
ಬಿಗ್ಬಾಸ್ 19 ಸ್ಪರ್ಧಿ ತಾನ್ಯಾ ಮಿತ್ತಲ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಎಲ್ಲದರ ಬಗ್ಗೆಯೂ ತಾನ್ಯಾ ಕೊಚ್ಚಿಕೊಳ್ಳುತ್ತಿದ್ದಳು. ತನ್ನ ಮನೆ ಹಾಗಿದೆ, ತನ್ನ ಜೊತೆ ಇಷ್ಟು ಬಾಡಿಗಾರ್ಡ್ ಇದ್ದಾರೆ ಅನ್ನೋ ಮಾತು ಹೇಳುತ್ತಿದ್ದರು. ಆರಂಭದಲ್ಲಿ ನಂಬಿದ್ದ ವೀಕ್ಷಕರಿಗೆ ಕೊನೆ ಕೊನೆಗೆ ಆಕೆ ಹೇಳುತ್ತಿರುವುದು ಬರೀ ಸುಳ್ಳು ಎನ್ನುವುದು ಗೊತ್ತಾಗಿತ್ತು. ಬಿಗ್‌ಬಾಸ್ ಮನೆಗಿಂತ 7 ಪಟ್ಟು ದೊಡ್ಡದಾಗಿ ನನ್ನ ಮನೆ ಇದೆ. ನನ್ನ ಮನೆ 7 ಸ್ಟಾರ್ ಹೋಟೆಲ್‌ನಂತೆ ಇದೆ, ಮನೆಯ ಒಂದು ಫ್ಲೋರ್‌ಅನ್ನು ನನ್ನ ಸೀರೆಗಳನ್ನು ಇಡಲು ಮೀಸಲಿಡಲಾಗಿದೆ. ನಮ್ಮ ಗಾರ್ಡನ್ ಅಂತೂ ಅದ್ಭುತವಾಗಿದೆ ಎಂದು ಕೊಚ್ಚಿಕೊಳ್ಳುತ್ತಿದ್ದರು.
ಪ್ರತಿದಿನ ಅವರು ಕೊಚ್ಚಿಕೊಳ್ಳುವುದು ಜಾಸ್ತಿ ಆದ ಬಳಿಕ ಇದೇ ವಿಚಾರ ಇರಿಸಿಕೊಂಡು ಜನರು ಗೇಲಿ ಮಾಡಲು ಆರಂಭಿಸಿದರು. ಇದಲ್ಲದೆ, ಶೋ ಹೋಸ್ಟ್ ಆಗಿದ್ದ ಸಲ್ಮಾನ್ ಖಾನ್ ಕೂಡ ಹಲವು ಬಾರಿ ವೇದಿಕೆಯಲ್ಲಿಯೇ ಈ ವಿಚಾರ ಪ್ರಸ್ತಾಪ ಮಾಡಿ ತಾನ್ಯಾ ಮಿತ್ತಲ್ ಕಾಲೆಳೆದಿದ್ದರು. ಒಂದು ಹಂತದಲ್ಲಿ ಬಿಗ್‌ಬಾಸ್ ವೇದಿಕೆಗೆ ಬಮದಿದ್ದ ಅವರ ಸಹೋದರ, ತಾನ್ಯಾ ಮಿತ್ತಲ್ ಅವರಿಗೆ ನೇರವಾಗಿ ಪ್ರಶ್ನೆ ಮಾಡಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಯಾಕೆ ನೀನು ಹೀಗೆ ಹೇಳ್ತಾ ಇದ್ದೀಯಾ ಎಂದು ಪ್ರಶ್ನೆ ಮಾಡಿದ್ದ. ಅದೇನೇ ಆದರೂ ತಾನ್ಯಾ ಮಿತ್ತಲ್ ನೇರವಾಗಿ ಬಿಗ್‌ಬಾಸ್ 19 ಫೈನಲ್ ತಲುಪಲು ಯಶ ಕಂಡಿದ್ದರು.
