಗೀತೆ ಕಲಿತಿಲ್ಲ: ಯಮುನಾ ಆರೋಪಕ್ಕೆ ಗೌತಮಿ ತಿರುಗೇಟು

ಮನಸ್ತಾಪಕ್ಕೆ ಕಾರಣ ಏನು? 
ತ್ರಿವಿಕ್ರಮ್‌ ಅವರು ಕಾಫಿ ಎರಚಿದ್ದನ್ನು ನೀವು ಅರ್ಥಮಾಡಿಕೊಂಡಿಲ್ಲ.‌ ನಮ್ಮವರಿಗೆ ನಾವು ಕಾಫಿ ಎರಚೋದು, ಅದನ್ನು ಅರ್ಥ ಮಾಡಿಕೊಳ್ಳಿ. ನೀವಿಬ್ಬರು ಹತ್ತಿರ ಆಗಿ, ತ್ರಿವಿಕ್ರಮ್‌ ಅವರು ಹತ್ತಿರ ಬರೋಕೆ ಟ್ರೈ ಮಾಡಿದರೂ ನೀವು ದೂರ ಹೋಗ್ತಿದೀರಾ ಅಂತ ಮೋಕ್ಷಿತಾ ಪೈ ಹೇಳಿದ್ದಾರೆ. ಆಗ ತ್ರಿವಿಕ್ರಮ್‌ ಅವರು ರಜತ್‌ಗೆ “ನೀನೆ ನಾವಿಬ್ಬರು ಹತ್ತಿರ ಆಗೋಕೆ ಬಿಟ್ಟಿಲ್ಲ, ಮಾತಾಡಿಸುವವರನ್ನು ದೂರ ಮಾಡ್ತೀನಿ ಅಂತ ಕಾಯಿ ಒಡೆದಿದ್ದೆ, ಪಿನ್‌ ಇಟ್ಟೆ” ಅಂತ ತಮಾಷೆ ಮಾಡಿದ್ದಾರೆ. ಆಗ ರಜತ್‌ ಅವರು “ನೀನು ಮೊದಲೇ ಮೆಸೇಜ್‌ ಬಿಟ್ಟಿದ್ರೆ, ಹೇಳಿದ್ರೆ ನಾನು ಏನೋ ಒಂದು ರೆಡಿ ಮಾಡಿ ಇಟ್ಟಿರುತ್ತಿದ್ದೆ” ಎಂದು ಹೇಳಿದ್ದಾರೆ. ಅಲ್ಲಿಗೆ ಇವರಿಬ್ಬರು ಯಾಕೆ ಹತ್ತಿರ ಆಗಲಿಲ್ಲ? ಯಾಕೆ ಮನಸ್ತಾಪ ಆಯ್ತು ಎನ್ನುವ ಬಗ್ಗೆ ನಿಖರ ಕಾರಣವನ್ನು ಇವರಿಬ್ಬರು ರಿವೀಲ್‌ ಮಾಡಿಲ್ಲ.

ಗ್ರ್ಯಾಂಡ್‌ ಫಿನಾಲೆಗೆ ದಿನಗಣನೆ! 
ತ್ರಿವಿಕ್ರಮ್‌ ಹಾಗೂ ಮೋಕ್ಷಿತಾ ಪೈ ಅವರು ಫಿನಾಲೆ ಓಟದಲ್ಲಿದ್ದಾರೆ. ಹನುಮಂತ, ರಜತ್‌, ಉಗ್ರಂ ಮಂಜು, ಭವ್ಯಾ ಗೌಡ ನಡುವೆ ಯಾರು ಗೆಲ್ಲುತ್ತಾರೆ ಎಂದು ಕಾದು ನೋಡಬೇಕಿದೆ. ಜನವರಿ 25, 26ರಂದು ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಶೋ ಗ್ರ್ಯಾಂಡ್‌ ಫಿನಾಲೆ ನಡೆಯುವುದು. ಈ ಕ್ಷಣ ನಿಜಕ್ಕೂ ಭಾವುಕ ಎನ್ನಬಹುದು. ಏಕೆಂದರೆ ಕಿಚ್ಚ ಸುದೀಪ್‌ ಅವರು ಕೊನೆಯ ಬಾರಿಗೆ ಈ ಬಿಗ್‌ ಬಾಸ್‌ ನಿರೂಪಣೆ ಮಾಡಲಿದ್ದಾರೆ. ಈ ಸೀಸನ್‌ ಬಳಿಕ ಅವರು ʼಬಿಗ್‌ ಬಾಸ್ʼ‌ ನಿರೂಪಣೆ ಮಾಡೋದಿಲ್ವಂತೆ. ಹೀಗಂತ ಅವರು ಈಗಾಗಲೇ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. 


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!