ನೋವಿನಲ್ಲೂ ನಿರೂಪಣೆ, ವೇದಿಕೆಯಲ್ಲೇ ಕಣ್ಣೀರಿಟ್ಟು ಅಮ್ಮನಿಗೆ ಬಿಗ್‌ಬಾಸ್‌ ಇಷ್ಟ ಎಂದ ಕಿಚ್ಚ

By Gowthami K  |  First Published Nov 2, 2024, 3:34 PM IST

ತಾಯಿ ಸರೋಜಾ ಅಗಲಿಕೆಯ ನಂತರ ಮೊಟ ಮೊದಲ ಬಾರಿಗೆ ಕಿಚ್ಚ ಸುದೀಪ್ ಬಿಗ್‌ಬಾಸ್ ವೇದಿಕೆಗೆ ಮರಳಿದ್ದಾರೆ. ವಾಸುಕಿ ವೈಭವ್ ಅವರು ಕಿಚ್ಚನ ತಾಯಿಗೆ ಸಂಗೀತದ ಮೂಲಕ ಗೌರವ ಸಲ್ಲಿಸಿದರು. 


ಬಿಗ್‌ಬಾಸ್‌ ಕನ್ನಡ 11ಕ್ಕೆ ನಟ ಕಿಚ್ಚ ಸುದೀಪ್  ಮರಳಿದ್ದಾರೆ. ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮ ನಡೆಸಲು ತನ್ನ ಕರ್ತವ್ಯ ನಿರ್ವಹಿಸಲು ಬಂದರು. ಮೊದಲು ಬಂದವರೇ 2 ವಾರದಿಂದ ನಾನು ಬಂದಿಲ್ಲ ಕ್ಷಮೆ ಇರಲಿ ಎಂದರು. ಈ ಶೋ ಪ್ರಾರಂಭವಾದ ದಿನ, ‘ನೋಡಮ್ಮ ಶೇರ್ವಾನಿ ಧರಿಸಿದ್ದೀನಿ, ಬರಿಗಾಲಲ್ಲಿ ಇದ್ದೀನಿ, ಓಕೆ ನಾ’ ಎಂದು ತಮ್ಮ ತಾಯಿಯನ್ನು ಬಿಗ್​ಬಾಸ್ ವೇದಿಕೆ ಮೂಲಕ ಮಾತನಾಡಿಸಿ ಶೋ ಪ್ರಾರಂಭ ಮಾಡಿದ್ದರು ಸುದೀಪ್. ಇದೇ ವಿಷಯವನ್ನು ಬಿಗ್​ಬಾಸ್ ನೆನಪು ಮಾಡಿಸಿದರು. 

ತಾಯಿಯನ್ನು ನೆನೆದು ಕಿಚ್ಚ ವೇದಿಕೆಯಲ್ಲಿ ಕಣ್ಣೀರು ಹಾಕಿದ್ದಾರೆ. "ಪ್ರೇಕ್ಷಕರನ್ನು ರಂಜಿಸುವ ಮಾಣಿಕ್ಯನಂತ ನಾಯಕನನ್ನು ಕರುನಾಡ ಮಡಿಲಿಗೆ ಹಾಕಿ, ತನ್ನ ಪ್ರೀತಿಯನ್ನು ಮನೆ ಮನೆಯ ಜೊತೆಗೂ ಹಂಚಿಕೊಂಡ ನಿಮ್ಮ ತಾಯಿಯ ಅಗಲಿಕೆ ಭರಿಸಲಾಗದ ಭಾರ. ಎಂದು ಬಿಗ್‌ಬಾಸ್  ಹೇಳಿದ್ದಾರೆ.

Tap to resize

Latest Videos

undefined

ಮಗಳ ಮೊದಲ ಫೋಟೋ ಹಂಚಿಕೊಂಡು, ಪುತ್ರಿಯ ಹೆಸರು ಬಹಿರಂಗಪಡಿಸಿದ ರಣವೀರ್-ದೀಪಿಕಾ!

