Bigg Boss 18: ಸ್ಪರ್ಧಿಯಾಗಿ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಿದ್ದ ಕತ್ತೆ ಒಂದೇ ವಾರದಲ್ಲಿ ಹೊರಕ್ಕೆ!

By Ravi Janekal  |  First Published Oct 14, 2024, 8:03 PM IST

ಹಿಂದಿ ಬಿಗ್ ಬಾಸ್ ಶೋನಲ್ಲಿ ಕತ್ತೆಯನ್ನು ಸ್ಪರ್ಧಿಯಾಗಿ ತಂದಿರುವುದಕ್ಕೆ ಪ್ರಾಣಿ ಪ್ರಿಯರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಮೊದಲ ವಾರದಲ್ಲೇ ಎಲಿಮಿನೇಟ್ ಆಗಿದೆ.


Biggboss 18: ಅತಿದೊಡ್ಡ ರಿಯಾಲಿಟಿ ಶೋ ಎಂದು ಗುರುತಿಸಿಕೊಂಡಿರುವ 'ಬಿಗ್ ಬಾಸ್' ಎಲ್ಲಾ ಭಾಷೆಗಳಲ್ಲಿ ಹೆಚ್ಚು ವೀಕ್ಷರನ್ನು ಗಳಿಸಿ ಟಿಆರ್‌ಪಿಯಲ್ಲಿ ಮುಂಚೂಣಿಯಲ್ಲಿದೆ. ಸದ್ಯ ಈ ರಿಯಾಲಿಟಿ ಶೋ ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಯಶಸ್ವಿಯಾಗಿ ಮುಂದುವರಿದಿದೆ. ಇತ್ತೀಚೆಗಷ್ಟೇ ಈ ಶೋ ಹಿಂದಿಯಲ್ಲಿ ಆರಂಭವಾಗಿದೆ. ಬಿಗ್ ಬಾಸ್ 18ನೇ ಸೀಸನ್ ಕಳೆದ ಭಾನುವಾರ ಆರಂಭವಾಗಿದೆ. ಬಾಲಿವುಡ್ ಸ್ಟಾರ್ ಹೀರೋ ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಈ ಶೋ ಮೊದಲ ದಿನವೇ ವಿವಾದಕ್ಕೆ ಕಾರಣವಾಗಿದೆ. ಈ ಬಾರಿ ಒಟ್ಟು 18 ಸ್ಪರ್ಧಿಗಳನ್ನು ಮನೆಯೊಳಗೆ ಕಳುಹಿಸಲಾಗಿದ್ದು, ಸ್ಪರ್ಧಿಗಳ ಪೈಕಿ ಕತ್ತೆ ಇರುವುದು ಸಂಚಲನ ಮೂಡಿಸಿದೆ. ಆದರೆ ಇದೇ ಮುಳುವಾಗಿದೆ. ಹೌದು ಮನರಂಜನೆಗಾಗಿ ಮೂಕ ಜೀವಿಗಳಿಗೆ ಹಿಂಸೆ ನೀಡುತ್ತಿದ್ದಾರೆ ಎಂಬ ಸೋಷಿಯಲ್ ಮೀಡಿಯಾಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ, ಇದು ವೈರಲ್ ಆಗುತ್ತಿದ್ದಂತೆ ಕೂಡಲೇ ಬಿಗ್‌ ಬಾಸ್ ರಿಯಾಲಿಟಿ ಶೋನಲ್ಲಿ ಕತ್ತೆಯನ್ನು ಶೋನಿಂದ ಹೊರ ಹಾಕುವಂತೆ ಒತ್ತಾಯ ಕೇಳಿಬಂದಿದೆ. ರಿಯಾಲಿಟಿ ಶೋನಲ್ಲಿ ಕತ್ತೆಯನ್ನು ಸೇರಿಸಿದ್ದಕ್ಕೆ 'ಪೇಟಾ ಇಂಡಿಯಾ' ಕೂಡ ಅಸಮಾಧಾನ ವ್ಯಕ್ತಪಡಿಸಿದೆ.

ಮೊದಲ ವಾರದಲ್ಲೇ ಕತ್ತೆ  ಬಿಗ್‌ಬಾಸ್‌ನಿಂದ ಎಲಿಮಿನೇಟ್:

Tap to resize

Latest Videos

undefined

ಬಿಗ್ ಬಾಸ್ ಶೋಗೆ ಕತ್ತೆ ತಂದಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಆಡಳಿತ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ. ಕತ್ತೆ  ಬಿಗ್‌ಬಾಸ್‌ನಿಂದ ಎಲಿಮಿನೇಟ್ ಮಾಡಲಾಗಿದೆ. ಈ ವಿಷಯವನ್ನು ಬಿಗ್ ಬಾಸ್ ಮ್ಯಾನೇಜ್‌ಮೆಂಟ್ ತಿಳಿಸಿದೆ. ಪ್ರಾಣಿ ಪ್ರಿಯರ ಮನವಿಯಿಂದಾಗಿ ಕತ್ತೆಯನ್ನು ಪ್ರದರ್ಶನದಿಂದ ಹೊರಗಿಡಲಾಗಿದೆ ಎಂದು ಅದು ಹೇಳಿಕೊಂಡಿದೆ.

