ಬಿಗ್​ ಬಾಸ್​ ಮೇಲೆ ಹೊಸದೊಂದು ಅನುಮಾನ, ತ್ರಿವಿಕ್ರಮ್‌ಗೆ ಸ್ಪರ್ಧಿಗಳ ಹೆಸರು ಶೋ ಮುಂಚೆನೇ ಸಿಕ್ಕಿತ್ತಾ?

Published : Oct 29, 2024, 12:06 AM IST
ಬಿಗ್​ ಬಾಸ್​  ಮೇಲೆ ಹೊಸದೊಂದು ಅನುಮಾನ, ತ್ರಿವಿಕ್ರಮ್‌ಗೆ ಸ್ಪರ್ಧಿಗಳ ಹೆಸರು ಶೋ ಮುಂಚೆನೇ ಸಿಕ್ಕಿತ್ತಾ?

ಸಾರಾಂಶ

ಬಿಗ್​ ಬಾಸ್​ ಕನ್ನಡ 11ರ ಮನೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆಯೇ ಎಂಬ ಅನುಮಾನ ಮೂಡಿದೆ. ಮೋಕ್ಷಿತಾ ಪೈ ಅವರು ತ್ರಿವಿಕ್ರಮ್ ಮೇಲೆ ಮಾಡಿರುವ ಗಲಾಟೆಯೇ ಇದಕ್ಕೆ ಕಾರಣ. ತ್ರಿವಿಕ್ರಮ್ ಸ್ಪರ್ಧಿಗಳ ಪಟ್ಟಿ ಮೊದಲೇ ತಿಳಿದುಕೊಂಡು ಬಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬಿಗ್​ ಬಾಸ್​ ಕನ್ನಡ 11ರ  ಮನೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆಯೇ ಎಂಬ ಅನುಮಾನ ಹುಟ್ಟಿದೆ. ಈ ಅನುಮಾನ ಬರಲು ಕಾರಣ ಮೋಕ್ಷಿತಾ ಪೈ ಅವರು ತ್ರಿವಿಕ್ರಮ್ ಮೇಲೆ ಮಾಡಿರುವ ಗಲಾಟೆ. 

ಹಂಸಾ ಅವರು ಎಲಿಮಿಟ್ ಆಗಿದ್ದು, ಮನೆಗೆ ಬಂದ ಕಾರು ಇಬ್ಬರು ಸ್ಪರ್ಧಿಗಳನ್ನು ಹೊರತೆಗೆದುಕೊಂಡು ಹೋಗಿತ್ತು. ಅದರಲ್ಲಿ ಹಂಸಾ ಜೊತೆಗೆ ಮೋಕ್ಷಿತಾ ಅವರು ಕೂಡ ಇದ್ದು, ಅವರು ಸೇವ್‌ ಆಗಿ ಮನೆಗೆ ಹಿಂತಿರುಗಿದರು. ಈ ವೇಳೆ ಕಾರಿನಿಂದ ಇಳಿದು ಮನೆಗೆ ಕಾಲಿಡುತ್ತಿದ್ದಂತೆ. ಅಸಲಿ ಆಟ ಈಗ ಶುರು ಎಂದು ರೌದ್ರ ರೂಪ ತಾಳಿ ಬಂದ ಮೋಕ್ಷಿತಾ ಅವರು ಯಾರು 10 ವಾರ ಮನೆಯಲ್ಲಿ ಇರುತ್ತಾರೆ ನಾನು ನೋಡುತ್ತೇನೆ ಎಂದು ಚಾಲೆಂಜ್ ಹಾಕಿದರು.

ದಕ್ಷಿಣ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರು, ಕೋಟಿಗಳಲ್ಲಿ!

ಜೊತೆಗೆ ಕೇವಲ 10 ವಾರ ಇರುತ್ತಾರೆ. ಅಂತವರ ಜೊತೆಗೆ ಇರಬೇಡಿ ಎಂದು  ತ್ರಿವಿಕ್ರಮ್ ಅವರು ಉಗ್ರಂ ಮಂಜು ಬಳಿ ಹೇಳಿದ್ದಾರೆ ಎಂದು ಮೋಕ್ಷಿತಾ ಹೇಳಿದ್ದಾರೆ. ಇದಕ್ಕೆ ಮಂಜು ಕೂಡ ತ್ರಿವಿಕ್ರಮ್‌ ಹೇಳಿದ್ದಾರೆ ಎಂದು ದನಿಗೂಡಿಸಿದರು. ಜೊತೆಗೆ ನೀವೊಬ್ಬ ಗೋಮುಖ ವ್ಯಾಘ್ರ, ಮೈಂಡ್‌ ಗೇಮ್ ಆಡಿ ಯಾರನ್ನು ಹೇಗೆ ತೆಗೆಯಬೇಕೆಂದು ಪ್ಲಾನ್ ಮಾಡಿದ್ದೀರಿ.ಕಳೆದ ಹಲವು ದಿನಗಳಿಂದ ಮನೆಯಲ್ಲಿ ಇದೆಲ್ಲ ನಡೆಯುತ್ತಿದೆ ಎಂದು ಮೋಕ್ಷಿತಾ ರೇಗಿದ್ದಾರೆ.