ಕಿಚ್ಚನ ಕೋಟಿಕೊಬ್ಬ 2 ಚಿತ್ರದ ಹಾಡು ಪರಪಂಚ ನೀನೇ ನನ್ನ ಪರಪಂಚ ನೀನೆ ಎಂದು ಹಾಡುತ್ತಾ ಮಾಜಿ ಬಿಗ್‌ಬಾಸ್‌ ಸ್ಪರ್ಧಿ, ಸಿಂಗರ್‌  ವಾಸುಕಿ ವೈಭವ್‌ ಸ್ಟೇಜ್‌ ಗೆ ಬಂದರು. ಹಾಡಿನ ಮೂಲಕ ಕಿಚ್ಚನ ತಾಯಿಗೆ ಮ್ಯೂಸಿಕ್‌ ಟ್ರಿಬ್ಯೂಟ್‌ ನೀಡಲಾಗಿದೆ. ಶೋ ನೋಡಲು ಬಂದ ಪ್ರೇಕ್ಷಕರು ಬಿಳಿ ಬಟ್ಟೆ ಧರಿಸಿ ಕ್ಯಾಂಡಲ್ ಹಚ್ಚಿ ಶೃದ್ದಾಂಜಲಿ ಸೂಚಿಸಿದ್ದಾರೆ.

ಇನ್ನು ಟ್ರಿಬ್ಯೂಟ್‌ ಮುಗಿದ ಬಳಿಕ ವಾಸುಕಿ ವೈಭವ್ ನಿಮ್ಮ ತಾಯಿಯಿಂದ ನಾನು ಆಶೀರ್ವಾದ ಪಡೆದಿದ್ದೇನೆ. ಊಟ ಹಾಕಿದ್ದಾರೆ, ನಿಮ್ಮ ನೋವಲ್ಲಿ ನಾವು ಇದ್ದೀವಿ ಎಂದರು. ಇದಕ್ಕೆ ಕಿಚ್ಚ ನಾನೇನು ಹೇಳಲಿ ತಾಯಿಗೆ ಬಿಗ್‌ಬಾಸ್‌ ತುಂಬಾ ಇಷ್ಟ ಎಂದು, ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯ ಸಲ್ಲಿಸಿ ಶೋ ಆರಂಭಿಸಿದರು.

ಕಿಚ್ಚನ ಈ ಕರ್ತವ್ಯ ಪ್ರಜ್ಞೆಯನ್ನು ಎಲ್ಲರೂ ಮೆಚ್ಚಿದ್ದಾರೆ. ನೋವಿನಲ್ಲಿ ನಿಮ್ಮ ಜವಾಬ್ದಾರಿ ನಿಭಾಯಿಸೋ ನಿಮ್ಮ ಈ ಕಾರ್ಯಕ್ಕೆ ಯಾರು ಸರಿ ಸಾಟಿ ಇಲ್ಲ. ಹೆತ್ತ ತಾಯಿ ನ ಕಳ್ಕೊಂಡ್ರು ಕೂಡ ಕರ್ತವ್ಯ ಕ್ಕೆ ಹಾಜರಾಗುವ ನಿಮ್ಮ ಗುಣ ಎಲ್ಲರಿಗೂ ಇಷ್ಟ ಆಗುತ್ತೆ ಎಂದು ಹಲವರು ಸೋಷಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡಿದ್ದಾರೆ.

ತ್ರಿವಿಕ್ರಮ್‌ ಗೌತಮಿ ಬಿಟ್ಟು ಈ ವಾರ ಮನೆಯಿಂದ ಹೊರಹೋಗಲು ಕ್ಯಾಪ್ಟನ್‌ ಹನುಮಂತ ಸಹಿತ ಎಲ್ಲರೂ ನಾಮಿನೇಟ್!

