ಈಗೇನಿದ್ದರೂ ಹನುಮಂತ ಆ ಹಣವನ್ನು ಏನ್ ಮಾಡ್ತಾರೆ? ಏನಕ್ಕೆಲ್ಲಾ ಖರ್ಚು ಮಾಡ್ಬಹುದು ಎಂಬ ಚರ್ಚೆ ಹಳ್ಳಿಕಟ್ಟಯಲ್ಲಿ ಜೋರಾಗಿದೆ. ಕೇವಲ ಹಳ್ಳಿಕಟ್ಟೆ ಅಂತಲ್ಲ, ಸಿಟಿ ಮಾರ್ಕೆಟಲ್ಲೂ ಆ ಬಗ್ಗೆ ..
ಕಲರ್ಸ್ ಕನ್ನಡದಲ್ಲಿ ಮೂಡಿಬಂದ ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ವಿನ್ನರ್ ಆಗಿ ಹಾವೇರಿಯ ಹಳ್ಳಿ ಹೈದ ಹನುಮಂತ (Hanumantha) ಟ್ರೋಫಿ ಗೆದ್ದಿದ್ದು ಈಗ ಹಳೆಯ ಸಂಗತಿ. ಈಗೇನಿದ್ದರೂ ಹನುಮಂತ ಆ ಹಣವನ್ನು ಏನ್ ಮಾಡ್ತಾರೆ? ಏನಕ್ಕೆಲ್ಲಾ ಖರ್ಚು ಮಾಡ್ಬಹುದು ಎಂಬ ಚರ್ಚೆ ಹಳ್ಳಿಕಟ್ಟಯಲ್ಲಿ ಜೋರಾಗಿದೆ. ಕೇವಲ ಹಳ್ಳಿಕಟ್ಟೆ ಅಂತಲ್ಲ, ಸಿಟಿ ಮಾರ್ಕೆಟಲ್ಲೂ ಆ ಬಗ್ಗೆ ಮಾತುಕತೆ ನಡೆದೇ ಇದೆ. ಅದೇ ಸಂಗತಿಯನ್ನು ಬಿಗ್ ಬಾಸ್ ಗೆದ್ದ ಬಳಿಕ ಆಯೋಜಿಸಲಾಗಿದ್ದ ಪ್ರೆಸ್‌ಮೀಟ್‌ನಲ್ಲಿ ಹನುಮಂತ ಅವರಿಗೆ ಕೇಳಲಾಗಿದೆ.
ಹಾಗಿದ್ದರೆ ಆ ಪ್ರಶ್ನೆಗೆ ಬಿಗ್ ಬಾಸ್ ವಿನ್ನರ್ ಹನುಮಂತ ಕೊಟ್ಟ ಉತ್ತರವೇನು? ಹೌದು, ಹನುಮಂತ ಆ ಪ್ರಶ್ನೆಗೆ ಉತ್ತರಿಸಿದ್ದಾರೆ. 'ಮನೆ ಕಟ್ಟಿಸಬೇಕ್ರಿ, ಆಮ್ಯಾಲೆ ಮದ್ವೆ ಆಗ್ಬೇಕ್ರಿ..' ಎಂದಿದ್ದಾರೆ. ಅದಕ್ಕೆ ಪಕ್ಕದಲ್ಲೇ ಇದ್ದ ತ್ರಿವಿಕ್ರಮ ಏನೋ ಹೇಳಿದ್ದಾರೆ. ಅದಕ್ಕೆ ಎನ್ನುವಂತೆ ಉತ್ತರಿಸಿರುವ ಹನುಮಂತ 'ಮನೆ ಇದೇರಿ, ಆದ್ರೆ ಮೇಲ್ಗಡೆ ತಗಡು ಹಾಕೇವ್ರೀ.. ತಗಡು ತೆಗೆದು ಸ್ಲಾಪ್ ಹಾಕ್ಬೇಕ್ರೀ..' ಎಂದಿದ್ದಾರೆ.
