ಪುಟ್ಟಕ್ಕನ ಮಕ್ಕಳು ಸಹನಾ- ಕಾಳಿ ಫುಲ್ ಎಂಜಾಯ್ ಮೂಡ್ನಲ್ಲಿದ್ದಾರೆ. ಸಹನಾಳನ್ನು ರಿಯಲ್ನಲ್ಲಿ ಕಾಳಿ ಹೇಗೆಲ್ಲಾ ಗೋಳು ಹೊಯ್ಕೊತಾನೆ ನೋಡಿ: ವಿಡಿಯೋ ವೈರಲ್
ಪುಟ್ಟಕ್ಕನ ಮಕ್ಕಳು (Puttakana Makkalu) ಸೀರಿಯಲ್ನಲ್ಲಿ ಸ್ನೇಹಾ ಸತ್ತಾಗಿದೆ. ಹೊಸ ಸ್ನೇಹಾ ಬಂದಿದ್ದಾಳೆ. ಈಕೆಯನ್ನು ನೋಡಿದರೆ, ಕಂಠಿ ಸಿಡಿದು ಬೀಳುತ್ತಿದ್ದಾನೆ. ಕಂಠಿ ಮತ್ತು ಹಳೆ ಸ್ನೇಹಾಳ ಹೃದಯವನ್ನು ಹೊತ್ತಿರುವ ಈ ಹೊಸ ಸ್ನೇಹಾ ನಡುವೆ ಲವ್ ಸ್ಟೋರಿ ಯಾವಾಗ ಆರಂಭ ಆಗತ್ತೆ ಎನ್ನೋದನ್ನು ವೀಕ್ಷಕರು ಕಾಯ್ತಿದ್ದಾರೆ. ಅದೇ ಹೊತ್ತಿನಲ್ಲಿ, ಇನ್ನೊಂದೆಡೆ, ಸಹನಾ ಹೊಸ ಹೋಟೆಲ್ ಆರಂಭಕ್ಕೆ ನಾಂದಿ ಹಾಡುತ್ತಿದ್ದಾಳೆ. ಮಂಡ್ಯದಲ್ಲಿ ಹೊಸ ಜಾಗ ನೋಡಿರುವುದಾಗಿ ಕಾಳಿ ಹೇಳಿದ್ದಾನೆ. ಮೊದಲಿಗೆ ಸಹನಾ ಇದನ್ನು ಒಪ್ಪಿರಲ್ಲ. ಆದರೆ ಅಮ್ಮನ ಮಾತು ಕೇಳದೇ ಸಿಟಿಗೆ ಹೋಗಿದ್ದು ಏನಾದರೊಂದು ಸಾಧನೆ ಮಾಡಬೇಕು ಎಂದು ತಾನೆ, ಹಾಗಿದ್ರೆ, ಈ ಹೊಸ ಮೆಸ್ ಶುರು ಮಾಡು ಎಂದು ಪುಟ್ಟಕ್ಕ ಧೈರ್ಯ ತುಂಬಿದ್ದಾಳೆ. ಕಾಳಿ ಜೊತೆ, ಮ್ಯಾಕ್ಸಿನೂ ಸೇರಿಕೊಂಡಿದ್ದಾನೆ. ಸಹನಾ, ಈ ಹಿಂದೆ ತಿಂಡಿ ಗಾಡಿ ನಡೆಸ್ತಿದ್ದಾಗ ಸಹಾಯ ಮಾಡ್ತಿದ್ದ ಕಾಳಿ ಮತ್ತು ಮ್ಯಾಕ್ಸಿ ಇಬ್ಬರೂ ಈ ಸಹನಾಗೆ ಸಹಾಯ ಮಾಡಲು ಮುಂದೆ ಬಂದಿದ್ದಾಳೆ. ಇಬ್ಬರೂ ಸಹನಾಳನ್ನು ಲವ್ ಮಾಡ್ತಿರೋ ಹಾಗೆ ಕಾಣಿಸ್ತಿದೆ. ಸಹನಾ ಮತ್ತು ಕಾಳಿ ಮದ್ವೆ ಮಾಡಿಸಿ ಎಂದು ನೆಟ್ಟಿಗರು ಹೇಳ್ತಿದ್ದಾರೆ.
