
ಶ್ರಾವಣ ಮಾಸ ಆರಂಭವಾಗಿದೆ. ಈ ಸಂದರ್ಭದಲ್ಲಿ ನಟಿ ಸಾನ್ಯಾ ಅಯ್ಯರ್ ಹೂವು ಮಾರುವ ವಿಡಿಯೋ ಒಂದು ವೈರಲ್ ಆಗುತ್ತಿದೆ. ಈ ಹೂವನ್ನು ಖರೀದಿ ಮಾಡಲು ಬಂದಿದ್ದಾರೆ ಭಾಗ್ಯಲಕ್ಷ್ಮಿ ಸೀರಿಯಲ್ ಹಿತಾ ಅರ್ಥಾತ್ ಸುಷ್ಮಿತಾ. ಹೂವಿನ ಮೊಳಕ್ಕೆ ಎಷ್ಟು ರೇಟ್ ಎಂದು ಸುಷ್ಮಿತಾ ಕೇಳಿದ್ದು ಅದರಕ್ಕೆ ಸಾನ್ಯಾ 50 ರೂಪಾಯಿ ಎಂದಿದ್ದಾರೆ. ಕೊನೆಗೆ ಮೊಳ ಒಂದಕ್ಕೆ 20 ರೂಪಾಯಿ ಎಂದಿದ್ದಾರೆ. ಸಾನ್ಯಾ ಅಯ್ಯರ್ ಈ ವಿಡಿಯೋ ನೋಡಿ, ಇಡೀ ಆಸ್ತಿ ಮಾರಿಯಾದ್ರೂ ಅಷ್ಟೂ ಹೂವನ್ನು ತೆಗೆದುಕೊಳ್ಳುವೆ ಎಂದು ಓರ್ವ ಅಭಿಮಾನಿ ಹೇಳಿದ್ರೆ, ಈ ರೂಪದಲ್ಲಿ ನೀವು ಹೂವು ಮಾರಿದ್ರೆ ಉಳಿದ ಹೂವು ಮಾರುವವರ ಕಥೆ ಅಷ್ಟೇ ಎಂದು ಮತ್ತೊಂದಿಷ್ಟು ಮಂದಿ ಹೇಳಿದ್ದಾರೆ. ಹೂವು ಮಾರುವವರ ಹೊಟ್ಟೆ ಮೇಲೆ ಬರೆ ಎಳೆಯಬೇಡಮ್ಮಾ, ತಲೆ ಮೇಲೆ ಕಲ್ಲು ಹಾಕಬೇಡಮ್ಮಾ ಅಂತಿದ್ದಾರೆ ಕಮೆಂಟಿಗರು.
ಅಷ್ಟಕ್ಕೂ ಬಿಗ್ ಬಾಸ್ 9 ಸೀಸನ್ (Bigg Boss Season 9) ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿದ ನಟಿ ಸಾನ್ಯಾ ಐಯ್ಯರ್. ರೂಪೇಶ್ ಶೆಟ್ಟಿ ಜೊತೆಗಿನ ಆಪ್ತತೆ ಕಾರಣಕ್ಕೆ ಸಾಕಷ್ಟು ಸುದ್ದಿ ಆಗಿದ್ದ ಸಾನ್ಯಾ ಅಯ್ಯರ್ ಕಿರುತೆರೆಯಲ್ಲಿಯೂ ಎತ್ತಿದ ಕೈ. ಈಕೆ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ. ಪುಟ್ಟ ಗೌರಿ ಮದುವೆ ಸೀರಿಯಲ್ ಮೂಲಕ ಮನೆ ಮಾತಾಗಿದ್ದಾರೆ. ಪುಟ್ಟ ಗೌರಿ ಮದುವೆಯಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದ ಸಾನ್ಯಾ, 8ನೇ ತರಗತಿಯವರೆಗೆ ಈ ಧಾರಾವಾಹಿಯಲ್ಲಿ ನಟಿಸಿದ್ದರು. ಕೊನೆಗೆ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದಲ್ಲಿ ಪದವಿ ಪಡೆದಿರುವ ಈಕೆ, ಮಲಯಾಳಂನಲ್ಲಿಯೂ ಹೆಸರು ಮಾಡಿದರು. ಮಲಯಾಳದ ' ಆರಾರೋ..ನೀಯಾರೋ' ಎಂಬ ಅಲ್ವಮ್ ಸಾಂಗ್ನಲ್ಲಿ ಕಾಣಿಸಿಕೊಂಡು ಫೇಮಸ್ ಆದರು. ಅದಾದ ಬಳಿಕ ಕನ್ನಡದ ಡಾನ್ಸಿಂಗ್ ರಿಯಾಲಿಟಿ ಶೋ ನಲ್ಲಿ ಅಭಿನಯಿಸಿ ಜನರಿಗೆ ಮತ್ತಷ್ಟು ಹತ್ತಿರವಾದರು. 'ಗುಲಾಬ್ ಜಾಮೂನ್' ಎಂಬ ಚಿತ್ರದಲ್ಲಿಯೂ ನಟಿಸಿದರು. ಆದರೆ ಹೆಚ್ಚು ಫೇಮಸ್ ಆಗಿದ್ದು ಬಿಗ್ ಬಾಸ್ 9 ಸೀಸನ್ ಮೂಲಕ. ಭಾಗವಹಿಸಿದ್ದರು. ‘ಬಿಗ್ ಬಾಸ್ ಕನ್ನಡ ಒಟಿಟಿ’ಯಲ್ಲಿಯೂ ಗಮನ ಸೆಳೆದರು.