ಫಿನಾಲೆ ತಲುಪಿದ ನಂತರವೂ ಅವರು ಬಿಗ್‌ಬಾಸ್ ಗೆಲ್ಲಲು ಸಾಧ್ಯವಾಗಿಲ್ಲ. ಈಗ ಆಕೆ ಬಿಗ್‌ಬಾಸ್ 19 ಮನೆಯಿಂದ ಹೊರಬಂದಿದ್ದಾರೆ. ಅದರ ಬೆನ್ನಲ್ಲಿಯೇ ಆಕೆ ದೊಡ್ಡ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಅವರ ವಿರುದ್ಧ ಬಹಳ ಗಂಭೀರ ಆರೋಪಗಳನ್ನು ಮಾಡಲಾಗಿದೆ. ಇತ್ತೀಚೆಗೆ, ಡಿಸೈನರ್ ರಿಧಿಮಾ ಶರ್ಮಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತಾನ್ಯಾ ಮಿತ್ತಲ್ ತನಗೆ ಹಣ ನೀಡಿಲ್ಲ ಎಂದು ಆರೋಪಿಸಿ ದೊಡ್ಡ ಪೋಸ್ಟ್ ಬರೆದಿದ್ದಾರೆ. ಇದು ಮಾತ್ರವಲ್ಲದೆ, ನನ್ನ ಡಿಸೈನರ್ ಸೀರೆಗಳಿಗೆ ಆಕೆ ಇನ್ನೂ ಹಣ ನೀಡಬೇಕಿದೆ ಎಂದು ಹೇಳಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿದ್ದಾಗ ತಾನ್ಯಾ ಮಿತ್ತಲ್ ಅವರಿಗೆ ಸೀರೆ ಕಳಿಸುತ್ತಿದ್ದೆ ಎನ್ನುವುದಕ್ಕೆ ನನ್ನ ಬಳಿ ಎಲ್ಲಾ ಪುರಾವೆಗಳಿವೆ ಎಂದು ರಿಧಿಮಾ ಶರ್ಮಾ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ. ತಾನ್ಯಾ ಮಿತ್ತಲ್ ಅವರನ್ನು ನಾನು ಯಾವಾಗಲೂ ಬೆಂಬಲಿಸುತ್ತೇನೆ ಎಂದು ರಿಧಿಮಾ ಶರ್ಮಾ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ. ನಾನು ಅವರ ಸ್ಟೈಲಿಸ್ಟ್ ಎಂದು ಎಲ್ಲರಿಗೂ ತಿಳಿದಿದೆ. ಆದರೆ, ಬಿಗ್ ಬಾಸ್ ಮನೆಯಿಂದ ಹೊರಬಂದಾಗಿನಿಂದ ಅವರು ನನ್ನೊಂದಿಗೆ ಮಾತನಾಡಿಲ್ಲ. ಅವರಿಂದ ನನಗೆ ಯಾವುದೇ ಪ್ರತಿಕ್ರಿಯೆ ಬರುತ್ತಿಲ್ಲ ಎಂದಿದ್ದಾರೆ.
ನಾನು ಅವಳಿಗೆ ಉಡುಗೊರೆ ಮತ್ತು ಪತ್ರ ಕಳುಹಿಸಿದೆ. ಆದರೆ, ಅವಳು ಅದಕ್ಕೆ ನನಗೆ ಧನ್ಯವಾದ ಕೂಡ ಹೇಳಲಿಲ್ಲ. ನಾನು ಅವಳಿಗೆ ಬಟ್ಟೆ ಕಳುಹಿಸಿದ್ದೆ ಮತ್ತು ಕೊರಿಯರ್ ಶುಲ್ಕವನ್ನು ಸಹ ಪಾವತಿ ಮಾಡಿದ್ದೆ. ಇಂದು ಸೀರೆ ಬರದಿದ್ದರೆ, ನನ್ನ ಹಣವನ್ನು ನೀಡೋದಿಲ್ಲ ಎಂದು ಆಕೆಯ ತಂಡ ಹೇಳುತ್ತಿತ್ತು. ನಾನು ಇಷ್ಟು ದಿನ ಕಷ್ಟಪಟ್ಟು ಕೆಲಸ ಮಾಡಿದ್ದೆ. ನಾನು ಮೂರ್ಖನೇ? ಆ ಬ್ರ್ಯಾಂಡ್‌ಗಳು ಇನ್ನೂ ಪ್ರತಿಕ್ರಿಯಿಸಿಲ್ಲ. ಒಂದು ವಾರ ಪೂರ್ತಿ ಫಾಲೋ ಅಪ್ ಮಾಡಿ ನನಗೆ ಬೇಸರವಾಗಿದೆ. ದಯವಿಟ್ಟು ನನ್ನ ಹಣವನ್ನು ನೀಡುವಂತೆ ನಾನು ತಾನ್ಯಾ ಅವರ ತಂಡವನ್ನು ವಿನಂತಿಸುತ್ತೇನೆ. ಈಗ ಈ ವಿವಾದದ ಬಗ್ಗೆ ತಾನ್ಯಾ ಮಿತ್ತಲ್ ಏನು ಹೇಳುತ್ತಾರೆಂದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.