ಕಿಚ್ಚ ಸುದೀಪ್​ ಅವರ ತಾಯಿ ಸರೋಜಾ ಸಂಜೀವ್ ಅವರು ಅಕ್ಟೋಬರ್​ 20ರಂದು ನಿಧನರಾದರು. ಇಡೀ ಕನ್ನಡ ನಾಡು ಮಾತ್ರವಲ್ಲ ಭಾರತೀಯ ಚಿತ್ರರಂಗವೇ ಸರೋಜಾ ಅವರ ಅಗಲಿಗೆ ಸಂತಾಪ ಸೂಚಿಸಿತ್ತು. ಪ್ರಧಾನಿ ಮೋದಿ ಕೂಡ ವೈಯಕ್ತಿಕವಾಗಿ ಸುದೀಪ್‌ ಅವರಿಗೆ ಪತ್ರ ಬರೆದು ಸಂತಾಪ್ ಸೂಚಿಸಿದ್ದರು.  ಹೀಗಾಗಿ ಕಳೆದವಾರ ಕಿಚ್ಚ ಸುದೀಪ್‌ ಬಿಗ್‌ಬಾಸ್ ಶೋ ನಡೆಸಿ ಕೊಡಲು ಬಂದಿರಲಿಲ್ಲ. ಬದಲಾಗಿ ಬಿಗ್‌ಬಾಸ್‌ ಮನೆಗೆ ಯೋಗರಾಜ್ ಭಟ್‌ ಮತ್ತು ಸೃಜನ್ ಲೋಕೇಶ್ ವಿಶೇಷ ಅತಿಥಿಯಾಗಿ ಬಂದಿದ್ದರು.

ಯಾರೆಲ್ಲ ನಾಮಿನೇಟ್‌: ಬಿಗ್‌ಬಾಸ್‌ ಕನ್ನಡ 11ರಲ್ಲಿ ಈ ವಾರ ಮನೆಯಿಂದ ಹೊರಹೋಗಲು ಗೌತಮಿ ಮತ್ತು ತ್ರಿವಿಕ್ರಮ್‌ ಬಿಟ್ಟು ಎಲ್ಲರೂ  ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್‌ ಹನುಮಂತ ಆಯ್ಕೆಯ ಅನುಸಾರ ಗೋಲ್ಡ್ ಸುರೇಶ್ ಅವರು ನೇರ ನಾಮಿನೇಟ್ ಆಗಿದ್ದಾರೆ. ಜೊತೆಗೆ ಮನೆಯಿಂದ ಹೊರಹೋಗುವಾಗ ವಿಶೇಷ ಅಧಿಕಾರದಿಂದ ಹಂಸಾ ಅವರು ಹನುಮಂತ ಅವರನ್ನು ನಾಮಿನೇಟ್‌ ಮಾಡಿದ್ದರು. ಮಿಕ್ಕಂತೆ ಭವ್ಯಾ ಗೌಡ, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ,  ತುಕಾಲಿ ಮಾನಸ ,  ಉಗ್ರಂ ಮಂಜು, ಅನುಷಾ ರೈ , ಧರ್ಮ ಕೀರ್ತಿರಾಜ್ ,  ಐಶ್ವರ್ಯಾ, ಧನ್‌ರಾಜ್,‌  ಶಿಶರ್ ಶಾಸ್ತ್ರಿ ನಾಮಿನೇಟ್‌ ಆಗಿದ್ದಾರೆ. ಹೀಗಾಗಿ ಈ ವಾರ ಮನೆಯಿಂದ ದೀಪಾವಳಿ ಉಡುಗೊರೆಯಾಗಿ ಯಾರಿಗೆ ಸಿಹಿ ಮತ್ತು ಯಾರಿಗೆ ಕಹಿ ಎಂಬುದನ್ನು ಕಾದು ನೋಡಬೇಕಿದೆ.

click me!