ಒಂದು ವರ್ಷ ಬೇರೆಯವರ ಮನೆಯಲ್ಲಿ ಮುಸುರೆ ತಿಕ್ಕುತ್ತಿದ್ದೆ: ಬಿಗ್​ಬಾಸ್​ನಲ್ಲಿ ಚೈತ್ರಾ ಕುಂದಾಪುರ ಕಣ್ಣೀರು

By Suchethana DFirst Published Oct 28, 2024, 5:07 PM IST
Highlights

ನಿಮ್ಮ ನೋವನ್ನು ತೋಡಿಕೊಳ್ಳಿ ಎಂದು ಬಿಗ್​ಬಾಸ್​ ಹೇಳಿದಾಗ ಸ್ಪರ್ಧಿಗಳು ಬಿಕ್ಕಿ ಬಿಕ್ಕಿ ಅತ್ತದ್ದು ಯಾಕೆ? ಚೈತ್ರಾ, ಉಗ್ರಂ ಮಂಜು, ಐಶ್ವರ್ಯ ಹೇಳಿದ್ದೇನು?
 

ಬಿಗ್​ಬಾಸ್​ ಮನೆಯಲ್ಲಿ ಇದಾಗಲೇ ಮೂವರು ಎಲಿಮಿನೇಟ್​ ಆಗಿದ್ದಾರೆ. ಮುಂದಿನ ಸ್ಪರ್ಧಿ ಯಾರು ಎಂಬ ಬಗ್ಗೆ ಬಿಗ್​ಬಾಸ್​ ವೀಕ್ಷಕರಿಗೆ ಕುತೂಹಲ ಇದ್ದೇ ಇದೆ. ಅದೇ ಇನ್ನೊಂದೆಡೆ ಫೈಟಿಂಗ್​ ಜೋರಾಗಿ ನಡೆದಿದೆ.  ತ್ರಿವಿಕ್ರಮ್​ ಮತ್ತು  ಮೋಕ್ಷಿತಾ ಪೈ ನಡುವೆ ಗಲಾಟೆ ಏರ್ಪಟ್ಟಿದೆ. ಮಾತಿನ ಚಕಮಕಿಯ ನಡುವೆ ಮೋಕ್ಷಿತಾರವರು ತಿವಿಕ್ರಮ್​​ಗೆ ಗೋಮುಖ ವ್ಯಾಘ್ರ ಎಂದು ಕರೆದಿದ್ದಾರೆ. ಉಗ್ರಂ ಮಂಜು ಜೊತೆಗೆ ತ್ರಿವಿಕ್ರಮ್ ಮಾತನಾಡುತ್ತಾ,​ ಅವರು 10 ವಾರಕ್ಕೆ ಬಂದಿರೋರು. 10 ವಾರದ ಬಳಿಕ ಅವರ ಅವಶ್ಯಕತೆ ಇಲ್ಲ ಅಣ್ಣ ಎಂದು ಹೇಳಿದ್ದರು. ಇದೇ ಮಾತು ಮೋಕ್ಷಿತಾ ಕಿವಿಗೆ ಬಿದ್ದಿದ್ದು, ನಾನು 10 ವಾರ ಇರ್ತೀನಿ ಅಂತ ಡಿಸೈಡ್​ ಮಾಡೋಕೆ ಇವರು ಯಾರು ಎಂದೆಲ್ಲಾ ಪ್ರಶ್ನಿಸಿದ್ದಾರೆ. ಅದಕ್ಕೆ ತ್ರಿವಿಕ್ರಮ್​ ಆಯ್ತಮ್ಮಾ ನೀನು ಫಿನಾಲೆಗೆ ಹೋಗಮ್ಮ ಎಂದಿದ್ದಾರೆ. ಇವೆಲ್ಲವುಗಳ ನಡುವೆಯೇ, ಎಲಿಮಿನೇಷನ್​ ಯಾರದ್ದು ಎನ್ನುವ ಬಗ್ಗೆ ಸ್ಪರ್ಧಿಗಳು ಹಾಗೂ ವೀಕ್ಷಕರಿಗೆ ಚಿಂತೆಯೂ ಕಾಡುತ್ತಿದೆ.  

