ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್‌ಬಾಸ್ ಮನೆಗೆ ಕಾಲಿಟ್ಟ ಗಾಯಕ ಹನುಮಂತಗೆ ಮನೆಯ ಕ್ಯಾಪ್ಟನ್ ಆಗುವ ಅವಕಾಶ ಒದಗಿಬಂದಿದೆ. ಜಗಳದಿಂದಾಗಿ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಬಂದ ನಂತರ ಈ ಬೆಳವಣಿಗೆ ನಡೆದಿದೆ.
ಬೆಂಗಳೂರು: ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಗಾಯಕ ಹನುಮಂತ ಎಂಟ್ರಿ ಕೊಟ್ಟಿದ್ದು, ಮನೆಗೆ ಬರುತ್ತಲೇ ಅದೃಷ್ಟ ಖುಲಾಯಿಸಿದೆ. ಮನೆಯಲ್ಲಿನ ಜಗಳದಿಂದಾಗಿ ವಾರದ ಮಧ್ಯೆಯೇ ಸ್ಪರ್ಧಿಗಳಾದ ಜಗದೀಶ್ ಮತ್ತು ರಂಜಿತ್ ಮನೆಯಿಂದ ಹೊರ ಬಂದಿದ್ದಾರೆ. ಹಾಗಾಗಿ ಈ ವಾರ ಮನೆಯಿಂದ ಮತ್ತೊಬ್ಬರು ಹೊರ ಹೋಗುವುದು ಅನುಮಾನವಾಗಿದೆ. ಹಂಸ ಬಿಗ್‌ಬಾಸ್ ಮನೆಯ ಮೊದಲ ಕ್ಯಾಪ್ಟನ್ ಆಗಿದ್ದರು. ಎರಡನೇ ವಾರ ಶಿಶಿರ್ ಮನೆಯ ಕ್ಯಾಪ್ಟನ್ ಆಗಿದ್ದರು. ಇದೀಗ ಮೂರನೇ ವಾರ ವೈಲ್ಡ್ ಕಾರ್ಡ್ ಆಗಿ ಬಂದ ಸ್ಪರ್ಧಿಯನ್ನೇ ಕ್ಯಾಪ್ಟನ್ ಎಂದು ಬಿಗ್‌ಬಾಸ್ ಘೋಷಣೆ ಮಾಡಿದ್ದರು. ಈ ಘೋಷಣೆಯಿಂದ ಮನೆಯಲ್ಲಿನ ಎಲ್ಲಾ ಸದಸ್ಯರು ಒಂದು ಕ್ಷಣ ಶಾಕ್ ಆಗಿದ್ದಾರೆ.
ಸರಿಗಮಪ ರಿಯಾಲಿಟಿ ಶೋ ಮೂಲಕ ಬೆಳಕಿಗೆ ಬಂದಿರುವ ಹನುಮಂತ ಅಂದರೆ ಕರುನಾಡಿನ ಜನತೆಗೆ ಅಚ್ಚುಮೆಚ್ಚು. ಸಿಂಗಿಂಗ್ ಜೊತೆ ಡ್ಯಾನ್ಸಿಂಗ್ ರಿಯಾಲಿಟಿ ಶೋನಲ್ಲಿಯೂ ಕಾಣಿಸಿಕೊಂಡಿರುವ ಹನುಮಂತ ತಮ್ಮ ಗ್ರಾಮೀಣ ಭಾಷೆಯ ಮೂಲಕವೇ ಎಲ್ಲರನ್ನು ಸೆಳೆಯುತ್ತಾರೆ. ಇದೀಗ ಬಿಗ್‌ಬಾಸ್ ವೇದಿಕೆಗೆ ಬಂದಿರುವ ಹನುಮಂತ ಮನೆಯಲ್ಲಿ ಹೇಗೆ ಇರ್ತಾರೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ.
