ಬಿಗ್ ಬಾಸ್ ಸ್ಪರ್ಧಿಯ ಖಾಸಗಿ ವಿಡಿಯೋ ಲೀಕ್, MMS ಕೋಲಾಹಲಕ್ಕೆ ನಟಿ ಒವಿಯಾ ಬೋಲ್ಡ್ ಉತ್ತರ!

By Chethan Kumar  |  First Published Oct 13, 2024, 5:15 PM IST

ಬಿಗ್ ಬಾಸ್ ತಮಿಳಿನ ಸ್ಪರ್ಧಿ, ಬಹುಭಾಷಾ ನಟಿ ಒವಿಯಾ ಅವರದ್ದು ಎನ್ನಲಾದ ಖಾಸಗಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ. ಭಾರಿ ಕೋಲಾಹಲ ಸೃಷ್ಟಿಯಾಗುತ್ತಿದ್ದಂತೆ, ನಟಿ ಬೋಲ್ಡ್ ಉತ್ತರ ನೀಡಿದ್ದಾರೆ.


ಚೆನ್ನೈ(ಅ.13) ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧೆ ವೀಕ್ಷಕರ ಗಮನ ಹಿಡಿದಿಟ್ಟುಕೊಳ್ಳುತ್ತಿದೆ. ಜೊತೆಗೆ ವಿವಾದಕ್ಕೂ ಕಾರಣವಾಗುತ್ತಿದೆ. ಕನ್ನಡ ಬಿಗ್ ಬಾಸ್‌ ಮೇಲೆ ಮಹಿಳಾ ಆಯೋಗ ಗರಂ ಆಗಿ ವಿವಾದಕ್ಕೆ ಕಾರಣವಾಗಿತ್ತು. ಇತ್ತ ತಮಿಳು ಬಿಗ್ ಬಾಸ್ ಇದೀಗ ಭಾರಿ ವಿವಾದಕ್ಕೆ ಗುರಿಯಾಗಿದೆ. ಇದಕ್ಕೆ ಕಾರಣ ಸ್ಪರ್ಧಿ, ಬಹುಭಾಷಾ ನಟಿ ಒವಿಯಾ.  ಒವಿಯಾ ಎಂದೇ ಜನಪ್ರಿಯಾಗಿರುವ ನಟಿ ಹೆಲೆನ್ ನೆಲ್ಸೆನ್ ಸದ್ಯ ತಮಿಳು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿದ್ದಾರೆ. ಆದರೆ ಸ್ಪರ್ಧೆ ತೀವ್ರಗೊಳ್ಳುತ್ತಿದ್ದಂತೆ ಒವಿಯಾ ಅವರದ್ದು ಎನ್ನಲಾದ ಖಾಸಗಿ ವಿಡಿಯೋ(mms) ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 ಈ ಬಾರಿ ತಮಿಳು ಬಿಗ್ ಬಾಸ್ ನಿರೂಪಕ ಸೇರಿದಂತೆ ಕೆಲ ಬದಲಾವಣೆಯೊಂದಿಗೆ ಆರಂಭಗೊಂಡಿದೆ. ಆದರೆ ಆರಂಭಗೊಂಡ ಕೆಲವೇ ದಿನಗಳಲ್ಲಿ ತಮಿಳು ಬಿಗ್ ಬಾಸ್ ಸ್ಪರ್ಧಿಯ ಖಾಸಗಿ ವಿಡಿಯೋಗಳು ಲೀಕ್ ಆಗಿದೆ. ಈ ವಿಡಿಯೋಗಳು ಡೀಪ್ ಫೇಕ್ ವಿಡಿಯೋಗಳೇ ಅಥವಾ ಶೂಟ್ ಮಾಡಿರುವ ನಿಜ ವಿಡಿಯೋಗಳೇ ಅನ್ನೋದು ಸ್ಪಷ್ಟವಾಗಿಲ್ಲ. ಆದರೆ ಪುರುಷನ ಜೊತೆ ಅಶ್ಲೀಲವಾಗಿ ಕಾಣಿಸಿಕೊಂಡಿರುವ ವಿಡಿಯೋಗಳು ಬಹುತೇಕ ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

Tap to resize

Latest Videos

undefined

ಅತಿ ಹೆಚ್ಚು ಸಂಭಾವನೆ ಪಡೆಯುವ ದಕ್ಷಿಣ ಭಾರತದ ನಟಿಯರು ಯಾರು? ಸಂಭಾವನೆ ಎಷ್ಟು?

