ಕಿಚ್ಚನ ಬಳಿ ಅತ್ತು ಗೋಗರೆದು ಬಿಗ್‌ಬಾಸ್‌ಗೆ ವಿದಾಯ ಹೇಳಿದ ಶೋಭಾ ಶೆಟ್ಟಿ! 2ವಾರದ ಸಂಭಾವನೆ ಎಷ್ಟು?

By Gowthami K  |  First Published Dec 1, 2024, 11:55 PM IST

ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಪ್ರವೇಶಿಸಿದ್ದ ಶೋಭಾ ಶೆಟ್ಟಿ ಆರೋಗ್ಯ ಸಮಸ್ಯೆಯಿಂದಾಗಿ ಮನೆಯಿಂದ ಹೊರಬಂದಿದ್ದಾರೆ. ಸೇಫ್ ಆಗಿದ್ದರೂ ಮನೆಯಲ್ಲಿರಲು ಸಾಧ್ಯವಿಲ್ಲ ಎಂದು ಸುದೀಪ್ ಬಳಿ ಹೇಳಿದ ಶೋಭಾ,   ಕ್ಷಮೆ ಕೇಳಿದರು.


ಬಿಗ್‌ಬಾಸ್ ಕನ್ನಡ ಸೀಸನ್ 11ನಲ್ಲಿ 60 ದಿನದ ಬಳಿಕ ಶಾಕಿಂಗ್ ಘಟನೆ ನಡೆದಿದೆ.  ವೈಲ್ಡ್ ಕಾರ್ಡ್ ಮೂಲಕ  ಮನೆಗೆ ಬಂದಿದ್ದ    ಶೋಭಾ ಶೆಟ್ಟಿಗೆ ಮನೆಗೆ ಹೊಂದಿಕೊಳ್ಳಲು ಸಾಧ್ಯ ಆಗುತ್ತಿಲ್ಲ. ಆರೋಗ್ಯ ಸಮಸ್ಯೆ ಇದೆ ಎಂದು ಮನೆಯಿಂದ ಹೊರ ಬಂದಿದ್ದಾರೆ. ಮನೆಗೆ ಬಂದ ಆರಂಭದಲ್ಲಿ ಬಹಳ ಜೋಶ್‌ನಲ್ಲಿದ್ದ ಶೋಭಾ ಶೆಟ್ಟಿ ಕೆಲವೇ ದಿನಕ್ಕೆ ಮಂಕಾಗಿದ್ದರು. ಮನೆ ಪ್ರವೇಶಿಸಿದಾಗ ಫುಲ್ ಸ್ವಿಂಗ್ ಆಗಿ ಕಾಣಿಸಿಕೊಂಡಿದ್ದ ಶೋಭಾ ಈ ವಾರದ ಟಾಸ್ಕ್‌ ನಲ್ಲಿ  ಈಗ ಸಂಪೂರ್ಣ ಸೈಲೆಂಟ್ ಆಗಿದ್ದರು.

ಈ ವಾರ ಶೋಭಾ ಅವರು ಸೇಫ್‌ ಆಗಿದ್ದರು. ಕನ್ನಡಿಗರು ವೋಟಿಂಗ್‌ ಮಾಡಿ ಉಳಿಸಿದ್ದರು. ಆದರೆ ಮನೆಯಲ್ಲಿರಲು ಸಾಧ್ಯವೇ ಇಲ್ಲ ಎಂದು ಸುದೀಪ್ ಬಳಿ ಶೋಭಾಶೆಟ್ಟಿ ಹೇಳಿದರು. ಅನಾರೋಗ್ಯದ ಕಾರಣದಿಂದ ನನಗೆ ಆಟ ಆಡೋಕೆ ಆಗಲ್ಲ ಎನಿಸುತ್ತಿದೆ’ ಶೋಭಾ ಹೇಳಿದರು.  ಹೀಗಾಗಿ ಓಟು ಮಾಡಿದವರ ಕ್ಷಮೆ ಕೇಳಿದ ಕಿಚ್ಚ ಶೋಭಾ ಅವರನ್ನು ಹೊರಗೆ ಕಳುಹಿಸುವಂತೆ ಬಿಗ್‌ಬಾಸ್‌ ಟೀಂ ಬಳಿ ಮನವಿ ಮಾಡಿದರು.

