ಶೆಡ್​ಗೆ ಬರಬೇಕಿಲ್ಲ.. ಇಲ್ಲೇ ಫಿನಿಷ್! ಕೆಟ್ಟ ಕಮೆಂಟ್​ ಮಾಡೋರಿಗೆ ನಿವೇದಿತಾ ಕೊಟ್ರಾ ಎಚ್ಚರಿಕೆ- ಹಾಗಂತ ಬಿಡ್ತಾರಾ?

Published : Feb 08, 2025, 04:37 PM ISTUpdated : Feb 08, 2025, 06:22 PM IST
ಶೆಡ್​ಗೆ ಬರಬೇಕಿಲ್ಲ.. ಇಲ್ಲೇ ಫಿನಿಷ್! ಕೆಟ್ಟ ಕಮೆಂಟ್​ ಮಾಡೋರಿಗೆ ನಿವೇದಿತಾ ಕೊಟ್ರಾ ಎಚ್ಚರಿಕೆ- ಹಾಗಂತ ಬಿಡ್ತಾರಾ?

ಸಾರಾಂಶ

ಬಾಯ್ಸ್​ ವರ್ಸಸ್​ ಗರ್ಲ್ಸ್​ ರಿಯಾಲಿಟಿ ಷೋನಲ್ಲಿ ಉದ್ದ ಉಗುರುಗಳೊಂದಿಗೆ ಸ್ಪರ್ಧಿಸುತ್ತಿರುವ ನಿವೇದಿತಾ ಗೌಡ, ಪುರುಷ ಸ್ಪರ್ಧಿಗಳಿಗೆ ಸವಾಲು ಹಾಕಿದ್ದಾರೆ. ತಾವೂ ಇದೇ ಉದ್ದದ ಉಗುರು ಧರಿಸಿ 24/7 ಇರಬೇಕೆಂದು ಷರತ್ತು ವಿಧಿಸಿದ್ದಾರೆ. ಸ್ವರಕ್ಷಣೆಗಾಗಿ ಉಗುರು ಬೆಳೆಸಿದ್ದಾಗಿ ನಿವೇದಿತಾ ಹೇಳಿದರೆ, ಪುರುಷರು ಅದನ್ನು ಗಮ್ ಎಂದು ಖಂಡಿಸಿದ್ದಾರೆ. ನಿವೇದಿತಾ ಈ ಉಗುರುಗಳಿಂದಲೇ ಮುದ್ದೆ ತಿಂದು ರೀಲ್ಸ್​ ಕೂಡ ಮಾಡಿದ್ದಾರೆ.

ಬಿಗ್​ಬಾಸ್​​ ಖ್ಯಾತಿಯ ನಿವೇದಿತಾ ಗೌಡ ಸದ್ಯ ಕಲರ್ಸ್​ ಕನ್ನಡ ವಾಹಿನಿಯ ಬಾಯ್ಸ್​ ವರ್ಸಸ್​ ಗರ್ಲ್ಸ್​ ರಿಯಾಲಿಟಿ ಷೋನಲ್ಲಿ ಭಾಗಿಯಾಗಿದ್ದಾರೆ. ಅಲ್ಲಿ ಇದಾಗಲೇ ಉದ್ದದ ಉಗುರು ಬಿಟ್ಟುಕೊಂಡು ಸಾಕಷ್ಟು ಹಲ್​ಚಲ್​ ಸೃಷ್ಟಿಸುತ್ತಿದ್ದಾರೆ ನಟಿ. ಇದೇ ಉಗುರಿನಲ್ಲಿ ಮುದ್ದೆಯನ್ನು ಮುರಿದೂ ಆಗಿದೆ. ಜೊತೆಗೆ, ಪುರುಷ ತಂಡಕ್ಕೆ ಚಾಲೆಂಜ್​ ಕೂಡ ಮಾಡಿದ್ದರು ನಿವೇದಿತಾ. ಇಷ್ಟು ಉದ್ದದ ಉಗುರನ್ನು ಯಾಕೆ ಬಿಟ್ಟುಕೊಂಡಿರುವುದು ಎಂದು ಪ್ರಶ್ನಿಸಿದಾಗ, ನೀವು ಹತ್ತಿರ ಬಂದರೆ ಹೀಗೆ ಚುಚ್ಚೋಣ ಎಂದು ಸೆಲ್ಫ್​ ಡಿಫೆನ್ಸ್​ ಎಂದು ಉದ್ದ ಬಿಟ್ಟುಕೊಂಡಿದ್ದೇನೆ ಎಂದಿದ್ದರು. ಆಗ ಬಾಯ್ಸ್​ ಗುಂಪಿನ ಕಡೆಯಿಂದ ಹಾಗೇನೂ ಇಲ್ಲ. ಇದು ಗಮ್ ಹಾಕಿರೋದು. ಹೀಗೆ ಎಳೆದರೆ ಬಂದು ಬಿಡುತ್ತದೆ ಎಂದಿದ್ದರು. 