ಬಿಗ್​ಬಾಸ್​ನವ್ರು ಕರೆದಾಗ ಕದ್ದು ಮುಚ್ಚಿ ಶೂಟಿಂಗ್​ ಮಾಡಿ ಬರ್ತೇನೆ ಎಂದ ರಾಖಿ ಸಾವಂತ್​! ದುಬೈನಿಂದ ಸಂದರ್ಶನ

ಅ.6 ರಿಂದ ಆರಂಭವಾಗಿರುವ ಬಿಗ್‌ಬಾಸ್:

ಹಿಂದಿಯ ಬಿಗ್ ಬಾಸ್ ಶೋ ಅಕ್ಟೋಬರ್ 6 ರಿಂದ ಆರಂಭವಾಗಿದೆ.  ಇದರಲ್ಲಿ ಕತ್ತೆಯನ್ನು ಸ್ಪರ್ಧಿಯಾಗಿ ತೆಗೆದುಕೊಳ್ಳಲಾಗಿತ್ತು. ಬಿಗ್ ಬಾಸ್ ಮನೆಯಲ್ಲಿ ಕತ್ತೆಗೇನು ಕೆಲಸ ಅಂತೀರಾ? ಇಲ್ಲಿದೆ ನೋಡಿ. ಕತ್ತೆಯನ್ನು ಗಾರ್ಡನ್ ಸ್ಥಳದಲ್ಲಿ ವಿಶೇಷ ಸ್ಥಾನವನ್ನು ನಿಗದಿಪಡಿಸಲಾಗಿತ್ತು. ಅದರ ಸೇವೆ ಮಾಡುವಂತೆ  ಸಲ್ಮಾನ್ ಖಾನ್‌ ಸ್ಪರ್ಧಿಗಳಿಗೆ ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ಪೇಟಾ ಇಂಡಿಯಾ ಬಿಗ್ ಬಾಸ್ ಶೋ ಜೊತೆಗೆ ಸಲ್ಮಾನ್ ಗೆ ಪತ್ರ ಬರೆದಿತ್ತು, ' ನಿಮ್ಮ ಮೋಜಿಗಾಗಿ ಮೂಕ ಜೀವಿಗಳಿಗೆ ತೊಂದರೆ ಕೊಡುವುದು ಒಳ್ಳೆಯದಲ್ಲ. ಹೊರಗೆ ಖುಷಿಪಡಬೇಕಾದ ಕತ್ತೆಯನ್ನು ವಿದ್ಯುತ್ ದೀಪಗಳು ಮತ್ತು ಸಂಗೀತದಿಂದ ಅದಕ್ಕೆ ಹಿಂಸೆಯಾಗುತ್ತದೆ.ತಕ್ಷಣ ಕತ್ತೆಯನ್ನು ಈ ಪ್ರದರ್ಶನದಿಂದ ಹೊರಗೆ ಕಳುಹಿಸಬೇಕು ಎಂದು ಪತ್ರದ ಮೂಲಕ ತಿಳಿಸಿದ್ದರು.

. ಈ ಪತ್ರಕ್ಕೆ ಬಿಗ್ ಬಾಸ್ ಆಯೋಜಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮೊದಲ ವಾರದಲ್ಲಿಯೇ ಕತ್ತೆಯನ್ನು ಹೊರಗೆ ಕಳುಹಿಸಲಾಯಿತು. ಕತ್ತೆಯನ್ನು ಹೊರಗೆ ಕಳುಹಿಸುವ ಉದ್ದೇಶ ಇಲ್ಲದಿದ್ದರೂ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಿಂದಿ ಬಿಗ್ ಬಾಸ್ 18 ರಿಯಾಲಿಟಿ ಶೋ ಕಲರ್ಸ್ ಟಿವಿಯಲ್ಲಿ ಪ್ರಸಾರವಾಗುತ್ತದೆ. ಇದು ಜಿಯೋ ಸಿನಿಮಾ ಆಪ್‌ನಲ್ಲೂ ಸ್ಟ್ರೀಮಿಂಗ್ ಆಗುತ್ತಿದೆ.  

click me!