ಇದರ ಮಧ್ಯೆಯೇ, ಬಿಗ್​ಬಾಸ್​ ಸ್ಪರ್ಧಿಗಳಿಗೆ, ಯಾರ ಬಳಿಯೂ ಹಂಚಿಕೊಳ್ಳದ ಒಂದು ನೋವನ್ನು ತೋಡಿಕೊಳ್ಳಬಹುದು ಎಂದು ಹೇಳಿದ್ದಾರೆ. ಆಗ ಮೊದಲಿಗೆ ಚೈತ್ರಾ ಕುಂದಾಪುರ ಅವರು ಒಂದು ವರ್ಷ ಬೇರೆಯವರ ಮನೆಯಲ್ಲಿ ಮುಸುರೆ ತಿಕ್ಕುತ್ತಿದ್ದೆ ಎಂದು ಕಣ್ಣೀರು ಹಾಕಿದ್ದಾರೆ. ಉಗ್ರಂ ಮಂಜು ಅವರು, ಊಟ ಮಾಡಿದ್ಯಾ ಅಂತ ಕೇಳೋರು ಯಾರೂ ಇರಲಿಲ್ಲ, ಮೈ ಹುಷಾರು ಇಲ್ಲ ಎಂದು ಕೇಳುವವರು ಇರಲಿಲ್ಲ, ಕೆಲವೊಂದು ಚಟಕ್ಕೆ ಬಿದ್ದಿದ್ದೆ ಎನ್ನುತ್ತಲೇ ಬಿಕ್ಕಿದರೆ, ಐಶ್ವರ್ಯ ಸಿಂಧೋಗಿ ಅವರು, ಅಮ್ಮ ಬೆಡ್​ ರಿಡನ್​ ಆಗಿದ್ರು, ರಿಲೇಷನ್ಸು ಅಮ್ಮನ ತಲೆ ತುಂಬ್ತಾ ಇದ್ರು, ನಾನು ತುಂಬಾ ಅಮ್ಮನ ಮೇಲೆ ಕಿರುಚಾಡ್ತಿದ್ದೆ. ಆದರೆ ಅದೇ ಕೆಲವು ದಿನಗಳ ಬಳಿಕ ಅಮ್ಮ ನನ್ನ ಜೊತೆ ಇರಲಿಲ್ಲ. ಅದೊಂದು ತಪ್ಪು ನಾನು ಮಾಡಬಾರದಿತ್ತು ಎಂದು ಕಣ್ಣೀರು ಹಾಕಿದ್ದಾರೆ. 

