'ಬಿಟ್ರೆ ಮನೆಗೆ ಹೋಗ್ತಿನಿ ಅಂತಾನೆ' ಹನುಮಂತ, ಆದ್ರೆ ಬೇರೆಯವ್ರನ್ನೇ ಮನೆಯಿಂದ ಕಳಿಸ್ತಾನಾ?

By Shriram Bhat  |  First Published Oct 28, 2024, 8:23 PM IST

ಈ ಸಾರಿ ಬಿಗ್ ಬಾಸ್​ಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿರೋ ಹನುಮಂತ ಶ್ಯಾನೆ ಡಿಫ್ರೆಂಟ್... ಹನುಮಂತನಿಗೆ ವೆಸ್ಟರ್ನ್ ಟಾಯ್ಲೆಟ್ ಗೊತ್ತಿಲ್ಲ.. ಈತ ದಿನಕ್ಕೊಮ್ಮೆ ಸ್ನಾನ ಮಾಡೋದಿಲ್ಲ.. ಟಾಸ್ಕ್ ಆಡೋದಿಲ್ಲ.. ಇವನ ವರಸೆಯೇ ಡಿಫ್ರೆಂಟ್. ಆದ್ರೆ ಇವನು ನಿಜಕ್ಕೂ ಇಷ್ಟು ಮುಗ್ದನಾ ?


ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದಿರೋ ಹನುಮಂತನನ್ನ ಮೊದಲು ಎಲ್ಲರೂ ಮುಗ್ದ ಅಂದುಕೊಂಡಿದ್ರು. ಆದ್ರೆ ಈಗ ಹನುಮಂತನ ಮುಗ್ದತೆಗೆ ಬಗ್ಗೆ ಎಲ್ಲರಿಗೂ ಡೌಟ್ ಶುರುವಾಗಿದೆ. ಈ ವಾರ ಪಂಚಾಯತಿ ನಡೆಸೋಕೆ ಬಂದಿದ್ದ ಯೋಗರಾಜ್ ಭಟ್ರು ನೇರವಾಗೇ ಈ ಪ್ರಶ್ನೆಯನ್ನ ಹನುಮಂತನಿಗೆ ಕೇಳಿದ್ದಾರೆ. ಮನೆಯಲ್ಲಿರೋ ಅನೇಕರು ಇವನು ಮುಗ್ದ ಅಲ್ಲ ಭಯಂಕರ ಚಾಲಾಕಿ ಆಸಾಮಿ ಅಂದಿದ್ದಾರೆ. 

ಅಮಾಯಕನ ಮುಖವಾಡ ತೊಟ್ಟಿರೋ ಕಿಲಾಡಿ ಹಳ್ಳಿ ಹೈದ..! ಹನುಮಂತ ಮುಗ್ದನಲ್ಲ.. ಸೈಲೆಂಟ್ ಕಿಲ್ಲರ್ ಎಂದ ಮನೆಮಂದಿ..! 
ಯೆಸ್, ಈ ಸಾರಿ ಬಿಗ್ ಬಾಸ್​ಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿರೋ ಹನುಮಂತ ಶ್ಯಾನೆ ಡಿಫ್ರೆಂಟ್. ಎಲ್ಲರೂ ಬಿಗ್ ಬಾಸ್ ಮನೆಗೆ ಟ್ರೋಫಿ  ಗೆಲ್ಲೋದಕ್ಕೆ , 50 ಲಕ್ಷ ಬಹುಮಾನ ಗೆಲ್ಲೋದಕ್ಕೆ ಬರ್ತಾರೆ. ಅದಕ್ಕಂತ್ಲೇ ಒಳಗೆ  ಬರುತ್ತಲೇ ಹೈಲೈಟ್ ಆಗೋದಕ್ಕೆ ನಾನಾ ಸರ್ಕಸ್ ಮಾಡ್ತಾರೆ. ಆದರೆ ಹನುಮಂತ ಇಂಥಾ ಯಾವ ಸರ್ಕಸ್ ಅನ್ನೂ ಮಾಡ್ತಾ ಇಲ್ಲ.

Tap to resize

Latest Videos

undefined

ಬಂದಾಗಿನಿಂದ ಸೈಲೆಂಟ್ ಆಗಿರೋ ಹನುಮಂತ, ಯಾರು ಏನಾದ್ರೂ ಮಾಡಿಕೊಳ್ಳಲಿ ಅಂತ  ಆರಾಮಾಗಿದ್ದಾನೆ. ಆಗಾಗ ಹಾಡು ಹಾಡ್ತಾ, ಎಲ್ಲರಿಗೂ ಅಕ್ಕ, ಅಣ್ಣ ಅಂದುಕೊಂಡು ಮುಗ್ದ ಪ್ರಶ್ನೆ ಕೇಳ್ತಾ ಫುಲ್ ಸ್ಕೋರ್ ಮಾಡ್ತಾ ಇದ್ದಾನೆ. 

