ಬಿಗ್​ಬಾಸ್​ಗೆ ಭರ್ಜರಿ ಟಿವಿಆರ್​: ಸುದೀಪ್​ ಮತ್ತು ತಂಡದಿಂದ ಹೀಗೊಂದು ಪಾರ್ಟಿ- ವಿಡಿಯೋ ವೈರಲ್​

By Suchethana D  |  First Published Oct 13, 2024, 7:32 PM IST

ಕನ್ನಡದ ಬಿಗ್​ಬಾಸ್​​ 9.9 ರೇಟಿಂಗ್​ ಪಡೆಯುವ ಮೂಲಕ ಭರ್ಜರಿ ಮುನ್ನಡೆ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಸುದೀಪ್​ ಮತ್ತು ತಂಡ ಸೆಲಬ್ರೇಷನ್​ ಮಾಡಿದೆ.
 


ಸುದೀಪ್ ಅವರ ನೇತೃತ್ವದಲ್ಲಿ ಬಿಗ್​ಬಾಸ್​ ಆರಂಭವಾಗಿ ಕೆಲವು ದಿನಗಳೇ ಕಳೆದು ಹೋಗಿವೆ. ಇದಾಗಲೇ ಹತ್ತು ಸೀಸನ್​ ಯಶಸ್ವಿಯಾಗಿ ನಡೆದು, ಭರ್ಜರಿ ಟಿಆರ್​ಪಿ (Target Rating Point) ಮತ್ತು ಟಿವಿಆರ್​ (Television Rating Point) ಪಡೆದುಕೊಳ್ಳುವ ಮೂಲಕ ಉಳಿದ ಎಲ್ಲಾ ರಿಯಾಲಿಟಿ ಷೋ ಮತ್ತು ಸೀರಿಯಲ್​ಗಳನ್ನು ಹಿಂದಿಕ್ಕಿದೆ. ಬಿಗ್​ಬಾಸ್​ನಲ್ಲಿ ಸ್ಪರ್ಧಿಗಳಾಗಿ ಹೋಗುವವರಲ್ಲಿ ಶೇಕಡಾ 90ರಷ್ಟು ಮಂದಿ ಕಾಂಟ್ರವರ್ಸಿಯವರೇ ಇರ್ತಾರೆ ಎನ್ನೋದು ಹೊಸ ವಿಷಯವೇನಲ್ಲ. ಮೊದಲ 2-3 ವಾರಗಳಲ್ಲಿ ನಾಮಿನೇಟ್​ ಆಗಿ ಮನೆಯಿಂದ ಹೊರಕ್ಕೆ ಕಳುಹಿಸುವ ಸಲುವಾಗಿ ಯಾವುದೇ ವಿವಾದ ಇಲ್ಲದ, ಉತ್ತಮ ನಡೆಯುಳ್ಳವರನ್ನು ಬಿಗ್​ಬಾಸ್​ಗೆ ಆಯ್ಕೆ  ಮಾಡುತ್ತಾರೆ  ಎನ್ನುವ ಆರೋಪ ಆರಂಭದಿಂದಲೂ ಇದ್ದದ್ದೇ. ಎಲ್ಲರೂ ಒಳ್ಳೆಯವರಾಗಿ ಗಲಾಟೆಯೇ ಇಲ್ಲದಿದ್ದರೆ ಬಿಗ್​ಬಾಸ್​ ಅನ್ನು ವಾಚಾಮಗೋಚರವಾಗಿ ಬೈದುಕೊಂಡು ನೋಡಿ ಟಿಆರ್​ಪಿ ಏರಿಸುವ ಪ್ರೇಕ್ಷಕರು ಸಿಗುವುದಾದರೂ ಹೇಗೆ? ಇದು ಎಲ್ಲಾ ಭಾಷೆಗಳ ಬಿಗ್​ಬಾಸ್​ಗೂ ಅನ್ವಯ ಆಗಿರುವುದೇ. 

