
ಸಂಗೀತ ಶೃಂಗೇರಿ ಕ್ರೀಡಾ ಹಿನ್ನೆಲೆಯಿಂದ ಬಂದವರು. ಈ ಸ್ಪೋರ್ಟ್ಸ್‌ನಲ್ಲಿ ಇರುವವರಲ್ಲಿ ಒಂದು ಬಗೆಯ ಅಗ್ರೆಸ್ಸಿವ್‌ನೆಸ್ ಇರೋದು ಕಾಮನ್. ಅದು ಸಂಗೀತಾ ಅವರಲ್ಲೂ ಇದೆ. ಆದರೆ ಬಿಗ್‌ಬಾಸ್ ಮನೆಯಂಥಾ ಒಂದು ಮುಚ್ಚಿದ ಆವರಣದಲ್ಲಿ ಇಂಥಾ ಅಗ್ರೆಸ್ಸಿವ್ ಮೈಂಡ್‌ಸೆಟ್‌ನವರು ಹೇಗೆ ಬಿಹೇವ್ ಮಾಡ್ತಾರೆ ಅನ್ನೋದನ್ನು ಊಹಿಸೋದು ಕಷ್ಟ. ಬಿಗ್‌ಬಾಸ್ ಆಟದ ಟ್ರಿಕ್ಕೇ ಅದು. ವಿಭಿನ್ನ ಹಿನ್ನೆಲೆಯ ವಿಭಿನ್ನ ಮನೋಭಾವದ ಸ್ಪರ್ಧಿಗಳನ್ನು ಒಂದು ಸೀಮಿತ ಚೌಕಟ್ಟಿನೊಳಗೆ ಹಾಕಿ ಮಜಾ ನೋಡುವುದು. ಈ ಬಾರಿಯ ಬಿಗ್‌ಬಾಸ್‌ನಲ್ಲಿ ಅಂಥಾ ಕೆಲಸ ಸಕ್ಸಸ್‌ಫುಲ್ ಆಗಿ ಆಗಿದೆ. ಪರಿಣಾಮ ಈ ಪ್ರೋಗ್ರಾಂನ ಟಿಆರ್‌ಪಿಯೂ ಹೆಚ್ಚಾಗಿದೆ. ಕಳೆದ ಬಾರಿಗಿಂತ ಹೆಚ್ಚಿನ ಟಿಆರ್‌ಪಿಯನ್ನು ಬಿಗ್‌ಬಾಸ್ ಪಡೆದುಕೊಂಡಿದೆ. ಅಷ್ಟೇ ಅಲ್ಲ ಬಿಗ್‌ಬಾಸ್ ನೋಡುವವರು ಸೋಷಿಯಲ್ ಮೀಡಿಯಾದಲ್ಲೂ ಭರ್ಜರಿಯಾಗಿ ತೊಡಗಿಸಿಕೊಂಡಿದ್ದಾರೆ. ಟಿವಿಯಲ್ಲಿ ಬಿಗ್‌ಬಾಸ್ ಸ್ಪರ್ಧಿಗಳು ಕಿತ್ತಾಡಿಕೊಂಡರೆ ಸೋಷಿಯಲ್ ಮೀಡಿಯಾದಲ್ಲಿ ಅವರ ಫ್ಯಾನ್ಸ್ ನಡುವೆ ವಾಗ್ಯುದ್ಧ ನಡೆಯುತ್ತಿದೆ.
