ಬಿಗ್ ಬಾಸ್‌ ಕೈ ಬಿಟ್ರಾ ಕಿಚ್ಚ ಸುದೀಪ್; 'ಕಾಂತಾರ' ಕಿಂಗ್ ರಿಷಬ್‌ ಶೆಟ್ಟಿ ಹೊಸ ಹೋಸ್ಟ್‌?

By Vaishnavi Chandrashekar  |  First Published Aug 7, 2024, 3:42 PM IST

ಇದ್ದಕ್ಕಿದ್ದಂತೆ ಬಿಬಿಯಿಂದ ದೂರವಾಗಿಬಿಟ್ರಾ ಕಿಚ್ಚ ಸುದೀಪ್. ಹೋಸ್ಟ್‌ ಸ್ಥಾನಕ್ಕೆ ಇಬ್ಬರ ಹೆಸರನ್ನು ಗೆಸ್ ಮಾಡುತ್ತಿರುವ ನೆಟ್ಟಿಗರು.....


ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಅಂದ್ರೆ ಬಿಗ್ ಬಾಸ್. ಸೀಸನ್ 1ರಿಂದ 10ರವರೆಗೂ ವೀಕ್ಷಕರನ್ನು ಒಂದಲ್ಲ ಒಂದು ರೀತಿಯಲ್ಲಿ ಮನೋರಂಜಿಸುತ್ತಿದ್ದಾರೆ. ಇದರ ನಡುವೆ ಓಟಿಟಿ ಸೀಸನ್ 1 ಕೂಡ ನಡೆಯಿತ್ತು. ಕನ್ನಡ ಚಿತ್ರರಂಗ ಸ್ಟೈಲಿಷ್ ನಟ ಕಿಚ್ಚ ಸುದೀಪ್ ನಾಯಕತ್ವದಲ್ಲಿ ಕಾರ್ಯಕ್ರಮ ಅದ್ಧೂರಿಯಾಗಿ ಮೂಡಿ ಬರುತ್ತಿತ್ತು. ವೀಕೆಂಡ್ ಬರುತ್ತಿದ್ದಂತೆ ಕಿಚ್ಚ ಸುದೀಪ್‌ರನ್ನು ನೋಡಲು ವೀಕ್ಷಕರು ಮಾತ್ರವಲ್ಲ ಸ್ಪರ್ಧಿಗಳು ರೆಡಿಯಾಗಿ ಕಾಯುತ್ತಿದ್ದರು. ಅಲ್ಲದೆ ಕಿಚ್ಚ ಸುದೀಪ್ ಧರಿಸುವ ಉಡುಪುಗಳ ಮೇಲೆ ಅನೇಕರ ಕಣ್ಣಿತ್ತು. 

ಇದೇ ಅಕ್ಟೋಬರ್‌ ತಿಂಗಳಿನಲ್ಲಿ ಬಿಗ್ ಬಾಸ್ ಸೀಸನ್ 11 ಆರಂಭವಾಗಲಿದೆ. ಸೋಷಿಯಲ್‌ ಮೀಡಿಯಾದಲ್ಲಿ ಸಂಭಾವಿತರ ಪಟ್ಟಿ ವೈರಲ್ ಆಗುತ್ತಿದೆ. ಸುಮಾರು ಸ್ಪರ್ಧಿಗಳ ಹೆಸರನ್ನು ಈಗಾಗಲೆ ಟ್ರೋಲ್‌ ಪೇಜ್‌ಗಳಲ್ಲಿ ಗೆಸ್ ಮಾಡಲಾಗಿದೆ. ಆದರೂ ಗೊತ್ತಲ್ಲ ಬಿಗ್ ಬಾಸ್‌ ಕಡೆಯಿಂದ ಏನಾದರೂ ಒಂದು ಬಿಗ್ ಸರ್ಪ್ರೈಸ್‌ ಇದ್ದೇ ಇರುತ್ತದೆ. ಓಪನಿಂಗ್ ಕಾರ್ಯಕ್ರಮದಲ್ಲಿ ರಿಯಲ್‌ ಲಿಸ್ಟ್‌ ಹೊರ ಬರಲಿದೆ. ಇನ್ನು ಸೀಸನ್ 11ರಲ್ಲಿ ವಿಶೇಷ ಏನು ಎಂದು ಪ್ರಶ್ನೆ ಮಾಡುತ್ತಿದ್ದ ಜನರು ಈಗ ಬಿಗ್ ಶಾಕ್‌ನಲ್ಲಿದಾರೆ.

