ಬಿಗ್ ಬಾಸ್‌ ಕೊಟ್ಟ ಪೇಮೆಂಟ್‌, ಗಂಡ ಮಾಡಿದ ಶಾಪಿಂಗ್; ಇಂಟ್ರೆಸ್ಟಿಂಗ್ ವಿಚಾರ ರಿವೀಲ್ ಮಾಡಿದ ಗೌತಮಿ ಜಾದವ್

Published : Jan 21, 2025, 10:36 AM IST
ಬಿಗ್ ಬಾಸ್‌ ಕೊಟ್ಟ ಪೇಮೆಂಟ್‌, ಗಂಡ ಮಾಡಿದ ಶಾಪಿಂಗ್; ಇಂಟ್ರೆಸ್ಟಿಂಗ್ ವಿಚಾರ ರಿವೀಲ್ ಮಾಡಿದ ಗೌತಮಿ ಜಾದವ್

ಸಾರಾಂಶ

ಬಿಗ್‌ಬಾಸ್ ೧೧ರಲ್ಲಿ ಫೈನಲ್ ತಲುಪದೆ ಗೌತಮಿ ಜಾದವ್ ಹೊರಬಂದರು. ಪೇಮೆಂಟ್ ಬಗ್ಗೆ ಕೇಳಿದಾಗ, "ಪ್ರೀತಿಯಿಂದ ಕೊಟ್ಟಷ್ಟು ಪಡೆದಿದ್ದೇನೆ" ಎಂದರು. ಬಟ್ಟೆ, ಮೇಕಪ್‌ಗೆ ಹೆಚ್ಚು ಖರ್ಚು ಮಾಡಿದ ಗೌತಮಿ, ಗಂಡ ಕಳುಹಿಸಿದ್ದ ಬಟ್ಟೆಗಳನ್ನೂ ಒಯ್ದಿದ್ದಾಗಿ ಹೇಳಿದರು. ಮುಂದೆ ಸಿನಿಮಾ, ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಬಿಗ್ ಬಾಸ್ ಸೀಸನ್ 11ರ ಟಫ್ ಸ್ಪರ್ಧಿ ಗೌತಮಿ ಜಾದವ್ ಫಿನಾಲೆ ವಾರ ತಲುಪದೇ ಹೊರ ಬಂದಿದ್ದಾರೆ. ಗೌತಮಿ ಮತ್ತು ಉಗ್ರಂ ಮಂಜು ಫಿನಾಲೆ ಮುಟ್ಟಬೇಕು ಅನ್ನೋದು ಅದೆಷ್ಟೋ ವೀಕ್ಷಕರ ಕನಸು ಆಗಿತ್ತು. ಎಲಿಮಿನೇಟ್ ಆಗಿದ್ದು ಶಾಕಿಂಗ್ ವಿಚಾರನೇ ಆಗಿದ್ದರೂ ಇರ್ಲಿ ಪರ್ವಾಗಿಲ್ಲ ಅಂತಿದ್ದಾರೆ ಅಭಿಮಾನಿಗಳು. ಸದ್ಯ ಸಂದರ್ಶನಗಳಲ್ಲಿ ಬ್ಯುಸಿಯಾಗಿರುವ ಗೌತಮಿ ತಮ್ಮ ಪೇಮೆಂಟ್ ವಿಚಾರದ ಬಗ್ಗೆ ಪ್ರಶ್ನಿಸಿದ್ದಾಗ ಕೊಟ್ಟ ಉತ್ತರವಿದು....