ಆದರೆ ಸಂಗೀತ ಅವರು ಕೆಲವು ಟಾಸ್ಕ್‌ಗಳಲ್ಲಿ (Tasks) ತೆಗೆದುಕೊಂಡು ಕಠಿಣ ನಿರ್ಧಾರದ ಫಲವಾಗಿ ಅವರ ಫ್ಯಾನ್ ಫಾಲೋವಿಂಗ್‌ನಲ್ಲಿ (Fan Following) ಸಡನ್ ಇಳಿಕೆ ಆಗಿದೆ. ಸಂಗೀತಾ ಬಿಗ್ ಬಾಸ್ ಮನೆಯ ಆಟ ಹೊರಗೆ ಭಾರೀ ಪರಿಣಾಮವನ್ನೇ ಬೀರಿದೆ. ಇನ್ಸ್ಟಾಗ್ರಾಮ್ನಲ್ಲಿ ಸಂಗೀತಾ ಸರಿ ಸುಮಾರು 11 ಸಾವಿರ ಫಾಲೋವರ್ಸ್ ಅನ್ನು ಕಳೆದುಕೊಂಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಯಾವುದೇ ಸೆಲೆಬ್ರಿಟಿ ಬಿಗ್ ಬಾಸ್ಗೆ ಕಾಲಿಟ್ಟ ಬಳಿಕ ಅವರ ಜನಪ್ರಿಯತೆ ಹೆಚ್ಚುತ್ತದೆ. ಆದ್ರೆ ಸಂಗೀತಾ ಶೃಂಗೇರಿ ಅಭಿಮಾನಿಗಳನ್ನು ಕಳೆದುಕೊಂಡಿದ್ದಾರೆ. ಇದಕ್ಕೆ ಕಾರಣ ಅವರು ಮಾನವೀಯತೆಯನ್ನು ಮರೆತು ಸಹ ಸ್ಪರ್ಧಿಗಳಿಗೆ ನೀಡಿದ ಟಾಸ್ಕ್ ಅನ್ನೋದು ಬಿಗ್ ಬಾಸ್ ಫಾಲೋ ಮಾಡೋ ಎಲ್ಲರಿಗೂ ತಿಳಿದಿರೋ ಸಂಗತಿ.
ನಮ್ರತಾ ಜೊತೆ ಸೇರಿದ ಸಂಗೀತಾ! ಈ ಜೋಡಿ ನೋಡಿ ಜನ ಏನ್ ಹೇಳ್ತಿದ್ದಾರೆ ಗೊತ್ತಾ?
ಸಂಗೀತಾ ಅವರು ಕಾರ್ತಿಕ್ ಹಾಗೂ ತುಕಾಲಿಗೆ ತಲೆ ಬೋಳಿಸುವ ಟಾಸ್ಕ್ ಕೊಡುವುದಕ್ಕೂ ಮೊದಲು ಸಂಗೀತಾಗೆ 4.49 ಲಕ್ಷ ಫಾಲೋವರ್ಸ್ ಇದ್ದರು. ಈ ಎಪಿಸೋಡ್ ಬಳಿಕ ಈ ಸಂಖ್ಯೆ 4.38 ಲಕ್ಷಕ್ಕೆ ಇಳಿಕೆ ಆಗಿದೆ. ಇದರಿಂದ ಬಿಗ್‌ಬಾಸ್‌ನಲ್ಲಿ ಮಾತ್ರ ಅಲ್ಲ ಅವರ ಕೆರಿಯರ್‌ನಲ್ಲೂ ಸಮಸ್ಯೆ ಆಗೋ ಸಾಧ್ಯತೆ ಇದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವೀಕ್ಷಕರು ಚರ್ಚಿಸುತ್ತಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಸಂಗೀತಾ, ತನಿಷಾ ಕುಪ್ಪಂಡ, ಕಾರ್ತಿಕ್ ಮಹೇಶ್ ಅವರು ಆರಂಭದಲ್ಲಿ ಸ್ನೇಹಿತರಾಗಿದ್ದು, (friends) ಈಗ ಶತ್ರುಗಳ ರೀತಿ ಆಡುತ್ತಿದ್ದಾರೆ. ಕಾರ್ತಿಕ್ ಹಾಗೂ ಸಂಗೀತಾ ಅವರು ಇಷ್ಟುದಿನ ಜಗಳ ಆಡುವಾಗ ತನಿಷಾ ಕುಪ್ಪಂಡ ಇವರ ಮಧ್ಯೆ ಹೋಗಿ ಸಮಸ್ಯೆಯನ್ನು ಬಗೆಹರಿಸುತ್ತಿದ್ದರು. ಆದರೆ ಈಗ ತನಿಷಾ, ಸಂಗೀತಾಗೆ ಆಗಿ ಬರುತ್ತಿಲ್ಲ. ಯಾವಾಗ ಯಾರು ಫ್ರೆಂಡ್ಸ್ ಆಗಿರುತ್ತಾರೆ, ಯಾವಾಗ ಯಾರು ಶತ್ರು (enemies) ಗಳಾಗುತ್ತಾರೆ ಅಂತ ವೀಕ್ಷಕರಿಗೆ ಅರ್ಥ ಆಗ್ತಿಲ್ಲ. ಇನ್ನೊಂದು ಕಡೆ ಸಂಗೀತಾ ಅವರು ಕಾರ್ತಿಕ್‌ಗೆ ತಲೆ ಬೋಳಿಸಿಕೊಳ್ಳುವ ಟಾಸ್ಕ್ ಕೊಟ್ಟಿದ್ದು ವೀಕ್ಷಕರಿಗೆ ಬೇಸರ ತರಿಸಿದೆ. ಹುಡುಗಿಯರನ್ನು ನಂಬಿದ್ರೆ ತಲೆ ಬೋಳಿಸಿ ಕಳಿಸ್ತಾರೆ ಅಂತ ವೀಕ್ಷಕರು ಹೇಳುತ್ತಿದ್ದಾರೆ.