Tap to resize

Latest Videos

ಮುತ್ತಿನ ಸೀರೆಯಲ್ಲಿ ಮಿಂಚಿದ ಜೈ ಜಗದೀಶ್ ಪುತ್ರಿ; ವೈಭವಿನ ಬಿಕಿನಿಯಲ್ಲಿ ನೋಡಿ ಬೋರ್ ಆಯ್ತಾ?

ಹೌದು! ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಕಿಚ್ಚ ಸುದೀಪ್ ಬಿಗ್ ಬಾಸ್‌ ಸೀಸನ್ 11ರಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ. ಈ ಸೀಸನ್‌ ಹೋಸ್ಟ್‌ ಆಗಿ ಕಾಣಿಸಿಕೊಳ್ಳುವುದಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಸುಮಾರು 10 ಸೀಸನ್‌ಗಳಿಂದ ಸುದೀಪ್‌ರನ್ನು ನೋಡಿ ನೋಡಿ ಆ ಸ್ಥಾನವನ್ನು ಯಾರೇ ಸ್ವೀಕರಿಸಿದರೂ ಒಪ್ಪಿಕೊಳ್ಳಲು ವೀಕ್ಷಕರಿಗೆ ಕಷ್ಟ ಆಗಬಹುದು ಅನಿಸುತ್ತದೆ. ಇನ್ನು ಯಾರು ಬರಬಹುದು ಅನ್ನೋ ಪಟ್ಟಿಯಲ್ಲಿ ಇಬ್ಬರ ಹೆಸರು ಕೇಳಿ ಬರುತ್ತಿದೆ. ಅದೇ ಸಿಂಪಲ್ ಸ್ಟಾರ್ ರಮೇಶ್ ಅರವಿಂದ್ ಮತ್ತು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ.

ಕಪ್ಪು ಬಣ್ಣದ ಸೀರೆ ಮತ್ತು ಜಾಕೆಟ್‌ ಧರಿಸಿದ ಶ್ವೇತಾ ಚಂಗಪ್ಪ : ಬಿಂಕದ ಸಿಂಗಾರಿ ಮೈ ಡೊಂಕಿನ ವೈಯಾರಿ ಎಂದ ನೆಟ್ಟಿಗರು

ಈಗಾಗಲೆ ಕೋಟ್ಯಾಧಿಪತಿ ಮತ್ತು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರದಲ್ಲಿ ರಮೇಶ್ ಅರವಿಂದ್‌ ಅವರನ್ನು ನೋಡುತ್ತಿದ್ದವರಿಗೆ 'ಮಹಾನಟಿ' ಕಾರ್ಯಕ್ರಮದ ಮೂಲಕ ಇನ್ನು ಹತ್ತಿರವಾಗಿದ್ದಾರೆ. ಹೀಗಾಗಿ ರಮೇಶ್ ಅರವಿಂದ್ ಬಂದರೂ ಬರಹುದು. ಇನ್ನು ಕಾಂತಾರ ಸೀಕ್ವೆಲ್‌ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಡಿವೈನ್ ಸ್ಟಾರ್ ಸದ್ಯ ಬಹುಬೇಡಿಕೆಯ ನಟ ಕಮ್ ನಿರ್ದೇಶಕ ಹೀಗಾಗಿ ಡಿವೈನ್ ಸ್ಟಾರ್ ಬರಲಿ ಎಂದು ವೀಕ್ಷಕರು ಡಿಮ್ಯಾಂಡ್ ಇಟ್ಟರೂ ಇಡಬಹುದು. ಈ ಎಲ್ಲಾ ಗೊಂದಲಗಳಿಗೆ ಬಿಗ್ ಬಾಸ್‌ ತಂಡವೇ ಉತ್ತರ ಕೊಡಬೇಕಿದೆ. 

click me!