ಆಗ ನಿವೇದಿತಾ ಓಪನ್​ ಚಾಲೆಂಜ್​ ಕೊಟ್ಟಿದ್ದಾರೆ. ಅದೇನೆಂದರೆ. ತಮ್ಮ ರೀತಿಯಲ್ಲಿಯೇ ಇಷ್ಟು ಉದ್ದದ ಉಗುರನ್ನು ಬಾಯ್ಸ್​ ಗುಂಪು ಧರಿಸಿ ಬರಬೇಕು. 24/7 ಶೂಟಿಂಗ್​  ಸಮಯದಲ್ಲಿ ಇದನ್ನು ಇಟ್ಟುಕೊಳ್ಳಬೇಕು. ಒಂದು ವೇಳೆ ಸರಿಯಾಗಿ ಇಟ್ಟುಕೊಂಡರೆ ಎಲ್ಲಾ ಗರ್ಲ್ಸ್​ ಅವರು ಹೇಳಿದಂತೆ ಕೇಳುತ್ತೇವೆ ಎಂದಿದ್ದರು. ಅದರ ನಡುವೆಯೇ ಇದೇ ಉಗುರು ಇಟ್ಟುಕೊಂಡು ನಟಿ ರೀಲ್ಸ್​ ಮಾಡಿದ್ದಾರೆ. ರಿಯಾಲಿಟಿ ಷೋನಲ್ಲಿ ಟೈಮ್​ ಸಿಕ್ಕಾಗ ಹೀಗೊಂದು ರೀಲ್ಸ್ ಮಾಡಿ ಹಾಕಿದ್ದಾರೆ. 

ನೈಟೆಲ್ಲಾ ನಿದ್ದೆನೇ ಮಾಡಿಲ್ಲ ಎಂದ ನಿವೇದಿತಾ ಗಂಡಸ್ರಿಗೆ ಹೀಗೆ ಕೊಡೋದಾ ಓಪನ್​ ಚಾಲೆಂಜ್​? ಎಲ್ಲರೂ ಕಕ್ಕಾಬಿಕ್ಕಿ...

ನಿವೇದಿತಾ ರೀಲ್ಸ್​ ಮಾಡಿದ ಮೇಲೆ ಅದಕ್ಕೆ ಕಮೆಂಟಿಗರು ಸುಮ್ನೆ ಇರೋದು ಉಂಟಾ? ಅದಕ್ಕಾಗಿಯೇ ಶೆಡ್​ ಅಲ್ಲಾ, ಉಗುರಿನಿಂದಲೇ ನಿಮ್ಮನ್ನು ಸಾಯಿಸಿಬಿಡ್ತೇನೆ ಎಂದು ನಿವೇದಿತಾ ಬೆದರಿಕೆ ಹಾಕ್ತಿದ್ದಾಳೆ ಕಣ್ರಪ್ಪೋ ಎಂದು ಕಮೆಂಟ್​ ಮಾಡುತ್ತಿದ್ದಾರೆ. ನಿವೇದಿತಾ ಸುಮ್ಮನೇ ರೀಲ್ಸ್​ ಹಾಕಿದ್ರೂ ಅದಕ್ಕೆ ಕಮೆಂಟಿಗರು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿದ್ದಾರೆ. ಅಷ್ಟಕ್ಕೂ, ಗಾಯಕ ಚಂದನ್​ ಶೆಟ್ಟಿ ಅವರಿಂದ ವಿಚ್ಛೇದನ ಪಡೆದ ಮೇಲೆ ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ  ಸೋಷಿಯಲ್​ ಮೀಡಿಯಾದ ಸೆನ್ಸೇಷನಲ್​ ಆಗಿರುವುದು ಗೊತ್ತಿರುವ ವಿಷಯವೇ. ದಿನದಿಂದ ದಿನಕ್ಕೆ ಮೇಲಕ್ಕೆ ಹೋಗುತ್ತಿರುವ ಬಟ್ಟೆಗಳನ್ನು ಹಾಕುತ್ತಲೇ ಕಮೆಂಟಿಗರಿಗೆ ಉಗಿಯಲು ಸಾಕಷ್ಟು ಅವಕಾಶ ಕಲ್ಪಿಸುತ್ತಿದ್ದಾರೆ. ತಮ್ಮ ಡಿಕ್ಷನರಿಯಲ್ಲಿ ಇದ್ದ ಬೈಗುಳಗಳನ್ನೆಲ್ಲಾ ಕಮೆಂಟ್​ ಬಾಕ್ಸ್​ನಲ್ಲಿ ತುಂಬುತ್ತಲೇ, ಈಕೆಯ ವಿಡಿಯೋ ಮಾತ್ರ ನೋಡಲು ಬಿಡುವುದಿಲ್ಲ ಒಂದಿಷ್ಟು ಕಮೆಂಟಿಗ ಅಭಿಮಾನಿಗಳು. ಅದೇ ನಿವೇದಿತಾಗೆ ವರದಾನ. 