ಸೋಷಿಯಲ್​  ಮೀಡಿಯಾಗಳಲ್ಲಿ ಯಾರ ಬಗ್ಗೆ ಹೆಚ್ಚು ಚರ್ಚೆಯಾಗುತ್ತದೆ, ಯಾರನ್ನು ಹೆಚ್ಚು ಜನ ಉಗಿಯುತ್ತಾರೆ ಎಂದು ನೋಡಿದರೆನೇ ಬಿಗ್​ಬಾಸ್​ ನೋಡುವ ವರ್ಗ ಯಾವ ರೀತಿಯದ್ದು, ದಿನವೂ ಬೈಯುತ್ತಲೇ ಇಂಥ ರಿಯಾಲಿಟಿ ಷೋಗಳನ್ನು ನೋಡುವುದು ಎಂದರೆ ಅವರಿಗೆ ಎಷ್ಟು ಇಷ್ಟ ಎನ್ನುವುದು ತಿಳಿಯುತ್ತದೆ.  ಅದರಂತೆಯೇ ಪ್ರತಿ ಸಾರಿಯಂತೆ, ಪ್ರತಿ ಭಾಷೆಯ ಬಿಗ್​ಬಾಸ್​ನಂತೆಯೇ ಈ ಬಾರಿಯೂ ಬಿಗ್​ಬಾಸ್​ ಅತಿ ಹೆಚ್ಚು ಟಿಆರ್​ವಿ ಪಡೆದುಕೊಂಡಿದೆ. 9.9 ರೇಟಿಂಗ್​ ಪಡೆದುಕೊಂಡಿದೆ. ಟಿವಿಆರ್ ಎಂದರೆ  ಟಿವಿ ಕಾರ್ಯಕ್ರಮವನ್ನು ವೀಕ್ಷಿಸುವ  ಪ್ರೇಕ್ಷಕರ ಶೇಕಡಾವಾರು ಸಂಖ್ಯೆ. ಆಯಾ ಪ್ರದೇಶಕ್ಕೆ ಅನುಗುಣವಾಗಿ ಜನಸಂಖ್ಯೆ ಆಧಾರದ ಮೇಲೆ ಎಷ್ಟು ಜನರು ಒಂದು ಸೀರಿಯಲ್​, ರಿಯಾಲಿಟಿ ಷೋ ಅಥವಾ ಇನ್ನಾವುದೇ ಕಾರ್ಯಕ್ರಮ ವೀಕ್ಷಿಸಿದ್ದಾರೆ ಎನ್ನುವುದನ್ನು ಲೆಕ್ಕ ಹಾಕಲಾಗುತ್ತದೆ.  ಅದೇ ಇನ್ನೊಂದೆಡೆ, ಟಿವಿ ಆಧರಿತ ಜಾಹೀರಾತು ಪ್ರಚಾರವು ಎಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬ ಆಧಾರದ ಮೇಲೆ ಟಿಆರ್​ಪಿ ಅಳೆಯಲಾಗುತ್ತದೆ. 

Tap to resize

Latest Videos

undefined

50 ಸಾವಿರ ಅಡ್ವಾನ್ಸ್​ ಪಡೆದು ಬಾಬಾ ಸಿದ್ದಿಕಿ ಹತ್ಯೆ! ಯಾರ ಕೈಗೂ ಸಿಗಲ್ಲ ಎಂದ ಸಲ್ಮಾನ್​ ಖಾನ್

ಇದೀಗ ಬಿಗ್​ಬಾಸ್​ 9.9. ಟಿವಿಆರ್​   ಪಡೆದುಕೊಳ್ಳುವ ಮೂಲಕ ಅತಿ ಹೆಚ್ಚು ರೇಟಿಂಗ್​ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಸುದೀಪ್​ ಅವರು ಜನರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಕೇಕ್​ ಕಟ್​ ಮಾಡುವ ಮೂಲಕ ಬಿಗ್​ಬಾಸ್​ ತಂಡವು ಇದನ್ನು ಸೆಲೆಬ್ರೇಟ್​ ಮಾಡಿದೆ. ಇನ್ನು ಸದ್ಯ ಬಿಗ್​ಬಾಸ್​ ಅಪ್​ಡೇಟ್​  ಕುರಿತು ಹೇಳುವುದಾದರೆ,  ಸೀಸನ್​ 11 ಹೊಸ ಕಾನ್ಸೆಪ್ಟ್​ ಸ್ವರ್ಗ- ನರಕ ಮಹಿಳಾ ಆಯೋಗದ ಕೋಪಕ್ಕೆ ಗುರಿಯಾಗಿದೆ. ಇದೇ ಕಾರಣದಿಂದ ಸ್ವರ್ಗ- ನರಕಕ್ಕೆ ಬ್ರೇಕ್​ ಹಾಕಲಾಗಿದೆ. ಸ್ವರ್ಗ - ನರಕ ಹೆಸರಿನಲ್ಲಿ ಸ್ಪರ್ಧಿಗಳ ಸಾಮಾಜಿಕ ನ್ಯಾಯಕ್ಕೆ ಧಕ್ಕೆ ಆಗುತ್ತಿರುವುದಾಗಿ  ಮಹಿಳಾ ಆಯೋಗಕ್ಕೆ ದೂರು ದಾಖಲಾಗಿತ್ತು. ಮಹಿಳೆಯರ ಖಾಸಗಿ ತನ್ನಕ್ಕೆ ಧಕ್ಕೆಯಾಗುತ್ತಿದೆ. ಊಟ ಹಾಗೂ ಶೌಚಾಲಯದ ವಿಚಾರವಾಗಿ ನರಕ ವಾಸಿಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ಬಗ್ಗೆ ಆಯೋಗಕ್ಕೆ ದೂರು ಬಂದ ಹಿನ್ನೆಲೆಯಲ್ಲಿ,   ಮಹಿಳಾ ಆಯೋಗ ಬಿಗ್ ಕಾರ್ಯಕ್ರಮ ಆಯೋಜಕರು ಹಾಗೂ ಕಲರ್ಸ್ ವಾಹಿನಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು. ಇದೇ ಕಾರಣದಿಂದಾಗಿ ಈಗ ಸ್ವರ್ಗ ಮತ್ತು ನರಕಕ್ಕೆ ಬ್ರೇಕ್​ ಹಾಕಲಾಗಿದೆ. ನೋಟಿಸ್​ ನೀಡಿದ್ದ ಮಹಿಳಾ ಆಯೋಗವು,  ದೂರಿನ ಅನ್ವಯ ತನಿಳೆ ನಡೆಸಿ ವರದಿ ನೀಡುವಂತೆ ರಾಮನಗರ ಪೊಲೀಸರಿಗೆ ಮಹಿಳಾ ಆಯೋಗ ಪತ್ರದ ಮೂಲಕ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.  