ಖಾಸಗಿ ಟಿವಿ ಸಂದರ್ಶನದಲ್ಲಿ ನಿಮ್ಮ ಬಿಗ್ ಬಾಸ್ ಪೇಮೆಂಟ್ ಎಷ್ಟು ಎಂದು ಪ್ರಶ್ನೆ ಮಾಡಿದ್ದಕ್ಕೆ.. 'ಪೇಮೆಂಟ್ ವಿಚಾರದಲ್ಲಿ ಪ್ರೀತಿಯಿಂದ ಎಷ್ಟು ಕೊಟ್ಟಿದ್ದಾರೆ ಅಷ್ಟು ತೆಗೆದುಕೊಂಡಿದ್ದೀನಿ' ಎಂದು ಉತ್ತರಿಸಿ ಸುಮ್ಮನಾಗಿ ಬಿಟ್ಟರು. ಇನ್ನು ಹೆಣ್ಣುಮಕ್ಕಳು ಅತಿ ಹೆಚ್ಚಾಗಿ ಖರ್ಚು ಮಾಡುವುದು ಮೇಕಪ್ ಮತ್ತು ಬಟ್ಟೆಗೆ. ಒಂದು ದಿನ ಧರಿಸಿದ್ದನ್ನು ಗೌತಮಿ ಮತ್ತೊಂದು ದಿನ ಧರಿಸಿರಲಿಲ್ಲ ಅಲ್ಲದೆ ವೀಕೆಂಡ್‌ನಲ್ಲಿ ಅತಿ ಹೆಚ್ಚು ಮೈಸೂರ್ ಸಿಲ್ಕ್‌ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಹೀಗಾಗಿ ಪಡೆದ ಪೇಮೆಂಟ್‌ಗಿಂತ ಶಾಪಿಂಗ್‌ ಮೇಲೆ ಹಣ ಖರ್ಚು ಆಗಿಬಹುದು ಅನ್ನೋದು ನೆಟ್ಟಿಗರ ಗೆಸ್. 'ಡ್ರೆಸ್‌ಗಳು ಸಿಕ್ಕಾಪಟ್ಟೆ ತೆಗೆದುಕೊಂಡು ಹೋಗಿದ್ದೆ. ಹೊರ ಬಂದ ಮೇಲೂ ಇಂಟರ್‌ವ್ಯೂಗಳಿಗೆ ಹಾಕಿಕೊಂಡ ಹೋಗಬಹುದು ಅಷ್ಟು ಉಳಿದಿದೆ. ಬಹಳಷ್ಟು ಡ್ರೆಸ್ ನಾನು ತೆಗೆದುಕೊಂಡು ಹೋಗಿದ್ದೆ ಅನ್ನೋದಕ್ಕಿಂತ ಗಂಡ ಶಾಪಿಂಗ್ ಮಾಡಿ ಮಾಡಿ ಕಳುಹಿಸುತ್ತಿದ್ದರು. ಸಿಕ್ಕಾಪಟ್ಟೆ ಬಟ್ಟೆಗಳನ್ನು ತೆಗೆದುಕೊಂಡು ಹೋಗಿ ತೆಗೆದುಕೊಂಡು ಬಂದಿದ್ದೀನಿ' ಎಂದು ಗೌತಮಿ ಮಾತನಾಡಿದ್ದಾರೆ.

ಈ ಕಾರಣಕ್ಕೆ ಪದೇ ಪದೇ ಕೊರಗಜ್ಜನ ಮೊರೆ ಹೋಗುತ್ತಿದ್ರು ಚೈತ್ರಾ ಕುಂದಾಪುರ; ಸತ್ಯ ಲೀಕ್‌ ಆಗೇಬಿಡ್ತು

'ಮುಂದೆ ಯಾವುದೇ ಪ್ರಾಜೆಕ್ಟ್‌ ಬಂದರೂ ತೆಗೆದುಕೊಳ್ಳುವೆ...ನನ್ನ ಜನರನ್ನು ಮನೋರಂಜಿಸುತ್ತಿರುತ್ತೀನಿ. ಮುಂದೆ ಸಿನಿಮಾನಾ, ಸೀರಿಯಲ್‌ನಾ ಅಥವಾ ಯಾವುದಾದರೂ ಶೋನಾ ಎಂದು ಯೋಚನೆ ಮಾಡಬೇಕು. ಈಗಾಗಲೆ ನಾನು ನಾಲ್ಕು ಸಿನಿಮಾಗಳನ್ನು ಮಾಡಿದ್ದೆ ಒಂದು ತಮಿಳು ಸಿನಿಮಾ ಮಾಡಿದ್ದೆ. ಈ ಹಿಂದೆ ಮಾಡಿದ್ದು ಈಗ ಬೆಳಕಿಗೆ ಬಂದಿದೆ...ಮುಂದೆ ಮಾಡುವುದು ದೊಡ್ಡ ಸುದ್ದಿ ಮಾಡಬೇಕಿದೆ' ಎಂದಿದ್ದಾರೆ ಗೌತಮಿ. 

ಬಿಗ್ ಬಾಸ್ ಫಿನಾಲೆ ನನ್ನ ಕೊನೆಯ ನಿರೂಪಣೆ, 11 ಸೀಸನ್‌ಗಳು ಎಂಜಾಯ್‌ ಮಾಡಿದ್ದೀನಿ: ಸುದೀಪ್ ಪೋಸ್ಟ್‌ ವೈರಲ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?