ವಿನೇಶ್ ಫೋಗಟ್ ವಿಷ್ಯದಲ್ಲಿ ಈ ಅಪಹಾಸ್ಯ ಪ್ರಕಾಶ್ ರಾಜ್ಗೆ ಬೇಕಿತ್ತಾ? ಕೋಲು ಕೊಟ್ಟು ಬಾರಿಸಿಕೊಂಡ ನಟ!
ಸಾಮಾಜಿಕ ಜಾಲತಾಣದಲ್ಲಿ ಸಕತ್ ಆ್ಯಕ್ಟಿವ್ ಆಗಿರುವ ನಟಿ ಸಾನ್ಯಾ, ಕೆಲ ದಿನಗಳ ಹಿಂದೆ ರೀಲ್ಸ್ ಒಂದನ್ನು ಮಾಡಿ ಫ್ಯಾನ್ಸ್ ಹೃದಯ ಗೆದ್ದಿದ್ದರು, ಪಡ್ಡೆ ಹುಡುಗರ ನಿದ್ದೆ ಕದ್ದಿದ್ದರು! ರೂಪೇಶ್ ಶೆಟ್ಟಿ (Roopesh Shetty) ಜೊತೆಗಿನ ಆಪ್ತತೆ ಕಾರಣಕ್ಕೆ ಸಾಕಷ್ಟು ಸುದ್ದಿ ಆಗಿರೋ ಸಾನ್ಯಾ ಈಗ ಲವ್ ಬಗ್ಗೆ ಒಂದು ಸಂದೇಶ ನೀಡಿದ್ದು, ಇದಕ್ಕೆ ಸಕತ್ ರೆಸ್ಪಾನ್ಸ್ ಬರುತ್ತಿದೆ. ಇದೀಗ ಪುನೀತ್ ರಾಜ್ಕುಮಾರ್ ಚಿತ್ರದ ಸಾಂಗ್ಗೆ ರೀಲ್ಸ್ ಮಾಡಿ, ಎಲ್ಲರ ಮನ ಗೆದ್ದಿದ್ದಾರೆ. ಈಚೆಗೆ ಸಾನ್ಯಾ (Saanya Iyer), ಹೊಸ ವಿಡಿಯೋ ಒಂದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹರಿಯ ಬಿಟ್ಟಿದ್ದರು. ಅದರಲ್ಲಿ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಉದ್ದನೆಯ ಕೆಂಪು ಕೂದಲನ್ನು ಕತ್ತರಿಸಿ ಶಾರ್ಟ್ ಹೇರ್ ನಲ್ಲಿ ತುಂಬಾ ಕ್ಯೂಟ್ ಆಗಿ ಕಾಣಿಸ್ತಿದ್ದಾರೆ. ಈ ವಿಡೀಯೋವನ್ನು ಸಾನ್ಯಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ (Social Media) ಶೇರ್ ಮಾಡಿದ್ದರು. ಇದಕ್ಕೆ ಮಿಕ್ಸ್ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಅದಾದ ಬಳಿಕ ಇತ್ತೀಚೆಗೆ ಬೋಲ್ಡ್ ಫೋಟೋ ಶೂಟ್ ಮಾಡಿಸಿಕೊಂಡು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದರು. ಇದರಲ್ಲಿ ಸಕತ್ ಹಾಟ್ ಆಗಿ ಕಾಣಿಸುತ್ತಿದ್ದರು. ಆ ಫೋಟೋಗೆ ಸಕತ್ ರೆಸ್ಪಾನ್ಸ್ ಬಂದಿತ್ತು. ಹಲವಾರು ಮಂದಿ ಐ ಲವ್ ಯು ಅಂತ ಮೆಸೇಜ್ ಹಾಕಿದ್ರು. ಅದಕ್ಕೇ ನಟಿ ಈಗ ಐ ಲವ್ ಯೂ ಹೇಳ್ಬೇಡಿ, ಬೇಕಿದ್ರೆ ಹೀಗೆ ಹೇಳಿ ಅಂತ ಕ್ಯಾಪ್ಷನ್ ಕೊಟ್ಟು 'ಹೆಸರು ಪೂರ್ತಿ ಹೇಳದೇ' ಹಾಡಿಗೆ ಲಿಪ್ ಸಿಂಕ್ ಮಾಡಿದ್ದಾರೆ.
ಉಫ್... ನಟಿ ನೇಹಾ ಶರ್ಮಾ ತೋರಿಸ್ತಿರೋದೇನು? ನೆಟ್ಟಿಗರು ತಿಳ್ಕೊಂಡಿರೋದೇನು? ಛೇ..ಛೇ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.