undefined
ಕುರಿಗಾಹಿಯಾಗಿರುವ ಸಿಂಗರ್ ಹನುಮಂತು, ಡಾ.ರಾಜ್‌ಕುಮಾರ್ ಅಭಿನಯದ "ಬೆಳ್ಳಿ ಮೂಡಿತೋ, ಕೋಳಿ ಕೂಗಿತೋ" ಹಾಡಿನ ಮೂಲಕ ದೊಡ್ಮನೆಯನ್ನು ಪ್ರವೇಶಿಸಿದ್ದಾರೆ. ಇದೇ ಹಾಡಿಗೆ ಎಲ್ಲರ ಜೊತೆಯಲ್ಲಿ ಹಜ್ಜೆ ಹಾಕಿರುವ ಹನುಮಂತ್ ಎಲ್ಲಾ ಸದಸ್ಯರನ್ನು ಪರಿಚಯ ಮಾಡಿಕೊಂಡು ನೇರವಾಗಿ ಊಟಕ್ಕೆ ಕುಳಿತಂತೆ ಕಾಣಿಸುತ್ತಿದೆ. ಬಿಗ್‌ಬಾಸ್ ಸ್ವಾಗತ ಕೋರಿದ್ರೆ, ಸದ್ಯ ಊಟ ಮಾಡ್ತಿದ್ದೀನಿ. ಏನು ಮಾತನಾಡಬೇಕು ಎಂದು ಯೋಚಿಸಿಲ್ಲ. ಆಮೇಲೆ ಮಾತನಾಡುತ್ತೇನೆ ಎಂದು ಹೇಳುವ ಮೂಲಕ ಮನೆಯಲ್ಲಿನ ಎಲ್ಲಾ ಸದಸ್ಯರನ್ನು ನಗಿಸಿದ್ದಾರೆ.
ಉಗ್ರಂ ಮಂಜು, ಚೈತ್ರಾ, ಮಾನಸಗೆ ಪಂಚಾಯ್ತಿಯಲ್ಲಿ ಬೆಂಡೆತ್ತಿದ ಕಿಚ್ಚ ಸುದೀಪ್
ಮತ್ತೊಂದು ದೃಶ್ಯದಲ್ಲಿ ಧನರಾಜ್ ಜೊತೆಗಿನ ಸಂಭಾಷಣೆಯನ್ನ ಪ್ರೋಮೋದಲ್ಲಿ ತೋರಿಸಲಾಗಿದೆ. ನೀವು ಇಂಡಿಯನ್ ಅಥವಾ ವೆಸ್ಟರ್ನ್ ಟಾಯ್ಲೆಟ್ ಬಳಕೆ ಮಾಡ್ತೀರಾ ಎಂದು ಕೇಳುತ್ತಾರೆ. ಇದಕ್ಕೆ ಹೊರಗೆ ಅಷ್ಟು ದೊಡ್ಡ ಗಾರ್ಡನ್ ಇದೆ ಅಲ್ಲವಾ? ಅಲ್ಲೇ ಕೂರೋಣ ಬಾ ಎಂದು ಕರೆದುಕೊಂಡು ಬರುತ್ತಾರೆ. ಮತ್ತೊಂದೆಡೆ ಎಲ್ಲಾ ಸದಸ್ಯರ ಮುಂದೆಯೇ ನಾನು ವಾಶ್‌ರೂಮ್‌ಗೆ ಹೋಗಬೇಕು ಎಂದು ಹೇಳಿದ್ದಾರೆ.
ಹಾವೇರಿ ಜಿಲ್ಲೆಯವರಾಗಿರುವ ಹನುಮಂತ ಫಿಲ್ಟರ್ ಇಲ್ಲದೇ ಮಾತನಾಡುವ ವ್ಯಕ್ತಿಯಾಗಿದ್ದು, ತಮ್ಮ ಅಭಿಪ್ರಾಯಗಳನ್ನು ನೇರವಾಗಿ ಹಂಚಿಕೊಳ್ಳುತ್ತಾರೆ. ಈಗಾಗಲೇ ಮನೆಯಲ್ಲಿ ಮೂರು ವಾರ ಕಳೆದಿರುವ ಎಲ್ಲಾ ಸದಸ್ಯರ ಜೊತೆ ಹನುಮಂತ್ ಹೇಗಿರುತ್ತಾನೆ? ಅದರಲ್ಲಿಯೂ ಕ್ಯಾಪ್ಟನ್ ಆಗಿರುವ ಕಾರಣ, ಹನುಮಂತ್ ಹಲವು ವಿಶೇಷ ಅಧಿಕಾರಗಳನ್ನು ಹೊಂದಿರುತ್ತಾನೆ.
ಸಾಧ್ಯ ಆದ್ರೆ ನನ್ನನ್ನು ಮತ್ತೆ ಕರೆಸಿಕೊಳ್ಳಿ: ಸುದೀಪ್ ಮುಂದೆ ಬಿಗ್‌ಬಾಸ್ ಗೆ ಕ್ಷಮೆ ಕೇಳಿದ ಜಗದೀಶ್