ಬಿಗ್ ಬಾಸ್ ಕನ್ನಡ ಸಪ್ರೈಸ್‌ ಎಲಿಮಿನೇಷನ್, ಮೊದಲನೇವಾರ ಯಮುನಾ ಶ್ರೀನಿಧಿ ಔಟ್!

Published : Oct 06, 2024, 11:04 PM ISTUpdated : Oct 08, 2024, 11:21 AM IST
ಬಿಗ್ ಬಾಸ್ ಕನ್ನಡ ಸಪ್ರೈಸ್‌ ಎಲಿಮಿನೇಷನ್, ಮೊದಲನೇವಾರ  ಯಮುನಾ ಶ್ರೀನಿಧಿ ಔಟ್!

ಸಾರಾಂಶ

ಬಿಗ್ ಬಾಸ್ ಕನ್ನಡ 11ರ ಮೊದಲನೇ ವಾರ ನಟಿ ಯಮುನಾ ಶ್ರೀನಿಧಿ ಎಲಿಮಿನೇಟ್ ಆಗಿದ್ದಾರೆ. ಬಹುತೇಕರು ಲಾಯರ್ ಜಗದೀಶ್ ಮನೆಯಿಂದ ಔಟ್‌ ಆಗುತ್ತಾರೆ ಎಂದು ಅಂದುಕೊಂಡಿದ್ದರು. ಈ ಮೂಲಕ ಮತ್ತೆ ಜಗದೀಶ್ ಅವರ ಆಟವನ್ನು ನೋಡಬೇಕಿದೆ.

ಬಿಗ್ ಬಾಸ್ ಕನ್ನಡ 11ರ ಮೊದಲನೇ ವಾರ ನಟಿ ಯಮುನಾ ಶ್ರೀನಿಧಿ ಔಟ್ ಆಗಿದ್ದಾರೆ. ಈ ವಾರ ಜನರು ಊಹಿಸದೇ ಇರುವ ವ್ಯಕ್ತಿ ಮನೆಯಿಂದ ಹೊರ ಹೋಗಿದ್ದು ಸಪ್ರೈಸ್‌ ಆಗಿದೆ. ಬಹುತೇಕರು ಲಾಯರ್ ಜಗದೀಶ್ ಮನೆಯಿಂದ ಔಟ್‌ ಆಗುತ್ತಾರೆ ಎಂದು ಅಂದುಕೊಂಡಿದ್ದರು. ಆದರೆ ಯಮುನಾ ಶ್ರೀನಿಧಿ ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಎಲಿಮಿನೇಟ್ ಆಗಿ ಹೊರ ನಡೆದಿದ್ದಾರೆ. ಈ ಮೂಲಕ ಮತ್ತೆ ಜಗದೀಶ್ ಅವರ ಆಟವನ್ನು ನೋಡಬೇಕಿದೆ. 

ಶನಿವಾರದ ಎಪಿಸೋಡ್‌ ನಲ್ಲಿ ಭವ್ಯಾ ಗೌಡ ಮತ್ತು ತುಕಾಲಿ ಮಾನಸ, ಗೌತಮಿ ಜಾಧವ್ ಸೇಫ್‌ ಆಗಿ ನಾಮಿನೇಶನ್ ನಿಂದ ಪಾರಾಗಿದ್ದರು. ಇಂದಿನ ಸೂಪರ್ ಸಂಡೇ ವಿಥ್ ಸುದೀಪ ಎಪಿಸೋಡ್‌ ನಲ್ಲಿ ಮೊದಲು  ಮೋಕ್ಷಿತಾ ಪೈ ಅವರು ಸೇಫ್ ಆದರು. ಬಳಿಕ ಕ್ರಮವಾಗಿ ಶಿಶಿರ್ ಶಾಸ್ತ್ರಿ, ಲಾಯರ್ ಜಗದೀಶ್,  ಚೈತ್ರಾ ಕುಂದಾಪುರ, ಹಂಸ ಸೇಫ್ ಆದರು.

ಬಿಗ್ ಬಾಸ್ ಮನೆಯಲ್ಲಿ ಪ್ರೆಗ್ನೆಸಿ ಟೆಸ್ಟ್ ಮಾಡಿಸಿದ ನಟಿ! ಇದಕ್ಕೆ ಕಾರಣ ಏನು?