Latest Videos

undefined

ತೆಲುಗು ಬಿಗ್ ಬಾಸ್‌ನಿಂದ ಪೃಥ್ವಿರಾಜ್ ಶೆಟ್ಟಿ ಎಲಿಮಿನೇಟ್‌, ವಿನ್ನರ್‌ ಲೆವೆಲ್‌ ಸಂಭಾವನೆ ಪಡೆದ ಕನ್ನಡಿಗ!

ಶೋಭಾಶೆಟ್ಟಿಗೆ ಸುದೀಪ್ ಸಲಹೆ ಕೂಡ ಕೊಟ್ಟರು 'ಈ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಉದ್ದೇಶ ಏನೆಂದು ಒಮ್ಮೆ ಯೋಚಿಸಿ, ನಿಮಗೆ ಮತ ಹಾಕಿದ ಪ್ರೇಕ್ಷಕರಿಗೆ ಅನ್ಯಾಯವಾದರೆ ಏನು ಹೇಳುತ್ತೀರಿ?' ಏನೇ ಆದರೂ ಸಹ ಶೋಭಾ ಶೆಟ್ಟಿ, ತಾನು ಮನೆಗೆ ಹೋಗಲೇ ಬೇಕು ಎಂದು ಅಂಗಲಾಚಿದ್ದಾರೆ. ಸೇವ್‌ ಆದಾಗ ಕರ್ತವ್ಯದ ಬಗ್ಗೆ ತಮ್ಮ ತಾಯಿಯ ಬಗ್ಗೆ ಹೇಳಿ ಶೋಭಾ ಅವರ ಮನಪರಿವರ್ತನೆಗೆ ಕಿಚ್ಚ ಪ್ರಯತ್ನಿಸಿದರು. ‘ತಾಯಿ ನಿಧನರಾದಾಗಲೂ ನಾನು ನನ್ನ ಕರ್ತವ್ಯ ಮಾಡಿದ್ದೆ’ ಎಂದು ಹೇಳುವ ಮೂಲಕ ಕರ್ತವ್ಯ ಬಂದಾಗ ಅಡಚಣೆ ಬರುವುದು ಸಹಜ, ಕಷ್ಟ ಬರೋದು ಸಹಜ ಇದರ ಮೇಲೆ ನಾನು ಬುದ್ದಿ ಹೇಳಲ್ಲ ಎಂದು  ಪಾಠ ಮಾಡಿದರು. ಸುದೀಪ್ ಮಾತಿನಿಂದ ಶೋಭಾಗೆ ಧೈರ್ಯ ಬಂತು. ‘ಕ್ಷಮಿಸಿ ಸರ್. ನಾನೇ ಪ್ರೇಕ್ಷಕರನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದೆ. ನಿಮ್ಮ ಪ್ರೀತಿ, ಬೆಂಬಲಕ್ಕೆ ಧನ್ಯವಾದ.  ನಾನು ಕಮ್​ಬ್ಯಾಕ್ ಮಾಡುತ್ತೇನೆ. ನನ್ನನ್ನು ನಾನು ಸಾಬೀತು ಮಾಡಿಕೊಳ್ಳುತ್ತೇನೆ. ಸುದೀಪ್ ಸರ್ ಮೌಲ್ಯಯುತ ಮಾತುಗಳಿಗೆ ಥ್ಯಾಂಕ್ಸ್’ ಎಂದರು.