ಕಲರ್ಸ್ ಕನ್ನಡ ಶೋ ವಿನ್ನರ್ ಬಗ್ಗೆ ಜೀ ಕನ್ನಡ ಪೋಸ್ಟ್, ಅಲ್ಲಿ ಬರೆದಿದ್ದೇನು?
ಅಲ್ಲಿಗೆ, ಇಷ್ಟು ದಿನ ಹನುಮಂತ ಅವರ ಮನೆ ಛಾವಣಿ ತಗಡಿನದ್ದಾಗಿತ್ತು, ಇನ್ಮುಂದೆ ಅದು ಸಿಮೆಂಟ್ ಕಾಣಲಿದೆ. ಜೊತೆಗೆ, ಮನೆ ಒಂದಿಷ್ಟು ಸುಣ್ಣ-ಬಣ್ಣ ಬಳಿದುಕೊಂಡು ಚೆಂದ ಆಗಲಿದೆ. ಅದಾದ ಬಳಿಕ ಇರೋದೇ ಮದುವೆ. ಅದನ್ನೂ ಸ್ವತಃ ಹನುಮಂತನೇ ಹೇಳಿಯಾಗಿದೆ. ಹಳ್ಳಿ ಹುಡುಗಿನೇ ನೋಡ್ತೀವಿ ಅಂತ ಅವರಮ್ಮ ಹೇಳಿದ್ದೂ ಆಗಿದೆ, ಈ ವರ್ಷ ಮದ್ವೆ ಪಕ್ಕಾ ಅಂದಿದ್ದೂ ಆಗಿದೆ.
ಒಟ್ಟಿನಲ್ಲಿ, ಹನುಮಂತ ಸರಿಗಮಪ ಗೆದ್ದ ಬಳಿಕ ಸಿಂಗರ್ ಹನುಮುಂತ ಅಂತ ಆಗಿದ್ದೋರು ಈಗ ಬಿಗ್ ಬಾಸ್ ಹನುಮಂತ ಆಗಿದ್ದಾರೆ. ಸದ್ಯ ಇಡೀ ಕರ್ನಾಟಕದ ಮನೆಮಾತಾಗಿದ್ದಾರೆ. 'ಸರಳಜೀವಿ'ಗೆ ಮುಗ್ಧತೆಯ ಮನಸ್ಸಿದೆ, ಅದೃಷ್ಟವೂ ಕೈಜೋಡಿಸಿದೆ. ಹನುಮಂತ ಈಗ ಅರ್ಧ ಕೋಟ್ಯಾಧಿಪತಿ ಆಗಿದ್ದಾರೆ. ಅಂದಹಾಗೆ, ಸಿನಿಮಾಗೆ ಸಹ ಆಫರ್ ಬಂದಿದೆ ಎನ್ನಲಾಗ್ತಿದೆ. ಆದರೆ, ಅದನ್ನು ಸ್ವತಃ ಹನುಮಂತನೇ ಹೇಳಬೇಕಷ್ಟೇ.
ಡಿಪ್ರೆಶನ್ & ರಾಜ್ಯ ಪ್ರಶಸ್ತಿ ಎರಡನ್ನೂ ಅನುಭವಿಸಿದ ಅಂದಗಾತಿ ಅನುಪಮಾ; ಫೋಟೋಸ್ ನೋಡಿ, ಕಾಲೆಳಿಬೇಡಿ!
ಸಿಕ್ಕ ಹಣವನ್ನು ಸರಿಯಾಗಿ ಉಪಯೋಗಿಸಿಕೊಂಡರೆ ಲೈಫಿಗೇನೂ ತೊಂದ್ರೆ ಆಗೋದಿಲ್ಲ. ಸಿನಿಮಾದಲ್ಲೂ ಅವಕಾಶ ಸಿಕ್ಕರೆ ಸದ್ಯ ಸಿಂಗರ್, ರಿಯಾಲಿಟಿ ಶೋ ವಿನ್ನರ್ ಆಗಿರುವ ಹನುಮಂತ ಮುಂದೆ ನಟರೂ ಆಗಲಿದ್ದಾರೆ. ಮುಂದಿನದನ್ನು ಕಾಲವೇ ನಿರ್ಧರಿಸಬೇಕಷ್ಟೇ..