ಇದರ ನಡುವೆಯೇ, ಶೂಟಿಂಗ್ಗೆ ಹೋಗುವ ಸಮಯದಲ್ಲಿ ಕಾಳಿ ಸಹನಾಳನ್ನು ಹೇಗೆಲ್ಲಾ ಗೋಳು ಹೊಯ್ಕೊತಾನೆ ಎನ್ನುವ ವಿಡಿಯೋ ವೈರಲ್ ಆಗಿದೆ. ಡಿ.ವಿ.ಡ್ರೀಮ್ಸ್ ಯೂಟ್ಯೂಬ್ ಚಾನೆಲ್ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ. ಇದರಲ್ಲಿ ಪುಟ್ಟಕ್ಕನ ಮಕ್ಕಳು ನಟ-ನಟಿಯರು ಹಾಗೂ ತಾಂತ್ರಿಕ ತಂಡದವರು ಕಾರಿನಲ್ಲಿ ಹೋಗುವುದನ್ನು ನೋಡಬಹುದು. ಸಹನಾ ಚಿಪ್ಸ್ ತಂದು ಅದನ್ನು ಬಚ್ಚಿಟ್ಟುಕೊಂಡು ಒಬ್ಬಳೇ ತಿನ್ನುತ್ತಿದ್ದಾಳೆ ಎಂದು ಕಾಳಿ ಕಾಲೆಳೆಯುತ್ತಿದ್ದಾನೆ. ನಾನು ಹಾಗೇನೂ ಮಾಡ್ತಿಲ್ಲ ಎಂದು ಸಹನಾ ಹೇಳ್ತಿದ್ದಾಳೆ. ಒಟ್ಟಿನಲ್ಲಿ ಸೀರಿಯಲ್ ತಂಡದವರು ಸಿಕ್ಕ ಟೈಮ್ನಲ್ಲಿ ಎಷ್ಟೊಂದು ಎಂಜಾಯ್ ಮಾಡುತ್ತಾರೆ ಎನ್ನುವುದನ್ನು ಇದರಲ್ಲಿ ನೋಡಬಹುದು.
undefined
ಮಸಣದ ಹೂವಿನ ಅಪರ್ಣಾ ರೀತಿಯ ಆ ಪಾತ್ರ ನನ್ನ ಜೀವನದ ಕನಸು- ಮನದಾಸೆ ತೆರೆದಿಟ್ಟ ಭಾಗ್ಯಲಕ್ಷ್ಮಿ ಕುಸುಮತ್ತೆ!
ಇನ್ನು ಸಹನಾ ಕುರಿತು ಹೇಳುವುದಾದರೆ, ಈಕೆ ರಿಯಲ್ ಹೆಸರು ಅಕ್ಷರಾ. (Akshara). ಪುಟ್ಟಕ್ಕನ ಮಗಳು ಸೀರಿಯಲ್ನಲ್ಲಿ ಹೆಚ್ಚು ಕಲಿಯದೇ ಇರುವ ಸಹನಾ, ನಿಜ ಜೀವನದಲ್ಲಿ ಫೈನಾನ್ಸ್ನಲ್ಲಿ ಎಂಬಿಎ ಪದವೀಧರೆ. ಈ ಸೀರಿಯಲ್ಗೂ ಬರುವ ಮುನ್ನೆ ಕೆಲವು ಧಾರಾವಾಹಿಯಲ್ಲಿ ಅಕ್ಷರಾ ನಟಿಸಿದ್ದಾರೆ. ‘ಅಮ್ನೋರು’ ಧಾರಾವಾಹಿಯ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿ ಸೈ ಎನಿಸಿಕೊಂಡಿರುವ ಇವರಿಗೆ ‘ಪುಟ್ಟಕ್ಕನ ಮಕ್ಕಳು’ ಸಕತ್ ಹೆಸರು ತಂದುಕೊಡುತ್ತಿದೆ. ರಕ್ಷಾ ಬಂಧನ ಸೀರಿಯಲ್ನಲ್ಲಿಯೂ ನಟಿಸಿದ್ದಾರೆ. ಇನ್ನು ಕಾಳಿ ಪಾತ್ರಧಾರಿ ಹೆಸರು ಅನಿರೀಶ್.