ಆದರೆ ಬಾಟಮ್‌ 2 ನಲ್ಲಿ ಶಿಶಿರ್‌ ಮತ್ತು ಐಶ್ವರ್ಯಾ ಅವರು ಬಂದಾಗ ಎಲ್ಲರ ಬಳಿ ಕಿಚ್ಚ ಅಭಿಪ್ರಾಯ ಕೇಳಿಕೊಂಡು ಬಂದರು. ಈ ವೇಳೆ ಶೋಭಾ ಮತ್ತೆ ತನ್ನನ್ನು ಮನೆಗೆ ಕಳುಹಿಸಿ ಎಂದು ಕೈಮುಗಿದು ಕೇಳಿಕೊಂಡರು. ಇದಕ್ಕೆ ಕಿಚ್ಚನಿಗೆ ಕೋಪ ಬಂತು. ವೋಟ್ ಮಾಡಿದ ಜನಗಳಿಗೆ ಏನು ಮರ್ಯಾದೆ ಕೊಡುತ್ತೀದ್ದಿರಿ ನೀವು? ಅವರೇನು ಮೂರ್ಖರಾ? ಮೊದಲು ನೀವು ಮಾತನಾಡಿದ್ದು ಡ್ರಾಮಾನಾ? ಎಂದು ಕೋಪದಿಂದಲೇ ಕೇಳಿದರು.  ಕೊನೆಗೆ ಶೋಭಾ ಶೆಟ್ಟಿ ಮಾತುಗಳಿಗೆ ರೋಸಿ ಹೋದ ಸುದೀಪ್ ಶೋ ವೀಕ್ಷಕರ ಕ್ಷಮೆ ಕೇಳಿ ಕಳುಹಿಸಿದ್ದಾರೆ. ಶೋಭಾ ಅವರು ಮನೆಯಿಂದ ಹೊರ ಹೋಗಿರುವ ವಿಡಿಯೋವನ್ನು ತೋರಿಸಿಲ್ಲ.   ಆದರೆ ಸುದೀಪ್‌ ಕಾರ್ಯಕ್ರಮ ಮುಗಿಸಿದ್ದಾರೆ. ಹೀಗಾಗಿ ವೇದಿಕೆಗೆ ಕರೆದು ಮಾತನಾಡಿಸದೆ ನೇರವಾಗಿ ಶೋಭಾ ಅವರನ್ನು ಮನೆಗೆ ಕಳುಹಿಸಿರುವುದು ಸ್ಪಷ್ಟವಾಗಿದೆ. ನಾಳಿನ ಸಂಚಿಕೆಯಲ್ಲಿ ಎಲ್ಲವೂ ತಿಳಿದುಬರಲಿದೆ.

ಸತ್ತ ದಿನ ರಾತ್ರಿ ಸಿಲ್ಕ್ ಸ್ಮಿತಾ ಶೇರ್‌ ಮಾಡಿಕೊಂಡಿದ್ದ ವಿಚಾರ ಹೇಳಿದ ಗೆಳತಿ ನಟಿ ಅನುರಾಧಾ

ತೆಲುಗಿನ ಬಿಗ್‌ಬಾಸ್‌ ನಲ್ಲಿ ಉತ್ತಮ ಪ್ರದರ್ಶನ ನೀಡಿ ಕೊನೆವರೆಗೂ ಬಂದಿದ್ದ ಶೋಭಾ ಅವರು ಕನ್ನಡದಲ್ಲಿ  ಇಷ್ಟೊಂದು ಕುಗ್ಗಿ ಹೋಗಲು ಕಾರಣ ಏನೆಂಬುದು ಗೊತ್ತಿಲ್ಲ. ಬಿಗ್‌ ಬಾಸ್‌ ಮೂಲಕ ಶೋಭಾ ಶೆಟ್ಟಿ ಮತ್ತ ಕನ್ನಡಕ್ಕೆ ಕಮ್‌ ಬ್ಯಾಕ್‌ ಮಾಡಿದ್ದರು. ಆದರೆ 15 ದಿನಕ್ಕೆ ಶೋ ಬಿಟ್ಟು ಹೊರಬಂದಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.  ಶೋಭಾ ಶೆಟ್ಟಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರಲ್ಲಿ ವಾರಕ್ಕೆ 2.5 ಲಕ್ಷ ರೂಪಾಯಿ ಇರಬಹುದು ಎನ್ನಲಾಗುತ್ತಿದೆ.  2 ವಾರಗಳ ಸಂಭಾವನೆ 5 ಲಕ್ಷದ ಜೊತೆಗೆ 2 ಲಕ್ಷದ ಬಹುಮಾನ ಸೇರಿ ಒಟ್ಟು 7 ಲಕ್ಷ ರೂಪಾಯಿಯನ್ನು ಪಡೆಯಬಹುದು ಎಂದು ಹೇಳಲಾಗುತ್ತಿದೆ.

click me!