ಮದುವೆಯಾಗುವ ಹುಡುಗ ಅದಿತಿ ಗಂಡನ ಥರ ಇರಬೇಕು: ನಾನು ರಶ್ಮಿಕಾ ಬಿಂಬ ಎಂದ ಸೋನು ಗೌಡ!

By Govindaraj S  |  First Published Oct 12, 2023, 12:30 AM IST

ಸೋನು, ಸೋನು, ಸೋನು! ಎಲ್ಲಿ ನೋಡಿದ್ರೂ ಸೋನು  ಶ್ರೀನಿವಾಸ್ ಗೌಡದ್ದೇ ಹವಾ! ಸೋನು ಮಾಲ್ಡೀವ್ಸ್​ಗೆ ಹೋಗಿದ್ದೇ ಹೋಗಿದ್ದು, ಸೋಶಿಯಲ್​ ಮೀಡಿಯಾದಲ್ಲಿ ಈಕೆಯದ್ದೇ ಹವಾ!  ಇದೀಗ ಸೋನು ತಾನು ಮದುವೆಯಾಗುವ ಹುಡುಗನ ಬಗ್ಗೆ ಮಾತನಾಡಿದ್ದು, ಸ್ಯಾಂಡಲ್‌ವುಡ್‌ನ ಅದಿತಿ ಅವರ ಪತಿ ಯಶಸ್ ಹೆಸರು ಹೇಳಿದ್ದಾರೆ. 
 


ಸೋನು, ಸೋನು, ಸೋನು! ಎಲ್ಲಿ ನೋಡಿದ್ರೂ ಸೋನು ಶ್ರೀನಿವಾಸ್ ಗೌಡರದ್ದೇ ಹವಾ! ಸೋನು ಮಾಲ್ಡೀವ್ಸ್​ಗೆ ಹೋಗಿದ್ದೇ ಹೋಗಿದ್ದು, ಸೋಶಿಯಲ್​ ಮೀಡಿಯಾದಲ್ಲಿ ಈಕೆಯದ್ದೇ ಹವಾ! ಇದೀಗ ಸೋನು ತಾನು ಮದುವೆಯಾಗುವ ಹುಡುಗನ ಬಗ್ಗೆ ಮಾತನಾಡಿದ್ದು, ಸ್ಯಾಂಡಲ್‌ವುಡ್‌ನ ಅದಿತಿ ಅವರ ಪತಿ ಯಶಸ್ ಹೆಸರು ಹೇಳಿದ್ದಾರೆ. ಹೌದು! ಸೋನು ಗೌಡ ಖಾಸಗಿ ವಾಹಿನಿ ಸಂದರ್ಶನದಲ್ಲಿ ಮೊದಲಿಗೆ ಮದುವೆ ಅನ್ನೋದು ನನ್ನ ತಲೆಯಲ್ಲಿ ಇಲ್ಲ. ಆದರೆ ನಮ್ಮ ಕನ್ನಡದ ನಟಿ ಅದಿತಿ ಪ್ರಭುದೇವ ಅಂದರೆ ನನಗೆ ತುಂಬಾ ಇಷ್ಟ. ಹುಡುಗಿಯರಿಗೆ ಹುಡುಗಿಯರೇ ಕ್ರಶ್ ಆದರೆ ಯಾರು ಅಂತಾ ಕೇಳಿದ್ರೆ? ನಾನು ಅದಿತಿ ಮೇಡಂ ಎನ್ನುತ್ತೇನೆ. 

ಅವರು ಮಾತನಾಡುವ ರೀತಿ, ತೊಡುವ ಬಟ್ಟೆ ನನಗಿಷ್ಟ ಎಂದು ಸೋನು ಮಾತನಾಡಿದ್ದಾರೆ. ಮದುವೆಯಾಗುವ ಹುಡುಗ ಅದಿತಿ ಪ್ರಭುದೇವ ಅವರ ಗಂಡನ ಥರ ಇರಬೇಕು. ಅದಿತಿ- ಯಶಸ್ ಬಾಂಧವ್ಯ ನೋಡಿದ್ರೆ ಖುಷಿಯಾಗುತ್ತದೆ. ಇಬ್ಬರ ಫೋಟೋ, ವಿಡಿಯೋ ನೋಡಿದಾಗ ನನಗೂ ಅದಿತಿ ಗಂಡನ ಥರ ಹುಡುಗ ಬೇಕು ಅನಿಸುತ್ತದೆ ಎಂದು ಮದುವೆಯಾಗುವ ಹುಡುಗನ ಬಗೆಗಿನ ಕನಸನ್ನು ಬಿಚ್ಚಿಟ್ಟಿದ್ದಾರೆ. ಟೀಕೆ, ಟ್ರೋಲ್‌ಗಳ ವಿಚಾರಕ್ಕೆ ಬಂದರೆ ನನಗೆ ನ್ಯಾಷ್‌ನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ನನಗೆ ಸ್ಪೂರ್ತಿ ಎಂದು ಸೋನು ತಿಳಿಸಿದ್ದಾರೆ. 

