ನನ್ನಂಥ ಶತಮೂರ್ಖ ಇನ್ನೊಬ್ಬ ಇಲ್ಲ, ಎಕ್ಕಡ ತಗೊಂಡು ಹೊಡ್ಕೋಬೇಕು; ಚೈತ್ರಾ ಕುಂದಾಪುರಗೆ ಕ್ಲಾಸ್‌ ತೆಗೆದುಕೊಂಡ ಶಿಶಿರ್!

By Vaishnavi Chandrashekar  |  First Published Nov 15, 2024, 10:41 AM IST

ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ನಿಲ್ಲಬೇಕು ಎಂದು ಜೊತೆಗಿದ್ದ ಶಿಶಿರ್ ಕೈ ಬಿಡಲು ಮುಂದಾದ ಚೈತ್ರಾ ಕುಂದಾಪುರ. ಮಾಸ್ಟ್‌ ಮೈಂಡ್‌ ಬಗ್ಗೆ ಶಿಶಿರ್‌ ಬೇಸರ.....


ಈ ವಾರ ಬಿಗ್ ಬಾಸ್ ಮನೆಯಲ್ಲಿ ಜೋಡಿ ಟಾಸ್ಕ್ ಚಾಲ್ತಿಯಲ್ಲಿದೆ. ಸ್ಪರ್ಧಿಗಳು ಸಿಕ್ಕಾಪಟ್ಟೆ ಕೂಲ್ ಆಗಿದ್ದ ಕಾರಣ ಬಿಗ್ ಬಾಸ್ ಬಿಗ್ ಟ್ವಿಸ್ಟ್ ನೀಡುತ್ತಾರೆ. ಪ್ರತಿಯೊಂದು ಜೋಡಿ ಟಾಸ್ಕ್‌ ಆಟವಾಡಿ ಅಂಕಗಳಿಸಬೇಕು ಅತಿ ಹೆಚ್ಚು ಅಂಕ ಪಡೆದಿರುವ ಜೋಡಿ ಈ ವಾರ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಸ್ಪರ್ಧಿಸಲು ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ಈಗಾಗಲೇ ಬಿಗ್ ಬಾಸ್ ಸೃಷ್ಟಿ ಮಾಡಿರುವ ಜೋಡಿಗಳಲ್ಲಿ ಕ್ಯಾಪ್ಟನ್ ಆಗಿ ತ್ರಿವಿಕ್ರಮ್ ಹೊರ ಉಳಿದಿದ್ದರು ಇವರಿಗೂ ಜೋಡಿ ನೀಡಬೇಕು ಎಂದು ಮಹಿಳಾ ಸ್ಪರ್ಧಿಗಳ ಎದುರು ಒಂದು ಬಂಪರ್ ಆಫರ್ ಇಡುತ್ತಾರೆ. ಅದೇನಪ್ಪ ಅಂದ್ರೆ ಈ ವಾರದ ಟ್ರಂಪ್ ಕಾರ್ಡ್ ಸ್ಪರ್ಧಿಯಾಗಿ ತ್ರಿವಿಕ್ರಮ್ ಎಂಟ್ರಿ ಕೊಡಲಿದ್ದಾರೆ...ಅವರು ಆಟ ಶುರು ಮಾಡುತ್ತಿದ್ದಂತೆ ಅಂಕ ಸೇರ್ಪಡೆ ಆಗಲಿದೆ ಎಂದು. 

ಮಹಿಳಾ ಸ್ಪರ್ಧಿಗಳಲ್ಲಿ ಅನುಷಾ ರೈ, ಗೌತಮಿ, ಚೈತ್ರಾ ಕುಂದಾಪುರ ಮತ್ತು ಭವ್ಯಾ ಗೌಡ ಈ ಆಫರ್‌ನ ಒಪ್ಪಿಕೊಳ್ಳುತ್ತಾರೆ ಆದರೆ ಮೋಕ್ಷಿತಾ ಮತ್ತು ಐಶ್ವರ್ಯ ನೇರವಾಗಿ ರಿಜೆಕ್ಟ್ ಮಾಡುತ್ತಾರೆ. ಆಯ್ಕೆ ಮಾಡಿಕೊಂಡಿರುವ ನಾಲ್ಕು ಸ್ಪರ್ಧಿಗಳು ತ್ರಿವಿಕ್ರಮ್ ಮನವೋಲಿಸಬೇಕು. ಆದರೆ ನನಗೆ ಯಾರ ಕಾರಣನೂ ಇಷ್ಟವಾಗಲಿಲ್ಲ ಯಾರು ಬೇಡೆ ಎಂದು ತ್ರಿವಿಕ್ರಮ್ ನೇರವಾಗಿ ಹೇಳುತ್ತಾರೆ. ಆದರೂ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಭವ್ಯಾ ಗೌಡರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಇಲ್ಲಿ ಸಮಸ್ಯೆ ಆಗಿದ್ದು ಚೈತ್ರಾ ಕುಂದಾಪುರ ನಿರ್ಧಾರ...ಏಕೆಂದರೆ ಆಕೆ ಮೊದಲು ಬಿಗ್ ಬಾಸ್ ಆಫರ್‌ ಒಪ್ಪಿಕೊಂಡಿದ್ದು.

Tap to resize

Latest Videos

undefined

ಭಾವಿ ಪತಿ ಫೋಟೋ ರಿವೀಲ್ ಮಾಡಿದ 'ಲಕ್ಷ್ಮಿ ನಿವಾಸ' ಚಂದನಾ ಅನಂತಕೃಷ್ಣ; ಅತ್ತೆ-ಮಾವ ಕನ್ನಡ ಚಿತ್ರರಂಗದವರೇ!