ಭಯ ಬೀಳಿಸಲು ಮತ್ತೆ ಬರಲಿದೆ ನಾ ನಿನ್ನ ಬಿಡಲಾರೆ; ಯಾರಿದು ಅಂಬಾಲಿ ಭಾರತಿ?

ಹನುಮಂತನಿಗೆ ವೆಸ್ಟರ್ನ್ ಟಾಯ್ಲೆಟ್ ಗೊತ್ತಿಲ್ಲ.. ಈತ ದಿನಕ್ಕೊಮ್ಮೆ ಸ್ನಾನ ಮಾಡೋದಿಲ್ಲ.. ಟಾಸ್ಕ್ ಆಡೋದಿಲ್ಲ.. ಇವನ ವರಸೆಯೇ ಡಿಫ್ರೆಂಟ್. ಆದ್ರೆ ಇವನು ನಿಜಕ್ಕೂ ಇಷ್ಟು ಮುಗ್ದಾನಾ ಅಥವಾ ಜಸ್ಟ್ ಮುಗ್ದತೆಯ ಮುಖವಾಡ ಹಾಕಿಕೊಂಡು ಗೇಮ್ ಆಡ್ತಾ ಇದ್ದಾನಾ ಅಂತ ಮನೆಮಂದಿಗೆ ಡೌಟ್ ಬಂದಿತ್ತು. ಮನೆಮಂದಿಗಷ್ಟೇ ಯಾಕೆ ಬಿಗ್ ಬಾಸ್ ನೋಡೋ ವೀಕ್ಷರಿಗೂ ಈ ಡೌಟ್ ಬಂದಿರೋದು ಸುಳ್ಳಲ್ಲ.

ಬಿಗ್ ಬಾಸ್ ಟ್ರೋಫಿ ಮೇಲೆ ಸಿಂಗರ್ ಹನುಮಂತನ ಕಣ್ಣು..! ಭಟ್ಟರ ಪಂಚಾಯತಿಯಲ್ಲಿ ಬಯಲಾಯ್ತು ಹನುಮಂತಣ್ಣನ ಬಣ್ಣ..!
ಹೌದು ಈ ವಾರ ಸುದೀಪ್ ಬದಲು ಬಿಗ್ ಬಾಸ್ ಮನೆಗೆ ಬಂದು ಪಂಚಾಯತಿ ನಡೆಸಿಕೊಟ್ಟಿರೋ ಯೋಗರಾಜ್ ಭಟ್ಟರು ಹನುಮಂತನಿಗೆ ನೇರವಾಗೇ ಈ ಪ್ರಶ್ನೆ ಕೇಳಿದ್ದಾರೆ. ಹನುಮಂತ ಮುಗ್ದನಲ್ಲ ಅಂತ ಅನೇಕ ಮನೆಮಂದಿ ಕೂಡ ವಾದ ಮಾಡಿದ್ದಾರೆ. ಇವನು ಮುಗ್ದತೆಯ ಮುಖವಾಡ ಹಾಕ್ಕೊಂಡು ಬಿಗ್ ಬಾಸ್ ಟ್ರೋಫಿ ಹೊಡೆಯೋಕೆ ಸ್ಕೆಚ್ ಹಾಕಿದ್ದಾನೆ ಅಂತ ಹನುಮಂತಣ್ಣನ ಮೇಲೆ ಆರೋಪ ಮಾಡಿದ್ದಾರೆ.

ಸೋಲು ನಿಮ್ಮನ್ನು ಕಾಡುತ್ತಿದ್ದರೆ ಒಮ್ಮೆ ಅಮಿತಾಭ್ ಬಚ್ಚನ್ ಹೇಳಿದ್ದು ಕೇಳಿ, ಉದ್ಧಾರ ಆಗ್ತೀರಾ!

ಆದ್ರೆ ಇಷ್ಟೆಲ್ಲಾ ಪಂಚಾಯತಿ ನಡೆದ್ರೂ ಹನುಮಂತ ಮಾತ್ರ ಹಳೇ ಸ್ಟೈಲ್​ನಲ್ಲೇ ನನಗೇನು ಗೊತ್ತಿಲ್ಲ. ನನ್ನನ್ನ ಬಿಟ್ರೆ ಮನೆಗೆ ಹೋಗ್ತಿನಿ ಅಂತಿದ್ದಾನೆ. ಆದ್ರೆ ಇವನು ಹೀಗೆ ಹೇಳ್ತಾ ಹೇಳ್ತಾನೇ ತಮ್ಮನ್ನ ಮನೆಯಿಂದ ಹೊರಗೆ ಕಳಿಸ್ತಾನೆ ಅಂತ ಮನೆಮಂದಿಯೆಲ್ಲಾ ಕಂಗಾಲಾಗಿರೋದು ಸುಳ್ಳಲ್ಲ..!

click me!