Latest Videos

ತೆಲಗು ಬಿಗ್​ಬಾಸ್​ನಲ್ಲಿ ಶುದ್ಧ ಕನ್ನಡದಲ್ಲಿ ಜ್ಯೂನಿಯರ್​ ಎನ್​ಟಿಆರ್ ಮಾತು​: ವಿಡಿಯೋ ವೈರಲ್​

ಇನ್ನು ಚೈತ್ರಾ ಕುಂದಾಪುರ ಅವರ ಬಗ್ಗೆ ಹೆಚ್ಚಿನವರಿಗೆ ತಿಳಿದದ್ದೇ. ಕರಾವಳಿಯ ಫೈರ್ ಬ್ರಾಂಡ್, ಪ್ರಖರ ಭಾಷಣಗಾರ್ತಿ ಎಂದೆಲ್ಲಾ ಫೇಮಸ್​  ಆಗಿರುವವರು.  ಉಡುಪಿ ಜಿಲ್ಲೆ ಬೈಂದೂರಿನ ಉದ್ಯಮಿ ಹಾಗೂ ಸಮಾಜ ಸೇವಕ ಗೋವಿಂದ ಬಾಬು ಅವರು ನೀಡಿರುವ ದೂರಿನ ಮೇಲೆ  ಚೈತ್ರಾ ವಿರುದ್ಧ ಕೇಸು ದಾಖಲಾಗಿದೆ.  ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸ್ತೇನೆ ಎಂದು  ಚೈತ್ರಾ  ನಂಬಿಸಿದ್ದರು. ಟಿಕೆಟ್ ಆಮಿಷ ಒಡ್ಡಿ 7 ಕೋಟಿ ರೂಪಾಯಿ ಹಣವನ್ನು ವಸೂಲಿ ಮಾಡಿದ್ದರು ಎಂದು ಗೋವಿಂದ ಬಾಬು ದೂರಿದ್ದಾರೆ.  ಈ ಆರೋಪದ ಮೇಲೆ ಬೆಂಗಳೂರಿನ ಸಿಸಿಬಿ ಪೊಲೀಸರು ಚೈತ್ರಾರನ್ನು ಅರೆಸ್ಟ್​  ಮಾಡಿದ್ದರು. ಕೆಲ ಕಾಲ ತಲೆ ಮರೆಸಿಕೊಂಡಿದ್ದರು. ಬಳಿಕ ಕಾಣಿಸಿಕೊಂಡು ಈಗ ಬಿಗ್​ಬಾಸ್​ ಸ್ಪರ್ಧಿಯಾಗಿದ್ದಾರೆ.  

ಇನ್ನು ಬಿಗ್​ಬಾಸ್​ ವಿಷಯಕ್ಕೆ ಬರುವುದಾದರೆ, ನಿನ್ನೆ ಸುದೀಪ್​ ಬದಲು ಸೃಜನ್​ ಅವರು ಎಲಿಮಿನೇಷನ್​ ಮಾಡಲು ಬಂದಿದ್ದರು. ಅದಕ್ಕೂ ಮೊದಲು ನಿರ್ದೇಶಕ ಯೋಗರಾಜ್​ ಭಟ್​ ಅವರು ಬಂದಿದ್ದರು.  ಯೋಗರಾಜ್ ಭಟ್ ಕೆಲವು ತಮಾಷೆಯ ಟಾಸ್ಕ್​ಗಳನ್ನು ಮಾಡುವ ಮೂಲಕ ಸ್ಪರ್ಧಿಗಳು ಹಾಗೂ ವೀಕ್ಷಕರನ್ನು ರಂಜಿಸಿದ್ದರು, ಜೊತೆಗೆ ಸ್ಪರ್ಧಿಗಳಿಗೆ ಒಂದಿಷ್ಟು ಬುದ್ಧಿಮಾತನ್ನೂ ಹೇಳಿದ್ದರು. ವಿಭಿನ್ನ ರೀತಿಯ ಟಾಸ್ಕ್​ ನೀಡಿರುವ ಸೃಜನ್​ ಅವರು ಇದೀಗ ಓರ್ವ ಸ್ಪರ್ಧಿಯನ್ನು ದೊಡ್ಮನೆಯಿಂದ ಅವರ ಮನೆಗೆ ಕಳುಹಿಸಲಿದ್ದಾರೆ ಎನ್ನಲಾಗಿತ್ತು. ಅದರ ಬಗ್ಗೆ ಇನ್ನೂ ಸಂದೇಹವಿದೆ.   

ಅವ್ರು ಕೂಡ ಕೆಟ್ಟ ಪದ ಬಳಸಿದ್ರು... ಆದ್ರೆ ನಾನೊಬ್ಬನೇ ಟಾರ್ಗೆಟ್​ ಆಗಿದ್ಯಾಕೊ? ನೋವು ತೋಡಿಕೊಂಡ ಲಾಯರ್​ ಜಗದೀಶ್​

click me!