ಜನರು ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದಕ್ಕೆ ನಾನು ಹೊರ ಬಂದಿದ್ದು: ಬಿಗ್ ಬಾಸ್ ಮಾನಸ ಹೇಳಿಕೆ ವೈರಲ್

By Vaishnavi Chandrashekar  |  First Published Nov 4, 2024, 2:09 PM IST

5ನೇ ವಾರ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮಾಸನ. ಎಲಿಮಿನೇಟ್ ಆಗಲು ಸಾಲು ಸಾಲು ಕಾರಣ ಕೊಟ್ಟ ಸ್ಪರ್ಧಿ...... 


ಕಲರ್ಸ್ ಕನ್ನಡ ಬಿಗ್ ಬಾಸ್ ಸೀಸನ್ 11 ಯಶಸ್ವಿಯಾಗಿ 5ನೇ ವಾರಕ್ಕೆ ಕಾಲಿಟ್ಟಿದೆ. 5ನೇ ವಾರ ಮನೆಯಿಂದ ಹೊರ ಬಂದಿರುವ ಸ್ಪರ್ಧಿ ಮಾನಸ ಸಂತೋಷ್. ಹಾಸ್ಯ ನಟ ತುಕಾಲಿ ಸಂತೋಷ್ ಪತ್ನಿ ಮಾನಸ ಒಳ್ಳೆ ತುಂಬಾ ಖುಷಿಯಿಂದ ಆಟವಾಡುತ್ತಿದ್ದರೂ ಹೊರಗಡೆ ಸಿಕ್ಕಾಪಟ್ಟೆ ನೆಗೆಟಿವ್ ಆಗಿ ಟ್ರೋಲ್ ಆಗಿದ್ದಾರೆ. ಲುಕ್, ಮೇಕಪ್, ಡ್ರೆಸಿಂಗ್ ಮತ್ತು ಮಾತನಾಡುವ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಸಾಕಷ್ಟು ಮಂದಿ ಕಾಮೆಂಟ್ ಮಾಡುತ್ತಿದ್ದರು. ಈಗ ಎಲಿಮಿನೇಟ್ ಆಗಿ ಬಂದಿರುವ ಮಾಸನ ನೀಡುವ ಹೇಳಿಕೆ ವೈರಲ್ ಆಗುತ್ತಿದೆ. 

ಜನರ ನಿರೀಕ್ಷೆ ಹೆಚ್ಚಿತ್ತು:

Tap to resize

Latest Videos

undefined

'ಬಿಗ್ ಬಾಸ್ ಮನೆಯಲ್ಲಿ 5 ವಾರ ಇದ್ದು ಬಂದ ಖುಷಿ ತುಂಬಾ ಇದೆ ಏಕೆಂದರೆ 5 ವಾರ ಕಡಿಮೆ ಅಲ್ಲ. ನಾನು ಯಾಕೆ ಹೊರ ಬಂದಿರುವೆ ಎಂದು ಯೋಚನೆ ಮಾಡಿದರೆ...ಜನರು ತುಂಬಾ ನಿರೀಕ್ಷೆ ಇಟ್ಟುಕೊಂಡು ನನ್ನನ್ನು ಹೊರ ಕಳುಹಿಸಿದ್ದರು ನಾನು ತುಂಬಾ ಚೆನ್ನಾಗಿ ಮನೋರಂಜನೆ ನೀಡಬಹುದು ಅಂತ ಆದರೆ ಆ ವಿಚಾರದಲ್ಲಿ ತುಂಬಾ ಎಡವಿದ್ದೀನಿ ಅನ್ಸುತ್ತೆ. ನನ್ನನ್ನು ನಾನು ತಿಳಿದುಕೊಳ್ಳಲು 5 ವಾರ ತೆಗೆದುಕೊಂಡೆ ಇನ್ನು ಆಟ ಶುರು ಮಾಡಬೇಕು ಅನ್ನುವಾಗ ಹೊರ ಬಂದಿರುವೆ. ಎಲಿಮಿನೇಷನ್‌ನ ಟಾಪ್‌ 2 ಸ್ಥಾನಕ್ಕೆ ಬಂದಾಗ ಎಲ್ಲೋ ಒಬ್ರಿಗೆ ಇಬ್ರಿಗೆ ಆಟವಾಡಬೇಕು ಅಂದುಕೊಂಡಿದ್ದನ್ನು ಬದಲಾಯಿಸಿಕೊಳ್ಳಬೇಕು ಜನರಿಗೆ ಮನೋರಂಜನೆ ನೀಡಬೇಕು ಅಂದುಕೊಂಡಿದ್ದೆ' ಎಂದು ಜಿಯೋ ಸಿನಿಮಾ ಸಂದರ್ಶನದಲ್ಲಿ ಮಾನಸ ಮಾತನಾಡಿದ್ದಾರೆ.