ಸೋಷಿಯಲ್ ಮೀಡಿಯಾದಲ್ಲಿಯೂ ಇಬ್ಬರೂ ಸಕತ್ ಆ್ಯಕ್ಟೀವ್ ಆಗಿದ್ದಾರೆ. ಅಕ್ಷರಾ ಅವರು, ಮಾಡರ್ನ್ ಡ್ರೆಸ್ನಲ್ಲಿ ಮಿಂಚಿದರೆ ಅಬ್ಬಬ್ಬಾ ನಮ್ಮ ಸಹನಾ ಇವರೇನಾ ಎಂದು ನಿಬ್ಬೆರಗಾಗಿ ನೋಡಬೇಕು. ಪುಟ್ಟಕ್ಕನ ಮಗಕ್ಕಳು ಸೀರಿಯಲ್ನಲ್ಲಿ ಸೀರೆಯುಟ್ಟು ಹಳ್ಳಿ ಹುಡುಗಿ ಲುಕ್‌ನಲ್ಲಿ ಕ್ಯೂಟ್ ಆಗಿ ಕಾಣುವ ಅಕ್ಷರ, ಮಾಡೆಲಿಂಗ್‌ನಲ್ಲಿಯೂ ಎತ್ತಿದ ಕೈ. ಅಂದಹಾಗೆ ಇವರು ಹುಟ್ಟಿದ್ದು, ಬೆಂಗಳೂರಿನಲ್ಲಿ. ಸೀರಿಯಲ್ಗೆ ಪದಾರ್ಪಣೆ ಮಾಡಲು ಅಪ್ಪ-ಅಮ್ಮನೇ ಕಾರಣ ಎಂದಿರುವ ಅಕ್ಷರಾ ಅವರು, ತಮಗೆ ಅವರೇ ಸಪೋರ್ಟ್ ಮಾಡುತ್ತಾರೆ ಎಂದಿದ್ದಾರೆ. ಇನ್ನು ಈ ಸೀರಿಯಲ್ನಲ್ಲಿ ಉಮಾಶ್ರೀಯಂಥ ಹಿರಿಯ ನಟಿಯ ಜೊತೆ ನಟಿಸುವ ಭಾಗ್ಯ ತಮಗೆ ಲಭಿಸಿದ್ದು, ಪುಣ್ಯ ಎನ್ನುವ ಅಕ್ಷರಾ ಅವರ, ಯಾವುದೇ ತಪ್ಪುಗಳು ಸಂಭವಿಸಿದರೂ ಅಲ್ಲಿ ಅದನ್ನು ಸರಿಪಡಿಸಿ ಉತ್ತಮವಾಗಿ ನಟಿಸಲು ಸಲಹೆಗಳನ್ನು ನೀಡುತ್ತಾರೆ ಎನ್ನುತ್ತಾರೆ.
ಆ್ಯಂಕರ್ ಅನುಶ್ರೀ ಜೊತೆ ಕಿಚ್ಚ ಸುದೀಪ್! ಅಭಿಮಾನಿಗಳು ಕಾತರದಿಂದ ಕಾಯ್ತಿರೋ ದಿನ ಬಂದೇ ಬಿಡ್ತು...