ಈ ವಿಡಿಯೋ ಇದೀಗ ತಮಿಳು ಬಿಗ್ ಬಾಸ್ ಮಾತ್ರವಲ್ಲ, ತಮಿಳು, ಮಲೆಯಾಳಂ ಸೇರಿದಂತೆ ಇತರ ಸಿನಿಮಾ ಇಂಡಸ್ಟ್ರಿಯಲ್ಲಿ ಕೋಲಾಹಲ ಸೃಷ್ಟಿಸಿದೆ. ಒವಿಯಾ ವಿಡಿಯೋಗಳನ್ನು ನಕಲಿ ಮಾಡಿ ಈ ರೀತಿ ಹರಿಬಿಡಲಾಗಿದೆಯಾ ಅನ್ನೋ ಪ್ರಶ್ನೆ ಕೂಡ ಕಾಡುತ್ತಿದೆ. ಮೇಲ್ನೋಟಕ್ಕೆ ನಟಿ ಒವಿಯಾ ವಿಡಿಯೋ ಎಂದೇ ಹೇಳಲಾಗುತ್ತಿದೆ. 

ಬಿಗ್ ಬಾಸ್ ಸ್ಪರ್ಧಿ ಒವಿಯಾ ವಿಡಿಯೋ ಕೋಲಾಹಲದ ಬೆನ್ನಲ್ಲೋ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರೆ. ಕೈಸನ್ನೈ ಜೊತೆಗೆ ನೀವು ಬಾಯಿ ಮುಚ್ಚಿಕೊಂಡು ಇರಿ ಎಂದು ಬರೆದುಕೊಂಡಿದ್ದಾರೆ. ಇದು ಎಂಎಂಸ್ ಲೀಕ್ ವಿಡಿಯೋಗೆ ನಟಿ ನೀಡಿದ ಬೋಲ್ಡ್ ಉತ್ತರ ಅನ್ನೋ ಮಾತುಗಳು ಕೇಳಿಬರುತ್ತಿದೆ. 

 

 
 
 
 
 
 
 
 
 
 
 
 
 
 
 

A post shared by Oviya (@happyovi)

 

ಮೂಲತಃ ಕೇರಳದ ತ್ರಿಶೂರ್ ಜಿಲ್ಲೆಯವರಾಗಿರುವ ಒವಿಯಾ, ಮಲೆಯಾಳಂ ಸಿನಿಮಾ ಮೂಲಕ ಸಿನಿ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ. ಮಲೆಯಾಳಂ ಸೂಪರ್ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್‌ಗೆ ನಾಯಕಿಯಾಗಿ ಕಾಂಗರೋ ಸಿನಿಮಾ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟಿದ್ದರು. ಕನ್ನಡ, ತಮಿಳು, ತೆಲುಗು ಸೇರಿ ವಿವಿಧ ಭಾಷೆಗಳಲ್ಲಿ ಒವಿಯಾ ನಾಯಕಿಯಾಗಿ ನಟಿಸಿದ್ದಾರೆ. ಹಲವು ಬಾಕ್ಸ್ ಆಫೀಸ್ ಹಿಟ್ ಚಿತ್ರಗಳನ್ನು ನೀಡಿದ ಹೆಗ್ಗಳಿಕೆಗೆ ಒವಿಯಾ ಪಾತ್ರರಾಗಿದ್ದಾರೆ. 

ಒವಿಯಾದ್ದು ಎನ್ನಲಾದ ವಿಡಿಯೋಗಳು ಕುರಿತು ಯಾವುದೇ ಸ್ಪಷ್ಟನೆ ಲಭ್ಯವಾಗಿಲ್ಲ.ಆದರೆ ಘಟನೆ ಮಾತ್ರ ಬಿಗ್ ಬಾಸ್ ಸೇರಿದಂತೆ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲ ಗಾಸಿಪ್‌ಗಳಿಗೆ ಕಾರಣವಾಗಿದೆ.

click me!