ಇಷ್ಟು ಮನೆಯಲ್ಲಿ ಸೈಲೆಂಟ್‌ ಆಗಿದ್ದ ಮೋಕ್ಷಿತಾ ಎಲಿಮಿನೇಷನ್​ನಿಂದ ಪಾರಾಗಿ ಬಂದ ಬಳಿಕ ಇದ್ದಕ್ಕಿದ್ದಂತೆ ರೆಬೆಲ್ ಆಗಿದ್ದಾರೆ. ತ್ರಿವಿಕ್ರಮ್ ಅವರ ವಿರುದ್ಧ ರೇಗಾಡುತ್ತಾ ಈ ಬಾರಿ ಯಾರೆಲ್ಲ ಬಿಗ್ ಬಾಸ್​ಗೆ ಬರುತ್ತಾರೆ ಎಂಬುದು ಗೊತ್ತಾಗ ನಂತರವೇ ನಾನು ಇಲ್ಲಿಗೆ ಬರಲು ಒಪ್ಪಿದ್ದು ಎಂದು ನೀವು ಹೇಳಿದ್ದೀರಿ ಎಂದರು. ಜೊತೆಗೆ ಲಿಸ್ಟ್ ನಿಮಗೆ ಮೊದಲೇ ಗೊತ್ತಿತ್ತಾ’ ಎಂದು ಮೋಕ್ಷಿತಾ ಹಾಗೂ ಗೌತಮಿ ಅವರು ಮರುಪ್ರಶ್ನೆ ಮಾಡಿದ್ದಾರೆ. ‘ನಾನು ತಿಳಿದುಕೊಂಡೇ ಬಂದಿದ್ದು’ ಎಂದು ತ್ರಿವಿಕ್ರಮ್ ಹೇಳಿದ್ದಾರೆ.

ಸುದೀಪ್ ತಾಯಿ ನಿಧನಕ್ಕೆ ಪ್ರಧಾನಿ ಮೋದಿ ಪತ್ರ ಬರೆದು ಸಂತಾಪ, ನನ್ನ ಹೃದಯ ತಟ್ಟಿದೆ ಎಂದ ಕಿಚ್ಚ

ತ್ರಿವಿಕ್ರಮ್ ಹೇಳಿದ ಈ ಮಾತುಗಳಿಂದಾಗಿ ಬಿಗ್ ಬಾಸ್​ ಮೇಲೆಯೇ ಅನುಮಾನ ಮೂಡುವಂತಾಗಿದೆ. ಆದರೆ ಶಿಶಿರ್ ಜೊತೆಗೆ ಜಗಳದ ನಂತರ ಮಾತನಾಡಿದ  ತ್ರಿವಿಕ್ರಮ್ ನಾನು ಸೋಷಿಯಲ್ ಮೀಡಿಯಾದಲ್ಲಿ ಬಂದಿರುವ ಲಿಸ್ಟ್ ನೋಡಿದ್ದಷ್ಟೇ ಎಂದು ಹೇಳಿದ್ದಾರೆ.

ಇನ್ನು ಊಟದ ಟೇಬಲ್ ಬಳಿ ಇತರ ಸ್ಪರ್ಧಿಗಳೊಂದಿಗೆ ಮಾತನಾಡಿರುವ ಮೋಕ್ಷಿತಾ ಪೈ ತ್ರಿವಿಕ್ರಮ್ ಪ್ರತಿಯೊಬ್ಬರ ಇನ್ಸ್ಟಾಗ್ರಾಮ್ ಫಾಲೋವರ್ಸ್ ಬಗ್ಗೆಯೂ ತಿಳಿದುಕೊಂಡು ಬಂದಿದ್ದಾರೆ ಎಂದು ಹೇಳಿದ್ದಾರೆ. ಮನೆಯಲ್ಲಿ ಇವರಿಂದಲೇ ಗ್ರೂಪ್ ಆಗಿದೆ ಅನ್ನೋ ಅರ್ಥದಲ್ಲಿ ಮೋಕ್ಷಿತಾ ಮಾತನಾಡಿದ್ದಾರೆ. ಸದ್ಯ ಮನೆಯಲ್ಲಿ ಹಲವು ಗ್ರೂಪ್‌ ಗಳಿದ್ದು ಗೌತಮಿ, ಉಗ್ರಂ ಮಂಜು ಮತ್ತು ಮೋಕ್ಷಿತಾ ಪೈ ಒಂದೇ ಗುಂಪಿನಲ್ಲಿದ್ದು, ಮೂವರು ಒಟ್ಟಾಗಿ ಯಾವಾಗಲೂ ಜೊತೆಗಿರುತ್ತಾರೆ.
 
ಒಂದಂಟು ಬಿಗ್‌ಬಾಸ್‌ ಮೆಯಲ್ಲಿ ಸ್ಪಷ್ಟವಾಗಿದೆ. ತ್ರಿವಿಕ್ರಮ್‌ ಅತಿಯಾದ ಆತ್ಮವಿಶ್ವಾಸ ಹೊಂದಿದ್ದಾರೆ. ಉಗ್ರಂ ಮಂಜು ತಂದಿಟ್ಟು ತಮಾಷೆ ನೋಡುತ್ತಾರೆ. ಇನ್ನು ಮೋಕ್ಷಿತಾ ಅವರ ಸೈಲೆಂಟ್‌ ಸ್ವಭಾವ ನೋಡಿದ್ದ ಮನೆಮಂದಿ ಇಂದಿನ ಅವತಾರಕ್ಕೆ ಇಡೀ ಮನೆ ಸೈಲೆಂಟ್ ಆಗಿದ್ದಿದ್ದು ಸುಳ್ಳಲ್ಲ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?