'ಕ್ಯಾಪ್ಟನ್ ಅನ್ನೋದ್ದಕ್ಕಿಂತ ಹೆಚ್ಚಾಗಿ ತ್ರಿವಿಕ್ರಮ್ ದೈಹಿಕವಾಗಿ ಮಾನಸಿಕವಾಗಿ ಬಹಳ ಗಟ್ಟಿಯಾಗಿರುವ ವ್ಯಕ್ತಿ. ಯಾರೇ ಜೋಡಿಯಾದರೂ ಅವರು ಅದ್ಭುತವಾದ ಆಟಗಾರರಾಗಿರುತ್ತಾರೆ. ಆಯ್ಕೆಯನ್ನು ಒಪ್ಪುತ್ತೇನೆ' ಎಂದು ಚೈತ್ರಾ ಹೇಳಿದ್ದರು. ನಾಮಿನೇಷನ್‌ ಸಮಯದಲ್ಲಿ ಚೈತ್ರಾ ಕಣ್ಣೀರು ಹಾಕಿದ ಕಾರಣ ಶಿಶಿರ್‌ ಆಕೆಯನ್ನು ಸೇಫ್ ಮಾಡಿಕೊಂಡು ತಮ್ಮನ್ನು ನಾವು ನಾಮಿನೇಟ್ ಮಾಡಿಕೊಳ್ಳುತ್ತಾರೆ. 'ನಮ್ಮ ಬೋರ್ಡ್‌ನಲ್ಲಿ 150 ಅಂಕ ಇದೆ ಇಂಪ್ಯಾಕ್ಟ್‌ ಪ್ಲೇಯರ್ ಆಗಿ ಬರುವುದರಿಂದ 250 ಅಂಕ ಆಗುತ್ತದೆ ಅನ್ನೋ ಯೋಚನೆಯಲ್ಲಿ ಈಗ ನಿರ್ಧಾರ ತೆಗೆದುಕೊಂಡಿದ್ದು ಅಲ್ಲದೆ ಈ ವಾರ ನಾನು ನಾಮಿನೇಟ್ ಆಗಿಲ್ಲ ಮುಂದಿನ ವಾರ ಕ್ಯಾಪ್ಟನ್ ಆಗಿಬಿಟ್ಟರೆ ಮತ್ತೊಂದು ವಾರ ಎಕ್ಸಟ್ರಾ ಸಿಗುತ್ತದೆ. ಈಗಾಗಲೆ 3 ಬಾರಿ ಕ್ಯಾಪ್ಟನ್ ಟಾಸ್ಕ್‌ನಿಂದ ವಾಪಸ್ ಬಂದಿದೀನಿ. 6 ವಾರ ಕಂಟಿನ್ಯೂ ನಾಮಿನೇಟ್ ಆಗಿದ್ದೀನಿ....' ಎಂದು ಚೈತ್ರಾ ಕಾರಣ ಕೊಡುತ್ತಾರೆ ಆದರೆ ಇದರಿಂದ ಶಿಶಿರ್ ಗರಂ ಆಗುತ್ತಾರೆ.

ಗಂಡು ಮಕ್ಕಳಿಗೆ ಮಾತ್ರ ಪ್ರೈವೇಟ್ ಪಾರ್ಟ್‌ ಇರೋದಾ? ಹೆಣ್ಣುಮಕ್ಕಳಿಗೂ ಇರುತ್ತೆ;

'ನಾನು ಫೂಲ್. ಜೋಡಿಯಾದಾಗ ಮಾತುಗಳು ಸಖತ್ ಆಗಿ ಬರುತ್ತದೆ....ಬರೀ ಮಾತು ಇವರನ್ನು ನಂಬ್ತೀವಲ್ಲ ನಾವು ನಮ್ಮ ಎಕ್ಕಡ ತಗೋಂಡು ನಾವೇ ಹೊಡೆದುಕೊಳ್ಳಬೇಕು. ನನಗೆ ಚೈತ್ರಾ ಮುಖ ನೋಡಿದರೆ ಇಷ್ಟವಿಲ್ಲ ನನ್ನಂಥ ಶತಮೂರ್ಖ ಇನ್ನೊಬ್ಬ ಇಲ್ಲ. ಎಡವಟ್ಟು ಮಾಡ್ಕೊಂಡು ನಮಗೆ ಅಂದು ಅಂದು ಇಡ್ತಾರೆ. 12 ವರ್ಷ ಮಣ್ಣು ಹೊತ್ತಿರುವ ನಾವಲ್ಲ ಆಕ್ಟರ್‌ಗಳು ಇವರು ದೊಡ್ಡ ಅಕ್ಟರ್.ಸರಳ ಪದದ ಅರ್ಥ ಆಗಲ್ಲ ಆದರೆ ಪ್ರಪಂಚದಲ್ಲಿ ಮಿಕ್ಕೆಲ್ಲವೂ ಅರ್ಥವಾಗುತ್ತದೆ. ನಮ್ಮ ಹಣೆ ಮೇಲೆ ಫೂಲ್ ಅಂತ ಬರೆದುಬಿಡಿ ಪೂರ್ತಿ ವಾರ ಬರೆದುಕೊಂಡು ಓಡಾಡುತ್ತೀನಿ' ಎಂದು ಶಿಶಿರ್ ಗರಂ ಆಗುತ್ತಾರೆ. 

click me!