ಯಾರು ಬೆಸ್ಟ್‌ ಯಾರು ವರ್ಸ್ಟ್‌:

'ನನ್ನ ಸ್ಥಾನದಲ್ಲಿ ಧರ್ಮಣ್ಣ ಇರಬೇಕಿತ್ತು ಏಕೆಂದರೆ ಗೇಮ್‌ಗಳಲ್ಲಿ ಕಾಣಿಸಿಕೊಂಡಿರುವುದು ಬಿಟ್ಟರೆ ಬೇರೆ ಏನೂ ಮಾಡಿರುವುದು ನಾನು ನೋಡಿಲ್ಲ. ಮೊದಲಿನಿಂದ ತುಂಬಾ ರಿಯಲ್ ಅನಿಸುತ್ತಿರುವುದು ಹನುಮಂತು ಮತ್ತು ಧನರಾಜ್‌, ಯಾವ ಸಮಯ ಸಂದಂಭ ಬಂದರೂ ಬದಲಾಗುವುದಿಲ್ಲ ಅವರತನ ಬಿಟ್ಟುಕೊಡುವುದಿಲ್ಲ. ಆದರೆ ತುಂಬಾ ಇರಿಟೇಟ್ ಮಾಡುವುದು ಮಂಜಣ್ಣ, ಜಗಳ ಶುರು ಮಾಡುತ್ತಾರೆ  ಅದು ನನಗೆ ಇಷ್ಟ ಆಗುವುದಿಲ್ಲ. ಇನ್ನು ಹೆಚ್ಚು ಕಾಳಜಿ ಮಾಡುತ್ತಿದ್ದವರು ತ್ರಿವಿಕ್ರಂ, ಅವರು ಯಾವತ್ತೂ ಯಾರ ಕಾಲನ್ನು ಮುಟ್ಟಿಲ್ಲ ಆದರೆ ನನ್ನ ಕಾಲಿಗೆ ಮಸಾಜ್ ಮಾಡಿ ಸ್ವಂತ ಅಕ್ಕನಂತೆ ನೋಡಿಕೊಂಡಿದ್ದಾರೆ' ಎಂದು ಮಾನಸ ಹೇಳಿದ್ದಾರೆ.

ಕನಸಿನ ಆಫರ್

'ನಿರೀಕ್ಷೆ ಮಾಡದೆ ಬಿಗ್ ಬಾಸ್ ಆಫರ್‌ನನಗೆ ಬಂದಿತ್ತು. ಕಳೆದ ಸೀಸನ್‌ ನನ್ನ ಗಂಡ ಹೋಗಿ ಈ ಸೀಸನ್‌ನಲ್ಲಿ ನಾನು ಹೋಗಿದ್ದು ನಿಜಕ್ಕೂ ಶಾಕ್. ನಾನು ಮಾತನಾಡುವ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು ಏಕೆಂದರೆ ಹಳ್ಳಿಯಲ್ಲಿ ನಾನು ಬೆಳೆದ ರೀತಿ ಮತ್ತು ಮನೆಯವರ ಜೊತೆ ಇದ್ದ ರೀತಿನೇ ಇದ್ದಿದ್ದಕ್ಕೆ ಬೇರೆ ಅವರಿಗೆ ಇಷ್ಟವಾಗಿಲ್ಲ ಹಾಗೇ ಜನರಿಗೆ ಇಷ್ಟ ಆಗಿಲ್ಲ' ಎಂದಿದ್ದಾರೆ ಮಾನಸ.

click me!