ಚೂಡಿದಾರ್ನಲ್ಲಿ ಕ್ಯೂಟ್ ಸ್ಮೈಲ್ ಕೊಟ್ಟ ವೈಷ್ಣವಿ ಗೌಡ: ನಿಮ್ಮ ಸರಳತೆಗೆ ನಮ್ಮದೊಂದು ಸಲಾಂ ಎಂದ ಫ್ಯಾನ್ಸ್!
ತನಗೆ ಸಂಗೀತಾ ಅಷ್ಟೆಲ್ಲ ಸಮಸ್ಯೆ (problem) ಮಾಡಿದರೂ ಕಾರ್ತಿಕ್ ಮತ್ತೆ ಆಕೆಯನ್ನು ಮಾತನಾಡಿಸಲು ಹೋದರೆ, 'ನನಗೆ ಇಲ್ಲಿ ಇಷ್ಟವೇ ಆಗ್ತಿಲ್ಲ, ನೀವು ಎಲ್ಲದಕ್ಕೂ ಜಗಳ ಆಡ್ತೀರಿ, ಇಲ್ಲಿ ಇರೋದು ನಾನು ಅಲ್ಲ, ನಾನು ಏನೇ ಮಾಡಿದ್ರೂ, ಮಾತಾಡಿದ್ರೂ ಜಗಳ ಮಾಡ್ತೀರಿ, ಮನಸ್ಸು ಬಂದಾಗ ಜಗಳ ಮಾಡ್ತೀರಿ, ಮನಸ್ಸು ಬಂದಾಗ ಸಮಾಧಾನ ಮಾಡಲು ಬರುತ್ತೀರಿ' ಎಂದು ಮತ್ತೆ ಜಗಳ ತೆಗೆದಿದ್ದಾರೆ.
ಕಾರ್ತಿಕ್ ಜೊತೆ ಕಿತ್ತಾಡಿಕೊಂಡಿದ್ದ ನಟಿ ಸಂಗೀತಾ ಬಿಗ್ ಬಾಸ್ ಮನೆ ಬಿಟ್ಟು ಹೋಗುವ ನಿರ್ಧಾರ ಮಾಡಿದ್ರು. ಬಳಿಕ ಮನೆಯವರೆಲ್ಲಾ ಆಕೆಯ ಮನವೊಲಿಸಿದ್ದಾರೆ. ಸಂಗೀತಾ ತನ್ನ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಆದರೆ ಈಕೆಯ ಕೆಲವು ನಿರ್ಧಾರಗಳು ಜನ ಈಕೆಯನ್ನು ಜಡ್ಜ್ ಮಾಡುವಂತೆ ಮಾಡಿರುವುದು ಸುಳ್ಳಲ್ಲ. ಸೋಷಿಯಲ್ ಮೀಡಿಯಾದಲ್ಲಿ (social media) ಸಂಗೀತಾ ಊಸರವಳ್ಳಿ ಅನ್ನೋ ಪೋಸ್ಟ್(post) ವಿಪರೀತ ಹರಿದಾಡ್ತಿದೆ. ಫಾಲೋವರ್ಸ್ ಕೂಡ ಢಮಾರ್ ಆಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.