Tap to resize

Latest Videos

ಮತ್ತೆ ಮಾಲ್ಡೀವ್ಸ್‌ ಹಾಟ್ ಫೋಟೋಸ್‌ ಹಂಚಿಕೊಂಡ ಸೋನು ಗೌಡ: ಚಡ್ಡಿ ಹಾಕಿದಿಯೇನಮ್ಮ ಎಂದ ಫ್ಯಾನ್ಸ್‌!

ಪುಷ್ಪ ನಟಿ ರಶ್ಮಿಕಾ  ಎಂದರೆ ತನಗಿಷ್ಟ, ಅವರಿಂದ ಕಲಿತಿರೋದು ತುಂಬಾನೇ ಇದೆ. ಯಾರೆಲ್ಲಾ ಅವರನ್ನ ಹೇಟ್ ಮಾಡುತ್ತಾರೆ ಅದು ನನಗೆ ಬೇಕಿಲ್ಲ. ರಶ್ಮಿಕಾ ನನ್ನ ಸ್ಪೂರ್ತಿ ಹೇಗೆಲ್ಲಾ ನೆಗೆಟಿವಿಯನ್ನ ದೂರ ಇಡಬೇಕು ಎಂದು ಅವರಿಂದ ಕಲಿತಿದ್ದೇನೆ. ನೀನು ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದ್ಯಾ ಅಂದರೆ ಮಾತು ಬೇಡ. ನಮ್ಮ ಸಾಧನೆಯಿಂದ ಉತ್ತರ ಕೊಡಬೇಕು. ನೀವೊಂದು ಸಿನಿಮಾ ಮಾಡುತ್ತಿದ್ದೀರಾ ಅಂದರೆ ಅಲ್ಲೇ ಟ್ರೋಲಿಗರಿಗೆ ಉತ್ತರ ಸಿಗುತ್ತದೆ. ಸೇಮ್ ನನಗೆ ರಶ್ಮಿಕಾ ಥರನೇ ಬೆಳೆಯಬೇಕು ಎಂದು ಆಸೆ ಇದೆ. ಅಮಿತಾಬ್ ಬಚ್ಚನ್ ಜೊತೆ ಎಲ್ಲ ಅವರು ಆಕ್ಟ್ ಮಾಡಿದ್ದಾರೆ. 

ಬ್ಲ್ಯಾಕ್ & ರೆಡ್ ಡ್ರೆಸ್‌ನಲ್ಲಿ ಸೋನು ಗೌಡ: ನೀವ್ಯಾಕೆ Mia Khalifa ತರಹ ಚೇಂಜ್ ಆಗ್ತಿದ್ದೀರಾ ಎಂದ ಫ್ಯಾನ್ಸ್‌!

ಅದೆಲ್ಲಾ ಸುಲಭ ಅಲ್ಲ. ಇನ್ನೂ ಹೇಳಬೇಕು ಅಂದರೆ ರಶ್ಮಿಕಾ ಅವರ ಬಿಂಬ ನಾನು ಎಂದು ಸೋನು ಮಾತನಾಡಿದ್ದಾರೆ. ಇನ್ನು ಟಿಕ್‌ಟಾಕ್‌ ಮತ್ತು ಇತರೆ ಸಾಮಾಜಿಕ ಜಾಲತಾಣದ ವೇದಿಕೆಗಳಲ್ಲಿ ಫೇಮಸ್‌ ಆಗಿದ್ದ ಸೋನುಗೌಡ ಅವರು ‘ಬಿಗ್ ಬಾಸ್ ಒಟಿಟಿ' ಮೂಲಕ ಮತ್ತಷ್ಟು ಹೆಚ್ಚು ಜನಪ್ರಿಯತೆ ಪಡೆದರು. ಇನ್​ಸ್ಟಾಗ್ರಾಮ್​ನಲ್ಲಿ ಫುಲ್‌ ಆ್ಯಕ್ಟೀವ್ ಆಗಿದ್ದು, ಆಗಾಗ ಹೊಸ ಹೊಸ ರೀಲ್ಸ್ ಹಾಗೂ ಫೋಟೋ ಹಂಚಿಕೊಂಡು ಸಂಭ್ರಮಿಸುತ್ತಾರೆ. ಕೆಲ ದಿನದ ಹಿಂದೆ ಸೋನು ತುಂಡುಡುಗೆ ತೊಟ್ಟ ಫೋಟೋವನ್ನು ಪೋಸ್ಟ್ ಮಾಡಿದ್ದರು. ನೀಲಿ ಸ್ಕರ್ಟ್‌ ತೊಟ್ಟು ಕೈಯಿಂದ ಮೈ ಮುಚ್ಚಿಕೊಂಡ ಫೋಟೋಸ್ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

click me!