ಆಕೆಗೂ ಗೊತ್ತು, ಎಷ್ಟು ಹಾಟ್​ ಆಗಿ ರೀಲ್ಸ್​ ಮಾಡುತ್ತೇನೋ, ಅಷ್ಟು ಬೈಯುತ್ತಲೇ ತಮ್ಮ ವಿಡಿಯೋ, ರೀಲ್ಸ್​ ನೋಡುತ್ತಾರೆ ಎನ್ನುವುದು. ಹಾಟ್​ ಆದಷ್ಟೂ ವ್ಯೂಸ್​ ಜಾಸ್ತಿಯಾಗುತ್ತದೆ ಎನ್ನುವುದು ಇಂಥ ಹಲವು ನಟಿಯರು ಇದಾಗಲೇ ಅರಿತುಕೊಂಡಿದ್ದಾರೆ. ಏಕೆಂದರೆ, ಸಭ್ಯತೆ, ಸಂಸ್ಕೃತಿ, ಸನ್ನಡತೆ... ಹೀಗೆ ಕಮೆಂಟ್​ಗಳಲ್ಲಿ ಭಾಷಣ ಬಿಗಿಯುವ ಕಮೆಂಟಿಗರು ಯಾವುದೇ ಸಭ್ಯತೆಯ ರೀಲ್ಸ್​ಗಳನ್ನು, ಉತ್ತಮ ಸಂದೇಶ ನೀಡುವ ವಿಷಯಗಳನ್ನು ವೀಕ್ಷಿಸುವುದು ಎಷ್ಟು ಎಂದು ಅವರಿಗೇ ಗೊತ್ತು.

ಇಂತಿಪ್ಪ ನಿವೇದಿತಾ ಇದೀಗ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಬಾಯ್ಸ್​ ವರ್ಸಸ್​ ಗರ್ಲ್ಸ್​ ರಿಯಾಲಿಟಿ ಷೋನಲ್ಲಿ ಕಾಣಿಸಿಕೊಂಡಿದ್ದಾರೆ. ಉದ್ದುದ್ದ ಉಗುರು ಬಿಟ್ಟುಕೊಂಡು ಅದನ್ನೇ ಫೋರ್ಕ್​ ಮಾಡಿಕೊಂಡು ಮುದ್ದೆಯನ್ನೂ ತಿಂದಿರುವ ನಿವೇದಿತಾ, ಈಗ ಅಲ್ಲಿರುವ ಗಂಡಸರಿಗೆ ಓಪನ್​ ಚಾಲೆಂಜ್​ ಮಾಡಿದ್ದಾರೆ. ಇಷ್ಟು ಉದ್ದದ ಉಗುರನ್ನು ಯಾಕೆ ಬಿಟ್ಟುಕೊಂಡಿರುವುದು ಎಂದು ಪ್ರಶ್ನಿಸಿದಾಗ, ನೀವು ಹತ್ತಿರ ಬಂದರೆ ಹೀಗೆ ಚುಚ್ಚೋಣ ಎಂದು ಸೆಲ್ಫ್​ ಡಿಫೆನ್ಸ್​ ಎಂದು ಉದ್ದ ಬಿಟ್ಟುಕೊಂಡಿದ್ದೇನೆ ಎಂದಿದ್ದಾರೆ. ಆಗ ಬಾಯ್ಸ್​ ಗುಂಪಿನ ಕಡೆಯಿಂದ ಹಾಗೇನೂ ಇಲ್ಲ. ಇದು ಗಮ್ ಹಾಕಿರೋದು. ಹೀಗೆ ಎಳೆದರೆ ಬಂದು ಬಿಡುತ್ತದೆ ಎಂದಿದ್ದಾರೆ.

ಅರಗಿಸಿಕೊಳ್ಳಲಾಗದ ಶಾಕ್​ ಕೊಟ್ಟ ನಿವೇದಿತಾ! 24 ಗಂಟೆಗಳಲ್ಲಿ ಸುನಾಮಿ ಎಚ್ಚರಿಸಿದ ಕಮೆಂಟಿಗರು- ಅಂಥದ್ದೇನಿದೆ ನೋಡಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!