ಈ ಎಲ್ಲ ಬೆಳವಣಿಗೆಯಿಂದ ಎಚ್ಚೆತ್ತ ಬಿಗ್ ಬಾಸ್ ಕಾರ್ಯ ಆಯೋಜಕರು ಬಿಗ್ ಕಾರ್ಯಕ್ರಮದ ಸ್ವರ್ಗ ನರಕ ಕಾನ್ಸೆಪ್ಟ್ ಕೊನೆಗಾಣಿಸಿದ್ದಾರೆ. ಸ್ಪರ್ಧಿಗಳಿಗೆ ಸೂಚನೆ ಸಿಗದಂತೆ ಸ್ವರ್ಗ - ನರಕವಾಗಿ ಇಬ್ಭಾಗವಾಗಿದ್ದನ್ನು ಒಟ್ಟುಗೂಡಿಸಿ ಒಂದೇ ಮನೆಯನ್ನಾಗಿಸಿದ್ದಾರೆ.  ಬಿಗ್ ಬಾಸ್ ಮನೆಯ ಮಧ್ಯಭಾಗದಲ್ಲಿದ್ದ ಕಬ್ಬಿಣದ ಸರಳನ್ನು ತೆರವುಗೊಳಿಸಿದ್ದಾರೆ.  ಈ ಬಾರಿಯ ಬಿಗ್​ಬಾಸ್​​ನಲ್ಲಿ  ಹೈಲೈಟೇ ಆಗಿದ್ದೇ ಸ್ವರ್ಗ ಮತ್ತು ನರಕ. ಒಂದಿಷ್ಟು ಮಂದಿಯನ್ನು ಸ್ವರ್ಗಕ್ಕೆ, ಮತ್ತೊಂದಿಷ್ಟು ಮಂದಿಯನ್ನು ನರಕಕ್ಕೆ ಕಳುಹಿಸಲಾಗಿತ್ತು.  ಈಗ ನೋಟಿಸ್​ಗೆ ಹೆದರಿ ವಿಭಿನ್ನ ರೀತಿಯಲ್ಲಿ ಸ್ವರ್ಗ-ನರಕದ ಕಾನ್ಸೆಪ್ಟ್​ ತೆಗೆದು ಹಾಕಲಾಗಿದೆ.  ಕ್ರೇನ್​ ಮೂಲಕ ಮನೆ ಒಳಗೆ ಬಂದ ಮುಸುಕುಧಾರಿಗಳು   ನರಕದ ವಸ್ತುಗಳನ್ನೆಲ್ಲ ಪೀಸ್ ಪೀಸ್ ಮಾಡಿರುವ ಹಿನ್ನೆಲೆಯಲ್ಲಿ, ಇಲ್ಲಿಗೆ  ನರಕ ಹಾಗೂ ಸ್ವರ್ಗದ ಕಾನ್ಸೆಪ್ಟ್  ಪೂರ್ಣಗೊಂಡಿದೆ. ಮಾಮೂಲಿನ ಬಿಗ್​ಬಾಸ್​ನಂತೆ, ಎಲ್ಲರೂ ಒಟ್ಟಾಗಿ ಸ್ಪರ್ಧೆ ಮುಂದುವರಿಸುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತಿದೆ. 

ಬಿಗ್​ಬಾಸ್​ ಅರ್ಧಕ್ಕೆ ಬಿಟ್ಟು ಓಡಿದ ಸಲ್ಮಾನ್: ಬಿರಿಯಾನಿ ಮೂಲಕ ಖಾನ್​ಗಳ ಸುದೀರ್ಘ ದ್ವೇಷ ಬಗೆಹರಿಸಿದ್ದರು ಬಾಬಾ ಸಿದ್ದಿಕಿ!

click me!