ಬಿಗ್‌ ಬಾಸ್‌ನ ದೊಡ್ಮನೆಗೆ 2ನೇ ಸ್ಪರ್ಧಿಯಾಗಿ ಅವರು ಎಂಟ್ರಿ ಪಡೆದುಕೊಂಡಿದ್ದರು. ಮೊದಲ ಸ್ಪರ್ಧಿಯಾಗಿರುವ ಭವ್ಯಾ ಗೌಡ  ಜೊತೆಗೆ ಅವರನ್ನು ಬಿಬಿಕೆ ಮನೆಗೆ ಕಳಿಸಲಾಗಿತ್ತು. ಬಿಗ್‌ ಬಾಸ್‌ ಮನೆಯ ಕನ್ಫೆಶನ್‌ ರೂಮ್‌ನಲ್ಲಿ ಇವರಿಬ್ಬರು ಕೂತು    ಸ್ಪರ್ಧಿಗಳು ಸ್ವರ್ಗಕ್ಕೆ ಹೋಗಬೇಕೋ? ನರಕಕ್ಕೆ ಹೋಗಬೇಕೋ? ಎನ್ನುವುದನ್ನು ತಿಳಿಸುವ ಅಧಿಕಾರವನ್ನು ನೀಡಲಾಗಿತ್ತು. 

ಬಿಗ್ ಬಾಸ್ ಸೀಸನ್ 11ಕ್ಕೆ ಕಾಲಿಡುತ್ತಿದ್ದಂತೆಯೇ ಯಮುನಾ ಶ್ರೀನಿಧಿ ಮೊದಲ ದಿನವೇ ಟ್ರೋಲ್ ಆಗಿದ್ದರು. ಅವರು ಮಾತನಾಡುವ ಶೈಲಿ ಮತ್ತು ಮುಖದ ಎಕ್ಸ್‌ಪ್ರೆಶನ್ ಓವರ್ ಆಗಿದೆ ಎಂದು  ಟ್ರೋಲ್ ಮಾಡಲಾಗಿತ್ತು.

ಜಾನಿ ಮಾಸ್ಟರ್‌ ಪೋಕ್ಸೋ ಕೇಸ್ ಬೆನ್ನಲ್ಲೇ ಮತ್ತೊಂದು ಆಘಾತ: ರಾಷ್ಟ್ರ ಪ್ರಶಸ್ತಿ ರದ್ದುಗೊಳಿಸಿದ ಕೇಂದ್ರ

ಮೈಸೂರು ಮೂಲದ ಯಮುನಾ ಶ್ರೀನಿಧಿ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ.  ಯಮುನಾ ಬರೀ ನಟನೆಯಲ್ಲಿ ಛಾಪು ಮೂಡಿಸಿದವರಲ್ಲ. ಅಮೆರಿಕದಲ್ಲಿ ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಭರತನಾಟ್ಯ ತರಬೇತಿ ನೀಡಿದ್ದಾರೆ. ಮೊದ ಮೊದಲಿಗೆ ಭರತನಾಟ್ಯ ಮಾಡುತ್ತಿದ್ದ ಯಮುನಾ, ಬಳಿಕ ಭರತನಾಟ್ಯ ಗುರುಗಳಿಂದ ವಿವಿಧ ಶೈಲಿಯ ಭರತನಾಟ್ಯವನ್ನು ಕಲಿತಿದ್ದಾರೆ.  ಅವರು ಅಮೆರಿಕ ಕನ್ನಡ ಸಂಘದ ಅಧ್ಯಕ್ಷೆಯಾಗಿ ಎಂಟು ವರ್ಷ ಕೆಲಸ ಮಾಡಿದ್ದಾರೆ.

ಶಾಸ್ತ್ರೀಯ ಭರತನಾಟ್ಯ ಪ್ರವೀಣೆ, ನೃತ್ಯ ಸಂಯೋಜಕಿಯಾಗಿ 15 ವರ್ಷಗಳ ಕಾಲ USA ನಲ್ಲಿ ಜೀವನವನ್ನು ನಡೆಸಿದ ನಂತರ, ಯಮುನಾ 2012 ರಲ್ಲಿ ಭಾರತಕ್ಕೆ ಮರಳಿದರು. ನಂತರ ಅವರು ಕನ್ನಡ ಧಾರಾವಾಹಿ ಅಶ್ವಿನಿ ನಕ್ಷತ್ರದ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಕನ್ನಡ ಚಿತ್ರರಂಗದ ಪ್ರಮುಖ ನಟರೊಂದಿಗೆ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 10ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!